For Quick Alerts
ALLOW NOTIFICATIONS  
For Daily Alerts

ಸಿಂಗಾಪುರ್‌ಗಿಂತ ಬೆಂಗಳೂರಿನಲ್ಲೇ ಕಚೇರಿ ಬಾಡಿಗೆ ದರ ಹೆಚ್ಚು

|

ದಿನೇ ದಿನೇ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ, ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಂತೂ ವಸ್ತುಗಳು ಮತ್ತು ಸೇವೆಗಳ ದರಗಳ ಬಗ್ಗೆ ಹೆಚ್ಚು ಏನು ಹೇಳಬೇಕಾಗಿಲ್ಲ. ಇಲ್ಲಿನ ಭೂಮಿ ಬೆಲೆ ಚಿನ್ನಕ್ಕಿಂತ ದುಬಾರಿ. ಯಾವುದೇ ಬಾಡಿಗೆ ದರವು ಕಮ್ಮಿಗೆ ಸಿಗುವ ಮಾತಿಲ್ಲ. ಅದರಲ್ಲೂ ಕಚೇರಿ ಬಾಡಿಗೆ ದರವಂತೂ ಸಿಂಗಾಪುರ್‌ಗಿಂತ ದುಬಾರಿಯಾಗಿದೆ.

 

ಬೆಂಗಳೂರಿನ ಕಚೇರಿ ಬಾಡಿಗೆ ದರವು ಪ್ರಮುಖ ವಹಿವಾಟು ಪ್ರದೇಶವು(ಸಿಬಿಡಿ) ಏಷ್ಯಾ ಫೆಸಿಫಿಕ್‌ನಲ್ಲಿ 17.6 ಪರ್ಸೆಂಟ್ ಏರಿಕೆಯಾಗಿದೆ. ಇದು ದೆಹಲಿ, ಮುಂಬೈ ಅಷ್ಟೇ ಅಲ್ಲದೆ ವಿಶ್ವದ ಪ್ರಮುಖ ನಗರಗಳಿಗಿಂತಲೂ ಹೆಚ್ಚಾಗಿದೆ ಎಂದು ವರದಿಯಾಗಿದೆ.

 
ಸಿಂಗಾಪುರ್‌ಗಿಂತ ಬೆಂಗಳೂರಿನಲ್ಲೇ ಕಚೇರಿ ಬಾಡಿಗೆ ದರ ಹೆಚ್ಚು

ಜಾಗತಿಕ ಆಸ್ತಿ ಸಲಹಾ ಸಂಸ್ಥೆ ಫ್ರ್ಯಾಂಕ್ ತನ್ನ ವರದಿಯಲ್ಲಿ ಬೆಂಗಳೂರಿನ ಕಚೇರಿ ಬಾಡಿಗೆ ದರದ ಕುರಿತು ಉಲ್ಲೇಖಿಸಿದ್ದು, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 17.6ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ. ಬೆಂಗಳೂರಿನ ಎಂಜಿ ರೋಡ್, ಇನ್‌ಫಂಟ್ರಿ ರಸ್ತೆ, ರೆಸಿಡೆನ್ಸಿ ರಸ್ತೆಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಕಚೇರಿ ಬಾಡಿಗೆ ದರ ಏರಿದೆ.

ಭಾರತದ ಆರ್ಥಿಕತೆಯ ಮಂದಗತಿಯ ನಡುವೆಯು ಪ್ರಮುಖ ನಗರಗಳ ಕಚೇರಿ ಬಾಡಿಗೆ ದರವು ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಬೆಂಗಳೂರು ನಂತರದ ಸ್ಥಾನದಲ್ಲಿ ಮೆಲ್ಬರ್ನ್ 15.5 ಪರ್ಸೆಂಟ್, ಬ್ಯಾಂಕಾಕ್ 9.4 ಪರ್ಸೆಂಟ್, ದೆಹಲಿ 4.4 ಪರ್ಸೆಂಟ್, ಮುಂಬೈನಲ್ಲಿ 2 ಪರ್ಸೆಂಟ್ ನಷ್ಟು ಕಚೇರಿ ಬಾಡಿಗೆ ದರ ಹೆಚ್ಚಿದೆ.

English summary

Bengaluru Office Rentals Recorded Highest Growth

Bengaluru Recorded the Office Rentals Highest Growth 17.6 percent. It is higher than singapore
Story first published: Wednesday, December 25, 2019, 15:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X