For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಬೆಸ್ಟ್ ಅಂತಿದೆ ಈ ಸಮೀಕ್ಷೆ; ಹೇಳಿದವರು ಯಾರು, ಏಕೆ ಗೊತ್ತೆ?

|

ಐ.ಟಿ. (ಮಾಹಿತಿ ತಂತ್ರಜ್ಞಾನ) ವೃತ್ತಿಪರರಿಗೆ ಕೆಲಸ ಮಾಡುವುದಕ್ಕೆ ಭಾರತದಲ್ಲಿ ಬೆಸ್ಟ್ ನಗರ ಯಾವುದು ಗೊತ್ತಾ? ಬೆಂಗಳೂರು ಕಣ್ರೀ. ಒಳ್ಳೆ ಜೀವನ, ಕೈ ತುಂಬ ಸಂಬಳ, ಉದ್ಯೋಗದಲ್ಲಿ ಮೇಲಿನ ಹಂತಕ್ಕೆ ಏರಲು ಹೇರಳವಾದ ಅವಕಾಶಗಳು... ಎಲ್ಲಕ್ಕೂ ಬೆಂಗಳೂರು ಬೆಸ್ಟ್ ಅಂತ ಹೇಳುತ್ತಿದೆ ಸಮೀಕ್ಷೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 40 ಪರ್ಸೆಂಟ್ ನಷ್ಟು ಐಟಿ ವೃತ್ತಿಪರರು ಬೆಂಗಳೂರನ್ನೇ ಅತ್ಯುತ್ತಮ ನಗರ ಎಂದು ಆರಿಸಿದ್ದಾರೆ. ಅಂದ ಹಾಗೆ ಈ ಸಮೀಕ್ಷೆ ಮಾಡಿರುವುದು ಟೆಕ್ ಗಿಗ್. ಹೈದರಾಬಾದ್ ಗೆ ಎರಡನೇ ಸ್ಥಾನ, ಪುಣೆಗೆ ಮೂರನೇ ಸ್ಥಾನ ಸಿಕ್ಕಿದೆ. ಇದ್ದುದರಲ್ಲಿ ಓಕೆ ಎಂಬಂತೆ ಸಮೀಕ್ಷೆಯಲ್ಲಿ ಭಾಗವಹಿಸಿದವರ ಕನಿಷ್ಠ ಮಟ್ಟದ ಮೆಚ್ಚುಗೆ ಸಿಕ್ಕಿರುವುದು ದೆಹಲಿ- NCRಗೆ.

ಈ ಎರಡು ನಗರಗಳಿಗಿಂತ ಸ್ವಲ್ಪ ಪರವಾಗಿಲ್ಲ ಎಂದು ಆದ್ಯತೆ ಸಿಕ್ಕಿರುವುದು ಕೋಲ್ಕತ್ತಾ ನಗರಕ್ಕೆ. ಆನ್ ಲೈನ್ ಮೂಲಕ ಏಪ್ರಿಲ್ ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ 1830 ಐಟಿ ವೃತ್ತಿಪರರು ಭಾಗವಹಿಸಿದ್ದು, ಅವರ ವಯಸ್ಸು 25- 35ರ ಮಧ್ಯೆ ಇದ್ದು, ಕನಿಷ್ಠ ಎರಡು ವರ್ಷದ ಅನುಭವ ಇರುವಂಥವರೇ ಇದ್ದರು.

ಬೆಂಗಳೂರು ಬೆಸ್ಟ್ ಅಂತಿದೆ ಈ ಸಮೀಕ್ಷೆ; ಹೇಳಿದವರು ಯಾರು, ಏಕೆ ಗೊತ್ತೆ?

ಬೆಂಗಳೂರಿನಲ್ಲಿ ಜೀವನಮಟ್ಟ ಉತ್ತಮವಾಗಿರುತ್ತದೆ ಎಂದು 58% ಜನ ಹೇಳಿದ್ದರೆ, ಸಂಬಳ ಹೆಚ್ಚಳಕ್ಕೆ ಬೆಂಗಳೂರು ಹೇಳಿಮಾಡಿಸಿದ ನಗರ ಅಂತ 71 ಪರ್ಸೆಂಟ್ ಮಂದಿ ತಿಳಿಸಿದ್ದಾರೆ. ಕೆಲಸದ ಅವಕಾಶಗಳು ಹಾಗೂ ಬೆಳವಣಿಗೆಗೆ ಬೆಸ್ಟ್ ಜಸ್ಟ್ ಬೆಂಗಳೂರು ಎಂದು 68% ನಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ 57% ಐಟಿ ವೃತ್ತಿಪರರು ಬೆಂಗಳೂರಿನಲ್ಲೇ ಕೆಲಸ ಮಾಡಬೇಕು ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಭವಿಷ್ಯದಲ್ಲಿ ಯಾವ ನಗರಕ್ಕೆ ಸ್ಥಳಾಂತರ ಆಗಬೇಕು ಎಂದು ಬಯಸುತ್ತೀರಿ ಎಂಬ ಪ್ರಶ್ನೆಗೆ ಕೂಡ ಬೆಂಗಳೂರಿನ ಬಗ್ಗೆ ಆಸಕ್ತಿ ತೋರಿಸಿದ್ದಾರೆ.

ಹೊಸಬರಿಗಾಗಲೀ, ಅನುಭವಿಗಳಿಗಾಗಲೀ ಸಮೀಕ್ಷೆಯಲ್ಲಿ ಭಾಗವಹಿಸಿದ್ದ 61 ಪರ್ಸೆಂಟ್ ಮಂದಿ ಬೆಂಗಳೂರು ನಗರವೇ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ.

English summary

Bengaluru Selected As Best City In A Survey By IT Professionals

Bengaluru city chose as best city for IT professionals in a survey. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X