For Quick Alerts
ALLOW NOTIFICATIONS  
For Daily Alerts

ಲುಲು ಗ್ರೂಪ್‌ನಿಂದ ಭಾರತದ ಅತಿದೊಡ್ಡ ಮಾಲ್, 3 ಸಾವಿರ ಕೋಟಿ ವೆಚ್ಚದ ಯೋಜನೆ

|

ಅಹ್ಮದಾಬಾದ್, ಅ. 19: ಯುಎಇ ಮೂಲದ ಲುಲು ಗ್ರೂಪ್ ಇಂಟರ್ನ್ಯಾಷನಲ್ ಸಂಸ್ಥೆ ಇದೀಗ ಭಾರತದಲ್ಲಿ ಐದನೇ ಶಾಪಿಂಗ್ ಮಾಲ್ ಸ್ಥಾಪನೆಗೆ ಮುಂದಾಗಿದೆ. ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಲುಲು ಮಾಲ್ ನಿರ್ಮಾಣವಾಗಲಿದೆ. ಇದು ಭಾರತದ ಅತಿದೊಡ್ಡ ಶಾಪಿಂಗ್ ಮಾಲ್ ಆಗಿರಲಿದ್ದು ಇದಕ್ಕಾಗಿ ಲುಲು ಗ್ರೂಪ್ 3 ಸಾವಿರ ಕೋಟಿ ರೂ ಬಂಡವಾಳ ಹಾಕುತ್ತಿದೆ. ಐದಾರು ತಿಂಗಳಲ್ಲಿ ಇದರ ನಿರ್ಮಾಣ ಕಾರ್ಯ ಆರಂಭಗೊಳ್ಳುವ ನಿರೀಕ್ಷೆ ಇದೆ.

ಲುಲು ಗ್ರೂಪ್ ನೀಡಿರುವ ಮಾಹಿತಿ ಪ್ರಕಾರ ಮುಂದಿನ ವರ್ಷದ ಆರಂಭದಲ್ಲಿ ಅಹ್ಮದಾಬಾದ್‌ನಲ್ಲಿ ಶಾಪಿಂಗ್ ಮಾಲ್ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಸಾಧ್ಯತೆ ಇದೆ. ಈಗಾಗಲೇ ಮಾಲ್‌ಗೆ ಜಾಗವನ್ನು ಗುರುತಿಸಲಾಗಿದ್ದು ಅದರ ಸ್ವಾಧೀನ ಪ್ರಕ್ರಿಯೆಗೆ ನಡೆದಿರುವ ಮಾತುಕತೆಗಳು ಅಂತಿಮ ಹಂತಕ್ಕೆ ಬಂದಿರುವುದು ತಿಳಿದುಬಂದಿದೆ.

ಬಿಇಎಲ್‌ನಿಂದ ಹೈಡ್ರೋಜನ್ ಫುಯಲ್ ಸೆಲ್ ತಯಾರಿಕೆ; ಅಮೆರಿಕದ ಟಿಇವಿ ಜೊತೆ ಒಪ್ಪಂದಬಿಇಎಲ್‌ನಿಂದ ಹೈಡ್ರೋಜನ್ ಫುಯಲ್ ಸೆಲ್ ತಯಾರಿಕೆ; ಅಮೆರಿಕದ ಟಿಇವಿ ಜೊತೆ ಒಪ್ಪಂದ

ಸದ್ಯ ಬೆಂಗಳೂರಿನಲ್ಲಿರುವ ಲುಲು ಗ್ಲೋಬಲ್ ಮಾಲ್ ನಮ್ಮ ದೇಶದ ಅತಿದೊಡ್ಡ ಶಾಪಿಂಗ್ ಮಾಲ್ ಎಂಬ ದಾಖಲೆ ಹೊಂದಿದೆ. ಅಹ್ಮದಾಬಾದ್‌ನಲ್ಲಿ ಈಗ ಇದಕ್ಕಿಂತಲೂ ದೊಡ್ಡದ ಮಾಲ್ ನಿರ್ಮಿಸುವ ಐಡಿಯಾ ಇದೆ.

 ಏನಿರುತ್ತ ಹೊಸ ಲುಲು ಮಾಲ್ ವಿಶೇಷತೆ?

ಏನಿರುತ್ತ ಹೊಸ ಲುಲು ಮಾಲ್ ವಿಶೇಷತೆ?

ಅಹ್ಮದಾಬಾದ್‌ನಲ್ಲಿ ಮಾಡಲುದ್ದೇಶಿಸಿರುವ ಲುಲು ಮಾಲ್‌ನಲ್ಲಿ 300ಕ್ಕೂ ಹೆಚ್ಚು ದೇಶ ವಿದೇಶೀ ಬ್ರ್ಯಾಂಡ್‌ಗಳ ಮಳಿಗೆಗಳಿರಲಿವೆ. ಬೃಹತ್ ಫುಡ್ ಕೋರ್ಟ್‌ನಲ್ಲಿ ಹಲವಾರು ರೆಸ್ಟೋರೆಂಟ್‌ಗಳು ಇರುತ್ತವೆ. 3 ಸಾವಿರ ಜನರು ಕೂತು ತಿನ್ನಲು ಸ್ಥಳಾವಕಾಶ ಇರುವಷ್ಟು ಫುಡ್ ಕೋರ್ಟ್ ಬೃಹತ್ತಾಗಿರುತ್ತದೆ.

ಐಮ್ಯಾಕ್ಸ್ ಮಲ್ಟಿಪ್ಲೆಕ್ಸ್ ಇರಲಿದ್ದು, 15 ಸ್ಕ್ರೀನ್‌ಗಳಿರುತ್ತವೆ. ಮಕ್ಕಳಿಗೆ ಬೃಹತ್ ಮನರಂಜನಾ ಕೇಂದ್ರ ಇರಲಿದೆ. ದೇಶದಲ್ಲೇ ಅತಿದೊಡ್ಡ ಮಕ್ಕಳ ಅಮ್ಯೂಸ್‌ಮೆಂಟ್ ಸೆಂಟರ್ ಇಲ್ಲಿ ತಲೆ ಎತ್ತಲಿದೆ.. ಇದೂ ಸೇರಿ ಇನ್ನೂ ಹಲವಾರು ಆಕರ್ಷಣೆಗಳು ಅಹ್ಮದಾಬಾದ್‌ನ ಲುಲು ಮಾಲ್‌ನಲ್ಲಿ ಇರಲಿವೆ ಎಂದು ಹೇಳಲಾಗುತ್ತಿದೆ.

 

 ದುಬೈನಲ್ಲಿ ಒಪ್ಪಂದ

ದುಬೈನಲ್ಲಿ ಒಪ್ಪಂದ

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಇತ್ತೀಚೆಗೆ ದುಬೈನಲ್ಲಿ ಯುಎಇ ರೋಡ್ ಶೋ ನಡೆಸಿದ್ದರು. ಈ ವೇಳೆ ಲುಲು ಗ್ರೂಪ್ ಮತ್ತು ಗುಜರಾತ್ ಸರಕಾರದ ಮಧ್ಯೆ ಒಪ್ಪಂದಕ್ಕೆ ಸಹಿಯಾಗಿತ್ತು. ಗುಜರಾತ್‌ನಲ್ಲಿ ಶಾಪಿಂಗ್ ಮಾಲ್ ಸೇರಿದಂತೆ ಹೂಡಿಕೆ ಯೋಜನೆಗಳ ಬಗ್ಗೆ ಲುಲು ಗ್ರೂಪ್ ಸಂಸ್ಥೆ ಆ ಸಂದರ್ಭದಲ್ಲಿ ವಿವರಿಸಿತ್ತು.

"ಇದು ಭಾರತದ ಅತಿ ದೊಡ್ಡ ಶಾಪಿಂಗ್ ಮಾಲ್ ಆಗಿರಲಿದೆ. ಅತಿದೊಡ್ಡ ಲುಲು ಹೈಪರ್ ಮಾರ್ಕೆಟ್ ಈ ಮಾಲ್‌ನ ಮುಖ್ಯಭಾಗವಾಗಿರುತ್ತದೆ. ಎಲ್ಲಾ ಆಧುನಿಕ ಸೌಲಭ್ಯ ಮತ್ತು ಆಕರ್ಷಣೆಗಳು ಇಲ್ಲಿರಲಿದ್ದು, ದೇಶ ವಿದೇಶಗಳಿಂದ ಪ್ರವಾಸಿಗರನ್ನು ಅಹ್ಮದಾಬಾದ್‌ಗೆ ಸೆಳೆಯಬಲ್ಲುದು. ಜೊತೆಗೆ ಸ್ಥಳೀಯ ಉದ್ಯಮಿಗಳು ಮತ್ತು ಕೃಷಿ ವಲಯಕ್ಕೂ ಪುಷ್ಟಿ ಸಿಗುತ್ತದೆ" ಎಂದು ಲುಲು ಗ್ರೂಪ್‌ನ ಭಾರತೀಯ ವಿಭಾಗದ ನಿರ್ದೇಶಕ ಅನಂತ್ ರಾಮ್ ಹೇಳುತ್ತಾರೆ.

"ನರೇಂದ್ರ ಮೋದಿ ಹಾಗೂ ಇಂದಿನ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರ ನಾಯಕತ್ವದಲ್ಲಿ ಗುಜರಾತ್ ಬಹಳಷ್ಟು ಅಭಿವೃದ್ಧಿ ಸಾಧಿಸಿದೆ. ಇವತ್ತು ಅತ್ಯಾಧುನಿಕ ಸೌಲಭ್ಯ ಮತ್ತು ಸುಲಭ ವ್ಯವಹಾರದ ಸ್ಥಳವಾಗಿ ಗುಜರಾತ್ ಅನ್ನು ಕಾಣಲಾಗುತ್ತಿದೆ. ಗುಜರಾತ್‌ನಲ್ಲಿ ನನ್ನ ಕುಟುಂಬಸದಸ್ಯರು ಅಹ್ಮದಾಬಾದ್‌ನಲ್ಲಿ ವ್ಯವಹಾರ ನಡೆಸುತ್ತಿದ್ದರು. ಇಲ್ಲಿಯೇ ನಾನು ವ್ಯವಹಾರದ ಮೂಲಾಂಶಗಳನ್ನು ಕಲಿತಿದ್ದು. ಹೀಗಾಗಿ, ಗುಜರಾತ್ ನನ್ನ ಹೃದಯಕ್ಕೆ ಹತ್ತಿರವಾಗಿದೆ" ಎಂದು ಲುಲು ಗ್ರೂಪ್ ಇಂಟರ್ನ್ಯಾಷನಲ್ ಸಂಸ್ಥೆಯ ಎಂಡಿ ಮತ್ತು ಛೇರ್ಮನ್ ಯೂಸುಫ್ ಅಲಿ ತಿಳಿಸುತ್ತಾರೆ.

 

 ನಾಲ್ಕು ಕಡೆ ಲುಲು ಮಾಲ್

ನಾಲ್ಕು ಕಡೆ ಲುಲು ಮಾಲ್

ಲುಲು ಗ್ರೂಪ್ 10 ದೇಶಗಳಲ್ಲಿ 240 ಹೈಪರ್‌ಮಾರ್ಕೆಟ್ ಮತ್ತು ಶಾಪಿಂಗ್ ಮಾಲ್‌ಗಳನ್ನು ಹೊಂದಿದೆ. ಭಾರತದಲ್ಲಿ ಸದ್ಯ ನಾಲ್ಕು ಕಡೆ ಲುಲು ಮಾಲ್‌ಗಳಿವೆ. ಅಹ್ಮದಾಬಾದ್‌ನದ್ದೂ ಸೇರಿಸಿದರೆ ಐದಾಗುತ್ತದೆ. ಕೇರಳದ ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಲುಲು ಮಾಲ್‌ಗಳಿವೆ. ಅದು ಬಿಟ್ಟರೆ ಬೆಂಗಳೂರು, ಲಕ್ನೋದಲ್ಲಿ ಇದೆ. ಬೆಂಗಳೂರಿನಲ್ಲಿರುವ ಲುಲು ಗ್ಲೋಬಲ್ ಮಾಲ್ ಸದ್ಯ ಭಾರತದ ಅತಿದೊಡ್ಡ ಶಾಪಿಂಗ್ ಮಾಲ್ ಎನಿಸಿದೆ.

ಬೆಂಗಳೂರಿನಲ್ಲಿರುವ ಲುಲು ಮಾಲ್‌ನಲ್ಲಿ ಜನದಟ್ಟನೆ ಬಹಳ ಅಧಿಕ. ಇಲ್ಲಿಯ ಫುಡ್ ಕೋರ್ಟ್ ಮತ್ತು ಅಮ್ಯೂಸ್ಮೆಂಟ್ ಸೆಂಟರ್ ಬಹಳ ಜನಪ್ರಿಯ. ವೀಕೆಂಡ್‌ನಲ್ಲಿ ಇಲ್ಲಿ ಕಾಲಿಡಲೂ ಆಗದಷ್ಟು ಜನ ಜಾತ್ರೆ ಇರುತ್ತದೆ. ಫುಡ್ ಕೋರ್ಟ್‌ನಲ್ಲಿ ಕೂತು ತಿನ್ನಲು ಸೀಟು ಸಿಕ್ಕರೆ ಅದೃಷ್ಟ. ಇಲ್ಲಿರುವ ಅಮ್ಯೂಸ್ಮೆಂಟ್ ಸೆಂಟರ್‌ನಲ್ಲಿ ಥರಹೇವಾರಿ ಆಟಗಳಿವೆ. ಹೀಗಾಗಿ, ಫ್ಯಾಮಿಲಿ ವಿಸಿಟ್‌ಗೆ ಹೇಳಿ ಮಾಡಿಸಿದ ಸ್ಥಳವಾಗಿದೆ.

 

ಚಿನ್ನ ಬಾಡಿಗೆ ಕೊಟ್ಟು ಆದಾಯ ಮಾಡಿಕೊಳ್ಳಿ; ಸೇಫ್‌ಗೋಲ್ಡ್ ಸ್ಕೀಮ್ಚಿನ್ನ ಬಾಡಿಗೆ ಕೊಟ್ಟು ಆದಾಯ ಮಾಡಿಕೊಳ್ಳಿ; ಸೇಫ್‌ಗೋಲ್ಡ್ ಸ್ಕೀಮ್

English summary

Biggest Lulu Mall Being Built In Ahmedabad, Gujarat

Lulu group and Gujarat govt had signed MoU to build India's biggest shopping mall in Ahmedabad, Gujarat. Lulu has 4 shopping mall and hypermarket in Bengaluru and other places in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X