For Quick Alerts
ALLOW NOTIFICATIONS  
For Daily Alerts

ಐಷಾರಾಮಿ ಮನೆ ಹೊಂದುವ ಕನಸು ನನಸಾಗಿಸಿದ ಬಿಲ್ಡ್‌ಎಹೋಮ್‌

|

ಬೆಂಗಳೂರು, ಅಕ್ಟೋಬರ್‌ 19: ಕೋವಿಡ್‌ ಪಿಡುಗಿನ ಮೊದಲ ಮತ್ತು ಎರಡನೆ ಅಲೆಗಳ ತೀವ್ರ ಸ್ವರೂಪದ ಅಡಚಣೆಗಳ ಮಧ್ಯೆಯೂ, ಬೆಂಗಳೂರು ಮೂಲದ ರಿಯಲ್‌ ಎಸ್ಟೇಟ್‌ ಕಂಪನಿ ಬಿಲ್ಡ್‌ಎಹೋಂ ( buildAhome) ತನ್ನ ವಹಿವಾಟಿನಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. 5 ವರ್ಷಗಳ ಅನುಭವ ಹೊಂದಿರುವ ಈ ಕಂಪನಿ ಸುಮಾರು 250 ವಸತಿ ನಿರ್ಮಾಣ ಯೋಜನೆಗಳನ್ನು ನಿರ್ವಹಿಸಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮತ್ತು ಮನೆಯಿಂದಲೇ ಕೆಲಸ ಮಾಡುತ್ತಿರುವ ವಿವಿಧ ವಲಯಗಳ ನೌಕರರಿಗೆ ಸ್ವಂತ ಮನೆ ಹೊಂದುವ ಅಗತ್ಯವು ಈಗ ಹಿಂದೆಂದೆಗಿಂತ ಹೆಚ್ಚು ಮನವರಿಕೆಯಾಗಿರುವುದನ್ನು ಕಂಪನಿಯು ಗಮನಿಸಿದೆ. ಇದೇ ಕಾರಣದಿಂದ ದೇಶಿ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಮನೆಗಳ ಬೇಡಿಕೆ ಸ್ಥಿರತೆ ಕಾಯ್ದುಕೊಂಡಿದೆ.

ಪ್ರತಿ ವರ್ಷದಂತೆ ಈ ಹಬ್ಬದ ಋತುವಿನಲ್ಲಿಯೂ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಮನೆಗಳ ಮಾರಾಟ ಮತ್ತು ಖರೀದಿ ವಹಿವಾಟು ಹೆಚ್ಚಲಿದೆ ಎಂಬುದು ಕಂಪನಿಯ ನಿರೀಕ್ಷೆಯಾಗಿದೆ. ಪ್ರೀಮಿಯಂ ಮತ್ತು ಐಷಾರಾಮಿ ಕೊಡುಗೆಗಳ ಮೇಲೆ ಹಬ್ಬದ ವಿಶೇಷ ಕೊಡುಗೆಯಾಗಿ ಕಂಪನಿಯು ರೂ 40ರಂತೆ ರಿಯಾಯ್ತಿ ನೀಡಲಾಗುತ್ತಿದೆ. ಈ ವಿಶೇಷ ಕೊಡುಗೆಯು 2021ರ ನವೆಂಬರ್ 5ರವರೆಗೆ ಜಾರಿಯಲ್ಲಿ ಇರಲಿದೆ.

ಅನೇಕ ಸಂಸ್ಥೆಗಳು  ತೀವ್ರ ಹಿನ್ನಡೆ ಕಂಡಿವೆ

ಅನೇಕ ಸಂಸ್ಥೆಗಳು ತೀವ್ರ ಹಿನ್ನಡೆ ಕಂಡಿವೆ

ಮೊದಲ ಮತ್ತು ಎರಡನೆ ಲಾಕ್‌ಡೌನ್‌ನ ಪರಿಣಾಮವಾಗಿ ಗೃಹ ನಿರ್ಮಾಣ ಯೋಜನೆಗಳಲ್ಲಿನ ವಿಳಂಬದಿಂದಾಗಿ ದೇಶದಲ್ಲಿನ ರಿಯಲ್‌ ಎಸ್ಟೇಟ್‌ ಅಭಿವೃದ್ಧಿಪಡಿಸುವ ಅನೇಕ ಸಂಸ್ಥೆಗಳು ತೀವ್ರ ಹಿನ್ನಡೆ ಕಂಡಿವೆ. ಅನೇಕ ಅಡೆತಡೆಗಳಿದ್ದರೂ ಸಹ, ಕೋವಿಡ್‌ ಪಿಡುಗಿನ ಮಧ್ಯೆಯೂ 50 ಮನೆಗಳನ್ನು ಖರೀದಿದಾರರಿಗೆ ವಿತರಿಸಲು 'ಬಿಲ್ಡ್‌ಎಹೋಮ್‌'ಗೆ ಸಾಧ್ಯವಾಯಿತು. ಇದು ಮುಖ್ಯವಾಗಿ ತಂತ್ರಜ್ಞಾನ ಬಳಕೆ ಮತ್ತು ಮೊದಲ ಲಾಕ್‌ಡೌನ್‌ನಲಲ್ಲಿ ಕಲಿತ ಪಾಠದಿಂದಾಗಿ ಕೋವಿಡ್‌ ಎರಡನೆಯ ಅಲೆಯ ಸಂದರ್ಭದಲ್ಲಿನ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಯಿತು.

ಸಿಇಒ ಅಭಿಜಿತ್‌ಆರ್‌. ಪ್ರಿಯಾನ್‌
 

ಸಿಇಒ ಅಭಿಜಿತ್‌ಆರ್‌. ಪ್ರಿಯಾನ್‌

''ಬಿಲ್ಡ್‌ಎಹೋಮ್‌''ನ ಸಿಇಒ ಅಭಿಜಿತ್‌ಆರ್‌. ಪ್ರಿಯಾನ್‌ ಮಾತನಾಡಿ, ''ಕೋವಿಡ್‌ ಪಿಡುಗು ಬರುವುದಕ್ಕಿಂತ ಮುಂಚೆಯೇ ಆರಂಭಗೊಂಡಿದ್ದ ಗೃಹ ನಿರ್ಮಾಣ ಯೋಜನೆಗಳನ್ನು ಹಠಾತ್ತಾಗಿ ಸ್ಥಗಿತಗೊಳಿಸುವಂತಹ ಪರಿಸ್ಥಿತಿ ಉದ್ಭವವಾಗಿತ್ತು. ಇದು ಈ ವಲಯದಲ್ಲಿನ ಪ್ರಮುಖ ಹಿನ್ನಡೆಯಾಗಿತ್ತು. ಈಗಾಗಲೇ ಅಪಾರ್ಟ್‌ಮೆಂಟ್‌ಗಳ ಫ್ಲಾಟ್‌ಗಳಲ್ಲಿ ಅಥವಾ ಇತರ ವಸತಿ ನಿರ್ಮಾಣ ಯೋಜನೆಗಳಲ್ಲಿ ಅನೇಕರು ಹಣ ಹೂಡಿಕೆ ಮಾಡಿದ್ದರು, ಇಂತಹ ಹಲವಾರು ಯೋಜನೆಗಳ ನಿರ್ಮಾಣ ಕಾಮಗಾರಿಯು ಕೆಲ ಸಮಯದವರೆಗೆ ಸ್ಥಗಿತಗೊಂಡಿದ್ದವು. ಕೋವಿಡ್‌ ಪಿಡುಗು ಕೆಲಮಟ್ಟಿಗೆ ತಹಬಂದಿಗೆ ಬಂದ ನಂತರವೇ ಅವುಗಳ ಕಾಮಗಾರಿ ಪುನರಾರಂಭಗೊಂಡಿದೆ,'' ಎಂದರು.

''ನಮ್ಮ ಬಹಳಷ್ಟು ಗ್ರಾಹಕರು, ಮನೆಯಿಂದ ಕೆಲಸ ಮಾಡುವಾಗ ತಮ್ಮ ಕನಸಿನ ಮನೆಯ ಪರಿಕಲ್ಪನೆ ಬಗ್ಗೆ ಯೋಚಿಸಲು ಸಾಕಷ್ಟು ಸಮಯ ಹೊಂದಿದ್ದರು, ಇದು ಸ್ವಂತ ಮನೆ ಹೊಂದುವುದರ ಮಹತ್ವವನ್ನು ತಿಳಿದುಕೊಳ್ಳುವುದಕ್ಕೂ ನೆರವಾಯಿತು. ವಿಶೇಷವಾಗಿ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿರುವವರಿಗೆ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಿಗೆ ತಮ್ಮ ಕಚೇರಿ ಕೆಲಸಗಳನ್ನು ನಿಶ್ಚಿಂತೆಯಿಂದ ನಿರ್ವಹಿಸಲು ಸಾಕಷ್ಟು ವೈಯಕ್ತಿಕ ಸ್ಥಳಾವಕಾಶದ ಅಗತ್ಯ ಇರುವುದು ಈ ಸಂದರ್ಭದಲ್ಲಿ ಹೆಚ್ಚು ಅನುಭವಕ್ಕೆ ಬಂದಿತ್ತು ಜೊತೆಗೆ ಅದರ ಅಗತ್ಯವೂ ಮನವರಿಕೆಯಾಗಿತ್ತು,'' ಎಂದು ಹೇಳಿದರು.

 ಮನೆಯಿಂದಲೇ ಕೆಲಸ ನಿರ್ವಹಣೆ

ಮನೆಯಿಂದಲೇ ಕೆಲಸ ನಿರ್ವಹಣೆ

ಕೆಲವು ನಿರ್ದಿಷ್ಟ ಕಂಪನಿಗಳಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸುವುದನ್ನು 4 ರಿಂದ 5 ವರ್ಷಗಳವರೆಗೆ ವಿಸ್ತರಿಸಲಾಗಿದೆ. ಇದು ಜನರಿಗೆ ನಗರಗಳ ಹೊರವರ್ತುಲ ಪ್ರದೇಶದಲ್ಲಿ ಭೂಮಿ ಖರೀದಿಸಲು ಮತ್ತು ಐಷಾರಾಮಿ ಕನಸಿನ ಮನೆಯನ್ನು ಕೈಗೆಟುಕುವ ಬೆಲೆಯಲ್ಲಿ ನಿರ್ಮಿಸಲು ಕಾರ್ಯಸಾಧ್ಯವಾಗುವಂತಹ ಅವಕಾಶಗಳನ್ನು ಒದಗಿಸಿದೆ. 'ಬಿಲ್ಡ್‌ಎಹೋಮ್‌' ನೆರವಿನಿಂದ ರೂ 80 ಲಕ್ಷದಿಂದ ರೂ 1.5 ಕೋಟಿ ವೆಚ್ಚದಲ್ಲಿ ಐಷಾರಾಮಿ ಸ್ವಂತ ಮನೆ ಹೊಂದುವುದು ಈಗ ಸಾಧ್ಯವಾಗುತ್ತಿದೆ.

ಹೊಸ ಉದ್ಯೋಗ ಅವಕಾಶ

ಹೊಸ ಉದ್ಯೋಗ ಅವಕಾಶ

ಇದು ಎಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳಿಗೆ ಮಾತ್ರವಲ್ಲದೆ ವಲಸೆ ಕಾರ್ಮಿಕರಿಗೂ ಹೊಸ ಉದ್ಯೋಗ ಅವಕಾಶಗಳಿಗೆ ದಾರಿ ಮಾಡಿಕೊಟ್ಟಿದೆ. ಕೋವಿಡ್‌ ಪಿಡುಗಿನ ನಂತರ ಮನೆಗಳನ್ನು ನಿರ್ಮಿಸುವುದಕ್ಕೆ ಹೆಚ್ಚಿರುವ ಬೇಡಿಕೆಯು ಗೃಹ ನಿರ್ಮಾಣ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸುವುದಕ್ಕೂ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ 'ಬಿಲ್ಡ್‌ಎಹೋಮ್‌', ತನ್ನ ಗೃಹ ನಿರ್ಮಾಣ ಯೋಜನೆಗಳಲ್ಲಿ ವಲಸೆ ಕಾರ್ಮಿಕರು ಮತ್ತು ಕುಶಲ ಸಿಬ್ಬಂದಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಒದಗಿಸಲು ಸಾಧ್ಯವಾಗಿದೆ.

English summary

BuildAhome bags 250 projects during the worst hit pandemic

Bengaluru based real estate company Build A Home bagged 250 projects during the worst hit pandemic.
Story first published: Tuesday, October 19, 2021, 18:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X