For Quick Alerts
ALLOW NOTIFICATIONS  
For Daily Alerts

ಚೀನಾದ ಮಂತ್ರಕ್ಕೆ, ಭಾರತದ ತಿರುಮಂತ್ರ :ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತವೇ ಫೇವರಿಟ್

|

ಜಗತ್ತಿನಲ್ಲಿ ಎರಡನೇ ಬಹುದೊಡ್ಡ ಆರ್ಥಿಕತೆ ಹೊಂದಿರುವ ಚೀನಾ ರಾಷ್ಟ್ರವೂ 'ಸೂಪರ್ ಪವರ್' ಆಗುವ ಮಹತ್ವಾಕಾಂಕ್ಷೆ ಹೊಂದಿರುವ ರಾಷ್ಟ್ರ. ಇಡೀ ವಿಶ್ವವೇ ತನ್ನ ಮೇಲೆ ಅವಲಂಬನೆಗೊಳ್ಳುವ ಕನಸನ್ನು ಕಟ್ಟಿಕೊಂಡು ದುರಾಸೆಯ ಗುರಿ ಹೊಂದಿರುವ ರಾಷ್ಟ್ರ. ಕೊರೊನಾದಿಂದ ಇಡೀ ವಿಶ್ವದ ಆರ್ಥಿಕತೆ ಕುಸಿಯುತ್ತಿರುವ ವೇಳೆ ಸೈಲೆಂಟಾಗಿ ಬಹುರಾಷ್ಟ್ರೀಯ ಕಂಪನಿಗಳ ಮೇಲೆ, ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಹಣ ಹೂಡಿಕೆ ಮಾಡುತ್ತಿದೆ ಈ ಚೀನಾ.

ಸಾಲವನ್ನು ಕೊಟ್ಟು ಸಣ್ಣ ಪುಟ್ಟದೇಶಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಬುದ್ದಿಯು ಚೀನಾಕ್ಕೆ ಮೊದಲಿನಿಂದಲೂ ಇದೆ. ಇದರ ಜೊತೆಗೆ ಅರ್ಥ ವ್ಯವಸ್ಥೆಯು ತಲೆಕೆಳಗಾಗಿರುವ ಈ ಸಂದರ್ಭದಲ್ಲಿ ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಬಾಂಡ್‌ಗಳ ಮೇಲೆ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡುತ್ತಿದೆ.

ಜಗತ್ತಿನ 'ಉತ್ಪಾದನಾ ಕಾರ್ಖಾನೆ' ಚೀನಾ

ಜಗತ್ತಿನ 'ಉತ್ಪಾದನಾ ಕಾರ್ಖಾನೆ' ಚೀನಾ

ಚೀನಾ ಕಾಲಿಡದ ಜಾಗವೇ ಉಳಿದಿಲ್ಲ. ಯಾವುದೇ ಉತ್ಪನ್ನವಿರಲಿ ಅಲ್ಲಿ ಮೇಡ್ ಇನ್ ಚೀನಾ ಇದ್ದೇ ಇರುತ್ತೆ. ನಾನಾ ರಾಷ್ಟ್ರಗಳು ಅಗ್ಗದ ಸರಕುಗಳಿಂದ, ಉತ್ತಮ ದರ್ಜೆಯ ಪ್ರಾಡಕ್ಟ್‌ಗಳ ತನಕ ಎಲ್ಲವನ್ನೂ ಚೀನಾದಿಂದಲೇ ಸ್ವೀಕರಿಸುತ್ತವೆ. ತನ್ನ ಟ್ರಿಲಿಯನ್ ಡಾಲರ್‌ಗಟ್ಟಲೆ ವ್ಯಾಪಾರದಿಂದ ಶರವೇಗದಲ್ಲಿ ಬೆಳೆಯುತ್ತಿರುವ ಚೀನಾ, ಜಗತ್ತಿನ 2ನೇ ಬಹುದೊಡ್ಡ ಆರ್ಥಿಕತೆಯಾಗಿದೆ.

ಆದರೆ ಈಗ ಕೊರೊನಾದಿಂದ ಇಡೀ ವಿಶ್ವವೇ ಪಾಠ ಕಲಿತಿದೆ. ಚೀನಾದ ಅವಲಂಬನೆಯನ್ನು ತಗ್ಗಿಸಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜೊತೆಗೆ ಭಾರತವೂ ಕೂಡ ಯೋಜನೆ ಸಿದ್ಧಗೊಳಿಸುತ್ತಿದೆ.

 

ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸಲು ಭಾರತ ರೆಡಿ

ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸಲು ಭಾರತ ರೆಡಿ

ಚೀನಾದ ದುರಾಸೆಯ ಬುದ್ದಿ ಅರಿತ ಹಲವು ಬಹುರಾಷ್ಟ್ರೀಯ ಕಂಪನಿಗಳು ಇದೀಗ ಭಾರತದತ್ತ ಮುಖಮಾಡುವ ಯೋಚನೆ ಮಾಡುತ್ತಿವೆ. ಹೀಗಾಗಿಯೇ ಭಾರತದಲ್ಲಿ ಈಗಾಗಲೇ ಉನ್ನತ ಮಟ್ಟದ ಸಭೆ ನಡೆದಿದ್ದು, ಚೀನಾದಿಂದ ಸ್ಥಳಾಂತರವಾಗಲು ನಿರ್ಧರಿಸಿರುವ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.

ಔಷಧ, ಆಟೊಮೊಬೈಲ್‌, ಮೊಬೈಲ್ ಉತ್ಪಾದನೆ ಸೇರಿಂದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆಗೆ ಆಹ್ವಾನಿಸಲಾಗುವುದು ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಜಪಾನ್‌, ಅಮೆರಿಕ ಮೂಲದ ಕಂಪನಿಗಳನ್ನು ಆಕರ್ಷಿಸಲು ಯತ್ನಿಸಲಾಗುತ್ತಿದೆ. ಆ್ಯಪಲ್‌, ಸ್ಯಾಮ್‌ಸಂಗ್‌, ಒಪ್ಪೊ, ವಿವೊ ಮುಂತಾದ ದಿಗ್ಗಜ ಕಂಪನಿಗಳಿಗೆ ಭಾರತದಲ್ಲಿ ಅವುಗಳ ಪೂರ್ಣಪ್ರಮಾಣದ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡುವ ನಿರೀಕ್ಷೆ ಇದೆ. ಭಾರತವನ್ನು ಸ್ಮಾರ್ಟ್‌ಫೋನ್‌ಗಳ ಉತ್ಪಾದನೆ ಮತ್ತು ರಫ್ತಿನ ಪ್ರಮುಖ ತಾಣವಾಗಿಸಲು ಚಿಂತನೆ ನಡೆದಿದೆ.

 

ಚೀನಾದಿಂದ ಅಂತರ ಕಾಯ್ದುಕೊಳ್ಳಲು ಅಮೆರಿಕಾ, ಜಪಾನ್‌ನಿಂದಲೂ ಕ್ರಮ
 

ಚೀನಾದಿಂದ ಅಂತರ ಕಾಯ್ದುಕೊಳ್ಳಲು ಅಮೆರಿಕಾ, ಜಪಾನ್‌ನಿಂದಲೂ ಕ್ರಮ

ಸಾಮಾನ್ಯ ಪರಿಸ್ಥಿತಿಯಲ್ಲಿ ಚೀನಾ-ಜಪಾನ್‌ ನಡುವೆ ಆಮದು-ರಫ್ತು ವಹಿವಾಟು ದೊಡ್ಡ ಪ್ರಮಾಣದಲ್ಲಿರುತ್ತಿತ್ತು. ಆದರೆ ಕಳೆದ ವರ್ಷದಿಂದೀಚೆಗೆ ಚೀನಾವು ಜಪಾನ್‌ನಿಂದ ಆಮದನ್ನು ಕಡಿತಗೊಳಿಸಿತ್ತು. ಜತೆಗೆ ಅಮೆರಿಕವು ಚೀನಾ ವಿರುದ್ಧ ಹೇರಿದ ನಿರ್ಬಂಧಗಳಿಂದ ಚೀನಾದಲ್ಲಿರುವ ಜಪಾನಿ ಕಂಪನಿಗಳಿಗೆ ಅಡ್ಡಿಯಾಗಿದೆ. ಜಪಾನ್‌ ವಾಣಿಜ್ಯ ಮಂಡಳಿಗಳು ಈಗಾಗಲೇ ಭಾರತದ ಅಧಿಕಾರಿಗಳು ಹಾಗೂ ವಾಣಿಜ್ಯ ಮಂಡಳಿಗಳ ಜತೆಗೆ ಚರ್ಚಿಸಿವೆ. ಕೇಂದ್ರ ಸರಕಾರ ಕೂಡ ಜಪಾನ್‌ ಮೂಲದ ಹೂಡಿಕೆಯನ್ನು ಆಕರ್ಷಿಸಲು ಪೂರ್ವ ಸಿದ್ಧತೆಗೆ ಮುಂದಾಗಿದೆ.

ಇನ್ನು ಅಮೆರಿಕಾ ಕೂಡ ಚೀನಾದ ದುರಾಸೆಯನ್ನರಿತು ಎಚ್ಚರಿಕೆಯಿಂದ ಇರಲು ನಿರ್ಧರಿಸಿದೆ. ಈಗಾಗಲೇ ಕಳೆದ ವರ್ಷವೇ ವಾಣಿಜ್ಯ ಸಮರದಿಂದ ಉಭಯ ದೇಶಗಳ ನಡುವೆ ಭಾರೀ ಸಂಘರ್ಷವೇ ನಡೆದು ಹೋಗಿದೆ. ಇದರ ಜೊತೆಗೆ ಚೀನಾ ಸೈಲೆಂಟಾಗಿ ಅಮೆರಿಕಾದ ಬಾಂಡ್‌ಗಳ ಮೇಲಿನ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಿದ್ದು, ಇದು ಮುಂದಿನ ದಿನಗಳಲ್ಲಿ ಸಂಘರ್ಷಕ್ಕೂ ಎಡೆ ಮಾಡಿಕೊಡಬಹುದು.

2019ರಲ್ಲಿ ಅಮೆರಿಕ ಮೂಲದ 50ಕ್ಕೂ ಹೆಚ್ಚು ಕಂಪನಿಗಳು ಚೀನಾದಿಂದ ಈಗಾಗಲೇ ಸ್ಥಳಾಂತರವಾಗಿವೆ. ಕೊರೊನಾ ಅವಾಂತರ ಆದ ಬಳಿಕ ಸುಮಾರು 200 ಅಮೆರಿಕನ್‌ ಕಂಪನಿಗಳು ತಮ್ಮ ಉತ್ಪಾದನಾ ನೆಲೆಯನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಗೊಳಿಸಲು ಉತ್ಸುಕವಾಗಿವೆ.

 

ಚೀನಾ ಕುರಿತು ಯಾಕೆ ಈ ಭಯ?

ಚೀನಾ ಕುರಿತು ಯಾಕೆ ಈ ಭಯ?

ಮೊದಲನೆಯದಾಗಿ ನೋಡುವುದಾದರೆ ಚೀನಾ ಕಂಡರೆ ಭಯಕ್ಕೆ ಕಾರಣವಾಗಿರುವುದು ಕೊರೊನಾವೈರಸ್ ಸೋಂಕು. ಈ ಮಹಾಮಾರಿಯು ಲಕ್ಷಾಂತರ ಜನರ ಜೀವಗಳನ್ನಷ್ಟೇ ಬಲಿ ತೆಗೆದುಕೊಳ್ಳದೆ ಜಾಗತಿಕ ಆರ್ಥಿಕತೆಯನ್ನು ನುಂಗಿಹಾಕುತ್ತಿದೆ. ನೂರಕ್ಕೂ ಹೆಚ್ಚು ರಾಷ್ಟ್ರಗಳು ಲಾಕ್‌ಡೌನ್ ಪರಿಸ್ಥಿತಿಯಲ್ಲಿದ್ದು ಪೂರೈಕೆ ಸರಪಳಿಯೇ ತುಂಡಾಗಿದೆ.

ಕೊರೊನಾ ಒಂದೇ ಅಲ್ಲದೆ ಈ ಹಿಂದೆ ಸಾರ್ಸ್‌, ಮಾರ್ಸ್ ನಂತಹ ಸಾಂಕ್ರಾಮಿಕ ರೋಗಗಳು ಚೀನಾದಿಂದಲೇ ಹಬ್ಬಿರುವುದು ಇತರೇ ರಾಷ್ಟ್ರಗಳ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಡ್ರ್ಯಾಗನ್ ರಾಷ್ಟ್ರದಿಂದ ಅಂತರ ಕಾಯ್ದುಕೊಳ್ಳುವ ಯೋಚನೆಯು ಇದೆ.

ಇನ್ನು ಚೀನಾದ ಮೇಲಿನ ಅತಿಯಾದ ಅವಲಂಬನೆಯು ಇದೀಗ ಕೊರೊನಾವೈರಸ್‌ನಿಂದಾಗಿ ಬಹಿರಂಗವಾಗಿದೆ. ಅವಲಂಬನೆ ಹೆಚ್ಚಾಗಿದ್ದರಿಂದ ಆಯಾ ರಾಷ್ಟ್ರದಲ್ಲಿ ನಿರುದ್ಯೋಗ ಕೂಡ ಹೆಚ್ಚಾಗುತ್ತಿದೆ. ಇದರ ಜೊತೆಗೆ ಬೃಹತ್ ವಿದೇಶಿ ಕಂಪನಿಗಳಲ್ಲಿ ಚೀನಾ ಹೂಡಿಕೆಯು ಹೆಚ್ಚುತ್ತಿದ್ದು ನಿಯಂತ್ರಣಕ್ಕೆ ಕೆಂಪು ರಾಷ್ಟ್ರ ಹೊಂಚು ಹಾಕಿದೆ.

 

English summary

Corona Impact India Becoming Favourite Spot For MNCs

After Worldwide Covid-19 outbreak India becoming Favourite spot for MNCs To Move company's From China
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X