For Quick Alerts
ALLOW NOTIFICATIONS  
For Daily Alerts

Diwali Muhurat Trading 2022: ದಿನಾಂಕ, ಅವಧಿ, ಮಹತ್ವ, ವಿಶೇಷದ ಬಗ್ಗೆ ಮಾಹಿತಿ

|

ಸ್ಟಾಕ್ ಮಾರುಕಟ್ಟೆ (ಎನ್‌ಎಸ್‌ಇ, ಬಿಎಸ್‌ಇ) ಅಕ್ಟೋಬರ್ 24ರಂದು ದೀಪಾವಳಿಯ "ಮುಹೂರ್ತ" ಟ್ರೇಡಿಂಗ್‌ಗಾಗಿ ಒಂದು ಗಂಟೆಯ ಕಾಲ ತೆರೆದಿರುತ್ತದೆ. ಬಿಎಸ್‌ಇ ಹಾಗೂ ಎನ್‌ಎಸ್‌ಇಯಲ್ಲಿ ಲಭ್ಯವಿರುವ ನೊಟೀಸ್ ಪ್ರಕಾರ ಷೇರು ಮಾರುಕಟ್ಟೆಯು ಸಂಜೆ 6:15ರಿಂದ 7:15ರವರೆಗೆ ಟ್ರೇಡಿಂಗ್‌ಗಾಗಿ ತೆರೆದಿರುತ್ತದೆ.

ಪ್ರತಿ ವರ್ಷದವು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದು ಗಂಟೆಗಳ ಕಾಲ ಮುಹೂರ್ತ ಟ್ರೇಡಿಂಗ್ ಸೆಷನ್ ನಡೆಯುತ್ತದೆ. ಕಳೆದ ವರ್ಷ ನವೆಂಬರ್ 4ರಂದು ಸೆಷನ್ ನಡೆದಿತ್ತು. ಈ ಬಾರಿ ಅಕ್ಟೋಬರ್ 24ರಂದು ಸೆಷನ್ ನಡೆಯಲಿದೆ. ಕಳೆದ ಬಾರಿಯಂತೆಯೇ ಸಂಜೆ 6:15ರಿಂದ 7:15ರವರೆಗೆ ಷೇರುಗಳ ಮಾರಾಟ, ಖರೀದಿ ನಡೆಯುತ್ತದೆ. ಇದು ಮಾರುಕಟ್ಟೆಯ ಸಾಮಾನ್ಯ ವಹಿವಾಟು ಸಮಯಕ್ಕಿಂತ ಭಿನ್ನವಾಗಿದೆ.

Diwali Muhurat Trading 2021: ದಿನಾಂಕ, ಅವಧಿ, ಮಹತ್ವ, ವಿಶೇಷದ ಬಗ್ಗೆ ತಿಳಿಯಿರಿDiwali Muhurat Trading 2021: ದಿನಾಂಕ, ಅವಧಿ, ಮಹತ್ವ, ವಿಶೇಷದ ಬಗ್ಗೆ ತಿಳಿಯಿರಿ

ಈ ವೇಳೆಯಲ್ಲೇ ಷೇರು ಮಾರುಕಟ್ಟೆಯಲ್ಲಿ ಬ್ರೋಕರ್‌ಗಳು ಲಕ್ಷ್ಮೀ ಪೂಜೆಯನ್ನು ವಹಿವಾಟಿನೊಂದಿಗೆಯೇ ನಡೆಸುತ್ತಾರೆ. ದೀಪಾವಳಿಯ ಈ ಸಂದರ್ಭದಲ್ಲಿ ಹೂಡಿಕೆಯಿಂದಾಗಿ ಯಶಸ್ಸು ಹಾಗೂ ಲಾಭ ಲಭಿಸುತ್ತದೆ ಎಂಬ ನಂಬಿಕೆಯಿದ್ದು ಈ ಹಿನ್ನೆಲೆ ಪೂಜೆಯನ್ನು ನಡೆಸಿ ವಹಿವಾಟು ಆರಂಭಿಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿದೆ ಮುಂದೆ ಓದಿ...

 ವಹಿವಾಟು ಸಮಯದ ಬಗ್ಗೆ ವಿವರ

ವಹಿವಾಟು ಸಮಯದ ಬಗ್ಗೆ ವಿವರ

ಮುಹೂರ್ತ ವ್ಯಾಪಾರ ಅವಧಿಗೂ ಮುನ್ನ ಒಂದು ಬ್ಲಾಕ್ ಡೀಲ್ ಸೆಷನ್ ನಡೆಯಲಿದೆ. ಪ್ರೀ- ಓಪನ್ ಸೆಷನ್ ಸಂಜೆ 6 ಗಂಟೆಗೆ ಆರಂಭವಾಗಲಿದೆ. 6:08ಕ್ಕೆ ಈ ಪ್ರೀ- ಓಪನ್ ಸೆಷನ್ ಮುಕ್ತಾಯವಾಗಲಿದೆ. ಮ್ಯಾಚಿಂಗ್ ಟೈಮಿಂಗ್ಸ್ 6:08ರಿಂದ 6:15ರವರೆಗೆ ನಡೆಯಲಿದೆ. ಆ ಬಳಿಕ ಮುಹೂರ್ತ ಸೆಷನ್ ಆರಂಭವಾಗಲಿದೆ. 7:15ರವರೆಗೆ ಟ್ರೇಡಿಂಗ್ ನಡೆಯಲಿದೆ. ಆ ಬಳಿಕ 7:25ರವರೆಗೆ ಟ್ರೇಡಿಂಗ್‌ ಬದಲಾವಣೆಗೆ ಅವಕಾಶವಿದೆ. ಟ್ರೇಡ್ ರದ್ದು ಮನವಿಯನ್ನು 7:30ರವರೆಗೆ ಸಲ್ಲಿಕೆ ಮಾಡಬಹುದು. ಇನ್ನು ಯಾವುದೇ ಸಂಶಯಗಳು, ಪ್ರಶ್ನೆಗಳು ಇದ್ದರೆ ಟ್ರೇಡಿಂಗ್ ಮಾಡುವವರು ಬಿಎಸ್‌ಇ ಸಹಾಯವಾಣಿ 022-45720400/600 ಕರೆ ಅಥವಾ bsehelp@bseindia.com. ಗೆ ಇಮೇಲ್ ಮಾಡಬಹುದು.

 ಮುಹೂರ್ತ ಟ್ರೇಡಿಂಗ್ ಸೆಷನ್ ಮಾಡುವುದು ಏಕೆ?
 

ಮುಹೂರ್ತ ಟ್ರೇಡಿಂಗ್ ಸೆಷನ್ ಮಾಡುವುದು ಏಕೆ?

'ಮುಹೂರ್ತ' ಟ್ರೇಡಿಂಗ್ ಸೆಷನ್‌ ಸಂದರ್ಭವು ಹೊಸ ವರ್ಷ ಅಥವಾ ಸಂವತ್ ಆರಂಭವನ್ನು ಸೂಚಿಸುವ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇನ್ನು ಹೂಡಿಕೆದಾರರು ಈ ಸಂದರ್ಭದಲ್ಲೇ ಯಾಕೆ ಹೂಡಿಕೆ ಮಾಡಬೇಕು ಎಂದು ನಿಮಗೆ ಪ್ರಶ್ನೆ ಮೂಡಿರಬಹುದು. ಹೂಡಿಕೆದಾರರು ಈ ಮುಹೂರ್ತ ಸಂದರ್ಭದಲ್ಲೇ ಹೂಡಿಕೆ ಮಾಡುವುದಕ್ಕೆ ಕಾರಣವೂ ಇದೆ. ಮುಹೂರ್ತದ ವೇಳೆ ಹೂಡಿಕೆ ಮಾಡಿದರೆ ಆ ವರ್ಷ ಪೂರ್ತಿ ಸಂಪತ್ತು ಹಾಗೂ ಸಮೃದ್ದಿಯನ್ನು ತರುತ್ತದೆ. ಆರ್ಥಿಕ ಅಭಿವೃದ್ಧಿ ಆಗುತ್ತದೆ ಎಂಬುವುದು ಹೂಡಿಕೆದಾರರ ನಂಬಿಕೆ ಆಗಿದೆ. ಹೂಡಿಕೆಯನ್ನು ಮಾಡಲು ದೀಪಾವಳಿ ಸಂದರ್ಭದಲ್ಲಿ ಶುಭ ಮುಹೂರ್ತ ನೋಡಿಕೊಂಡು 'ಮುಹೂರ್ತ' ಟ್ರೇಡಿಂಗ್ ಸೆಷನ್‌ ನಡೆಸುವುದನ್ನು ಬಿಎಸ್‌ಪಿ 1957ರಲ್ಲಿ ಆರಂಭ ಮಾಡಿದೆ. ಇನ್ನು ಎನ್‌ಎಸ್‌ಇಯಲ್ಲಿ ಈ ಕಾರ್ಯವನ್ನು 1992 ರಲ್ಲಿ ಪ್ರಾರಂಭ ಮಾಡಲಾಗಿದೆ. ಈ ವಹಿವಾಟಿನಲ್ಲಿ ಷೇರು ಏರಿಕೆಯೊಂದಿಗೆಯೇ ಕೊನೆಯಾಗುತ್ತದೆ.

 ಇಂದಿನ ಷೇರುಪೇಟೆ ಹೇಗಿದೆ?

ಇಂದಿನ ಷೇರುಪೇಟೆ ಹೇಗಿದೆ?

30 ಷೇರುಗಳ ಬಿಎಸ್‌ಇ ಸೂಚ್ಯಂಕ 684.64 ಅಂಕ ಅಥವಾ ಶೇಕಡ 1.20ರಷ್ಟು ಏರಿಕೆಯಾಗಿದ್ದು 57,919.97ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು ನಿಫ್ಟಿ 171.40 ಅಂಕ ಅಥವಾ ಶೇಕಡ 1.01ರಷ್ಟು ಹೆಚ್ಚಳವಾಗಿ 17,185.70ಕ್ಕೆ ವಹಿವಾಟು ಅಂತ್ಯ ಮಾಡಿದೆ. 1757 ಷೇರುಗಳು ಏರಿಕೆಯಾಗಿದ್ದರೆ, 1591 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 146 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ. ಪ್ರಮುಖವಾಗಿ ಇನ್ಫೋಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಯುಪಿಎಲ್‌, ಎಚ್‌ಸಿಲ್ ಟೆಕ್ ಸ್ಟಾಕ್‌ಗಳು ಏರಿಕೆಯಾಗಿದೆ. ಒಎನ್‌ಜಿಸಿ, ಎಂ&ಎಂ, ಬಜಾಜ್ ಆಟೋ, ಜೆಎಸ್‌ಡಬ್ಲ್ಯೂ ಸ್ಟೀಲ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್ ಸ್ಟಾಕ್ ಇಳಿಕೆಯಾಗಿದೆ. ಇನ್ಫೋಸಿಸ್ ಟಾಪ್ ಸ್ಟಾಕ್ ಆಗಿದೆ. ಎರಡನೇ ತ್ರೈಮಾಸಿಕದ ನಿವ್ವಳ ಲಾಭವನ್ನು ಘೋಷಣೆ ಮಾಡಿದ ಬೆನ್ನಲ್ಲೇ ಸ್ಟಾಕ್ ಭಾರೀ ಏರಿಕೆಯಾಗಿದೆ.

Diwali Muhurat Trading: ಸೆನ್ಸೆಕ್ಸ್‌ 296 ಪಾಯಿಂಟ್ಸ್, ನಿಫ್ಟಿ 92 ಪಾಯಿಂಟ್ಸ್ ಏರಿಕೆDiwali Muhurat Trading: ಸೆನ್ಸೆಕ್ಸ್‌ 296 ಪಾಯಿಂಟ್ಸ್, ನಿಫ್ಟಿ 92 ಪಾಯಿಂಟ್ಸ್ ಏರಿಕೆ

English summary

Diwali Muhurat Trading 2022: Check Date, Timing, And Other Details in Kannada

Diwali Muhurat Trading 2022: Check Date, Timing, And Other Details in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X