For Quick Alerts
ALLOW NOTIFICATIONS  
For Daily Alerts

ಆಕರ್ಷಣೆ ಕಳೆದುಕೊಳ್ಳುತ್ತಿರುವ ಬೆಂಗಳೂರು; ಗ್ರಾಮೀಣ ಭಾಗದಲ್ಲಿ ಜೀವ ಕಳೆ

|

ಬೆಂಗಳೂರಿಗೆ ಹತ್ತಿರದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಿಂದ ಜನರು ಬರುತ್ತಿದ್ದರು. ಬೆಂಗಳೂರಲ್ಲೇ ಹಗಲು- ರಾತ್ರಿ ಅಂತ ನೋಡದೆ ದುಡಿಯುತ್ತಿದ್ದರು. ಇದು ಕೆಲವರ ಪಾಲಿಗೆ ಫುಲ್ ಟೈಮ್ ದುಡಿಮೆ ಆಗಿದ್ದರೆ, ಹಲವರಿಗೆ ಪಾರ್ಟ್ ಟೈಮ್ ಆಗಿರುತ್ತಿತ್ತು.

ತಮ್ಮ ಮೂಲ ಕಸುಬು ಅಷ್ಟೇನೂ ಬಿಜಿ ಆಗಿರದ ಕಾಲದಲ್ಲಿ ಬೆಂಗಳೂರಿಗೆ ಬಂದುಬಿಡುತ್ತಿದ್ದರು. ಏಕೆಂದರೆ ದುಡಿಮೆಗೆ ಸಿಕ್ಕಾಪಟ್ಟೆ ಅವಕಾಶ ಇರುತ್ತಿತ್ತು. ಆದರೆ ಬೆಂಗಳೂರು ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ಮುಂಚಿನಂತೆ ಉದ್ಯೋಗ- ಕಸುಬಿಗಾಗಿ ಬೆಂಗಳೂರು ಹುಡುಕಿಕೊಂಡು ಕರ್ನಾಟಕದ ನಾನಾ ಭಾಗಗಳಿಂದ ಹಾಗೂ ಭಾರತದ ನಾನಾ ರಾಜ್ಯಗಳಿಂದ ಜನರು ಇನ್ನು ಮುಂದೆಯೂ ಬರಬಹುದಾ ಎಂಬ ಬಗ್ಗೆಯೂ ಪ್ರಶ್ನೆಗಳಿವೆ.

 

ಲಾಕ್‌ಡೌನ್ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಏರುತ್ತಿದೆ ಉದ್ಯೋಗದ ಪ್ರಮಾಣ

ಕೊರೊನಾದ ಹೊಡೆತಕ್ಕೆ ಎಲ್ಲ ವರ್ಗದವರೂ ತತ್ತರಿಸಿ ಹೋಗಿದ್ದಾರೆ. ಬೆಂಗಳೂರಿನಲ್ಲಿ ಇನ್ನು ಕೆಲಸಕ್ಕೆ ಹೋಗಿ, ಸಂಬಳ ದುಡಿದು, ಬಾಡಿಗೆ ಕಟ್ಟಿಕೊಂಡು, ತಮ್ಮ ಊರಿಗೆ ಹಣ ಕಳುಹಿಸಿ... ಅದರ ಮೇಲೆ ಉಳಿತಾಯ ಮಾಡುವುದು ಅಸಾಧ್ಯದ ಮಾತು ಎಂದೆನಿಸಿ ಆಗಿದೆ. ಉತ್ತರ ಭಾರತದ ರಾಜ್ಯಗಳಿಂದ ಹಾಗೂ ಪಕ್ಕದ ತಮಿಳುನಾಡು, ಆಂಧ್ರದಿಂದ ಬಂದಿದ್ದವರು ಸಹ ಕಂತು ಕಂತಿನಲ್ಲಿ ಟೆಂಟನ್ನೇ ಕಿತ್ತುಕೊಂಡು, ಬೆಂಗಳೂರಿನಿಂದ ಹೊರಬಿದ್ದಿದ್ದಾರೆ.

ಮನೆಗಳು ಖಾಲಿ ಖಾಲಿ

ಮನೆಗಳು ಖಾಲಿ ಖಾಲಿ

ಹೋಟೆಲ್ ಗಳನ್ನು ಖಾಲಿ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಶಾಪಿಂಗ್ ಮಾಲ್ ಗಳಲ್ಲಿ ಮಳೆಗೆಗಳು ಖಾಲಿ. ಕೆಲವು ಬಡಾವಣೆಗಳಲ್ಲಿ ಬಾಡಿಗೆಗೆ ಮನೆಗಳು ಸಿಕ್ಕಾಪಟ್ಟೆ ಇವೆ. ಕೇಳುವವರೇ ಇಲ್ಲದಂತಾಗಿದೆ. ಅದರಲ್ಲೂ ಕೈಗಾರಿಕೆ ಪ್ರದೇಶಗಳಿಗೆ ಹತ್ತಿರ ಇದ್ದ ಕಡೆಗಳಲ್ಲಿ ಮನೆಗಳು ಖಾಲಿ ಇವೆ. ಆದರೆ ಅವುಗಳನ್ನು ಕೇಳುವವರಿಲ್ಲ. ಬಾಡಿಗೆಯನ್ನು ಆದಾಯವಾಗಿ ನೆಚ್ಚಿಕೊಂಡಿದ್ದವರು ಸಹ ಕಂಗಾಲಾಗಿದ್ದಾರೆ. ಊರುಗಳಿಗೆ ವಾಪಸಾದ ಬಾಡಿಗೆದಾರರು ಹಿಂತಿರುಗಿಲ್ಲ. ಇನ್ನೂ ಕೆಲವರು ಮನೆಗಳನ್ನೇ ಖಾಲಿ ಮಾಡಿದ್ದಾರೆ. ಪೇಯಿಂಗ್ ಗೆಸ್ಟ್ ಗಳಾಗಿ ಇದ್ದವರದು ಸಹ ಇದೇ ಕಥೆ. ಆದರೆ ಇದಕ್ಕೆ ವಿರುದ್ಧ ಎಂಬಂತೆ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ಸೇರಿದಂತೆ ಇತರ ಕೆಲಸ- ಕಾರ್ಯಗಳು ಜೀವ ಪಡೆದಿವೆ.

ಬೇಸಾಯಕ್ಕೆ ಬೇಕಾದಷ್ಟು ಜನರು ಸಿಗುತ್ತಿದ್ದಾರೆ
 

ಬೇಸಾಯಕ್ಕೆ ಬೇಕಾದಷ್ಟು ಜನರು ಸಿಗುತ್ತಿದ್ದಾರೆ

"ಇದೇ ಮೊದಲ ಬಾರಿಗೆ ನಮ್ಮ ಜಮೀನಿನಲ್ಲಿ ಬೇಸಾಯಕ್ಕೆ ಏನೂ ಸಮಸ್ಯೆ ಆಗಲಿಲ್ಲ. ಎಲ್ಲರೂ ಹುಡುಗರು. ಬೆಂಗಳೂರಿನಿಂದ ಬಂದಿದ್ದವರು ಹೆಚ್ಚು. ಉಡುಪಿ, ಮುಂಬೈ, ಚೆನ್ನೈ ಹೀಗೆ ನಾನಾ ಕಡೆಗಳಿಂದ ವಾಪಸ್ ಮನೆಗೆ ಬಂದಿದ್ದಾರೆ. ಇವರಿಗೆಲ್ಲ ಬೇಸಾಯ ಗೊತ್ತು. ಆದರೆ ಸಂಪಾದನೆ ಅಂದುಕೊಂಡು ಬೇರೆ ಬೇರೆ ಪಟ್ಟಣ- ನಗರಗಳಿಗೆ ಹೋಗಿದ್ದರು. ನಮಗೆ ಬೇಸಾಯಕ್ಕೆ ಜನರೇ ಸಿಗುವುದೇ ಕಷ್ಟವಾಗಿ ಹೋಗಿತ್ತು. ಈ ಸಲ ಆ ಸಮಸ್ಯೆ ಆಗಲಿಲ್ಲ. ಜತೆಗೆ ಕೂಲಿ ಹಣಕ್ಕೂ ಬಹಳ ಬೇಡಿಕೆ ಅಂತೇನೂ ಇಲ್ಲ. ಮನೆಯಲ್ಲಿ ಇರುವ ಬದಲು ಕೆಲಸ ಕೊಡಿ ಎಂದು ಕೇಳಿಕೊಂಡು ಬರವವರೇ ಹೆಚ್ಚು. ಕೊರೊನಾದಿಂದ ಆದ ಅನುಕೂಲ ಇದು. ನಮ್ಮ ಊರಿನ ಹುಡುಗ- ಹುಡುಗಿಯರನ್ನು ಮತ್ತೆ ದಿನವೂ ನೋಡುವ ಹಾಗಾಯಿತು. ಜತೆಗೆ ಕೃಷಿ ವೃತ್ತಿ ಉಳಿಯಬಹುದು ಎಂಬ ನಂಬಿಕೆ ಕೂಡ ಬರುತ್ತಿದೆ" ಎಂದರು ತೀರ್ಥಹಳ್ಳಿ ತಾಲೂಕಿನ ನೆಂಪೆಯಲ್ಲಿ ಅಡಿಕೆ ಕೃಷಿ ಮಾಡುವ ಕೃಷಿಕ ಕೃಷ್ಣಸ್ವಾಮಿ.

ಬೆಂಗಳೂರು ಸುತ್ತಮುತ್ತಲಿಂದ ಬರುತ್ತಿದ್ದರು

ಬೆಂಗಳೂರು ಸುತ್ತಮುತ್ತಲಿಂದ ಬರುತ್ತಿದ್ದರು

ಬೆಂಗಳೂರಿಗೆ ಹತ್ತಿರದ ಜಿಲ್ಲೆಗಳಿಂದ ಶನಿವಾರ- ಭಾನುವಾರಗಳಂದು ಬಂದು, ಕ್ಯಾಬ್ - ಆಟೋಗಳನ್ನು ಓಡಿಸುತ್ತಿದ್ದವರು, ಗಾರ್ಮೆಂಟ್ ಗಳಿಗೆ ಕೆಲಸಕ್ಕೆ ಬರುತ್ತಿದ್ದವರು ಇದ್ದರು. ಇದೀಗ ಈ ಎಲ್ಲಕ್ಕೂ ಪೆಟ್ಟು ಬಿದ್ದಿದೆ. ಇನ್ನು ಬೇಡಿಕೆ ಕಡಿಮೆ ಆಗಿರುವುದರಿಂದ ಕೆಲವು ಫ್ಯಾಕ್ಟರಿಗಳಲ್ಲಿ ಕೆಲಸದಿಂದ ತೆಗೆದು ಹಾಕಲಾಗಿದೆ. ಇನ್ನು ಏಕಾಏಕಿ ಕಾರ್ಮಿಕರ ಲಭ್ಯತೆ ಪ್ರಮಾಣ ಹೆಚ್ಚಾಗಿದ್ದು, ಅವರಿಗೆ ಕೆಲಸ ಕೊಡಬೇಕಾದ ಉದ್ಯಮ, ವೃತ್ತಿಗಳಲ್ಲಿ ಅಗತ್ಯವು ಮಿತಿಯಾಗಿದೆ. ಬೆಂಗಳೂರಿನಲ್ಲಿ ಸ್ವಂತ ಅಂಗಡಿ, ವ್ಯಾಪಾರ ನಡೆಸುತ್ತಿದ್ದವರಿಗೂ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ. ಈಗಿನ ಕೊರೊನಾ ಭೀತಿ ಯಾವಾಗ ಕೊನೆಯಾಗುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ. ಕೆಲವು ಐಟಿ, ಬಿಪಿಒ ಕಂಪೆನಿಗಳಿಗಾಗಿ ಕಾರು, ಟೆಂಪೋ ಟ್ರಾವೆಲರ್ ಮತ್ತಿತರ ವಾಹನಗಳನ್ನು ಬಿಟ್ಟಿದ್ದವರಿಗೂ ಈಗ ವ್ಯವಹಾರ ನಿಂತುಹೋಗಿರುವುದರಿಂದ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ.

ಆಕರ್ಷಣೆ ಕಳೆದುಕೊಳ್ಳುತ್ತಿದೆಯಾ?

ಆಕರ್ಷಣೆ ಕಳೆದುಕೊಳ್ಳುತ್ತಿದೆಯಾ?

ಕಟ್ಟಡ ನಿರ್ಮಾಣಗಳಿಗೆ ಅನುಭವಿ- ಕೌಶಲ ಇರುವ ಕೆಲಸಗಾರರು ಸಿಗುತ್ತಿಲ್ಲ. ಈಗ ಸಿಗುತ್ತಿರುವವರು ಹೆಚ್ಚಿನ ಹಣ ಕೇಳುತ್ತಿದ್ದಾರೆ. ಈ ಕಾರಣಕ್ಕೆ ಹೊಸದಾಗಿ ಕೆಲಸ ಶುರು ಮಾಡುವುದಕ್ಕೇ ಜನ ಹಿಂದೆ- ಮುಂದೆ ಆಲೋಚನೆ ಮಾಡುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಬೇಕಾದ ವಸ್ತುಗಳ ಉತ್ಪಾದನೆಯೂ ಕಡಿಮೆ ಆಗಿರುವುದು ಸಹ ಚಿಂತೆಗೆ ಕಾರಣವಾಗಿದೆ. ಮದುವೆ ಇತರ ಸಮಾರಂಭಗಳು ನಡೆಯುತ್ತಿಲ್ಲ. ಅಷ್ಟೇ ಏಕೆ, ಕೆಲ ಸಮುದಾಯಗಳು ಸಂಪ್ರದಾಯಬದ್ಧವಾಗಿ ಮಾಡುತ್ತಿದ್ದ ಅಂತ್ಯ ಸಂಸ್ಕಾರವೂ ಆಗುತ್ತಿಲ್ಲ. ಅಡುಗೆ ಕೆಲಸದವರು ಸೇರಿದಂತೆ ಬೇರೆ ಕೆಲಸದವರಿಗೆ ಸಮಸ್ಯೆಗಳಾಗಿದ್ದು, ತಂತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ. ಇನ್ನೂ ಮುಂದುವರಿದು ಹೇಳಬೇಕು ಅಂದರೆ, ಸಿನಿಮಾ ರಂಗದಲ್ಲಿ ಇದ್ದ ಕಾರ್ಮಿಕರು ಸಹ ಊರುಗಳಿಗೆ ವಾಪಸಾಗಿದ್ದು, ಫೋನ್ ನಾಟ್ ರೀಚಬಲ್- ಸ್ವಿಚ್ಡ್ ಆಫ್ ಆಗಿದೆ. ಕೊರೊನಾ ತೊಲಗಿ, ಮತ್ತೆ ಸಹಜ ಸ್ಥಿತಿಗೆ ಎಲ್ಲವೂ ಯಾವಾಗ ಮರಳಬಹುದು ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಈ ಕಾರಣಕ್ಕೇ ಹೇಳಿದ್ದು, ಬೆಂಗಳೂರು ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆಯಾ?

English summary

How Bengaluru Losing It's Economic Hub Status During Corona Hit Days

How corona hit Bengaluru's economic hub status and helping to change rural areas job sector? Here is an explainer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more