For Quick Alerts
ALLOW NOTIFICATIONS  
For Daily Alerts

ದೇಶದಲ್ಲಿ ಇದೇ ಮೊದಲು; ಬೆಂಗಳೂರಿನಲ್ಲಿ ಮಹಿಳಾ ಸಿಬ್ಬಂದಿಯ ಎಚ್‌ಡಿಎಫ್‌ಸಿ ಡಿಜಿಟಲ್ ಸೆಂಟರ್

|

ಬೆಂಗಳೂರು, ಅ. ೧8: ಷೇರು ವ್ಯವಹಾರದ ಮಧ್ಯವರ್ತಿ ಸಂಸ್ಥೆ ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ಬೆಂಗಳೂರಿನಲ್ಲಿ ಡಿಜಿಟಲ್ ಸೆಂಟರ್ ತೆರೆದಿದೆ. ಇದರ ವಿಶೇಷತೆ ಎಂದರೆ ಎಲ್ಲಾ ಸಿಬ್ಬಂದಿಯೂ ಮಹಿಳೆಯರೇ ಆಗಿರಲಿದ್ದಾರೆ. ಇಂಥದ್ದೊಂದು ಸಂಪೂರ್ಣ ಮಹಿಳಾ ಸಿಬ್ಬಂದಿ ಇರುವ ಡಿಜಿಟಲ್ ಸೆಂಟರ್ ಆರಂಭವಾಗಿರುವುದು ಭಾರತದಲ್ಲಿ ಇದೇ ಮೊದಲು ಎಂದು ಕಂಪನಿ ಹೇಳಿಕೊಂಡಿದೆ. ಬೆಂಗಳೂರು ಸೇರಿ ದೇಶದ ಹಲವೆಡೆಯೂ ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್‌ನ ಡಿಜಿಟಲ್ ಸೆಂಟರ್‌ಗಳನ್ನು ತೆರೆಯಲಾಗಿದೆ.

ಬೆಂಗಳೂರಿನಲ್ಲಿರುವ ಈ ಡಿಜಿಟಲ್ ಸೆಂಟರ್‌ನಲ್ಲಿ ಸಿಬ್ಬಂದಿಯಾಗಿ ಮಹಿಳೆಯರು ಇರುತ್ತಾರಾದರೂ ಎಲ್ಲಾ ಗ್ರಾಹಕರಿಗೂ ಇಲ್ಲಿ ಸೇವೆ ನೀಡಲಾಗುತ್ತದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಗ್ರಾಹಕರಿಗೆ ಇಲ್ಲಿಂದ ಸೇವೆ ನೀಡಲಾಗುತ್ತದೆ.

"ಡಿಜಿಟಲ್ ಸೆಂಟರ್‌ನಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ನಿಯೋಜಿಸುವುದು ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ಕಂಪನಿಯಲ್ಲಿ ವೈವಿಧ್ಯತೆ ಬೆಳೆಸುವತ್ತ ಒಂದು ಹೆಜ್ಜೆ ಎನಿಸಿದೆ. ಹಾಗೆಯೇ, ವಿಶ್ವದ ಅತಿ ಹೆಚ್ಚು ಯುವ ಸಮುದಾಯ ಭಾರತದಲ್ಲೇ ಇದೆ. ಇಲ್ಲಿ ಯುವಜನತೆ ಶೇ. 27ರಷ್ಟಿದ್ದಾಋಎ. ಹೀಗಾಗಿ, ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ಡಿಜಿಟಲ್ ಸೇವೆಯತ್ತ ಗಮನ ಹರಿಸಿದೆ. ಬೆಂಗಳೂರಿನ ಡಿಜಿಟಲ್ ಸೆಂಟರ್‌ನಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರನ್ನು ನೇಮಕ ಮಾಡುವ ಉದ್ದೇಶ ಇದೆ. ಇಲ್ಲಿ ನೂರಕ್ಕೂ ಹೆಚ್ಚು ರಿಲೇಶನ್‌ಶಿಪ್ ಮ್ಯಾನೇಜರ್‌ಗಳನ್ನು ನೇಮಕ ಮಾಡಲಾಗುತ್ತದೆ" ಎಂದು ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್‌ನ ಎಂಡಿ ಮತ್ತು ಸಿಇಒ ಧೀರಜ್ ರೆಲ್ಲಿ ಹೇಳಿದ್ದಾರೆ.

ದೇಶದಲ್ಲಿ ಮೊದಲು: ಬೆಂಗಳೂರಿನಲ್ಲಿ ಮಹಿಳಾ ಸಿಬ್ಬಂದಿಯ ಡಿಜಿಟಲ್ ಸೆಂಟರ್

ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್‌ನಿಂದ ದೇಶಾದ್ಯಂತ ವಿವಿಧೆಡೆ ಸ್ಥಾಪನೆ ಆಗುತ್ತಿರುವ ಡಿಜಿಟಲ್ ಸೆಂಟರ್‌ಗಳಲ್ಲಿ 600 ರಿಲೇಶನ್‌ಶಿಪ್ ಮ್ಯಾನೇಜರ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಎಲ್ಲರೂ ಕೂಡ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಇರಲಿದ್ದಾರೆ. ಗ್ರಾಹಕರೂ ಯುವಸಮುದಾಯದವರೇ ಹೆಚ್ಚಿರುವುದರಿಂದ ಈ ತಂತ್ರವನ್ನು ಕಂಪನಿ ಅನುಸರಿಸುತ್ತಿದೆ.

ಮಹಿಳಾ ಸಿಬ್ಬಂದಿಯ ಡಿಜಿಟಲ್ ಸೆಂಟರ್ ಯಾಕೆ?

ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್‌ನ ಸಿಇಒ ಪ್ರಕಾರ ಮಹಿಳೆಯರನ್ನು ಹೂಡಿಕೆ ಜಗತ್ತಿಗೆ ಸೆಳೆಯುವ ನಿಟ್ಟಿನಲ್ಲಿ ಮಹಿಳಾ ಸಿಬ್ಬಂದಿಯ ಡಿಜಿಟಲ್ ಸೆಂಟರ್ ಆರಂಭಿಸಲಾಗಿದೆ. ಸದ್ಯ ಶೇ. 7ರಷ್ಟು ಭಾರತೀಯ ಮಹಿಳೆಯರು ಸ್ವತಂತ್ರವಾಗಿ ಹೂಡಿಕೆ ವ್ಯವಹಾರ ಮಾಡುತ್ತಿದ್ದಾರೆ. ಶೇ. 33 ರಷ್ಟು ಮಹಿಳೆಯರಿಗೆ ಯಾವುದೇ ಹಣಕಾಸು ಹೂಡಿಕೆಗಳಿಲ್ಲ. ಇಂಥ ಮಹಿಳೆಯರು ಡಿಜಿಟಲ್ ಸೆಂಟರ್‌ನಲ್ಲಿರುವ ಮಹಿಳಾ ತಂಡದ ಸಹಾಯದಿಂದ ಹಣಕಾಸು ವ್ಯವಹಾರ ಆರಂಭಿಸಲು ಪ್ರೇರೇಪಣೆಯಾಗಬಹುದು ಎಂಬುದು ಅವರ ಆಶಯ.

"ಭಾರತೀಯ ಮಹಿಳೆಯರು ಸ್ವ-ನಿರ್ದೇಶಿತೆಯರಾಗುವಂತಾಗಲು ಮಹಿಳಾ ಸಿಬ್ಬಂದಿಯ ಡಿಜಿಟಲ್ ಸೆಂಟರ್ ಮೊದಲ ಹೆಜ್ಜೆಯಾಗಿದೆ. ಡಿಜಿಟಲ್ ಸೆಂಟರ್ ಅನ್ನು ಮಹಿಳೆಯರೇ ನಡೆಸಿದಾಗ ಬೇರೆ ಮಹಿಳೆಯರು ಹೂಡಿಕೆಯನ್ನು ಸ್ವಂತಬಲದಲ್ಲಿ ನಿರ್ವಹಣೆ ಮಾಡಲು ಸ್ಫೂರ್ತಿ ಸಿಗುತ್ತದೆ" ಎಂದು ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹೇಳಿದ್ದಾರೆ.

ದೇಶದಲ್ಲಿ ಮೊದಲು: ಬೆಂಗಳೂರಿನಲ್ಲಿ ಮಹಿಳಾ ಸಿಬ್ಬಂದಿಯ ಡಿಜಿಟಲ್ ಸೆಂಟರ್

ಯುವ ಸಮುದಾಯ ತಮ್ಮ ಹಣಕಾಸು ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಮುಖ್ಯ. ಹಾಗೆಯೆ, ಹೂಡಿಕೆ ಪ್ರಕ್ರಿಯೆ ಬಗ್ಗೆ ಇನ್ನಷ್ಟು ಚೆನ್ನಾಗಿ ಅರಿತುಕೊಳ್ಳುವ ಅಗತ್ಯ ಇದೆ. ಭಾರತ ಮಟ್ಟದ ಡಿಜಿಟಲ್ ಸೆಂಟರ್‌ನಲ್ಲಿ ಇದಕ್ಕಾಗಿ ಉತ್ತಮ ಜ್ಞಾನ ಇರುವ ರಿಲೇಶನ್‌ಶಿಪ್ ಮ್ಯಾನೇಜರ್‌ಗಳನ್ನು ನೇಮಿಸಲಾಗುತ್ತಿದೆ. ಗ್ರಾಹಕರು ಕಚೇರಿಗೆ ಹುಡುಕಿಕೊಂಡು ಹೋಗುವ ಬದಲು ಡಿಜಿಟಲ್ ಸೆಂಟರ್‌ಗಳನ್ನು ಸಂಪರ್ಕಿಸಿ ಸೇವೆ ಪಡೆಯಬಹುದು ಎಂದು ಧೀರಜ್ ರೆಲ್ಲಿ ತಿಳಿಸಿದ್ದಾರೆ.

75 ಜಿಲ್ಲೆಗಳಲ್ಲಿ ಬ್ಯಾಂಕ್‌ಗಳ ಡಿಜಿಟಲ್ ಸೆಂಟರ್

ಒಂದು ಡಿಜಿಟಲ್ ಸೆಂಟರ್ ಭೌತಿಕ ಕಚೇರಿಯಾಗಿಯೂ ಕಾರ್ಯನಿರ್ವಹಿಸುತ್ತದೆ, ಹಾಗೆಯೇ ಆನ್‌ಲೈನ್ ಸೇವೆಯನ್ನೂ ಒದಗಿಸುತ್ತದೆ. ಇತ್ತೀಚೆಗೆ, ಪ್ರಧಾನಿ ಮೋದಿ ಅವರು ದೇಶಾದ್ಯಂತ 75 ಜಿಲ್ಲೆಗಳಲ್ಲಿ ವಿವಿಧ ಬ್ಯಾಂಕುಗಳ 75 ಡಿಜಿಟಲ್ ಸೆಂಟರ್‌ಗಳನ್ನು ಉದ್ಘಾಟಿಸಿದ್ದರು. ಆ ಡಿಜಿಟಲ್ ಸೆಂಟರ್‌ಗಳಲ್ಲಿ ಎಲ್ಲಾ ರೀತಿಯ ಬ್ಯಾಂಕ್ ಕಾರ್ಯಗಳನ್ನು ಸಂಪೂರ್ಣ ಡಿಜಿಟಲ್ ಆಗಿ ಮಾಡಲು ಅವಕಾಶ ಇದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸಾಲಕ್ಕಾಗಿ ಅರ್ಜಿ ಸಲ್ಲಿಸುವವರೆಗೂ ಇಲ್ಲಿ ಸೇವೆ ಇರುತ್ತದೆ. ಗ್ರಾಹಕರು ಕಿಯೋಸ್ಕ್‌ಗಳನ್ನು ಬಳಸಿ ತಾವೇ ಸೇವೆ ಪಡೆಯಬಹುದು. ಜೊತೆಗೆ, ಡಿಜಿಟಲ್ ಕೇಂದ್ರಗಳಲ್ಲಿರುವ ಸಿಬ್ಬಂದಿ ಮೂಲಕವೂ ಸಹಾಯ ಪಡೆದುಕೊಳ್ಳಬಹುದು.

English summary

HDFC Securities opens India's First, Women-Only Digital Centre in Bengaluru

HDFC Securities has launched pan-India digital centres. In Bengaluru's digital centre the staff are all women. It is a first in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X