For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿ

|

ರಾಜ್ಯ ಬಜೆಟ್‌ನ ಪ್ರಸ್ತಾಪದಂತೆ ಮಂಗಳವಾರ ಮಧ್ಯರಾತ್ರಿಯಿಂದಲೇ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಬಕಾರಿ ತೆರಿಗೆ ಹೆಚ್ಚಳವಾಗಿದ್ದು, ತೈಲ ದರ ಏರಿಕೆಯಾಗಿದೆ.

 

ಈ ವರ್ಷದ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಸಂಪನ್ಮೂಲ ಕ್ರೂಢೀಕರಣ ಹೆಚ್ಚಿಸಲು ತೈಲದ ಮೇಲಿನ ತೆರಿಗೆ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್‌ ಮೇಲಿನ ತೆರಿಗೆ 32 ಪರ್ಸೆಂಟ್ ನಿಂದ 35ಕ್ಕೆ ಏರಿಸಲಾಗಿದೆ. ಡೀಸೆಲ್ ಮೇಲಿನ ತೆರಿಗೆ 21 ರಿಂದ 24ಕ್ಕೆ ಏರಿಕೆ ಮಾಡಲಾಗಿತ್ತು.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿ

ಪೆಟ್ರೋಲ್-ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳದಿಂದಾಗಿ ಪೆಟ್ರೋಲ್ ಲೀಟರ್‌ಗೆ ಪೆಟ್ರೋಲ್ ದರವು ಲೀಟರ್‌ಗೆ 1.60 ರುಪಾಯಿ ಏರಿಕೆಯಾಗಿದ್ದು, ಡೀಸೆಲ್‌ ಲೀಟರ್‌ಗೆ 1 ರುಪಾಯಿ 59 ಪೈಸೆ ಏರಿಕೆಯಾಗಿದೆ. ಈ ಹೊಸ ದರವು ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದು ಹೊಸ ದರಗಳು ಅನ್ವಯವಾಗಲಿವೆ. ಬೆಂಗಳೂರಿನಲ್ಲಿ ಒಂದು ಲೀಟರ್‌ ಪೆಟ್ರೋಲ್‌ಗೆ 73.55 ರುಪಾಯಿಯಿದ್ದು, ಡೀಸೆಲ್‌ ಲೀಟರ್‌ಗೆ 65.96 ರುಪಾಯಿಗೆ ಹೆಚ್ಚಾಗಿದೆ.

ಪೆಟ್ರೋಲ್, ಡೀಸೆಲ್ ಜೊತೆಗೆ ಅಬಕಾರಿ ತೆರಿಗೆ ಕೂಡ ಹೆಚ್ಚಳವಾಗಿದ್ದು, ಮದ್ಯದ ಮೇಲಿನ ತೆರಿಗೆ 4 ಪರ್ಸೆಂಟ್ ಹೆಚ್ಚಳವಾಗಲಿದೆ.

English summary

Karnataka Petrol Diesel Price Hiked

The budget proposal sales tax on petrol and diesel by 3 Percent each Hiked on wednesday.
Story first published: Wednesday, April 1, 2020, 8:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X