For Quick Alerts
ALLOW NOTIFICATIONS  
For Daily Alerts

ಇಂದಿನಿಂದ ಚಿನ್ನದ ಹಾಲ್‌ಮಾರ್ಕ್ ಕಡ್ಡಾಯ: ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ

|

ಕೇಂದ್ರ ಸರ್ಕಾರವು ದೇಶದಲ್ಲಿ ಮಾರಾಟವಾಗುವ ಎಲ್ಲಾ ಚಿನ್ನಾಭರಣಗಳಿಗೆ ನಿಗದಿಪಡಿಸಿದಂತೆ ಇಂದಿನಿಂದ (ಜೂನ್ 15) ಹಾಲ್‌ಮಾರ್ಕ್ ಕಡ್ಡಾಯಗೊಳಿಸಿದೆ. 2021 ಜನವರಿ 15ರಿಂದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್(ಬಿಐಎಸ್) ಹಾಲ್‌ಮಾರ್ಕ್‌ ಕಡ್ಡಾಯವಾಗಲಿದೆ.

 

ಚಿನ್ನಾಭರಣ ಶುದ್ಧತೆ ಬಗ್ಗೆ ತಲೆಕೆಡಿಸಿಕೊಳ್ಳುವ ಗ್ರಾಹಕರಿಗೆ ಇದು ನೆಮ್ಮದಿ ತರುವ ವಿಚಾರವಾಗಿದೆ. ಗ್ರಾಹಕರು ತಾವು ಖರೀದಿಸುವ ಚಿನ್ನಾಭರಣ ಶುದ್ಧತೆಯ ಪ್ರಮಾಣವು ಹಾಲ್‌ಮಾರ್ಕ್‌ನಿಂದ ಖಚಿತವಾಗಲಿದೆ. ಚಿನ್ನಾಭರಣ ಮಾರಾಟಗಾರರು ಮತ್ತು ಚಿಲ್ಲರೆ ವ್ಯಾಪಾರಿಗಳು ಭಾರತೀಯ ಮಾನದಂಡ ಅಡಿಯಲ್ಲಿ (ಬಿಐಎಎಸ್) ನೋಂದಾಯಿಸಿಕೊಳ್ಳಬೇಕು.

ಈ ಮೊದಲು ಗಡುವು ಜೂನ್ 1 ಆಗಿತ್ತು, ಇದನ್ನು ಕೋವಿಡ್ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಹದಿನೈದು ದಿನಗಳವರೆಗೆ ವಿಸ್ತರಿಸಲಾಯಿತು. ಹಾಗಿದ್ದರೆ ಚಿನ್ನದ ಹಾಲ್‌ಮಾರ್ಕ್ ಎಂದರೇನು ಮತ್ತು ಆಭರಣಕಾರರು ಹಾಲ್‌ಮಾರ್ಕ್ ಮಾಡಿದ ಆಭರಣಗಳನ್ನು ಮಾತ್ರ ಮಾರಾಟ ಮಾಡುವುದನ್ನು ಸರ್ಕಾರ ಏಕೆ ಕಡ್ಡಾಯಗೊಳಿಸಿದೆ? ಎಂಬುದನ್ನು ಈ ಕೆಳಗೆ ತಿಳಿಯಿರಿ.

ಚಿನ್ನದ ಹಾಲ್‌ಮಾರ್ಕ್‌ ಎಂದರೇನು? ಏನೆಲ್ಲಾ ಮಾರಾಟ ಮಾಡಬಹುದು?

ಚಿನ್ನದ ಹಾಲ್‌ಮಾರ್ಕ್‌ ಎಂದರೇನು? ಏನೆಲ್ಲಾ ಮಾರಾಟ ಮಾಡಬಹುದು?

ಚಿನ್ನದ ಹಾಲ್‌ಮಾರ್ಕ್‌ಎನ್ನುವುದು ಅಮೂಲ್ಯವಾದ ಹಳದಿ ಲೋಹದ ಶುದ್ಧತೆಯ ಪ್ರಮಾಣೀಕರಣವಾಗಿದೆ. 2016ರ ಬಿಐಎಸ್ ಕಾಯ್ದೆ ಪ್ರಕಾರ ಆಭರಣ ಮಾರಾಟಗಾರರು 14 ಕ್ಯಾರೆಟ್, 18 ಕ್ಯಾರೆಟ್ ಮತ್ತು 22 ಕ್ಯಾರೆಟ್ ಎಂಬ ಮೂರು ಅಳತೆಗಳ ಅಡಿಯಲ್ಲಿ ಚಿನ್ನವನ್ನು ಗುರುತಿಸಬೇಕಾಗಿದೆ. ಕ್ಯಾರೆಟ್ ಎನ್ನುವುದು ಚಿನ್ನದ ಪ್ರಮಾಣವನ್ನು 24 ಭಾಗಗಳಲ್ಲಿ ಮಿಶ್ರಲೋಹದಲ್ಲಿ ಸೂಚಿಸುವ ಅಳತೆಯಾಗಿದೆ. ಆದ್ದರಿಂದ 18 ಕ್ಯಾರೆಟ್ ಚಿನ್ನವು 18/24 ಭಾಗಗಳ ಚಿನ್ನವಾಗಿದೆ.

ಗ್ರಾಹಕರು ಮೋಸ ಹೋಗದಿರುವುದು ಸರ್ಕಾರದ ಉದ್ದೇಶ

ಗ್ರಾಹಕರು ಮೋಸ ಹೋಗದಿರುವುದು ಸರ್ಕಾರದ ಉದ್ದೇಶ

ಇದುವರೆಗೆ ಚಿನ್ನದ ಹಾಲ್‌ಮಾರ್ಕಿಂಗ್ ಸ್ವಯಂಪ್ರೇರಿತವಾಗಿತ್ತು. ಚಿನ್ನದ ಆಭರಣಗಳನ್ನು ಖರೀದಿಸುವಾಗ ಗ್ರಾಹಕರು ಮೋಸ ಹೋಗದಂತೆ ನೋಡಿಕೊಳ್ಳುವುದು ಚಿನ್ನವನ್ನು ಕಡ್ಡಾಯವಾಗಿ ಹಾಲ್‌ಮಾರ್ಕಿಂಗ್ ಮಾಡುವ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ. ನೋಂದಣಿ ಪ್ರಕ್ರಿಯೆಯನ್ನು ಆನ್‌ಲೈನ್ ಮತ್ತು ಸ್ವಯಂಚಾಲಿತವಾಗಿ ಮಾಡಲಾಗಿದೆ.

2000 ಇಸವಿಯಿಂದಲೇ ಹಾಲ್‌ಮಾರ್ಕ್ ಶುರು
 

2000 ಇಸವಿಯಿಂದಲೇ ಹಾಲ್‌ಮಾರ್ಕ್ ಶುರು

ಬಿಐಎಸ್ ಈಗಾಗಲೇ ಏಪ್ರಿಲ್ 2000 ರಿಂದ ಚಿನ್ನದ ಆಭರಣಗಳಿಗಾಗಿ ಹಾಲ್‌ಮಾರ್ಕ್ ಯೋಜನೆಯನ್ನು ನಡೆಸುತ್ತಿದೆ . ಅದರಲ್ಲೂ ಹಾಲ್‌ಮಾರ್ಕ್ ಕಡ್ಡಾಯವಾಗಲಿದೆ ಎಂಬ ಉದ್ದೇಶದಿಂದಲೇ ಕಳೆದ ಐದು ವರ್ಷಗಳಲ್ಲಿ ಮೌಲ್ಯಮಾಪನ ಮತ್ತು ಹಾಲ್‌ಮಾರ್ಕ್‌ ಕೇಂದ್ರಗಳಲ್ಲಿ ಶೇಕಡಾ 25 ರಷ್ಟು ಹೆಚ್ಚಳವಾಗಿದೆ ಎಂದು ಸರ್ಕಾರ ಹೇಳಿದೆ.

ಹಾಲ್‌ಮಾರ್ಕ್ ಇಲ್ಲದೆ ಚಿನ್ನ ಮಾರಾಟ ಮಾಡಿದರೆ ಏನಾಗಲಿದೆ?

ಹಾಲ್‌ಮಾರ್ಕ್ ಇಲ್ಲದೆ ಚಿನ್ನ ಮಾರಾಟ ಮಾಡಿದರೆ ಏನಾಗಲಿದೆ?

ಈ ಅಧಿಸೂಚನೆಯನ್ನು ಹಂತ ಹಂತವಾಗಿ ಜಾರಿಗೆ ತರಲಿದ್ದು, ಮೆಟ್ರೋ ನಗರಗಳಿಂದ ಪ್ರಾರಂಭಿಸಿ ನಾಲ್ಕು ಹಂತಗಳಲ್ಲಿ ಚಿನ್ನದ ಹಾಲ್‌ಮಾರ್ಕ್ ಅನ್ನು ಜಾರಿಗೆ ತರಲು ಸರ್ಕಾರ ಯೋಜಿಸಿದೆ. ಹಾಲ್‌ಮಾರ್ಕ್ ಅಧಿಸೂಚನೆಯನ್ನು ಉಲ್ಲಂಘಿಸಿದರೆ ಕನಿಷ್ಠ 1 ಲಕ್ಷ ರುಪಾಯಿಗಳಿಂದ ಗರಿಷ್ಠ ಚಿನ್ನದ ಮೌಲ್ಯದ 5 ಪಟ್ಟು ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಬಿಐಎಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಸ್ತುತ ಶೇ. 40ರಷ್ಟು ಹಾಲ್‌ಮಾರ್ಕ್‌ ಆಗಿದೆ!

ಪ್ರಸ್ತುತ ಶೇ. 40ರಷ್ಟು ಹಾಲ್‌ಮಾರ್ಕ್‌ ಆಗಿದೆ!

ಪ್ರಸ್ತುತ ಸುಮಾರು 40 ಪ್ರತಿಶತದಷ್ಟು ಚಿನ್ನಾಭರಣಗಳನ್ನು ಹಾಲ್‌ಮಾರ್ಕ್ ಗುರುತಿಸಲಾಗಿದೆ. ಬಿಐಎಸ್ ಪ್ರಕಾರ, ಕಡ್ಡಾಯ ಹಾಲ್‌ಮಾರ್ಕಿಂಗ್‌ ಸಾರ್ವಜನಿಕರನ್ನು ಕಡಿಮೆ ಕ್ಯಾರೆಟೇಜ್ ವಿರುದ್ಧ ರಕ್ಷಿಸುತ್ತದೆ ಮತ್ತು ಆಭರಣಗಳ ಮೇಲೆ ಗುರುತಿಸಿದಂತೆ ಗ್ರಾಹಕರು ಶುದ್ಧತೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.

ಭಾರತದಲ್ಲಿದ್ದಾರೆ ನಾಲ್ಕು ಲಕ್ಷ ಆಭರಣಕಾರರು!

ಭಾರತದಲ್ಲಿದ್ದಾರೆ ನಾಲ್ಕು ಲಕ್ಷ ಆಭರಣಕಾರರು!

ಭಾರತವು ಸುಮಾರು 4 ಲಕ್ಷ ಆಭರಣಕಾರರನ್ನು ಹೊಂದಿದ್ದು, ಅದರಲ್ಲಿ ಕೇವಲ 35,879 ಮಂದಿ ಮಾತ್ರ ಬಿಐಎಸ್ ಪ್ರಮಾಣೀಕರಿಸಿದ್ದಾರೆ ಎಂದು ವಿಶ್ವ ಚಿನ್ನದ ಮಂಡಳಿ ತಿಳಿಸಿದೆ.

20 ನವೆಂಬರ್ 2021 ರಿಂದ ದೇಶಾದ್ಯಂತ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಹಾಲಾ್ಮಾರ್ಕ್ ಕಡ್ಡಾಯಗೊಳಿಸಲಾಗುವುದು ಎಂದು 2019 ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ ಕೊರೊನಾವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಎರಡು ಬಾರಿ ಗಡುವನ್ನು ವಿಸ್ತರಿಸಲಾಗಿದೆ.

 

English summary

Mandatory Gold Hallmarking To Be Implemented From Today: Know More

The government is implement mandatory hallmarking of gold jewellery and artefacts from Today, 15 June 2021
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X