For Quick Alerts
ALLOW NOTIFICATIONS  
For Daily Alerts

'8 ಕೋಟಿಯ' ಅಲಾಸ್ಕನ್ ಮಾಲಾಮ್ಯೂಟ್ ತಳಿ ಆನ್ ಲೈನ್ ನಲ್ಲಿ ಒಂದೆರಡು ಲಕ್ಷ

|

ಬೆಂಗಳೂರಿನಲ್ಲಿ ವಿಪರೀತ ಸುದ್ದಿಯಾಗಿದ್ದ 'ಎಂಟು ಕೋಟಿ ಮೌಲ್ಯದ' ನಾಯಿ ಮರಳಿ ಸಿಕ್ಕಿದೆ. ಅಲಾಸ್ಕನ್ ಮಾಲಾಮ್ಯೂಟ್ ಎಂಬ ತಳಿಯ ಈ ನಾಯಿಯ ಬಗ್ಗೆಯೇ ಭಾನುವಾರದಂದು ವಿಪರೀತ ಚರ್ಚೆ. ಆ ನಾಯಿಗೆ ಸೆಕ್ಯೂರಿಟಿ ಗಾರ್ಡ್ ನೇಮಿಸದೆ ಇದ್ದದ್ದು ತಪ್ಪು ಬಿಡಿ ಎನ್ನುವ ಮಟ್ಟಿಗೆ ಚರ್ಚೆ ಹೋಗಿತ್ತು.

 

ಸೋಮವಾರದಂದು ಮಾಲೀಕರಿಗೆ ಮಾಲಾಮ್ಯೂಟ್ ಮರಳಿ ಸಿಕ್ಕಿದೆ. ಇದನ್ನು ತಲುಪಿಸಿದವರ ವಿವರ ಗೊತ್ತಾಗಿಲ್ಲ. ಆದರೆ ಹನುಮಂತ ನಗರದ ಪೊಲೀಸರ ಬಳಿ ದಾಖಲಾಗಿದ್ದ ಪ್ರಕರಣ ಮುಕ್ತಾಯವಾಗಿದೆ. ಆದರೆ ಈ ಪ್ರಕರಣದಲ್ಲಿ ಟ್ವಿಸ್ಟ್ ಇರುವುದು ಅಲಾಸ್ಕನ್ ಮಾಲಾಮ್ಯೂಟ್ ನ ಬೆಲೆ ಎಷ್ಟು ಎಂಬ ವಿಚಾರದಲ್ಲಿ.

ಇಂಟರ್ ನೆಟ್ ನಲ್ಲಿ ತಡಕಾಡಿದರೆ ಒಂದು ಲಕ್ಷ ರುಪಾಯಿಯಿಂದ ಶುರುವಾಗಿ, ಆರು ಲಕ್ಷದೊಳಗೆ ಈ ತಳಿಯ ನಾಯಿಗಳು ಖರೀದಿಗೆ ದೊರೆಯುತ್ತವೆ. ಇನ್ನು ಇವುಗಳ ನಿರ್ವಹಣೆ ದುಬಾರಿ ಎಂಬ ಮಾಹಿತಿ ಇದೆಯಾದರೂ ಈ ಎಂಟು ಕೋಟಿ ರುಪಾಯಿ ಬಗ್ಗೆ ಯಾವ ಮಾಹಿತಿಯೂ ಇಲ್ಲ.

'8 ಕೋಟಿ' ಅಲಾಸ್ಕನ್ ಮಾಲಾಮ್ಯೂಟ್ ತಳಿ ಆನ್ ಲೈನ್ ನಲ್ಲಿ ಒಂದೆರಡು ಲಕ್ಷ

ಆದರೆ, ನಾಯಿಯ ಮಾಲೀಕರಾದ ಚೇತನ್ ಗೆ ಇದನ್ನು ಮಾರಾಟ ಮಾಡುವಾಗ ಎಂಟು ಕೋಟಿ ಇದರ ಬೆಲೆ ಎಂದಿದ್ದರಂತೆ. ಅದನ್ನು ಯಥಾವತ್ ನಂಬಿ, ದೂರಿನಲ್ಲೂ ಅದೇ ದಾಖಲಿಸಿದ್ದರು. ಈಗ ಅವರೇ ಹೇಳಿಕೊಂಡಿರುವಂತೆ, ಅದರ ಬೆಲೆ ಎರಡು ಲಕ್ಷ. ಆದರೆ ಇನ್ನೂ ಕಡಿಮೆ ಬೆಲೆಗೆ ಅದು ಸಿಗುತ್ತದೆ.

ಅಂತೂ ಒಂದಿಡೀ ದಿನ ಭರ್ಜರಿ ಸುದ್ದಿಯ ಆಹಾರವಾಯಿತು ಅಲಾಸ್ಕನ್ ಮಾಲಾಮ್ಯೂಟ್ ತಳಿಯ ನಾಯಿ.

English summary

Reality Behind 8 Crore Alaskan Malamute

Bengaluru dog become hot news on December 22nd, Sunday. Breed Alaskan Malamute. Owner lost this dog and said price was 8 crore. Here is an interesting story about breed.
Story first published: Monday, December 23, 2019, 19:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X