For Quick Alerts
ALLOW NOTIFICATIONS  
For Daily Alerts

ಈ ಷೇರಿನಲ್ಲಿ 20 ವರ್ಷದ ಹಿಂದೆ 50,000 ಹೂಡಿಕೆ ಮಾಡಿದ್ರೆ, ಈಗ 5 ಕೋಟಿ ರೂಪಾಯಿ!

|

ದೀರ್ಘಾವಧಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಹೆಚ್ಚಿನ ಲಾಭ ಪಡೆಯುವುದನ್ನು ಕಾಣಬಹುದು. ಆದರೆ ಈ ಲಾಭ ಪಡೆಯಲು ಪ್ರಮುಖ ಅಂಶಗಳಲ್ಲಿ ಒಂದು ತಾಳ್ಮೆ. ಷೇರುಪೇಟೆ ತಜ್ಞರ ಪ್ರಕಾರ ಒಂದು ಗುಣಮಟ್ಟದ ಷೇರು ಅನ್ನು ದೀರ್ಘಕಾಲದವರೆಗೆ ಹಿಡಿದಿಡಲು ಪ್ರಯತ್ನಿಸಬೇಕು.

 

ಅನುಭವಿ ಷೇರುದಾರರ ಪ್ರಕಾರ ಉತ್ತಮ ಷೇರುಗಳನ್ನು ಖರೀದಿಸಿ ದೀರ್ಘಕಾಲದವರೆಗೆ ಅದನ್ನು ಮರೆತುಬಿಡಬೇಕು ಎಂದು ನಂಬುತ್ತಾರೆ. ಇದು ದೊಡ್ಡ ಮಟ್ಟಿನ ತಂತ್ರವಾಗಿದ್ದು, ಇದನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ನೀವು ದೀರ್ಘಾವಧಿಯಲ್ಲಿ ಸಾವಿರಾರು ರೂಪಾಯಿಗಳನ್ನು ಕೋಟಿ ರೂಪಾಯಿಗಳಿಗೆ ಪರಿವರ್ತಿಸಬಹುದು.

ಹೀಗೆ ಹೂಡಿಕೆದಾರರಿಗೆ 50 ಸಾವಿರ ರೂಪಾಯಿಯನ್ನು 5 ಕೋಟಿ ರೂಪಾಯಿಗೆ ಪರಿವರ್ತಿಸಿದ ಅಂತಹ ಒಂದು ಷೇರು ಬಗ್ಗೆ ಈ ಕೆಳಗೆ ನಿಮಗೆ ಮಾಹಿತಿಯನ್ನು ನೀಡುತ್ತೇವೆ.

ಕೋಟಕ್ ಮಹೀಂದ್ರಾ ಬ್ಯಾಂಕ್

ಕೋಟಕ್ ಮಹೀಂದ್ರಾ ಬ್ಯಾಂಕ್

ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರು ದೀರ್ಘಾವಧಿಯಲ್ಲಿ ಎಷ್ಟು ಪ್ರಬಲವಾದ ಇಕ್ವಿಟಿ ಹೂಡಿಕೆಯು ಎಷ್ಟರ ಮಟ್ಟಿಗೆ ಲಾಭವನ್ನು ಗಳಿಸಬಹುದು ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕಿನ ಷೇರಿನ ಬೆಲೆ ಇಂದು ಅಂದಾಜು 1936 ರೂ.ನಂತೆ ಇರಲಿದ್ದು, 20 ವರ್ಷಗಳ ಹಿಂದೆ 12 ಅಕ್ಟೋಬರ್ 2001 ರಂದು ಪ್ರತಿ ಷೇರಿಗೆ 1.94 ರೂ. ಆಗಿದೆ. ಅಂದರೆ ಈ ಮಲ್ಟಿಬ್ಯಾಗರ್ ಷೇರು ಈ ಸಮಯದಲ್ಲಿ 997 ಪಟ್ಟು ಜಿಗಿದಿದೆ. ಅಂದರೆ, ಇದು 1000 ಪಟ್ಟು ಆದಾಯವನ್ನು ನೀಡಲು ಸಾಧ್ಯವಾಗಿದೆ.

50 ಸಾವಿರ ಹೂಡಿಕೆ ಮಾಡಿದ್ರೆ, 5 ಕೋಟಿ ರೂಪಾಯಿ

50 ಸಾವಿರ ಹೂಡಿಕೆ ಮಾಡಿದ್ರೆ, 5 ಕೋಟಿ ರೂಪಾಯಿ

1000 ಪಟ್ಟು ಲಾಭ ಎಂದರೆ ಈ ಸ್ಟಾಕ್ ಹೂಡಿಕೆದಾರರನ್ನು 1000 ಪಟ್ಟು ಹೆಚ್ಚಿಸಿದೆ. 20 ವರ್ಷಗಳ ಹಿಂದೆ ಯಾರಾದರೂ ಕೋಟಕ್ ಮಹೀಂದ್ರಾ ಬ್ಯಾಂಕಿನ ಕೇವಲ 50000 ಷೇರುಗಳನ್ನು ಖರೀದಿಸಿದ್ದರೆ, ಅವರ ಮೌಲ್ಯವು ಇಂದು 5 ಕೋಟಿ ರೂ. ಆಗಿರುತ್ತಿತ್ತು. ದೀರ್ಘಾವಧಿಯಲ್ಲಿ, ಒಂದು ಸ್ಟಾಕ್ ಹೂಡಿಕೆದಾರರ ಹಣವನ್ನು 1000 ಪಟ್ಟು ಹೆಚ್ಚಿಸಿದೆ. ಇದು ನಿಮಗೆ ಷೇರು ಮಾರುಕಟ್ಟೆ ಏನು ಮಾಡಬಹುದು ಎಂಬ ಕಲ್ಪನೆಯನ್ನು ನೀಡುತ್ತದೆ.

ಕಳೆದ ವಾರ ಗರಿಷ್ಠ ಮಟ್ಟವನ್ನ ತಲುಪಿದೆ
 

ಕಳೆದ ವಾರ ಗರಿಷ್ಠ ಮಟ್ಟವನ್ನ ತಲುಪಿದೆ

ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಷೇರು ಕಳೆದ ವಾರದಲ್ಲಿ 1966 ರೂ. ತಲುಪಿತ್ತು. ಆ ಮಟ್ಟದಿಂದ ನೋಡಿದರೆ, ಕಳೆದ 5 ವರ್ಷಗಳಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕಿನ ಷೇರಿನ ಬೆಲೆ ರೂ 782 ರಿಂದ ರೂ 1966 ಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಸುಮಾರು 150 ಪ್ರತಿಶತ ಆದಾಯವನ್ನು ಸಾಧಿಸಲಾಗಿದೆ. ಕೋಟಕ್ ಬ್ಯಾಂಕಿನ ಷೇರಿನ ಬೆಲೆಯು ಕಳೆದ 10 ವರ್ಷಗಳಲ್ಲಿ ಪ್ರತಿ ಷೇರಿಗೆ ರೂ. 232.93 ರಿಂದ ಬರೋಬ್ಬರಿ 1966 ರೂಪಾಯಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ, ಷೇರು ಬೆಲೆ ಸುಮಾರು ಶೇಕಡಾ 750ರಷ್ಟು ಏರಿಕೆಯಾಗಿದೆ.

3 ತಿಂಗಳಲ್ಲಿ ಶೇಕಡಾ 15ರಷ್ಟು ಏರಿಕೆ

3 ತಿಂಗಳಲ್ಲಿ ಶೇಕಡಾ 15ರಷ್ಟು ಏರಿಕೆ

ಕೋಟಕ್ ಮಹೀಂದ್ರಾ ಬ್ಯಾಂಕಿನ ಷೇರು ಕಳೆದ ಒಂದು ತಿಂಗಳಲ್ಲಿ ಪ್ರತಿ ಷೇರಿಗೆ ರೂ .1815.35 ರ ಮಟ್ಟದಿಂದ ಕಳೆದ ವಾರದಲ್ಲಿ ರೂ. 1966 ರ ಗರಿಷ್ಠ ಮಟ್ಟಕ್ಕೆ ಏರಿತು. ಅಂದರೆ, ಈ ಸ್ಟಾಕ್ ಸುಮಾರು 8 ಪ್ರತಿಶತವನ್ನು ಗಳಿಸಿದೆ. ಕಳೆದ 3 ತಿಂಗಳಲ್ಲಿ ಖಾಸಗಿ ಬ್ಯಾಂಕಿನ ಷೇರು ರೂ 1720 ರಿಂದ ರೂ 1966 ಕ್ಕೆ ಏರಿತು. ಈ ಸಮಯದ ಚೌಕಟ್ಟಿನಲ್ಲಿ ಷೇರು ಸುಮಾರು 15 ಪ್ರತಿಶತವನ್ನು ಗಳಿಸಿತು.

ಷೇರು ಮೌಲ್ಯ ಎಷ್ಟು ದೂರ ಹೋಗಬಹುದು?

ಷೇರು ಮೌಲ್ಯ ಎಷ್ಟು ದೂರ ಹೋಗಬಹುದು?

ಷೇರು ಮಾರುಕಟ್ಟೆ ತಜ್ಞರು ಇನ್ನೂ ಈ ಸ್ಟಾಕ್ ಮೇಲೆ ಬಾಜಿ ಕಟ್ಟಲು ಸಲಹೆ ನೀಡುತ್ತಿದ್ದಾರೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳನ್ನು 2100 ರೂ.ಗಳ ಅಲ್ಪಾವಧಿಯ ಗುರಿಯೊಂದಿಗೆ ಖರೀದಿಸಲು ಅವರು ಹೂಡಿಕೆದಾರರಿಗೆ ಸಲಹೆ ನೀಡಿದ್ದಾರೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಅನ್ನು 2050 ರಿಂದ 2100 ರೂ.ಗಳ ಗುರಿಯೊಂದಿಗೆ ಖರೀದಿಸಲು ಸೂಚಿಸಲಾಗಿದೆ. ಸ್ಟಾಪ್ ಲಾಸ್ ಮಟ್ಟವನ್ನು 1900 ರೂ.ನಲ್ಲಿ ನಿರ್ವಹಿಸಲು ಕೇಳಲಾಗಿದೆ.

ಪ್ರಸ್ತುತ ಕೋಟಕ್ ಮಹೀಂದ್ರಾ ಷೇರು ಎನ್‌ಎಸ್‌ಇನಲ್ಲಿ 2,010.95 ರೂಪಾಯಿಗಳಷ್ಟು ತಲುಪಿದೆ. ಇದು ಶೇಕಡಾ 0.90ರಷ್ಟು ಅಥವಾ 18.65 ರೂಪಾಯಿ ಏರಿಕೆಗೊಂಡು 2013.65 ರೂಪಾಯಿಗೆ ಮುಟ್ಟಿದೆ.

English summary

This Stock Made Rs 50,000 To Rs 5 Crore In 20 Years

Kotak mahindra bank share is very good long term retun stock which gives 992 fold return in 20 years
Story first published: Wednesday, October 13, 2021, 15:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X