For Quick Alerts
ALLOW NOTIFICATIONS  
For Daily Alerts

10 ವರ್ಷದಲ್ಲಿ 17 ಲಕ್ಷ ಉಳಿತಾಯ ಮಾಡಬೇಕೆ?

ನಾನು ಈ ತಿಂಗಳಿನಿಂದ ಹಣ ಉಳಿತಾಯ ಮಾಡಬೇಕಪ್ಪ, ಮಿಸ್ ಆಗದೆ ಖಂಡಿತ ಉಳಿತಾಯ ಮಾಡೇ ಮಾಡ್ತಿನಿ. ಅದೇನೇ ಆಗ್ಲಿ ಬಿಡಲ್ಲ ಅಂತಾ ಅದೇಷ್ಟೋ ಬಾರಿ ಅಂದುಕೊಂಡಿರುತ್ತೇವೆ. ಆದರೆ ಉಳಿತಾಯ ಮಾಡಲು ಪ್ರಾರಂಭಿಸಿರುವುದೇ ಇಲ್ಲ.

|

ನಾನು ಈ ತಿಂಗಳಿನಿಂದ ಹಣ ಉಳಿತಾಯ ಮಾಡಬೇಕಪ್ಪ, ಮಿಸ್ ಆಗದೆ ಖಂಡಿತ ಉಳಿತಾಯ ಮಾಡೇ ಮಾಡ್ತಿನಿ. ಅದೇನೇ ಆಗ್ಲಿ ಬಿಡಲ್ಲ ಅಂತಾ ಅದೇಷ್ಟೋ ಬಾರಿ ಅಂದುಕೊಂಡಿರುತ್ತೇವೆ. ಆದರೆ ಉಳಿತಾಯ ಮಾಡಲು ಪ್ರಾರಂಭಿಸಿರುವುದೇ ಇಲ್ಲ. ಕೆಲವೊಮ್ಮೆ ಈ ವಿಚಾರದಲ್ಲಿ ನಮಗೆ ನಮ್ಮ ಮೇಲೆಯೇ ಬೇಸರ ಆಗುವುದುಂಟು.. ನಗು ಬರುವುದುಂಟು...

 

ದೀರ್ಘಾವಧಿಗಾಗಿ ಪ್ರತಿ ತಿಂಗಳು ನೂರಾರು ರೂಪಾಯಿಗಳನ್ನು ಉಳಿತಾಯ ಮಾಡಲು ನಮ್ಮ ಬಜೆಟ್, ಆದಾಯ ನಮ್ಮನ್ನು ಹಿನ್ನಡೆ ಅನುಭವಿಸುವಂತೆ ಮಾಡುತ್ತದೆ. ಏನೇ ಆದರೂ ನಿರ್ಧಿಷ್ಟ ಪ್ರಮಾಣದ ಮೊತ್ತವನ್ನು ಉಳಿತಾಯ ಮಾಡುವ ಅವಕಾಶ ಮಾತ್ರ ಇದ್ದೆ ಇರುತ್ತದೆ.
ಕೆಲವರು ಸಾಮರ್ಥ್ಯಕ್ಕನುಗುಣವಾಗಿ ಸಲ್ಪ ಹಣವನ್ನು ಉಳಿತಾಯ ಮಾಡಿದರೆ, ಮತ್ತೆ ಕೆಲವರು ಸಾವಿರಾರು ರೂ.ಗಳನ್ನು ಪ್ರತಿ ತಿಂಗಳ ಹಾಗೂ ವಾರ್ಷಿಕ ಬಿಲ್ಲುಗಳಿಂದ ಉಳಿತಾಯ ಮಾಡಬಹುದು. ಪೂರ್ಣಾವಧಿ ಕೆಲಸದ ಜೊತೆ ಹೆಚ್ಚು ಹಣ ಗಳಿಸಬೇಕೆ? ಇಲ್ಲಿವೆ 10 ಮಾರ್ಗ

ಹಾಗಿದ್ದರೆ ಪ್ರತಿ ತಿಂಗಳು 9000 ರೂ. ಅಥವಾ ಪ್ರತಿದಿನ 300 ರೂ. ಹೇಗೆ ಉಳಿತಾಯ ಮಾಡಬಹುದು? ಕೇವಲ ಹಣ ಉಳಿತಾಯ ಮಾಡುವುದೊಂದೆ ಉಳಿತಾಯದ ಮಾರ್ಗ ಅಲ್ಲ. ಬದಲಾಗಿ ಬೇರೆ ಯಾವ ಯಾವ ಸಂದರ್ಭಗಳಲ್ಲಿ ಉಳಿತಾಯ ಮಾಡಬಹುದು? ಈ ಸರಳ ಉಳಿತಾಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ಹೇಗೆ? ಇತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವ ಕುತೂಹಲ ನಮ್ಮಲ್ಲಿ ಇದ್ದೆ ಇರುತ್ತದೆ. ಅಲ್ಲವೆ..?

1. ವಿದ್ಯುತ್

1. ವಿದ್ಯುತ್

ಮನೆಯಲ್ಲಿರುವ ರೆಪ್ರಿಜಿರೇಟರ್ ಸುತ್ತ ಗಾಳಿಯ ಪ್ರಸರಣ ಇರುವಂತೆ ನೋಡಿಕೊಳ್ಳಿ. ಆದರೆ ಸೂರ್ಯನ ಕಿರಣಗಳಿಗೆ ನೇರವಾಗಿ ಒಡ್ಡಬೇಡಿ. ಹೊರಗಡೆ ಇರುವ (ಔಟ್ ಡೋರ್ ಯುನಿಟ್) ಹವಾನಿಯಂತ್ರಕ ಘಟಕ ಸೂರ್ಯನ ನೇರ ಕಿರಣಗಳಿಂದ ದೂರ ಇರುವಂತೆ ಹಾಗೂ ಉಷ್ಣತೆಯಾಗದೆ ತಂಪಾಗಿರುವಂತೆ ನೋಡಿಕೊಳ್ಳಬೇಕು. ಫಿಲ್ಟರ್ಸ್ ಗಳನ್ನು ಸ್ವಚ್ಛವಾಗಿಡಿ. ಎಸಿ ಬಳಸುವಾಗ ಬಾಗಿಲು ಮತ್ತು ಕರ್ಟನ್ ಗಳನ್ನು ಮುಚ್ಚಿ. ಸಾಧನವನ್ನು ಬಳಸದಿದ್ದಾಗ ಸ್ವಿಚ್ ಆಫ್ ಮಾಡಬೇಕು.

ನಿಮ್ಮ ಮನೆಯ ಮೇಲೆ ನೆರಳು ಬೀಳುವಂತೆ ಮರಗಳನ್ನು ನೆಟ್ಟರೆ ಶೇ. 50ರಷ್ಟು ಮೊತ್ತದ ವಿದ್ಯುತನ್ನು ಉಳಿತಾಯ ಮಾಡಬಹುದು. 22 ರಿಂದ 25 ಡಿಗ್ರಿ ಎಸಿ ಇಡುವುದರಿಂದ ಶೇ. 5ರಷ್ಟು ವಿದ್ಯುತ್ ಉಳಿತಾಯ ಆಗುತ್ತದೆ.
ವಾಟರ್ ಹೀಟರ್ ತಾಪಮಾನ ಕಡಿಮೆ ಮಾಡಿಕೊಂಡರೆ ಶೇ. 15ರಷ್ಟು ವಿದ್ಯುತ್ ಉಳಿತಾಯ ಮಾಡಬಹುದು.

ಅಂದರೆ ಪ್ರತಿ ತಿಂಗಳು ಸಂಭವನೀಯವಾಗಿ 500 ರೂ. ಮಾಸಿಕ ಉಳಿತಾಯ ಮಾಡಬಹುದು.

2. ಸಾರಿಗೆ
 

2. ಸಾರಿಗೆ

ಸಾಮಾನ್ಯವಾಗಿ ಎಲ್ಲರೂ ಸ್ವಂತ ಕಾರು, ಬೈಕ್ ಮೂಲಕವೇ ಪ್ರಯಾಣ ಮಾಡುತ್ತೇವೆ. ಅದಕ್ಕೆ ಬದಲಾಗಿ ವಾರಕ್ಕೊಮ್ಮೆ ಸಾರ್ವಜನಿಕ ಸಾರಿಗೆ ಹಾಗೂ ಇನ್ನಿತರ ಸ್ಥಳೀಯ ಸಾರಿಗೆ ಸೌಲಭ್ಯಗಳನ್ನು ಬಳಸಬಹುದು.

ನಿಮ್ಮ ವಾಹನವನ್ನು ಉತ್ತಮವಾಗಿಡಿ. ಸೂಕ್ತ ಟೈರ್ ನಿರ್ವಹಣೆ, ಪದೇ ಪದೇ ಗೇರ್ ಬದಲಾಯಿಸದೆ ಇರುವುದು, ನಿಯಮಿತವಾಗಿ ಆಯಿಲ್ ಬಳಸಿ ವಾಹನದ ವೇಗೋತ್ಕರ್ಷ ಉತ್ತಮವಾಗಿರುವಂತೆ ನೋಡಿಕೊಳ್ಳವುದು. ಬಳಕೆ ನಂತರ ಎಂಜಿನ್ ಆಫ್ ಮಾಡುವುದು. ಇತ್ಯಾದಿ ಅಂಶಗಳನ್ನು ಪಾಲನೆ ಮಾಡುವುದರಿಂದ ನೂರಾರು ರೂ. ಉಳಿತಾಯ ಮಾಡಬಹುದು. ಹೀಗಾಗಿ ವಾಹನಗಳ ಮೆಂಟೆನೆನ್ಸ್ ತುಂಬಾ ಮುಖ್ಯವಾಗಿರುತ್ತದೆ.

ವಾರಕ್ಕೆ ಒಂದೆರಡು ಬಾರಿ ಸಾರ್ವಜನಿಕ ಸಾರಿಗೆ ಬಳಸುವುದರಿಂದ ರೂ. 800 ರವರೆಗೆ ಉಳಿತಾಯ ಮಾಡಬಹುದು. ಆಯಿಲ್ ಬಳಕೆ ಸರಳೀಕರಿಸುವುದರಿಂದ ತಿಂಗಳಿಗೆ ರೂ. 500 ಉಳಿತಾಯ ಮಾಡಬಹುದು. ಅಂದರೆ ಪ್ರತಿ ತಿಂಗಳಿಗೆ 1300 ರೂ. ಉಳಿತಾಯ ಮಾಡುವ ಸಂಭಾವ್ಯತೆ ಇರುತ್ತದೆ.

3.ದಿನಸಿ

3.ದಿನಸಿ

ಕಿರಾಣಿ ಸಾಮಾನು, ಹಣ್ಣು ಮತ್ತು ತರಕಾರಿಗಳನ್ನು ವಾರಕ್ಕೊಮ್ಮೆ ಖರೀದಿ ಮಾಡುವುದು ಉತ್ತಮ. ಸೂಪರ್ ಮಾರ್ಕೆಟ್ ಅಥವಾ ಪ್ರತಿದಿನ ಖರೀದಿ ಮಾಡುವುದಕ್ಕಿಂತ ವಾರಕ್ಕೊಮ್ಮೆ ಸಾಪ್ತಾಹಿಕ ಮಾರುಕಟ್ಟೆಯಲ್ಲಿ ಶೇ. 12 ರಿಂದ 15ರಷ್ಟು ಅಗ್ಗವಾಗಿ ಲಭ್ಯವಿರುತ್ತದೆ.

ಹಾಳಾಗದ ದಿನಸಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿನಿಮಮ್ ಬಿಲ್ ನಲ್ಲಿ ಶೇ. 10 ರಿಂದ 12 ರಷ್ಟು ಉಳಿತಾಯ ಮಾಡಿ.
ಅಗ್ರಮಟ್ಟದ ಬ್ರಾಂಡುಗಳಿಗಿಂತ ಮಳಿಗೆ ಬ್ರಾಂಡುಗಳ ಉತ್ಪನ್ನಗಳನ್ನು ಖರೀದಿ ಮಾಡುವುದರಿಂದ ರೂ. 20 ರಿಂದ 100ರವರೆಗೆ ಉಳಿತಾಯ ಮಾಡಬಹುದು.

ಪ್ರತಿ ತಿಂಗಳ 8000 ರೂ. ಬಿಲ್ ಮೇಲೆ ತಿಂಗಳಿಗೆ 1000 ರೂ. ಸುಲಭವಾಗಿ ಉಳಿತಾಯ ಮಾಡಲು ಸಾಧ್ಯ.

4.ಮನರಂಜನೆ

4.ಮನರಂಜನೆ

ಹೊರಗಡೆ ಊಟ ಮಾಡಲು ಹೋಗುವುದು ಮತ್ತು ರಿಯಾಯಿತಿ ಆಫ್ ಗಳ ಮೂಲಕ ಆದೇಶ ಮಾಡುವ ಹೊರತಾಗಿ, ಗುಂಪಿನಲ್ಲಿ ಸ್ನೇಹಿತರೊಂದಿಗೆ ಹೊರಗಡೆ ಹೋಗುವ ಬದಲು ಮನೆಯಲ್ಲೇ ಪಾನೀಯ ಸೇವಿಸುವುದು ಉತ್ತಮ ಆಯ್ಕೆ.

ವಾರಾಂತ್ಯದ ಬದಲಿಗೆ ಬೇರೆ ದಿನಗಳಲ್ಲಿ ಚಲನಚಿತ್ರಗಳನ್ನು ವಿಕ್ಷಿಸಿ. ವಾರಾಂತ್ಯ ಮತ್ತು ಬೇರೆ ದಿನಗಳಲ್ಲಿ ಒಂದು ಚಿತ್ರದ ಟಿಕೆಟ್ ದರ 150 ರೂ. ವ್ಯತ್ಯಾಸವಾಗಿರುತ್ತದೆ.

ಡಿಸ್ಕೌಂಟ್ ಆಫ್ ಮೂಲಕ ಊಟ ಆರ್ಡರ್ ಮಾಡುವುದಕ್ಕೆ ಹೋಲಿಸಿದರೆ ರೆಸ್ಟೋರೆಂಟ್ ಗಳಲ್ಲಿ ಒಂದು ಊಟಕ್ಕೆ 800 ರೂ. ವ್ಯತ್ಯಾಸ ಇರುತ್ತದೆ.

ಹೀಗಾಗಿ ತಿಂಗಳ ಸಂಬವನೀಯ ಉಳಿತಾಯ ರೂ. 2000

5. ಇತರೆ ಅಂಶಗಳು

5. ಇತರೆ ಅಂಶಗಳು

ಕೆಲಸದ ವೇಳೆಯ ಊಟ, ಸ್ನ್ಯಾಕ್ ಗಳ ಮೇಲಿನ ವೆಚ್ಚವನ್ನು ಕಡಿತಗೊಳಿಸಿ. ಧೂಮಪಾನ ನಿಲ್ಲಿಸಲಾಗದಿದ್ದರೂ, ದೈನಂದಿನ ಸಿಗರೇಟ್ ಸೇವನೆಯ ಪ್ರಮಾಣ ಕಡಿಮೆ ಮಾಡಿ.

ಸ್ನ್ಯಾಕ್, ಸಿಗರೇಟ್, ಚಹಾ, ನಿರಿನ ಬಾಟಲ್ ಖರೀದಿಸುವುದನ್ನು ನಿಲ್ಲಿಸಿದರೆ ರೂ. 20 ಉಳಿತಾಯ ಮಾಡಿದಂತಾಗುತ್ತದೆ. ಪ್ರತಿದಿನ ಮನೆಯಿಂದ ಊಟ ತರುವುದರಿಂದ ರೂ. 70 ಉಳಿಸಿದಂತಾಗುತ್ತದೆ. 5 ಸಿಗರೇಟ್ ಗಳನ್ನು ಕಡಿಮೆಗೊಳಿಸಿದರೆ 50 ರೂ. ಉಳಿತಾಯ ಮಾಡಿದಂತಾಗುತ್ತದೆ.

ಒಟ್ಟಿನಲ್ಲಿ ಪ್ರತಿ ತಿಂಗಳ ಸಂಭವನೀಯ ಉಳಿತಾಯ ರೂ. 3000

೬.ಸಂವಹನ

೬.ಸಂವಹನ

ಇತ್ತಿಚಿಗೆ ಮೊಬೈಲ್ ನಲ್ಲಿ ಮಾತಾಡಿ ಕಾಲಹರಣ, ದುಂದುವೆಚ್ಚ ಮಾಡುವವರ ಸಂಖ್ಯೆ ದಿನನಿತ್ಯ ಹೆಚ್ಚುತ್ತಿದೆ. ಮಕ್ಕಳ ಕೈಗೆ ಮೊಬೈಲ್ ಸಿಕ್ಕರೆ ಮುಗಿತು ಕರೆನ್ಸಿ ನಿಯಂತ್ರಣಕ್ಕೆ ಬರುವುದಿಲ್ಲ.

ಹೀಗಾಗಿ ಚಿಕ್ಕ ಮಕ್ಕಳಿಗೆ ಪ್ರಿಪೇಡ್ ಮೊಬೈಲ್ ಸಂಪರ್ಕ ಮತ್ತು ದೊಡ್ಡವರಿಗೆ ಪೋಸ್ಟ್ ಪೇಡ್ ಮೊಬೈಲ್ ಸಂಪರ್ಕ ಅಳವಡಿಸಿ.
ಅಂತರಾಷ್ಟ್ರೀಯ ಕರೆಗಳಿಗಾಗಿ ಸ್ಕೈಪ್ ಮತ್ತು ವಾಟ್ಸ್ಅಪ್ ಬಳಸಿ. ಮನೆಯಲ್ಲಿ ಇಂಟರ್‌ನೆಟ್ ಬಳಸುತ್ತಿದ್ದರೆ ಅನ್ ಲಿಮಿಡೆಟ್ ಪ್ಲಾನ್ ಗಳನ್ನು ಆಯ್ಕೆ ಮಾಡಬೇಡಿ.

ತಿಂಗಳ ಸಂಭವನೀಯ ಉಳಿತಾಯ ರೂ. 300

7. ಸರಿಯಾಗಿ ಪಾವತಿಸಿ

7. ಸರಿಯಾಗಿ ಪಾವತಿಸಿ

ರಿಯಾಯಿತಿ, ಕ್ಯಾಶ್ ಬ್ಯಾಕ್ ಮತ್ತುಇತರ ಸೌಲಭ್ಗಳನ್ನು ಪಡೆಯಲು ಇ-ವ್ಯಾಲೆಟ್ ಗಳನ್ನು ಬಳಸಿ.

ಕಿರಾಣಿ, ಇಂಟರ್ನೆಟ್, ಡಿಟಿಎಚ್ ಮತ್ತು ಮೊಬೈಲ್ ಬಿಲ್ ಇ-ವ್ಯಾಲೆಟ್ ಮುಖಾಂತರ ಪಾವತಿಸಿ. ಜತೆಗೆ ಟ್ಯಾಕ್ಸಿ, ಮೂವಿ ಟಿಕೇಟ್, ಆನ್ಲೈನ್ ಶಾಪಿಂಗ್, ಆಹಾರ, ಹೊಟೇಲ್ ಬುಕ್ಕಿಂಗ್, ವಿಮಾನ, ರೈಲು ಮತ್ತು ಬಸ್ ಟಿಕೇಟ್ ಗಳನ್ನು ಇ-ವ್ಯಾಲೆಟ್ ಮೂಲಕ ಪಾವತಿಸಿ.

ತಿಂಗಳ ಸಂಬವನೀಯ ಉಳಿತಾಯ ರೂ. 600.

8. 10 ವರ್ಷಗಳಲ್ಲಿ ರೂ. 17 ಲಕ್ಷ

8. 10 ವರ್ಷಗಳಲ್ಲಿ ರೂ. 17 ಲಕ್ಷ

ಈ ಮೇಲಿನ ನಿಯಮಗಳನ್ನು ಪಾಲಿಸಿದರೆ ಪ್ರತಿ ತಿಂಗಳಿಗೆ ಒಟ್ಟು ರೂ. 9000 ಉಳಿತಾಯ ಮಾಡಬಹುದು.

ಈ ಮೊತ್ತವನ್ನು ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಶೇ. 9ರಷ್ಟು ಆದಾಯ ಪಡೆಯಬಹುದು. ೫ ವರ್ಷಗಳಲ್ಲಿ ರೂ. 6.8 ಲಕ್ಷ, ಹತ್ತು ವರ್ಷಗಳಲ್ಲಿ 17 ಲಕ್ಷ ಹಾಗೂ 15 ವರ್ಷಗಳಲ್ಲಿ 33 ಲಕ್ಷ ಸಂಪಾದಿಬಹುದು.

ಹಕ್ಕುತ್ಯಾಗ

ಹಕ್ಕುತ್ಯಾಗ

ಈ ಲೇಖನವನ್ನು ಖರೀದಿಸಲು, ಇನ್ನೀತರ ಹಣಕಾಸು ಸಾಧನಗಳಲ್ಲಿ ಅಥವಾ ಭದ್ರತೆಗಳಲ್ಲಿ ಮಾರಾಟ ಮಾಡಲು ಆಗುವುದಿಲ್ಲ. ಈ ಲೇಖನದ ಮಾಹಿತಿ ಆಧಾರದಲ್ಲಿ ಉಂಟಾಗುವ ನಷ್ಟ ಅಥವಾ ಹಾನಿಗೆ ಸಂಬಂಧಿಸಿದಂತೆ ಗ್ರೇನಿಯಂ ಇನ್ಫರ್ಮೇಶನ್ ಟೆಕ್ನಾಲೋಜಿಸ್ ಪ್ರೈ.ಲಿ, ಅದರ ಅಂಗಸಂಸ್ಥೆಗಳು ಮತ್ತು ಸಹವರ್ತಿಗಳು ಜವಾಭ್ಧಾರಿ ಆಗಿರುವುದಿಲ್ಲ.

ಅನವಶ್ಯಕ ಖರ್ಚು ತಪ್ಪಿಸುವ 9 ಸರಳ ಮಾರ್ಗಗಳುಅನವಶ್ಯಕ ಖರ್ಚು ತಪ್ಪಿಸುವ 9 ಸರಳ ಮಾರ್ಗಗಳು

English summary

Daily Saving Tips to Make Rs 17 Lakh in 10 Years

Tweaking your budget can go a long way in saving hundreds every month. While some steps will help save a few rupees, others will shave off thousands from your annual bills. Here's how to save Rs 9,000 a month or Rs 300 a day.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X