ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಫಿಕ್ಸಿಡ್ ಡೆಪಾಸಿಟ್ (ಎಫ್ಡಿ) ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಸೆಪ್ಟೆಂಬರ್ 20, 2022 ರಿಂದ ಈ ಹೊಸ ಎಫ್ಡಿ ಬಡ್ಡಿದರಗಳು ಜಾರಿಗೆ ಬರುತ್ತದೆ.
ಪರಿಷ್ಕರಣೆಗಳ ನಂತರ, ಏಳು ದಿನಗಳಿಂದ ಹತ್ತು ವರ್ಷಗಳ ಅವಧಿಯ ಅವಧಿಯ ಎಫ್ಡಿ ಬಡ್ಡಿ ದರವು ಸಾಮಾನ್ಯ ಗ್ರಾಹಕರಿಗೆ ಶೇಕಡ 2.75 ಮತ್ತು ಶೇಕಡ 5.75 ರ ನಡುವೆ ಮತ್ತು ಹಿರಿಯ ನಾಗರಿಕರಿಗೆ ಶೇಕಡ 2.75 ಮತ್ತು ಶೇಕಡ 6.5 ರ ನಡುವೆ ಇರುತ್ತದೆ.
7 ಮತ್ತು 29 ದಿನಗಳ ನಡುವಿನ ಎಫ್ಡಿಗೆ ಬ್ಯಾಂಕ್ ಶೇಕಡ 2.75 ರಷ್ಟು ಬಡ್ಡಿದರ ನೀಡುತ್ತದೆ. 30 ದಿನಗಳಿಂದ 3 ತಿಂಗಳ ಅವಧಿಯವರೆಗೆ ಎಫ್ಡಿಗೆ ಬ್ಯಾಂಕ್ ಶೇಕಡ 3.25ರಷ್ಟು ಬಡ್ಡಿದರವನ್ನು ನೀಡುತ್ತದೆ. 3 ತಿಂಗಳಿಂದ 6 ತಿಂಗಳ ಅವಧಿಯ ಎಫ್ಡಿ ಮೇಲೆ ಬ್ಯಾಂಕ್ ಪ್ರಸ್ತುತ ಸಾಮಾನ್ಯ ನಾಗರಿಕರಿಗೆ ಹಾಗೂ ಹಿರಿಯ ನಾಗರಿಕರು ಇಬ್ಬರಿಗೂ ಶೇಕಡ 3.75ರಷ್ಟು ಬಡ್ಡಿದರವನ್ನು ನೀಡುತ್ತದೆ.
ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 6-9 ತಿಂಗಳ ಎಫ್ಡಿ ಮೆಚ್ಯೂರಿಟಿ ಅವಧಿಗೆ ಶೇಕಡ 4.65ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡ 4.90ರಷ್ಟು ಬಡ್ಡಿದರವನ್ನು ನೀಡುತ್ತದೆ. 9 ತಿಂಗಳಿಂದ 1 ವರ್ಷದ ಅವಧಿಯವರೆಗೆ, ಸಾಮಾನ್ಯ ಗ್ರಾಹಕರಿಗೆ ಶೇಕಡಾ 4.75 ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 5 ರಷ್ಟು ಬಡ್ಡಿದರವನ್ನು ನೀಡುತ್ತದೆ. ನೂತನ ಬಡ್ಡಿದರದ ಸಂಪೂರ್ಣ ಪಟ್ಟಿ ಈ ಕೆಳಗಿದೆ
ನೂತನ ದರಪಟ್ಟಿ
7-14 ದಿನ: ಸಾಮಾನ್ಯ ನಾಗರಿಕರು ಶೇಕಡ 2.75, ಹಿರಿಯ ನಾಗರಿಕರು ಶೇಕಡ 2.75
15-29 ದಿನ: ಸಾಮಾನ್ಯ ನಾಗರಿಕರು ಶೇಕಡ 2.75, ಹಿರಿಯ ನಾಗರಿಕರು ಶೇಕಡ 2.75
30-45 ದಿನ: ಸಾಮಾನ್ಯ ನಾಗರಿಕರು ಶೇಕಡ 3.25, ಹಿರಿಯ ನಾಗರಿಕರು ಶೇಕಡ 3.25
46-60 ದಿನ: ಸಾಮಾನ್ಯ ನಾಗರಿಕರು ಶೇಕಡ 3.25, ಹಿರಿಯ ನಾಗರಿಕರು ಶೇಕಡ 3.25
61 ದಿನ: ಸಾಮಾನ್ಯ ನಾಗರಿಕರು ಶೇಕಡ 3.25, ಹಿರಿಯ ನಾಗರಿಕರು ಶೇಕಡ 3.25
ತಿಂಗಳುವಾರು ಎಫ್ಡಿ ದರಪಟ್ಟಿ
3 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 3.75, ಹಿರಿಯ ನಾಗರಿಕರು ಶೇಕಡ 3.75
4 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 3.75, ಹಿರಿಯ ನಾಗರಿಕರು ಶೇಕಡ 3.75
5 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 3.75, ಹಿರಿಯ ನಾಗರಿಕರು ಶೇಕಡ 3.75
6 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 4.65, ಹಿರಿಯ ನಾಗರಿಕರು ಶೇಕಡ 4.9
7 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 4.4, ಹಿರಿಯ ನಾಗರಿಕರು ಶೇಕಡ 4.65
8 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 4.65, ಹಿರಿಯ ನಾಗರಿಕರು ಶೇಕಡ 4.9
9 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 4.75, ಹಿರಿಯ ನಾಗರಿಕರು ಶೇಕಡ 5
10 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 4.75, ಹಿರಿಯ ನಾಗರಿಕರು ಶೇಕಡ 5
11 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 4.75, ಹಿರಿಯ ನಾಗರಿಕರು ಶೇಕಡ 5
ವಿವಿಧ ಅವಧಿಗಳ ಎಫ್ಡಿ ಬಡ್ಡಿದರ
11 ತಿಂಗಳು 25 ದಿನ: ಸಾಮಾನ್ಯ ನಾಗರಿಕರು ಶೇಕಡ 4.75, ಹಿರಿಯ ನಾಗರಿಕರು ಶೇಕಡ 5
1 ವರ್ಷ: ಸಾಮಾನ್ಯ ನಾಗರಿಕರು ಶೇಕಡ 5.45, ಹಿರಿಯ ನಾಗರಿಕರು ಶೇಕಡ 6.2
1 ವರ್ಷ 5 ದಿನ: ಸಾಮಾನ್ಯ ನಾಗರಿಕರು ಶೇಕಡ 5.45, ಹಿರಿಯ ನಾಗರಿಕರು ಶೇಕಡ 6.2
1 ವರ್ಷ 11 ದಿನ: ಸಾಮಾನ್ಯ ನಾಗರಿಕರು ಶೇಕಡ 5.75, ಹಿರಿಯ ನಾಗರಿಕರು ಶೇಕಡ 6.5
1 ವರ್ಷ 25 ದಿನ: ಸಾಮಾನ್ಯ ನಾಗರಿಕರು ಶೇಕಡ 5.6, ಹಿರಿಯ ನಾಗರಿಕರು ಶೇಕಡ 6.35
5-10 ವರ್ಷ ಎಫ್ಡಿಗೆ ಎಷ್ಟಿದೆ ಬಡ್ಡಿದರ
13 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 5.6, ಹಿರಿಯ ನಾಗರಿಕರು ಶೇಕಡ 6.35
14 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 5.6, ಹಿರಿಯ ನಾಗರಿಕರು ಶೇಕಡ 6.35
15 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 5.6, ಹಿರಿಯ ನಾಗರಿಕರು ಶೇಕಡ 6.35
16 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 5.6, ಹಿರಿಯ ನಾಗರಿಕರು ಶೇಕಡ 6.35
17 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 5.6, ಹಿರಿಯ ನಾಗರಿಕರು ಶೇಕಡ 6.35
18 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 5.6, ಹಿರಿಯ ನಾಗರಿಕರು ಶೇಕಡ 6.35
2 ವರ್ಷ: ಸಾಮಾನ್ಯ ನಾಗರಿಕರು ಶೇಕಡ 5.7, ಹಿರಿಯ ನಾಗರಿಕರು ಶೇಕಡ 6.45
30 ತಿಂಗಳು: ಸಾಮಾನ್ಯ ನಾಗರಿಕರು ಶೇಕಡ 5.7, ಹಿರಿಯ ನಾಗರಿಕರು ಶೇಕಡ 6.45
3 ವರ್ಷ: ಸಾಮಾನ್ಯ ನಾಗರಿಕರು ಶೇಕಡ 5.7, ಹಿರಿಯ ನಾಗರಿಕರು ಶೇಕಡ 6.45
5-10 ವರ್ಷ: ಸಾಮಾನ್ಯ ನಾಗರಿಕರು ಶೇಕಡ 5.75, ಹಿರಿಯ ನಾಗರಿಕರು ಶೇಕಡ 6.5
More From GoodReturns

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Silver Rate Today: ಮತ್ತೆ ಸ್ಥಿರವಾದ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ



Click it and Unblock the Notifications