For Quick Alerts
ALLOW NOTIFICATIONS  
For Daily Alerts

Attractive FD Offer: ಸರ್ಕಾರಿ ಸ್ವಾಮ್ಯದ ಕೆಟಿಡಿಎಫ್‌ಸಿಯಲ್ಲಿ ಫಿಕ್ಸೆಡ್ ಡೆಪಾಸಿಟ್: ಭರ್ಜರಿ ರಿಟರ್ನ್

|

ಜನರು ಹೆಚ್ಚು ಇಷ್ಟಪಡುವ ಉಳಿತಾಯ ಯೋಜನೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಒಂದು. ಬಹಳ ಸರಳ ಹಾಗೂ ಸುರಕ್ಷಿತ ಹೂಡಿಕೆ ವ್ಯವಸ್ಥೆ ಇದು. ಹೆಚ್ಚು ರಿಸ್ಕ್ ಇರುವ ಷೇರು ಇತ್ಯಾದಿ ಕಡೆ ಹಣ ಹೂಡಲು ಹಿಂಜರಿಯುವ ಜನರಿಗೆ ಎಫ್‌ಡಿ ಬಹಳ ಒಳ್ಳೆಯ ಅಯ್ಕೆ.

 

ಬ್ಯಾಂಕುಗಳು, ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳು, ಖಾಸಗಿ ಹಣಕಾಸು ಸಂಸ್ಥೆಗಳು ಎಫ್‌ಡಿಗಳನ್ನು ಆಫರ್ ಮಾಡುತ್ತವೆ. ಥರಹೇವಾರಿ ನಿಶ್ಚಿತ ಠೇವಣಿಗಳಿವೆ. ತೆರಿಗೆ ಉಳಿತಾಯಕ್ಕೆ ಸಹಾಯವಾಗುವುದರಿಂದ ಹಿಡಿದು ಅಧಿಕ ರಿಟರ್ನ್ ಕೊಡುವ ಎಫ್‌ಡಿಗಳ ಯೋಜನೆಗಳಿವೆ. ಕೆನರಾ ಬ್ಯಾಂಕ್ ತನ್ನಲ್ಲಿನ ಎಫ್‌ಡಿಗೆ ಶೇ. 7ರಿಂದ 7.5ರಷ್ಟು ಬಡ್ಡಿ ಕೊಡುವುದಾಗಿ ಹೇಳಿಕೊಂಡಿತ್ತು. ಅದರೆ ಅದು ಕೋಟ್ಯಧಿಪತಿಗಳಿಗೆ ಮಾತ್ರ.

Canara Bank Q2 Results: ಕೆನರಾ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿ; ಶೇ. 89ರಷ್ಟು ಲಾಭ ಹೆಚ್ಚಳ, ಷೇರು ಏರಿಕೆCanara Bank Q2 Results: ಕೆನರಾ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿ; ಶೇ. 89ರಷ್ಟು ಲಾಭ ಹೆಚ್ಚಳ, ಷೇರು ಏರಿಕೆ

ಇದೇ ವೇಳೆ, ಕೆರಳದ ಸರ್ಕಾರಿ ಸಂಸ್ಥೆಯೊಂದು ಅತಿ ಹೆಚ್ಚು ಬಡ್ಡಿ ನೀಡುತ್ತಿರುವುದು ತಿಳಿದುಬಂದಿದೆ. ಕೇರಳ ಸಾರಿಗೆ ಅಭಿವೃದ್ಧಿ ಹಣಕಾಸು ನಿಗಮ (ಕೆಟಿಡಿಎಫ್‌ಸಿ) ಫಿಕ್ಸೆಡ್ ಠೇವಣಿಗಳಿಗೆ ವಾರ್ಷಿಕ ಶೇ. 8.35ರಷ್ಟು ದರದಲ್ಲಿ ರಿಟರ್ನ್ ಕೊಡುತ್ತದೆ. ಕೆಟಿಡಿಎಫ್‌ಸಿಯ ಎಫ್‌ಡಿಗಳಿಗೆ ಕೇರಳ ಸರ್ಕಾರ ಗ್ಯಾರಂಟಿ ನೀಡಿದೆ.

ಕೆಟಿಡಿಎಫ್‌ಸಿಯಲ್ಲಿ ಒಂದರಿಂದ ಐದು ವರ್ಷಗಳವರೆಗೆ ಎಫ್‌ಡಿ ಇಡಬಹುದು. ಶೇ. 7ರಷ್ಟು ಬಡ್ಡಿ ನೀಡಲಾಗುತ್ತದೆ. ಒಂದು ವರ್ಷದ ಬಳಿಕ ಶೇ. 7.23ರಷ್ಟು ಹೆಚ್ಚು ಹಣ ಸೇರುತ್ತದೆ. ಇದು ಸಾಮಾನ್ಯ ಜನರಿಗೆ ನೀಡಲಾಗಿರುವ ಆಫರ್. ಆದರೆ, ಹಿರಿಯ ನಾಗರಿಕರಿಗೆ ಇನ್ನೂ ಒಳ್ಳೆಯ ಆಫರ್ ಕೊಡಲಾಗಿದೆ. ವಯೋವೃದ್ಧರು ಒಂದು ವರ್ಷ ಠೇವಣಿ ಇಟ್ಟರೆ ಶೇ. 7.25ರಷ್ಟು ಬಡ್ಡಿ ಬರುತ್ತದೆ. ಒಂದು ವರ್ಷದ ಬಳಿಕ ಒಟ್ಟು ಬಡ್ಡಿ ಹಣ ಶೇ. 7.50ರಷ್ಟಾಗುತ್ತದೆ. ಐದು ವರ್ಷಗಳ ಠೇವಣಿಯಲ್ಲಿ ಸಿಗುವ ಒಟ್ಟಾರೆ ಬಡ್ಡಿ ಹಣ ಶೇ. 8.35 ಆಗುತ್ತದೆ.

ಸಾಮಾನ್ಯ ಜನರಿಗೆ

ಸಾಮಾನ್ಯ ಜನರಿಗೆ

ಐದು ವರ್ಷದವರೆಗೆ ಎಫ್‌ಡಿ ಪ್ಲಾನ್‌ಗಳಿವೆ. 3 ವರ್ಷಗಳವರೆಗೆ ಶೇ. 7ರ ಬಡ್ಡಿ ಇದೆ. ಒಟ್ಟಾರೆ ಸೇರುವ ಹಣ ವಾರ್ಷಿಕವಾಗಿ ಶೇ. 7.23ರಿಂದ ಶೇ. 7.76 ಇರುತ್ತದೆ. ನಾಲ್ಕು ಮತ್ತು ಐದು ವರ್ಷಕ್ಕೆ ಶೇ. 6.75 ಬಡ್ಡಿ ನಿಗದಿ ಮಾಡಲಾಗಿದೆ. ಆದರೆ, ರಿಟರ್ನ್ ಸಿಗುವುದು ಶೇ. 7.72 ಮತ್ತು ಶೇ. 8. ಉದಾಹರಣೆಗೆ 10 ಸಾವಿರ ರೂಗಳನ್ನು ಐದು ವರ್ಷ ಕಾಲ ಎಫ್‌ಡಿಯಾಗಿ ಇಟ್ಟರೆ ಕೊನೆಯಲ್ಲಿ ಸಿಗುವ ಹಣ 14 ಸಾವಿರ ರೂ.

ಠೇವಣಿ ಅವಧಿ: 1 ವರ್ಷ
ಹೂಡಿಕೆ: 10,000 ರೂ
ರಿಟರ್ನ್: 10,723 ರೂ
ವಾರ್ಷಿಕ ಫಲ: ಶೇ. 7.23

ಠೇವಣಿ ಅವಧಿ: 2 ವರ್ಷ
ಹೂಡಿಕೆ: 10,000 ರೂ
ರಿಟರ್ನ್: 11,498 ರೂ
ವಾರ್ಷಿಕ ಫಲ: 7.49 ರೂ

ಠೇವಣಿ ಅವಧಿ: 3 ವರ್ಷ
ಹೂಡಿಕೆ: 10,000 ರೂ
ರಿಟರ್ನ್: 12,329 ರೂ
ವಾರ್ಷಿಕ ಫಲ: ಶೇ. 7.76

ಠೇವಣಿ ಅವಧಿ: 4 ವರ್ಷ
ಹೂಡಿಕೆ: 10,000 ರೂ
ರಿಟರ್ನ್: 13,090 ರೂ
ವಾರ್ಷಿಕ ಫಲ: ಶೇ. 7.72

ಠೇವಣಿ ಅವಧಿ: 5 ವರ್ಷ
ಹೂಡಿಕೆ: 10,000 ರೂ
ರಿಟರ್ನ್: 14,001 ರೂ
ವಾರ್ಷಿಕ ಫಲ: ಶೇ. 8

ಹಣದುಬ್ಬರ ಹೆಚ್ಚಿದರೆ ಚಿನ್ನದ ಬೆಲೆ ಯಾಕೆ ತಗ್ಗುತ್ತದೆ?ಹಣದುಬ್ಬರ ಹೆಚ್ಚಿದರೆ ಚಿನ್ನದ ಬೆಲೆ ಯಾಕೆ ತಗ್ಗುತ್ತದೆ?

ಹಿರಿಯ ನಾಗರಿಕರಿಗೆ ಹೆಚ್ಚು ರಿಟರ್ನ್
 

ಹಿರಿಯ ನಾಗರಿಕರಿಗೆ ಹೆಚ್ಚು ರಿಟರ್ನ್

ಠೇವಣಿ ಅವಧಿ: 1
ಹೂಡಿಕೆ: 10,000 ರೂ
ರಿಟರ್ನ್: 10,750 ರೂ
ವಾರ್ಷಿಕ ಫಲ: ಶೇ. 7.50

ಠೇವಣಿ ಅವಧಿ: 2 ವರ್ಷ
ಹೂಡಿಕೆ: 10,000 ರೂ
ರಿಟರ್ನ್: 11,555 ರೂ
ವಾರ್ಷಿಕ ಫಲ: ಶೇ. 7.78

ಠೇವಣಿ ಅವಧಿ: 3 ವರ್ಷ
ಹೂಡಿಕೆ: 10,000 ರೂ
ರಿಟರ್ನ್: 12,422 ರೂ
ವಾರ್ಷಿಕ ಫಲ: ಶೇ. 8.07

ಠೇವಣಿ ಅವಧಿ: 4 ವರ್ಷ
ಹೂಡಿಕೆ: 10,000 ರೂ
ರಿಟರ್ನ್: 13,221 ರೂ
ವಾರ್ಷಿಕ ಫಲ: ಶೇ. 8.05

ಠೇವಣಿ ಅವಧಿ: 5 ವರ್ಷ
ಹೂಡಿಕೆ: 10,000 ರೂ
ರಿಟರ್ನ್: 14,176 ರೂ
ವಾರ್ಷಿಕ ಫಲ: ಶೇ.. 8.35

ಇಲ್ಲಿ ನೀವು 10 ಸಾವಿರ ರೂ ಹೂಡಿಕೆ ಮಾಡಬೇಕೆಂದಿಲ್ಲ. ಮೇಲೆ ಹೇಳಿರುವುದು ಉದಾಹರಣೆಗೆ ಮಾತ್ರ. ಎಷ್ಟು ಮೊತ್ತ ಬೇಕಾದರೂ ನೀವು ಕೆಟಿಡಿಎಫ್‌ಸಿಯಲ್ಲಿ ಎಫ್‌ಡಿಯಾಗಿ ಇಡಬಹುದು.

ಕೆಟಿಡಿಎಫ್‌ಸಿ ಬಗ್ಗೆ

ಕೆಟಿಡಿಎಫ್‌ಸಿ ಬಗ್ಗೆ

ಕೆಡಿಟಿಎಫ್‌ಸಿ ಬ್ಯಾಂಕ್ ಅಲ್ಲ. ಅದೊಂದು ನಾನ್‌ಬ್ಯಾಂಕಿಂಗ್ ಹಣಕಾಸು ಸಂಸ್ಥೆ. ಆದರೆ, ಕೇರಳ ಸರ್ಕಾರದ ಸಂಪೂರ್ಣ ಸ್ವಾಮ್ಯತೆ ಹೊಂದಿರುವ ಸಂಸ್ಥೆ. ಆರ್‌ಬಿಐನಿಂದ ಮಾನ್ಯತೆ ಪಡೆದಿದೆ. ಎಫ್‌ಡಿ ಮಾತ್ರವಲ್ಲ ವಿವಿಧ ರೀತಿಯ ರಿಟರ್ನ್ ಕೊಡುವ ಹಲವು ಹಣಕಾಸು ಯೋಜನೆಗಳನ್ನು ಸಾರ್ವಜನಿಕರಿಗೆ ಒದಗಿಸುತ್ತದೆ. ಆಕರ್ಷಕ ಬಡ್ಡಿದರಗಳಿವೆ.

English summary

Govt Owned KTDFC Offers Highest Yields For Fixed Deposits

Non-banking finance company and govt controlled KTDFC offers varous FDs with very good interest rates. Senior citizens get more return in the FD plans from this company.
Story first published: Friday, October 21, 2022, 11:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X