For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ 1ರಿಂದ ಯಾವೆಲ್ಲಾ ಹಣಕಾಸು ನಿಯಮ ಬದಲಾವಣೆ?

|

ನವೆಂಬರ್ ತಿಂಗಳು ಕೊನೆಯಾಗುತ್ತಿದ್ದು ಡಿಸೆಂಬರ್ ತಿಂಗಳು ಆರಂಭವಾಗಲು ಇನ್ನು ಎರಡೇ ದಿನಗಳ ಬಾಕಿ ಉಳಿದಿದೆ. ಈ ವರ್ಷದ ಕೊನೆಯ ತಿಂಗಳಿನಲ್ಲಿ ಎಲ್‌ಪಿಜಿ ದರ ಸೇರಿದಂತೆ ಹಲವಾರು ಹಣಕಾಸು ಸಂಬಂಧಿತ ಬದಲಾವಣೆಗಳು ಆಗಲಿದೆ. ಇನ್ನು ಕೆಲವು ಕಾರ್ಯಗಳನ್ನು ನೀವು ಈ ತಿಂಗಳ ಅಂತ್ಯದಲ್ಲೇ ಮಾಡಿಬಿಡಬೇಕಾಗಿದೆ. ಹೊಸ ತಿಂಗಳಿನಲ್ಲಿ ಆಗುವ ಈ ಬದಲಾವಣೆಗಳು ಖಚಿತವಾಗಿಯೂ ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಉಂಟು ಮಾಡಲಿದೆ.

 

ನಮ್ಮ ಜೀವನವನ್ನು ಸರಿಯಾಗಿ ಹೊಂದಾಣಿಕೆ ಮಾಡಿಕೊಂಡು ಸಾಗಲು ನಮಗೆ ವೈಯಕ್ತಿಕ ಹಣಕಾಸು ಮುಖ್ಯವಾಗಿದೆ. ನಮ್ಮ ಸುತ್ತಮುತ್ತಲೂ ಆಗುವ ಎಲ್ಲಾ ಬದಲಾವಣೆಗಳು ಕೂಡಾ ನಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪ್ರಭಾವ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಕೆಲವು ನಿಯಮ ಬದಲಾವಣೆಯು ನಮಗೆ ಲಾಭವನ್ನು ಉಂಟು ಮಾಡಿದರೆ, ಇನ್ನು ಕೆಲವು ನಿಯಮ ಬದಲಾವಣೆಯು ನಮಗೆ ನಷ್ಟವನ್ನು ಉಂಟು ಮಾಡಬಹುದು. ನಮ್ಮ ಮಾಸಿಕ ಬಜೆಟ್ ಅನ್ನು ಬುಡಮೇಲು ಮಾಡಬಹುದು.

Bank Holidays in December 2022: ಡಿಸೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 14 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವಾಗ?Bank Holidays in December 2022: ಡಿಸೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 14 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವಾಗ?

ಡಿಸೆಂಬರ್ ಒಂದರಿಂದ ನಮ್ಮ ವೈಯಕ್ತಿಕ ಹಣಕಾಸು ಮೇಲೆ ಪ್ರಭಾವ ಬೀರುವ ಬ್ಯಾಂಕಿಂಗ್ ಸಂಬಂಧಿತ ನಿಯಮಗಳು ಬದಲಾವಣೆಯಾಗಲಿದೆ. ಇನ್ನು ಕೆಲವು ಕಾರ್ಯಗಳನ್ನು ಮಾಡಲು ಈ ತಿಂಗಳೇ ಕೊನೆಯ ದಿನಾಂಕವಾಗಿದೆ. ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ದರ ಪರಿಷ್ಕರಣೆ ಮಾಡಲಾಗುತ್ತದೆ, ಹಾಗೆಯೇ ಈ ತಿಂಗಳಿನಲ್ಲಿ ಸರಿಸುಮಾರು ಅರ್ಧ ತಿಂಗಳು ಬ್ಯಾಂಕ್ ರಜೆ ಇದೆ. ಡಿಸೆಂಬರ್‌ ತಿಂಗಳಿನಿಂದ ಯಾವೆಲ್ಲಾ ಹಣಕಾಸು ನಿಯಮಗಳು ಬದಲಾವಣೆಯಾಗಲಿದೆ ಎಂದು ತಿಳಿಯೋಣ ಮುಂದೆ ಓದಿ....

 ಎಲ್‌ಪಿಜಿ, ಸಿಎನ್‌ಜಿ, ಪಿಎನ್‌ಜಿ ದರ ಏರಿಕೆ

ಎಲ್‌ಪಿಜಿ, ಸಿಎನ್‌ಜಿ, ಪಿಎನ್‌ಜಿ ದರ ಏರಿಕೆ

ಪ್ರತಿ ತಿಂಗಳು ಕೂಡಾ ಪೆಟ್ರೋಲಿಯಂ ಕಂಪನಿಗಳು ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡುತ್ತದೆ. ಪ್ರಸ್ತುತ ಈ ಹಣದುಬ್ಬರದ ನಡುವೆ ಹೊಸ ತಿಂಗಳಿನಲ್ಲಿ ಎಲ್‌ಪಿಜಿ ದರವು ಏರಿಕೆಯಾಗುವ ಸಾಧ್ಯತೆ ಇದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಹಲವಾರು ತಿಂಗಳುಗಳಿಂದ ಏರಿಕೆ ಮಾಡಲಾಗುತ್ತಿದೆ. ಆದರೆ ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯು ಈಗಾಗಲೇ ಗಗನಕ್ಕೆ ಏರಿದೆ. ಸರ್ಕಾರ ಉಜ್ವಲ ಯೋಜನೆಯಡಿಯಲ್ಲಿ ವಾರ್ಷಿಕ 12 ಸಿಲಿಂಡರ್‌ಗಳಿಗೆ 200 ರೂಪಾಯಿಯಂತೆ ಸಬ್ಸಿಡಿ ಘೋಷಣೆ ಮಾಡಿದೆ. ಕಳೆದ ಬಾರಿ ಜುಲೈನಲ್ಲಿ ಎಲ್‌ಪಿಜಿ ದರವನ್ನು ಹೆಚ್ಚಳ ಮಾಡಲಾಗಿದೆ. ಆ ಬಳಿಕ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದೆ. ಮುಂದಿನ ತಿಂಗಳು ಕೂಡಾ ವಾಣಿಜ್ಯ ಸಿಲಿಂಡರ್ ದರ ಇಳಿಯುವ ಸಾಧ್ಯತೆ ಇದೆ. ಗೃಹ ಬಳಕೆ ಸಿಲಿಂಡರ್ ಬೆಲೆ ಕೂಡಾ ಕಡಿಮೆಯಾಗುವ ಸಾಧ್ಯತೆ ಇದೆ. ಇನ್ನು ಸಿಎನ್‌ಜಿ, ಪಿಎನ್‌ಜಿ ದರವು ಕೂಡಾ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.

 ಪಿಂಚಣಿದಾರರೇ ಜೀವನ ಪ್ರಮಾಣಪತ್ರ ಸಲ್ಲಿಕೆ

ಪಿಂಚಣಿದಾರರೇ ಜೀವನ ಪ್ರಮಾಣಪತ್ರ ಸಲ್ಲಿಕೆ

ಪಿಂಚಣಿ ಪಡೆಯುವವರು ಈ ತಿಂಗಳ ಒಳಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬೇಕು. ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡುವ ಕೊನೆಯ ದಿನಾಂಕ ನವೆಂಬರ್ 30 ಆಗಿದೆ. ಗಡುವು ಕೊನೆಯಾಗಲು ಇನ್ನು ಎರಡು ದಿನಗಳು ಮಾತ್ರ ಬಾಕಿ ಉಳಿದಿದೆ. ನೀವು ಈವರೆಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೆ, ಕೂಡಲೇ ಸಲ್ಲಿಸಿಬಿಡಿ. ಇಲ್ಲವಾದರೆ ನಿಮಗೆ ಪಿಂಚಣಿ ಸ್ಥಗಿತವಾಗಬಹುದು. ಪಿಂಚಣಿ ಪಡೆಯುವವರು ಜೀವಂತವಾಗಿದ್ದರೆ ಎಂಬುವುದಕ್ಕೆ ಜೀವನ ಪ್ರಮಾಣಪತ್ರ ಸಾಕ್ಷಿಯಾಗಿದೆ. ಆದ್ದರಿಂದಾಗಿ ಪ್ರತಿ ವರ್ಷ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವುದು ಅತೀ ಮುಖ್ಯವಾಗಿದೆ.

 ಸರಿಸುಮಾರು ಅರ್ಧ ತಿಂಗಳು ಬ್ಯಾಂಕ್ ರಜೆ
 

ಸರಿಸುಮಾರು ಅರ್ಧ ತಿಂಗಳು ಬ್ಯಾಂಕ್ ರಜೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಡಿಸೆಂಬರ್ 2022ರ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ ತಿಂಗಳಿನಲ್ಲಿ ಸುಮಾರು 14 ದಿನಗಳ ಕಾಲ ಬ್ಯಾಂಕ್‌ ಬಂದ್ ಆಗಿರುತ್ತದೆ. ಆದರೆ ಆನ್‌ಲೈನ್, ಎಟಿಎಂ ಬ್ಯಾಂಕಿಂಗ್ ವಹಿವಾಟು ಎಂದಿನಂತೆ ನಡೆಯುತ್ತದೆ. ನೀವು ಯಾವುದೇ ಹಣಕಾಸು ಕಾರ್ಯಕ್ಕೆ ಬ್ಯಾಂಕ್‌ಗೆ ಭೇಟಿ ನೀಡಬೇಕಾಗಿದ್ದರೆ, ಅದರಕ್ಕೂ ಮುನ್ನ ಯಾವೆಲ್ಲ ದಿನ ಬ್ಯಾಂಕ್ ರಜೆ ಇರುತ್ತದೆ ಎಂದು ನೋಡಿಕೊಳ್ಳುವುದು ಉತ್ತಮ. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. (https://kannada.goodreturns.in/news/bank-holidays-in-december-2022-know-the-list-of-14-bank-closing-days-015217.html)

 ಯೆಸ್ ಬ್ಯಾಂಕ್ ಎಸ್‌ಎಂಎಸ್ ಬ್ಯಾಲೆನ್ಸ್ ಅಲರ್ಟ್ ಸ್ಥಗಿತ

ಯೆಸ್ ಬ್ಯಾಂಕ್ ಎಸ್‌ಎಂಎಸ್ ಬ್ಯಾಲೆನ್ಸ್ ಅಲರ್ಟ್ ಸ್ಥಗಿತ

ಯೆಸ್ ಬ್ಯಾಂಕ್ ಡಿಸೆಂಬರ್ 1, 2022ರಿಂದ ಎಸ್‌ಎಂಎಸ್‌ ಬ್ಯಾಲೆನ್ಸ್ ಅಲರ್ಟ್ ಅನ್ನು ಸ್ಥಗಿತ ಮಾಡಲಿದೆ. ಅಂದರೆ ಈ ಹಿಂದೆ ನೀವು ನಡೆಸಿದ ಬ್ಯಾಂಕಿಂಗ್ ವಹಿವಾಟಿನ ಬಗ್ಗೆ ಎಸ್‌ಎಂಎಸ್ ಮೂಲಕ ನಿಮಗೆ ಅಲರ್ಟ್ ಲಭ್ಯವಾಗುತ್ತಿತ್ತು. ಆದರೆ ಮುಂದಿನ ತಿಂಗಳಿನಿಂದ ಈ ಸೇವೆಯನ್ನು ಬ್ಯಾಂಕ್ ಸ್ಥಗಿತಗೊಳಿಸಲಿದೆ. ಆದರೆ ಆನ್‌ಲೈನ್ ವಹಿವಾಟು ಪ್ರಕ್ರಿಯೆ ಎಂದಿನಂತೆ ನಡೆಸಬಹುದು. ಅದರಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ ಎಂದು ಕೂಡಾ ಬ್ಯಾಂಕ್ ಮಾಹಿತಿ ನೀಡಿದೆ.

English summary

Rules change from 1st December 2022 : Rules that Can Impact your Personal Finance to Change from December 2022

Life certificate, LPG price, bank holiday: Rules that can impact your personal finance to change from December 2022.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X