For Quick Alerts
ALLOW NOTIFICATIONS  
For Daily Alerts

SGB: ಚಿನ್ನದ ಮೇಲೆ ನೆಚ್ಚಿನ ಹೂಡಿಕೆ ಸ್ಕೀಮ್, ದರ ಎಷ್ಟಕ್ಕೆ ನಿಗದಿ?

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಮತ್ತೊಮ್ಮೆ ಸವರನ್ ಗೋಲ್ಡ್ ಬಾಂಡ್‌ ಯೋಜನೆಯ ಹೊಸ ಸರಣಿ ಆರಂಭಿಸುತ್ತಿದೆ. ಇದು ಹಳೆ ಯೋಜನೆಯ ದರದಲ್ಲಿ ಅವಧಿಗೆ ಮುನ್ನ Redemptionm ಮಾಡಿಕೊಳ್ಳುವ ವಿಧಾನವಾಗಿದೆ. ಚಿನ್ನದ ಮೇಲೆ 10 ಗ್ರಾಂಗೆ 500 ರೂಪಾಯಿ ರಿಯಾಯಿತಿ ಸಿಗಬೇಕಾದರೆ, ಕೇಂದ್ರ ಸರ್ಕಾರದ ಸವರನ್ ಗೋಲ್ಡ್ ಬಾಂಡ್‌ಗಳು ಸರಿಯಾದ ಆಯ್ಕೆಯಾಗಿದೆ.

ಚಿನ್ನದ ಬಾಂಡ್‌ಗೆ ಯಾವುದೇ ಮೇಕಿಂಗ್ ಶುಲ್ಕಗಳು ಮತ್ತು ಜಿಎಸ್‌ಟಿ ವಿಧಿಸಲಾಗುವುದಿಲ್ಲ.ಇವುಗಳನ್ನು ಯಾವುದೇ ವಾಣಿಜ್ಯ ಬ್ಯಾಂಕ್ ಅಥವಾ ಅಂಚೆ ಕಚೇರಿಯಿಂದ ಖರೀದಿಸಬಹುದು.

ಹಬ್ಬದ ಸೀಸನ್‌ನಲ್ಲಿ ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಹೇಗೆ?ಹಬ್ಬದ ಸೀಸನ್‌ನಲ್ಲಿ ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಹೇಗೆ?

2022-23 ಹಣಕಾಸು ವರ್ಷದಲ್ಲಿ ಮೊದಲ ಸರಣಿ ಜೂನ್‌ನಲ್ಲಿ ಬಿಡುಗಡೆಯಾಗಿತ್ತು. ಎರಡನೇ ಬಾರಿಗೆ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಒಂದು ಗ್ರಾಂ ಚಿನ್ನಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 5,197 ರೂಪಾಯಿ ನಿಗದಿಪಡಿಸಿತ್ತು. ಇದಕ್ಕೂ ಮುನ್ನ 2016-17ರ ಸರಣಿ II ತನಕ ಪ್ರತಿ ಯೂನಿಟ್ ಮೇಲೆ 4,952 ರು ಎಂದು ನಿಗದಿ ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಹೊಸ ಸರಣಿಯ ಬೆಲೆ ಕೂಡಾ 5 ಸಾವಿರ್ ಪ್ರತಿ ಯೂನಿಟ್ ದಾಟುವ ನಿರೀಕ್ಷೆಯಿದೆ. ಈ ಬಗ್ಗೆ ಇನ್ನಷ್ಟು ವಿವರ ಮುಂದಿದೆ..

ಘೋಷಣೆ ದಿನಾಂಕ ಯಾವಾಗ?

ಘೋಷಣೆ ದಿನಾಂಕ ಯಾವಾಗ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಬ್ಯಾಂಕ್‌ಗಳು ಡಿಜಿಟಲ್ ರೂಪದಲ್ಲಿ ಬಾಂಡ್ ಖರೀದಿಗೆ ಅವಕಾಶ ನೀಡಿದೆ. ಭೌತಿಕ ಚಿನ್ನದ ವಿಷಯದಲ್ಲಿ ಸುರಕ್ಷಿತ ಸಂಗ್ರಹಣೆಯನ್ನು ಕಂಡುಹಿಡಿಯುವ ಅಗತ್ಯವಿಲ್ಲ. ಇನ್ನು ಡಿಮ್ಯಾಟ್ ಖಾತೆ ಇರುವವರು ತಮ್ಮ ಖಾತೆಗೆ ಬಾಂಡ್ ಅನ್ನು ಜಮಾ ಮಾಡಿಕೊಳ್ಳಬಹುದು. ಹಾಗೆಯೇ ಡಿಜಿಟಲ್ ರೂಪದಲ್ಲಿ ಬಾಂಡ್ ಖರೀದಿ ಮಾಡುವವರಿಗೆ 50 ರೂಪಾಯಿ ರಿಯಾಯಿತಿ ಲಭ್ಯವಾಗಲಿದೆ.

ಚಿನ್ನ ಸಂಗ್ರಹ: 2022ರ ಟಾಪ್ 10 ದೇಶಗಳ ಪಟ್ಟಿ, ಭಾರತಕ್ಕೆ ಎಷ್ಟನೇ ಸ್ಥಾನ?

"ಆರ್‌ಬಿಐ ಪ್ರಕಾರ, ನಾಲ್ಕನೇ ಮತ್ತು ಮೂರನೇ ಅಕಾಲಿಕ ವಿಮೋಚನೆ(Redemption)ಯ ಅಂತಿಮ ದಿನಾಂಕವು ಕ್ರಮವಾಗಿ ಸೆಪ್ಟೆಂಬರ್ 29, 2022 ಮತ್ತು ಸೆಪ್ಟೆಂಬರ್ 30, 2022 ರಂದು ಇರುತ್ತದೆ'.

redemption  ಹೇಗೆ ಲೆಕ್ಕ ಹಾಕಲಾಗುತ್ತದೆ

redemption ಹೇಗೆ ಲೆಕ್ಕ ಹಾಕಲಾಗುತ್ತದೆ

ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲರ್ಸ್ ಅಸೋಸಿಯೇಷನ್ ಲಿಮಿಟೆಡ್ ಘೋಷಿಸಿದಂತೆ, redemption ದಿನಾಂಕದ ಮೊದಲು ವಾರಕ್ಕೆ (ಸೋಮವಾರದಿಂದ ಶುಕ್ರವಾರದವರೆಗೆ) 999 ಶುದ್ಧತೆಯ ಮುಕ್ತಾಯದ ಚಿನ್ನದ ಬೆಲೆಯ ಸರಳ ಸರಾಸರಿಯು SGB (IBJA) ಯ ರಿಡೆಂಪ್ಶನ್ ಬೆಲೆಗೆ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ.)

ಪರಿಣಾಮವಾಗಿ, ಸೆಪ್ಟೆಂಬರ್ 19-23, 2022 ರ ವಾರದ ಮುಕ್ತಾಯದ ಚಿನ್ನದ ಬೆಲೆಯ ಸರಳ ಸರಾಸರಿಯನ್ನು ಆಧರಿಸಿ, ಆರಂಭಿಕ ರಿಡೆಂಪ್ಶನ್‌ಗಳ ಬೆಲೆಯನ್ನು ಸೆಪ್ಟೆಂಬರ್ 29 ಮತ್ತು 30, 2022 ರಂದು ಪ್ರಕಟಿಸಲಾಗುತ್ತದೆ.

ಕನಿಷ್ಠ ಖರೀದಿ ಮೌಲ್ಯ 1 ಗ್ರಾಮ್ ಚಿನ್ನ ಅಂದರೆ ಒಂದು ಬಾಂಡ್ ಆಗಿದೆ. ಗರಿಷ್ಠ ಚಿನ್ನ ಖರೀದಿಗೂ ಮಿತಿ ಇದೆ. ಒಬ್ಬ ವ್ಯಕ್ತಿ ಮತ್ತು ಒಂದು ಅವಿಭಕ್ತ ಕುಟುಂಬಕ್ಕೆ 4 ಕೆಜಿ ಖರೀದಿಯ ಮಿತಿ ಇದೆ. ಟ್ರಸ್ಟ್ ಮತ್ತು ಅದೇ ರೀತಿಯ ಇತರ ಸಂಸ್ಥೆಗಳಿಗೆ ಒಂದು ಹಣಕಾಸು ವರ್ಷದಲ್ಲಿ 20 ಕೆಜಿಯಷ್ಟು ಚಿನ್ನದ ಬಾಂಡ್ ಖರೀದಿ ಮಾಡುವ ಅವಕಾಶವಿದೆ.

redemption  ಪ್ರಕ್ರಿಯೆ ಹೇಗೆ

redemption ಪ್ರಕ್ರಿಯೆ ಹೇಗೆ

RBI ಪ್ರಕಾರ, ಇದು redemption ಒಳಗೊಂಡಿರುವ ಕಾರ್ಯವಿಧಾನದಲ್ಲಿ ಬಾಂಡ್‌ನ ಮೆಚ್ಯೂರಿಟಿಗೂ ಒಂದು ತಿಂಗಳ ಮೊದಲು ಹೂಡಿಕೆದಾರರಿಗೆ ಸಲಹೆ ನೀಡಲಾಗುತ್ತದೆ. ಮುಕ್ತಾಯದ ದಿನಾಂಕದಂದು, ದಾಖಲೆಯಲ್ಲಿರುವ ವಿವರಗಳ ಪ್ರಕಾರ ಮೆಚ್ಯೂರಿಟಿ ಆದಾಯವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಖಾತೆ ಸಂಖ್ಯೆ, ಇಮೇಲ್ ಐಡಿಗಳಂತಹ ಯಾವುದೇ ವಿವರಗಳಲ್ಲಿ ಬದಲಾವಣೆಗಳಿದ್ದಲ್ಲಿ, ಹೂಡಿಕೆದಾರರು ಬ್ಯಾಂಕ್/ಎಸ್‌ಎಚ್‌ಸಿಐಎಲ್/ಪಿಒಗೆ ತಕ್ಷಣ ಮಾಹಿತಿ ನೀಡಬೇಕು.

ನೀವು ಈ ಬಾಂಡ್‌ಗಳನ್ನು ಮಾರಾಟ ಮಾಡಲು ಬಯಸಿದರೆ ನೀವು ಕನಿಷ್ಠ 5 ವರ್ಷಗಳವರೆಗೆ ಕಾಯಬೇಕಾಗುತ್ತದೆ ಮತ್ತು ಈ ಯೋಜನೆಯಡಿಯಲ್ಲಿ ನೀವು ಹೂಡಿಕೆಯ ಮೇಲೆ ಶೇಕಡಾ 2.5 ರಷ್ಟು ವಾರ್ಷಿಕ ಬಡ್ಡಿಯನ್ನು ಪಡೆಯುತ್ತೀರಿ.

ಖರೀದಿ ಹಾಗೂ ಮಾರಾಟ

ಖರೀದಿ ಹಾಗೂ ಮಾರಾಟ

ನಿಗದಿತ ವಾಣಿಜ್ಯ ಬ್ಯಾಂಕುಗಳಿಂದ (ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಪಾವತಿ ಬ್ಯಾಂಕುಗಳು) ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಷೇರು ವಿನಿಮಯ ಕೇಂದ್ರಗಳಿಂದ ಬಾಂಡ್‌ಗಳನ್ನು ಖರೀದಿಸಬಹುದು. ಬಾಂಡ್‌ಗಳನ್ನು ಮೆಚ್ಯೂರಿಟಿಯಲ್ಲಿ ನಗದು ರೂಪದಲ್ಲಿ ರಿಡೀಮ್ ಮಾಡಲಾಗುತ್ತದೆ.

ಸವರನ್ ಗೋಲ್ಡ್ ಬಾಂಡ್ ಅಥವಾ ಡಿಜಿಟಲ್ ಚಿನ್ನ: ಯಾವುದರಲ್ಲಿ ಹೂಡಿಕೆ ಮಾಡಬೇಕು?ಬಾಂಡ್ ಅನ್ನು ಭಾರತ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ನೀಡುತ್ತದೆ. ಬಾಂಡ್‌ಗಳ ಅವಧಿ 8 ವರ್ಷಗಳ ತನಕ ಇರುತ್ತದೆ. ನೀವು ಈ ಬಾಂಡ್‌ಗಳನ್ನು ಖರೀದಿಸಿ ತಕ್ಷಣಕ್ಕೆ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಮಾರಾಟ ಮಾಡಲು ಬಯಸಿದರೆ ನೀವು ಕನಿಷ್ಠ 5 ವರ್ಷಗಳವರೆಗೆ ಕಾಯಬೇಕಾಗುತ್ತದೆ.
ಇಂದಿನ ಚಿನ್ನದ ದರ

ಇಂದಿನ ಚಿನ್ನದ ದರ

ಸೆಪ್ಟೆಂಬರ್ 25ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಸ್ಥಿರವಾಗಿದ್ದು ಪ್ರಸ್ತುತ 46,050ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಪ್ರಸ್ತುತ 50,240 ರೂಪಾಯಿ ಆಗಿದೆ. SGB 2016 Series II ಅವಧಿಯಲ್ಲಿ ಪ್ರತಿ ಯೂನಿಟ್ ಮೇಲೆ 4,952 ರು ಎಂದು ನಿಗದಿ ಪಡಿಸಲಾಗಿತ್ತು. ಈ ವಾರಾಂತ್ಯಕ್ಕೆ ಚಿನ್ನದ ಧಾರಣೆ ನೋಡಿಕೊಂಡು ಯೋಜನೆಗಳ ಪ್ರತಿ ಯೂನಿಟ್ ದರ ನಿಗದಿ ಮಾಡಲಾಗುತ್ತದೆ.

English summary

Sovereign Gold Bond: Premature redemption who can invest other details in Kannada

The Reserve Bank of India has fixed the price for early/premature redemption of the Sovereign Gold Bond Scheme SGB 2016 Series II and SGB 2016-17 Series II at Rs 4,952 per unit. Premature redemption who can invest other details in Kannada
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X