For Quick Alerts
ALLOW NOTIFICATIONS  
For Daily Alerts

ಹರಿದ ನೋಟನ್ನು ಬದಲಾಯಿಸಬೇಕೇ, ಆರ್‌ಬಿಐ ನಿಯಮ ತಿಳಿಯಿರಿ

|

ನಮ್ಮಲ್ಲಿ ಎಷ್ಟೋ ಮಂದಿಯಲ್ಲಿ ಹರಿದ ನೋಟುಗಳು ಇರಬಹುದು, 500, 2000, 200 ರೂಪಾಯಿಯ ಹರಿದ ನೋಟು ಕೂಡಾ ಇರಬಹುದು. ಆ ನೋಟನ್ನು ಯಾವ ರೀತಿ ಬದಲಾವಣೆ ಮಾಡಿಕೊಳ್ಳುವುದು ಎಂದು ಈಗಲೂ ಅದೆಷ್ಟೋ ಮಂದಿಗೆ ತಿಳಿದಿಲ್ಲ. ಇತ್ತೀಚೆಗೆ ಆರ್‌ಬಿಐ ಹರಿದ ಅಥವಾ ಹಳೆಯದಾದ ನೋಟುಗಳ ಸಮಸ್ಯೆಯನ್ನು ಬಗೆಹರಿಸುವಂತಹ ನೀತಿಯನ್ನು ಜಾರಿಗೆ ತಂದಿದೆ.

ಹೌದು, ನಿಮ್ಮಲ್ಲಿ ಹರಿದ ಅಥವಾ ಏನಾದರು ಬರೆದಿರುವ ನೋಟುಗಳು ಇದ್ದರೆ, ಅದಕ್ಕೆ ಮೌಲ್ಯವೇ ಇಲ್ಲ ಎಂದು ಆತಂಕ ಪಡಬೇಕಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಹೊಸ ನಿಯಮದ ಪ್ರಕಾರ ಹರಿದ ಅಥವಾ ಚಲಾವಣೆಗೆ ಯೋಗ್ಯವಾಗಿಲ್ಲದ ನೋಟುಗಳನ್ನು ನೀವು ಸಮೀಪದ ಕೇಂದ್ರ ಬ್ಯಾಂಕ್‌ನ ಕಚೇರಿಗೆ ತೆರಳಿ ಬದಲಾವಣೆ ಮಾಡಿಸಿಕೊಳ್ಳಬಹುದು.

ಎಲ್ಲಿದೆ 2000 ರೂಪಾಯಿ ನೋಟು, ಕೊನೆಯ ಬಾರಿ ನೋಡಿದ್ದು ಯಾವಾಗ ನೆನಪಿಸಿಕೊಳ್ಳಿ!ಎಲ್ಲಿದೆ 2000 ರೂಪಾಯಿ ನೋಟು, ಕೊನೆಯ ಬಾರಿ ನೋಡಿದ್ದು ಯಾವಾಗ ನೆನಪಿಸಿಕೊಳ್ಳಿ!

ಹರಿದ ನೋಟುಗಳನ್ನು ಹೊಂದಿರುವ ಯಾವುದೇ ವ್ಯಕ್ತಿ ಸಮೀಪದ ಕೇಂದ್ರ ಬ್ಯಾಂಕಿಗೆ ಹೋಗಿ ನೋಟನ್ನು ಬದಲಾವಣೆ ಮಾಡಿಕೊಳ್ಳಬಹುದು. ಹಾಗೆಯೇ ಆ ನೋಟನ್ನೇ ಡೆಪಾಸಿಟ್ ಮಾಡಬಹುದು. ಹರಿದ ನೋಟಿನ ಮೌಲ್ಯ ಎಷ್ಟಿದೆ ಅಷ್ಟು ಮೊತ್ತವು ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಆದರೆ ಇದಕ್ಕೆ ಹಲವಾರು ಮಾನದಂಡಗಳು ಇದೆ. ಈ ಬಗ್ಗೆ ಇಲ್ಲಿದೆ ವಿವರವಾದ ಮಾಹಿತಿ ಮುಂದೆ ಓದಿ...

 ನೋಟನ್ನು ಬದಲಾಯಿಸುವ ಆರ್‌ಬಿಐ ಮಾರ್ಗಸೂಚಿ

ನೋಟನ್ನು ಬದಲಾಯಿಸುವ ಆರ್‌ಬಿಐ ಮಾರ್ಗಸೂಚಿ

ಹರಿದ, ಕಲುಷಿತ, ಕೊಳೆಯಾದ ಬ್ಯಾಂಕ್‌ ನೋಟುಗಳು, ಸಣ್ಣದಾಗಿ ತುಂಡಾಗಿದ್ದರೆ ಅಥವಾ ಸ್ವಲ್ಪ ಕೊಳೆಯಾಗಿದ್ದರೆ ಅಥವಾ ಅದರ ಮುಖ್ಯ ಭಾಗವೇ ತುಂಡಾಗಿದ್ದರೆ ಅದನ್ನು ಬದಲಾವಣೆ ಮಾಡಬಹುದು. ನೋಟು 10 ರೂಪಾಯಿಗಿಂತ ಮೇಲಿನ ಮೌಲ್ಯದ್ದಾಗಿದ್ದಾರೆ ಮಾತ್ರ ಬದಲಾವನೆ ಮಾಡಲು ಸಾಧ್ಯವಾಗುತ್ತದೆ. ಎರಡು ತುಂಡಾಗಿದ್ದರೆ, ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡದೆಯೇ ಯಾವುದೇ ಸಾರ್ವಜನಿಕ ವಲಯದ ಬ್ಯಾಂಕ್‌ನ ಬ್ರಾಂಚ್‌ನಲ್ಲಿ ಬದಲಾವಣೆ ಮಾಡಬಹುದು.

 ಹರಿದ ನೋಟು ಬದಲಾವಣೆ ಮಾಡುವುದು ಹೇಗೆ?

ಹರಿದ ನೋಟು ಬದಲಾವಣೆ ಮಾಡುವುದು ಹೇಗೆ?

* ಹರಿದ ನೋಟನ್ನು ಬದಲಾವಣೆ ಮಾಡಲು ಅಥವಾ ನಿಮ್ಮ ಖಾತೆಗೆ ಜಮೆ ಮಾಡಲು ನೀವು ಸ್ಥಳೀಯ ಕೇಂದ್ರ ಬ್ಯಾಂಕ್‌ಗೆ ಭೇಟಿ ನೀಡಬೇಕು.
* 'Triple Lock Receptacle' (TLR) ಬಾಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಉಲ್ಲೇಖಿಸಬೇಕು
* ಮೊತ್ತವನ್ನು ಡೆಪಾಸಿಟ್ ಮಾಡುವುದಾದರೆ, ಖಾತೆದಾರರ ಹೆಸರು, ವಿಳಾಸ, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ನೋಟಿನ ಮಾಹಿತಿ ಉಲ್ಲೇಖಿಸಿರಬೇಕು
* ನೋಟುಗಳನ್ನು ಕವರ್ ಮೂಲಕ ನೀಡಬೇಕು

 ನೋಟನ್ನು ಡೆಪಾಸಿಟ್ ಮಾಡಲು ಆರ್‌ಬಿಐ ಷರತ್ತು

ನೋಟನ್ನು ಡೆಪಾಸಿಟ್ ಮಾಡಲು ಆರ್‌ಬಿಐ ಷರತ್ತು

ನೋಟು ಎಷ್ಟು ಹರಿದಿದೆ, ಎಷ್ಟು ಕಲುಷಿತವಾಗಿದೆ ಎಂಬ ಆಧಾರದಲ್ಲಿ ನೋಟಿನ ಮೌಲ್ಯವನ್ನು ನಿರ್ಧಾರ ಮಾಡಲಾಗುತ್ತದೆ. ಉದಾಹರಣೆಗೆ 2000 ರೂಪಾಯಿಯ ನೋಟು ಹರಿದಿದ್ದರೆ, ಅದರ ಗಾತ್ರ 109.56 ಉದ್ದ ಅಗಲ ಆಗಿರುತ್ತದೆ. ನೀವು ಹರಿದ 44 ಉದ್ದ ಅಗಲವಿರು 2000 ರೂಪಾಯಿಯ ನೋಟನ್ನು ಡೆಪಾಸಿಟ್ ಮಾಡಿದರೆ ನೋಟಿನ ಮೌಲ್ಯದ ಅರ್ಧದಷ್ಟು ಮೊತ್ತವನ್ನು ನೀಡಲಾಗುತ್ತದೆ. ಹಾಗೆಯೇ 88 ಉದ್ದ ಅಗಲ ಇರುವ ನೋಟನ್ನು ಡೆಪಾಸಿಟ್ ಮಾಡಿದರೆ ಸಂಪೂರ್ಣ ಮೊತ್ತ ನೀಡಲಾಗುತ್ತದೆ. ಹಾಗೆಯೇ 78 ರಷ್ಟು ಉದ್ದ ಅಗಲವನ್ನು ಹೊಂದಿರುವ 200 ರೂಪಾಯಿ ನೋಟನ್ನು ನೀಡಿದರೆ ಸಂಪೂರ್ಣ ರಿಫಂಡ್ ನೀಡಲಾಗುತ್ತದೆ. 39 ಉದ್ದ ಅಗಲವಿರುವ ನೋಟಿಗೆ ಅರ್ಧದಷ್ಟು ಮೊತ್ತವನ್ನು ನೀಡಲಾಗುತ್ತದೆ.

English summary

Want to Exchange Damaged, Torn Notes, Know RBI Rules and Regulations in Kannada

RBI guidelines for exchanging torn notes: Here's how to exchange damaged, Torn currency notes; Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X