For Quick Alerts
ALLOW NOTIFICATIONS  
For Daily Alerts

ವಿಪಿಎಫ್ (VPF) ಆರಿಸಿಕೊಳ್ಳುವುದು ಏಕೆ ಉತ್ತಮ? ಗೊತ್ತಿರಬೇಕಾದ 10 ಸಂಗತಿ

|

ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರ ಬಹಳ ಕಡಿಮೆ ಇದೆ ಹಾಗೂ ನಿಧಾನಕ್ಕೆ ಸಣ್ಣ ಉಳಿತಾಯ ಯೋಜನೆಗಳಾದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಂಥ ಬಡ್ಡಿ ದರ ಇಳಿಯುತ್ತಿದೆ. ಸದ್ಯಕ್ಕೆ ವಾಲಂಟರಿ ಪ್ರಾವಿಡೆಂಟ್ ಫಂಡ್ (ವಿಪಿಎಫ್) ಉತ್ತಮ ಆಯ್ಕೆ ಎನಿಸಿಕೊಂಡಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ವಿಪಿಎಫ್ ಅಡಿಯಲ್ಲಿ ಸಿಬ್ಬಂದಿಯು ಇಪಿಎಫ್ ಕೊಡುಗೆಯನ್ನು ಹೆಚ್ಚಿಸಬಹುದು. ಆದರೆ ಉದ್ಯೋಗದಾತರು ಮೂಲ ವೇತನದ 12%ಕ್ಕಿಂತ ಹೆಚ್ಚು ಪಾವತಿಸುವುದಿಲ್ಲ.

ಇಪಿಎಫ್ ಮೊತ್ತಕ್ಕಿಂತ ಹೆಚ್ಚಿನದನ್ನು ಉದ್ಯೋಗಿಯಾದವರು ಕೊಡುಗೆಯಾಗಿ ಕಡಿತಗೊಳಿಸುವಂತೆ ಕೋರಿದರೆ ಅದು ವಿಪಿಎಫ್ ಗೆ ಹೋಗುತ್ತದೆ. ಅಂದ ಹಾಗೆ ವಿಪಿಎಫ್ ಬಗ್ಗೆ ನಿಮಗೆ ಗೊತ್ತಿರಬೇಕಾದ 10 ಸಂಗತಿಗಳು ಇಲ್ಲಿವೆ.

1. ಮೂಲ ವೇತನದ (ಬೇಸಿಕ್ ಸ್ಯಾಲರಿ) ಹಾಗೂ ತುಟ್ಟಿ ಭತ್ಯೆಯ (ಡಿಯರ್ ನೆಸ್ ಅಲೋವನ್ಸ್) ಶೇಕಡಾ ನೂರರ ತನಕ ವಿಪಿಎಫ್ ನಲ್ಲಿ ಹೂಡಿಕೆ ಮಾಡುವ ಅವಕಾಶ ಇದೆ.

2. ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (ಇಪಿಎಫ್) ಬಡ್ಡಿ ದರದಷ್ಟೇ ವಿಪಿಎಫ್ ಬಡ್ಡಿ ಕೂಡ ಬರುತ್ತದೆ ಮತ್ತು ಒಂದು ವೇಳೆ ಬಯಸಿದಲ್ಲಿ ವೇತನದಿಂದ ಮೊತ್ತ ಕಡಿತ ಮಾಡಲಾಗುತ್ತದೆ.

ವಾಲಂಟರಿ ಪ್ರಾವಿಡೆಂಟ್ ಫಂಡ್ (VPF) 4 ಅನುಕೂಲ, 3 ಲಾಭವಾಲಂಟರಿ ಪ್ರಾವಿಡೆಂಟ್ ಫಂಡ್ (VPF) 4 ಅನುಕೂಲ, 3 ಲಾಭ

3. 2019- 20ರ ಸಾಲಿಗೆ ಇಪಿಎಫ್ ಒದಿಂದ 8.5% ಬಡ್ಡಿ ದರ ನೀಡಲಾಗುತ್ತದೆ.

4. ಸದ್ಯಕ್ಕೆ ಪಿಪಿಎಫ್ ಬಡ್ಡಿ ದರ 7.1% ಇದೆ.

5. ವಿಪಿಎಫ್/ಇಪಿಎಫ್ ದರ ಪ್ರತಿ ಆರ್ಥಿಕ ವರ್ಷದ ಕೊನೆಗೆ ಪರಿಷ್ಕರಣೆ ಆಗುತ್ತದೆ ಮತ್ತು ಪಿಪಿಎಫ್ ದರ ತ್ರೈಮಾಸಿಕವಾಗಿ ಪರಿಷ್ಕರಿಸಲಾಗುತ್ತದೆ.

VPF ಆರಿಸಿಕೊಳ್ಳುವುದು ಏಕೆ ಉತ್ತಮ? ಗೊತ್ತಿರಬೇಕಾದ 10 ಸಂಗತಿ

6. ವಿಪಿಎಫ್ ಗೆ ನೀಡುವ ಕೊಡುಗೆಗೆ 80C ಅಡಿಯಲ್ಲಿ ತೆರಿಗೆ ವಿನಾಯಿತಿ ದೊರೆಯುತ್ತದೆ.

7. ತೆರಿಗೆ ಕಾನೂನಿನ ಪ್ರಕಾರ ವಿಪಿಎಫ್ ಮೇಲಿನ ಬಡ್ಡಿ ದರ ಹಾಗೂ ಮೆಚ್ಯೂರಿಟಿ ಮೊತ್ತಕ್ಕೆ ತೆರಿಗೆ ಇಲ್ಲ. ವಿಪಿಎಫ್ ಹಣ ವಿಥ್ ಡ್ರಾ ನಿಯಮಗಳು ಇಪಿಎಫ್ ನಂತೆಯೇ ಇದೆ.

8. ವಿಪಿಎಫ್ ಅನ್ನು ನಿರಂತರ ಐದು ವರ್ಷಗಳ ಸೇವೆ ಪೂರ್ಣಗೊಳಿಸದೆ ವಿಥ್ ಡ್ರಾ ಮಾಡಿದರೆ ತೆರಿಗೆ ಬೀಳುತ್ತದೆ.

9. ಯೂನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ವಿಪಿಎಫ್ ಜತೆ ಜೋಡಣೆ ಮಾಡಲಾಗಿರುತ್ತದೆ. ಆದ್ದರಿಂದ ಉದ್ಯೋಗ ಬದಲಾವಣೆ ಮಾಡಿದಾಗ ವಿಪಿಎಫ್ ಅನ್ನು ಕೂಡ ವರ್ಗಾವಣೆ ಮಾಡಿಕೊಳ್ಳಬಹುದು.

English summary

Why VPF Good Option For Investment? 10 Things You Must Know

Why Voluntary Provident Fund (VPF) is a good option for investment? 10 things you must know.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X