For Quick Alerts
ALLOW NOTIFICATIONS  
For Daily Alerts

ನಗದು ರಹಿತ ವ್ಯವಹಾರ ಹೇಗೆ? ಇಲ್ಲಿವೆ 6 ಮಾರ್ಗ

ಕೈಯಲ್ಲಿ ನಗದು ಇಲ್ಲದೆ ಬ್ಯಾಂಕ್ ಆಪ್, ಇ-ವಾಲೆಟ್, ಮೊಬೈಲ್ ವಾಲೆಟ್, ಕ್ರೆಡಿಟ್ ಕಾರ್ಡ್ ಬಳಸಿ ಬಿಲ್ ಪಾವತಿ ಮಾಡಬಹುದಾಗಿದೆ.

By Siddu
|

ನವೆಂಬರ್ 8ರ ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ಮತ್ತು ಖೋಟಾನೋಟು ತಡೆಗಾಗಿ ರೂ. 500, 1000 ನೋಟುಗಳ ನಿಷೇಧವನ್ನು ಪ್ರಕಟಿಸಿದರು. ಸಾರ್ವಜನಿಕರು ನಗದು ವಿನಿಮಯ, ಬಿಲ್ ಪಾವತಿ, ದಿನನಿತ್ಯದ ಖರ್ಚುವೆಚ್ಚಕ್ಕಾಗಿ ನಗದು ಇಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ.

 

ಕೈಯಲ್ಲಿ ಹಣ ಇಲ್ಲದೆ ವ್ಯವಹಾರ ಮಾಡಬಹುದೆ ಎಂಬ ಪ್ರಶ್ನೆ ನಮಗೆ ಎದುರಾಗದೆ ಇರದು. ಹೀಗಾಗಿ ನಮ್ಮ ಬಳಿ ನಗದು ಇಲ್ಲದಿದ್ದರೂ ಕೂಡ ವ್ಯವಹಾರ ಮಾಡಬಹುದಾಗಿದೆ.ಬೆಸ್ಟ್ ಮೊಬೈಲ್ ವಾಲೆಟ್ ಆಪ್ ಯಾವವು ಗೊತ್ತೆ?

ಕೈಯಲ್ಲಿ ನಗದು ಇಲ್ಲದೆ ಬ್ಯಾಂಕ್ ಆಪ್, ಇ-ವಾಲೆಟ್, ಮೊಬೈಲ್ ವಾಲೆಟ್, ಕ್ರೆಡಿಟ್ ಕಾರ್ಡ್ ಬಳಸಿ ಬಿಲ್ ಪಾವತಿ ಮಾಡಬಹುದಾಗಿದೆ. ಅವುಗಳ ವಿವರ ಇಲ್ಲಿದೆ ನೋಡಿ...

1. ಮೊಬೈಲ್ ವಾಲೆಟ್

1. ಮೊಬೈಲ್ ವಾಲೆಟ್

ಬ್ಯಾಂಕ್ ಗ್ರಾಹಕರು ತಮ್ಮ ಬಳಿ ನಗದು ಇಲ್ಲದಿದ್ದರೂ ಬಿಲ್ ಪಾವತಿ, ಪ್ರೀಮಿಯಂ ಪಾವತಿಯನ್ನು ಮೊಬೈಲ್/ಎಲೆಕ್ಟ್ರಾನಿಕ್ ವಾಲೆಟ್ ಮೂಲಕ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಬೇಕು. ಅಗತ್ಯ ಇದ್ದಾಗ ಇದನ್ನು ಬಳಸಬಹುದಾಗಿದ್ದು, ಸುರಕ್ಷಿತವಾದ ವಿಧಾನವಾಗಿದೆ.
ಮೊಬೈಲ್ ವಾಲೆಟ್ ಮೂಲಕ ಬಿಲ್ ಪಾವತಿ ಮಾಡುವಾಗ ಎಲ್ಲ ವಿವರಗಳನ್ನು ನಮೂದಿಸಬೇಕಾದ ಅಗತ್ಯ ಇಲ್ಲ. ಒಂದು ಬಾರಿ ಆಪ್ ಡೌನ್ಲೋಡ್ ಮಾಡಿದ ನಂತರ ದಿನಸಿ, ಮೊಬೈಲ್ ರಿಚಾರ್ಜ್, ಟಿಕೆಟ್ ಬುಕಿಂಗ್ ವ್ಯವಹಾರ ಮಾಡಬಹುದು.
ಪೇಟಿಎಂ, ಫ್ರೀಚಾರ್ಜ್, ಮೊಬಿಕ್ವಿಕ್, ಆಕ್ಸಿಜನ್, ಸಿಟ್ರಸ್ ಮುಂತಾದ ಪ್ರಸಿದ್ದ ಮೊಬೈಲ್ ವಾಲೆಟ್ ಗಳ ಮುಖಾಂತರ ನಗದು ರಹಿತ ವ್ಯವಹಾರ ಮಾಡಬಹುದು.

2. ಬ್ಯಾಂಕ್ ಆಪ್

2. ಬ್ಯಾಂಕ್ ಆಪ್

ಬ್ಯಾಂಕುಗಳು ನಗದು ರಹಿತ ವ್ಯವಹಾರ ಪ್ರೋತ್ಸಾಹಿಸಿದ್ದು, ಎಸ್ಬಿಐ, ಐಸಿಐಸಿಐ, ಎಚ್ಡಿಎಫ್ಸಿ, ಯೆಸ್ ಬ್ಯಾಂಕ್ ಗಳು ಆಪ್ ಗಳನ್ನು ಬಿಡುಗಡೆಗೊಳಿಸಿವೆ.
ಆಪ್ ಸ್ಟೋರ್ ನಿಂದ ಬ್ಯಾಂಕ್ ಆಪ್ ಡೌನ್ಲೋಡ್ ಮಾಡಿ ಒಂದು ಸಲ ಬ್ಯಾಂಕ್ ವಿವರ ನಮೂದಿಸಿದರೆ ಸಾಕು. ನೆಟ್ ಬ್ಯಾಂಕಿಂಗ್ ಮೂಲಕ ಬಿಲ್ ಪಾವತಿ ಮಾಡಬಹುದು. ಹಣ ವರ್ಗಾವಣೆ, ಮೊಬೈಲ್, ಡಿಟಿಎಚ್ ರಿಚಾರ್ಜ್, ಡೆಟಾ ಕಾರ್ಡ್ ರಿಚಾರ್ಜ್ ಗಾಗಿ ಇದನ್ನು ಬಳಸಬಹುದು.
ಎಚ್ಡಿಎಫ್ಸಿ-ಪೇಜಾಪ್, ಎಸ್ಬಿಐ-ಬಡ್ಡಿ, ಐಸಿಐಸಿಐ-ಪಾಕೆಟ್ಸ್ ಇವು ಪ್ರಸಿದ್ದ ಬ್ಯಾಂಕ್ ಆಪ್ ಗಳಾಗಿವೆ.

3. ಯುಪಿಐ
 

3. ಯುಪಿಐ

ಯುಪಿಐ ಮೂಲಕ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಸರಳವಾಗಿ ಮಾಡಬಹುದು. ನಿಮ್ಮ ಸ್ಮಾರ್ಟ್ ಫೋನ್ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ, ಘಟಕದಿಂದ ಘಟಕಕ್ಕೆ, ವ್ಯಕ್ತಿಯಿಂದ ಘಟಕಕ್ಕೆ ಫಂಡ್ ವರ್ಗಾವಣೆ ಅಥವಾ ಬಿಲ್ ಪಾವತಿ ಮಾಡಲು ಸಾದ್ಯ. ಇಲ್ಲಿಯವರೆಗೆ 29 ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಯುಪಿಐ ಸೌಲಭ್ಯ ನೀಡಲು ಒಪ್ಪಿವೆ.

4. RTGS, NEFT

4. RTGS, NEFT

ಆನ್ಲೈನ್ ಮೂಲಕ ಫಂಡ್ ವರ್ಗಾವಣೆಗಾಗಿ ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್(RTGS) ವ್ಯವಸ್ಥೆಯನ್ನು ಗ್ರಾಹಕರು ಬಳಸಬಹುದು. ರೂ. 2 ಲಕ್ಷ ಕನಿಷ್ಟ ಮೊತ್ತ ಹಾಗೂ ರೂ. 10 ಲಕ್ಷ ಗರಿಷ್ಠ ಮೊತ್ತ ವರ್ಗಾವಣೆ ಮಾಡಬಹುದು.
NEFT ಸೌಲಭ್ಯ ಬಳಸಿ ಎಷ್ಟು ಬೇಕಾದರೂ ಮೊತ್ತವನ್ನು ವರ್ಗಾವಣೆ ಮಾಡಬಹುದು. ಇದಕ್ಕೆ ಕನಿಷ್ಟ ಅಥವಾ ಗರಿಷ್ಠ ಮಿತಿ ಇರುವುದಿಲ್ಲ.

5. IMPS(ಇಮ್ಮಿಡಿಯಟ್ ಪೇಮೆಂಟ್ ಸಿಸ್ಟಮ್)

5. IMPS(ಇಮ್ಮಿಡಿಯಟ್ ಪೇಮೆಂಟ್ ಸಿಸ್ಟಮ್)

ಮೂಲಭೂತವಾಗಿ ಮೊಬೈಲ್ ಫೋನ್ ಬಳಸಿ ಹಣ ವರ್ಗಾವಣೆ ಮಾಡಬಹುದು. ಎಸ್ಬಿಐ, ಐಸಿಐಸಿಐ, ಎಕ್ಸಿಸ್ ಬ್ಯಾಂಕ್ ಗಳು IMPS ಸೇವೆಯನ್ನು ಒದಗಿಸುತ್ತಿವೆ.
ಎಸ್ಬಿಐ ಖಚಿತವಾದ ಮಿತಿಗಳನ್ನು ಹೊಂದಿದ್ದು, ಒಂದು ದಿನಕ್ಕೆ ಒಬ್ಬ ಫಲಾನುಭವಿಗೆ ಮಾತ್ರ ಅವಕಾಶವಿದೆ.

6. ಕ್ರೆಡಿಟ್/ಡೆಬಿಟ್ ಕಾರ್ಡ್

6. ಕ್ರೆಡಿಟ್/ಡೆಬಿಟ್ ಕಾರ್ಡ್

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗಳನ್ನು ಬಳಸಿ ಬಿಲ್ ಗಳನ್ನು ಪಾವತಿಸುವುದು ಸರಳ ಮತ್ತು ಉತ್ತಮ ವಿಧಾನ. ಇದರಿಂದ ಸಮಯದ ಉಳಿತಾಯ ಆಗುತ್ತದೆ ಎಲ್ಲದೆ ಎಟಿಎಂ/ಬ್ಯಾಂಕ್ ನಿಂದ ಹಣ ವಿತ್ ಡ್ರಾ ಮಾಡಬೇಕಿಲ್ಲ.
ಡೆಬಿಟ್ ಕಾರ್ಡ್ ವ್ಯವಹಾರಕ್ಕೆ ಮಿತಿ ಇದ್ದು, ನಿಮ್ಮ ಬ್ಯಾಂಕಿನೊಂದಿಗೆ ಪರಿಶೀಲಿಸಿ ಮಿತಿಗಳನ್ನು ತಿಳಿದುಕೊಳ್ಳಿ. ಇದು ಬೇರೆ ಬೇರೆ ವಿಧದ ಕಾರ್ಡುಗಳಿಗೂ ಅನ್ವಯವಾಗುತ್ತದೆ.

English summary

Payment Methods if You Are Having No Cash

Historical reform in India which was announced on 08th Nov, 2016 of banning the Rs. 500 & 1000 note is being welcomed across the country.As the major step has been taken to move towards cashless economy, it is time to choose alternate payment methods.
Story first published: Thursday, November 24, 2016, 10:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X