For Quick Alerts
ALLOW NOTIFICATIONS  
For Daily Alerts

ಇಪಿಎಫ್ ಜಮೆಯಾಗಲು ಎಷ್ಟು ಸಮಯವಾಗಲಿದೆ?

|

ಉದ್ಯೋಗಿಗಳ ಭವಿಷ್ಯ ನಿಧಿಯು ಕೇಂದ್ರ ಸರ್ಕಾರ ಪರಿಚಯಿಸಿರುವ ಯೋಜನೆಯಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಇಪಿಎಫ್‌ ಅನ್ನು ನಿರ್ವಹಣೆ ಮಾಡುತ್ತದೆ. ಈ ಯೋಜನೆಯು ನಿವೃತ್ತಿ ಸಂದರ್ಭದಲ್ಲಿ ಸಹಕಾರಿಯಾಗಲಿದೆ.

ಈ ಹಿಂದಿನಂತಲ್ಲ, ಪ್ರಸ್ತುತ ನಾವು ಇಪಿಎಫ್ ಹಣವನ್ನು ಯಾವುದೇ ಸಂದರ್ಭದಲ್ಲಿ ಹಿಂದಕ್ಕೆ ಪಡೆಯಲು ಸಾಧ್ಯವಾಗಲಿದೆ. ಆನ್‌ಲೈನ್ ಮೂಲಕ ಈ ಕಾರ್ಯ ಸಾಧ್ಯವಾಗಲಿದೆ. ನಾವು ನಿವೃತ್ತಿಗೂ ಮುನ್ನವೇ ಹಣವನ್ನು ಹಿಂದಕ್ಕೆ ಪಡೆಯಲು ಸಾಧ್ಯವಾಗಲಿದೆ.

ಟಿಡಿಎಸ್ ಹೆಚ್ಚುವರಿ ತಪ್ಪಿಸಲು ಶೀಘ್ರ ಪ್ಯಾನ್-ಇಪಿಎಫ್ ಲಿಂಕ್ ಮಾಡಿಟಿಡಿಎಸ್ ಹೆಚ್ಚುವರಿ ತಪ್ಪಿಸಲು ಶೀಘ್ರ ಪ್ಯಾನ್-ಇಪಿಎಫ್ ಲಿಂಕ್ ಮಾಡಿ

ಈ ವಿತ್‌ಡ್ರಾ ಪ್ರಕ್ರಿಯೆ ಕೊಂಚ ದೀರ್ಘ ಆಗಲಿದೆ. ಹಾಗೆಯೇ ಕೆಲವು ಷರತ್ತುಗಳು ಇರಲಿದೆ. ಆದರೆ ಒಮ್ಮೆ ನಾವು ಇಪಿಎಫ್ ಹಣವನ್ನು ವಿತ್‌ಡ್ರಾ ಮಾಡಿದ ಬಳಿಕ ಅದು ನಮ್ಮ ಖಾತೆಗೆ ಜಮೆ ಆಗಲು ಎಷ್ಟು ಸಮಯ ಬೇಕಾಗುತ್ತದೆ?, ಇಪಿಎಫ್‌ ಹಣವನ್ನು ಯಾವಾಗ, ಹೇಗೆ ವಿತ್‌ಡ್ರಾ ಮಾಡುವುದು?, 2022ರ ಪ್ರಕಾರ ಇಪಿಎಫ್ ನಿಯಮ ಹೇಗಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಇಪಿಎಫ್‌ ಹಣ ವಿತ್‌ಡ್ರಾ ಆಗಲು ಎಷ್ಟು ಸಮಯಬೇಕಾಗುತ್ತದೆ?

ಇಪಿಎಫ್‌ ಹಣ ವಿತ್‌ಡ್ರಾ ಆಗಲು ಎಷ್ಟು ಸಮಯಬೇಕಾಗುತ್ತದೆ?

ಪ್ರಾವಿಡೆಂಟ್ ಫಂಡ್ ಖಾತೆಯನ್ನು ತೆರೆದ ಬಳಿಕ ಇಪಿಎಫ್ ಹಣವನ್ನು ವಿತ್‌ಡ್ರಾ ಮಾಡುವುದು ಕೊಂಚ ದೀರ್ಘ ಪ್ರಕ್ರಿಯೆಯಾಗಿದೆ. ನಾವು ಒಂದು ಬಾರಿ ಹಣವನ್ನು ವಿತ್‌ಡ್ರಾ ಮಾಡಿದ ಬಳಿಕ ಆ ಹಣ ನಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಲು ಎಷ್ಟು ಸಮಯ ಬೇಕಾಗುತ್ತದೆ ಅಥವಾ ಯಾವ ದಿನದಂದು ಜಮೆ ಆಗಲಿದೆ ಎಂಬುವುದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸಾಮಾನ್ಯವಾಗಿ ಸುಮಾರು 5ರಿಂದ 30 ದಿನಗಳಲ್ಲಿ ಇಪಿಎಫ್ ಹಣವು ನಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ.

ನಿಮ್ಮ ಸಂಸ್ಥೆ ಪಿಎಫ್ ಮೊತ್ತ ಜಮೆ ಮಾಡುತ್ತಿದೆಯೇ, ಹೀಗೆ ಚೆಕ್ ಮಾಡಿನಿಮ್ಮ ಸಂಸ್ಥೆ ಪಿಎಫ್ ಮೊತ್ತ ಜಮೆ ಮಾಡುತ್ತಿದೆಯೇ, ಹೀಗೆ ಚೆಕ್ ಮಾಡಿ

 ಇಪಿಎಫ್‌ ಹಣವನ್ನು ಯಾವಾಗ, ಹೇಗೆ ವಿತ್‌ಡ್ರಾ ಮಾಡುವುದು?

ಇಪಿಎಫ್‌ ಹಣವನ್ನು ಯಾವಾಗ, ಹೇಗೆ ವಿತ್‌ಡ್ರಾ ಮಾಡುವುದು?

ಇಪಿಎಫ್ ಅನ್ನು ನಾವು ನಮ್ಮ ನಿವೃತ್ತಿ ಸಂದರ್ಭದಲ್ಲಿ ಅಥವಾ ಇತರೆ ಅಗತ್ಯ ಕಾರ್ಯಗಳ ಸಂದರ್ಭದಲ್ಲಿ ಮಾತ್ರ ಹಿಂದಕ್ಕೆ ಪಡೆಯಲು ಸಾಧ್ಯವಾಗಲಿದೆ. ನಾವು ಇಪಿಎಫ್ ಅನ್ನು ವಿತ್‌ಡ್ರಾ ಮಾಡಲು ಎರಡು ವಿಧಾನಗಳು ಇದೆ. ನಾವು ಆನ್‌ಲೈನ್ ಮೂಲಕ ಅಥವಾ ಖುದ್ದಾಗಿ ನಾವೇ ಪಿಎಫ್ ಕಚೇರಿಗೆ ಭೇಟಿ ನೀಡುವ ಮೂಲಕ ಇಪಿಎಫ್‌ ಅನ್ನು ವಿತ್‌ಡ್ರಾ ಮಾಡಲು ಸಾಧ್ಯವಾಗಲಿದೆ. ನಾವು ಕಚೇರಿಗೆ ಹೋಗಿ ಇಪಿಎಫ್ ಹಣವನ್ನು ಹಿಂದಕ್ಕೆ ಪಡೆಯುವುದಾದರೆ ಹಲವಾರು ಅರ್ಜಿಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅದನ್ನು ಇಪಿಎಫ್‌ಒ ಕಚೇರಿಗೆ ಸಲ್ಲಿಕೆ ಮಾಡಬೇಕಾಗುತ್ತದೆ. ಇನ್ನು ಆನ್‌ಲೈನ್ ಮೂಲಕ ಇಪಿಎಫ್ ಹಣವನ್ನು ವಿತ್‌ಡ್ರಾ ಮಾಡುವುದಾದರೆ ನಮ್ಮ ಯುಎಎನ್ ಸಕ್ರಿಯವಾಗಿರಬೇಕಾಗುತ್ತದೆ. ಯುಎಎನ್ ನಮ್ಮ ಕೆವೈಸಿಗೆ ಲಿಂಕ್ ಆಗಿರಬೇಕಾಗುತ್ತದೆ. ಆನ್‌ಲೈನ್ ವಿತ್‌ಡ್ರಾ ನಮಗೆ ಇಪಿಎಫ್ ಹಣವನ್ನು ಸುಲಭವಾಗಿ ವಿತ್‌ಡ್ರಾ ಮಾಡಲು ಸಹಕಾರಿ ಆಗಿದೆ. 

 2022ರ ಪ್ರಕಾರ ಇಪಿಎಫ್ ನಿಯಮ

2022ರ ಪ್ರಕಾರ ಇಪಿಎಫ್ ನಿಯಮ

* ಕನಿಷ್ಠ 15 ಸಾವಿರ ರೂಪಾಯಿ ವೇತನವನ್ನು ಹೊಂದಿರುವವರು ಮಾತ್ರ ಇಪಿಎಫ್ ಖಾತೆಯ್ನು ಹೊಂದುವ ಅರ್ಹತೆಯನ್ನು ಹೊಂದಿದ್ದಾರೆ.
* ಕೆಲಸ ಮತ್ತು ಸಂಸ್ಥೆಯನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ಪಿಎಫ್ ಖಾತೆಯನ್ನು ಬದಲಾವಣೆ ಮಾಡಬೇಕಾಗಿಲ್ಲ.
* ಎಲ್ಲ ಉದ್ಯೋಗಿಗಳ ವಯಸ್ಸು 54 ಅಥವಾ ಅದಕ್ಕಿಂತ ಅಧಿಕವಾದಾಗ ಸುಮಾರು ಶೇಕಡ 90ರಷ್ಟು ಇಪಿಎಫ್ ಹಣವನ್ನು ವಿತ್‌ಡ್ರಾ ಮಾಡಬಹುದು.
* 3 ವರ್ಷಕ್ಕಿಂತ ಅಧಿಕ ಅವಧಿ ಪಿಎಫ್ ಖಾತೆಗೆ ಯಾವುದೇ ಹಣ ಜಮೆ ಆಗದಿದ್ದರೆ ಬಡ್ಡಿದರವನ್ನು ಜಮೆ ಮಾಡಲಾಗುವುದಿಲ್ಲ
* 20 ಅಥವಾ ಅದಕ್ಕಿಂತ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಯು ಇಪಿಎಫ್‌ಒ ನಿಯಮದ ಪ್ರಕಾರ ರಿಜಿಸ್ಟರ್ ಆಗಿರಬೇಕು.

English summary

How Long Does It Take For EPF To Be Credited, Here's Details

Employee Provident Fund is a scheme introduced by the government to provide the employees a source of the fund once a retire. How Long Does It Take For EPF To Be Credited, Here's Details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X