Voter ID card Aadhaar linking: ವೋಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ಎಲ್ಲಾ ಪ್ರಮುಖ ದಾಖಲೆಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಈಗ ಕಡ್ಡಾಯವೆಂಬಂತೆ ಆಗಿದೆ. ನಮ್ಮ ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಹೀಗೆ ಮೊದಲಾದ ಎಲ್ಲಾ ಪ್ರಮುಖ ದಾಖಲೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುಲು ಆಯಾ ಇಲಾಖೆಗಳು ಸೂಚನೆ ನೀಡುತ್ತಾ ಬಂದಿದೆ.
ಈ ನಡುವೆ ಭಾರತದ ಚುನಾವಣಾ ಆಯೋಗವು ವೋಟರ್ ಐಡಿ ಅಥವಾ ಮತದಾರರ ಪತ್ರದೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದಕ್ಕೆ ಹೆಚ್ಚು ಆಧ್ಯತೆ ನೀಡುತ್ತಿದೆ. ಇದಕ್ಕಾಗಿ ಕ್ಯಾಂಪೇನ್ ಅನ್ನು ಕೂಡಾ ಚುನಾವಣಾ ಆಯೋಗ ಆರಂಭ ಮಾಡಿದೆ.
ಗಮನಿಸಿ: ಆಧಾರ್ ಅಪ್ಡೇಟ್, ವೇರಿಫಿಕೇಶನ್ಗೆ ಯಾವ ದಾಖಲೆ ಬೇಕು?
ನಮ್ಮ ವೋಟರ್ ಐಡಿಗೆ ನಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದಾಗಿ ಮತದಾರರ ಪಟ್ಟಿಯಲ್ಲಿ ಡಬಲ್ ಎಂಟ್ರಿಯನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ. ಡುಬ್ಲಿಕೇಟ್ ಎಂಟ್ರಿಯನ್ನು ತಪ್ಪಿಸಲು ಹೊಸ ಫಾರ್ಮ್ 6B ಅನ್ನು ನೀಡಲಾಗುತ್ತದೆ.

ಒಬ್ಬ ವ್ಯಕ್ತಿಯ ಹೆಸರು ಒಂದಕ್ಕಿಂತ ಅಧಿಕ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಇದ್ದರೆ ಅಥವಾ ಒಂದೇ ಕ್ಷೇತ್ರದಲ್ಲಿ ಎರಡು ಬಾರಿ ಎಂಟ್ರಿಯಾಗಿದ್ದರೆ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಆಧಾರ್ ಲಿಂಕಿಂಗ್ ಅನ್ನು ಮಾಡಲಾಗುತ್ತದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಲೋಕ ಸಭೆ ಚುನಾವಣಾ ನಿಯಮ (ತಿದ್ದುಪಡಿ) ಮಸೂದೆಯನ್ನು ಅನುಮೋದನೆ ಮಾಡಿದೆ. ಈ ತಿದ್ದುಪಡಿಯು ನಮ್ಮ ವೋಟರ್ ಐಡಿಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಹಾಗಾದರೆ ನಮ್ಮ ವೋಟರ್ ಐಡಿಗೆ ಆಧಾರ್ ಅನ್ನು ಹೇಗೆ ಲಿಂಕ್ ಮಾಡುವುದು ಎಂದು ತಿಳಿಯೋಣ ಮುಂದೆ ಓದಿ...
ವೋಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಹೀಗೆ ಮಾಡಿ
ಹಂತ ಒಂದು: ರಾಷ್ಟ್ರೀಯ ಮತದಾರರ ಅಧಿಕೃತ ಸೇವಾ ಪೋರ್ಟಲ್ ಆದ NVSP.in ಗೆ ಲಾಗಿನ್ ಆಗಿ
ಹಂತ ಎರಡು: ನಿಮ್ಮ ಎನ್‌ವಿಎಸ್‌ಪಿ ಖಾತೆಗೆ ಲಾಗಿನ್ ಆಗಿ
ಹಂತ ಮೂರು: ಸೈನ್ ಇನ್ ಆದ ಬಳಿಕ Search in Electoral Roll ಮೇಲೆ ಕ್ಲಿಕ್ ಮಾಡಿ
ಹಂತ ನಾಲ್ಕು: ವೋಟರ್ ಐಡಿ ಸರ್ಚ್ ಮಾಡಲು ನಿಮ್ಮ ವೈಯಕ್ತಿಕ ಮಾಹಿತಿ ನಮೂದಿಸಿ
ಹಂತ ಐದು: ಆಧಾರ್ ಮಾಹಿತಿಯನ್ನು ಭರ್ತಿ ಮಾಡಿ
ಹಂತ ಆರು: ಆಧಾರ್‌ನೊಂದಿಗೆ ಲಿಂಕ್ ಮೊಬೈಲ್‌ಗೆ ಒಟಿಪಿ ಬರಲಿದೆ
ಹಂತ ಏಳು: ಈ ಒಟಿಪಿಯನ್ನು ಹಾಕಿ ಐಡಿಂಡಿಟಿ ದೃಢೀಕರಣ ಮಾಡಿ
ನಿಮ್ಮ ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ ಆದ ಬಳಿಕ ನಿಮಗೆ ಈ ಬಗ್ಗೆ ಮೆಸೇಜ್ ಬರಲಿದೆ.