For Quick Alerts
ALLOW NOTIFICATIONS  
For Daily Alerts

ಆಧಾರ್ ನಿಯಮ ಉಲ್ಲಂಘಿಸುವವರಿಗೆ 1 ಕೋಟಿ ದಂಡ, ಆಧಾರ್ ಕಾಯಿದೆ ತಿದ್ದುಪಡಿ!

ಆಧಾರ್ ಕಾಯಿದೆಯ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳಿಗೆ ರೂ. 1 ಕೋಟಿ ದಂಡ ಹಾಗೂ ತದನಂತರದಲ್ಲೂ ನಿರ್ಲಕ್ಷ್ಯ ತಾಳಿದರೆ ಪ್ರತಿ ದಿನಕ್ಕೆ ರೂ. 10 ಲಕ್ಷದಂತೆ ಹೆಚ್ಚುವರಿ ಶುಲ್ಕ ವಿಧಿಸುವುದಾಗಿ ಸರ್ಕಾರ ಖಡಕ್ ಸೂಚನೆ ನೀಡಿದೆ.

|

ಆಧಾರ್ ನಿಯಮ ಉಲ್ಲಂಘಿಸುವವರ ವಿರುದ್ದ ಕಾನೂನು ಕೈಗೊಳ್ಳಲು ಸರ್ಕಾರ ಸಜ್ಜಾಗಿದೆ.

ಆಧಾರ್ ಕಾಯಿದೆಯ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳಿಗೆ ರೂ. 1 ಕೋಟಿ ದಂಡ ಹಾಗೂ ತದನಂತರದಲ್ಲೂ ನಿರ್ಲಕ್ಷ್ಯ ತಾಳಿದರೆ ಪ್ರತಿ ದಿನಕ್ಕೆ ರೂ. 10 ಲಕ್ಷದಂತೆ ಹೆಚ್ಚುವರಿ ಶುಲ್ಕ ವಿಧಿಸುವುದಾಗಿ ಸರ್ಕಾರ ಖಡಕ್ ಸೂಚನೆ ನೀಡಿದೆ.

ಆಧಾರ್ ಕಾಯಿದೆ ಬದಲಾವಣೆ

ಆಧಾರ್ ಕಾಯಿದೆ ಬದಲಾವಣೆ

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ (ಯುಐಡಿಎಐ) ಆಧಾರ್ ಕಾಯಿದೆ ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನೀಡಲು ಸರ್ಕಾರ ನಿರ್ಧರಿಸಿದ್ದು, ಆಧಾರ್‌ ಕಾಯಿದೆಗೆ ಬದಲಾವಣೆ ತರಲಿದೆ. ಈ ಉದ್ದೇಶಿತ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಬುಧವಾರ ಮಂಡನೆಯಾಗುವ ಸಾಧ್ಯತೆ ಇದೆ.
ವರ್ಚುವಲ್‌ ಐಡಿ ಹಾಗೂ ಆಫ್‌ಲೈನ್‌ ಮೂಲಕವೂ ಆಧಾರ್ ಬಳಕೆಗೆ ಪ್ರಸ್ತಾವಿತ ವಿಧೇಯಕದಲ್ಲಿ ಅನುಮತಿ ಕಲ್ಪಿಸಲಾಗಿದೆ. ಮುಖ್ಯವಾಗಿ ಆಧಾರ್ ಕಾಯಿದೆಯಡಿ ಯುಐಡಿಎಐ ನಿಧಿ ಸ್ಥಾಪಿಸುವ ಉದ್ದೇಶವಿದೆ.

122 ಕೋಟಿ ಜನರಿಗೆ ಆಧಾರ್

122 ಕೋಟಿ ಜನರಿಗೆ ಆಧಾರ್

ದೇಶಾದ್ಯಂತ 122 ಕೋಟಿಗಿಂತ ಹೆಚ್ಚಿನ ಜನರಿಗೆ ಆಧಾರ್‌ ವಿತರಿಸಲಾಗಿದ್ದು, ಆಧಾರ್ ದುರ್ಬಳಕೆಯಾಗದಂತೆ ನೋಡಿಕೊಳ್ಳಲು ಯುಐಡಿಎಐಗೆ ನಿಯಂತ್ರಣ ಅಧಿಕಾರ ನೀಡಲು ಸರಕಾರ ಮುಂದಾಗಿದೆ.

ಆಧಾರ್ ಸಂಖ್ಯೆ ರದ್ದುಪಡಿಗೆ ಅವಕಾಶ

ಆಧಾರ್ ಸಂಖ್ಯೆ ರದ್ದುಪಡಿಗೆ ಅವಕಾಶ

ಮಕ್ಕಳು 18 ವರ್ಷ ತುಂಬಿದ ಆರು ತಿಂಗಳ ಒಳಗಾಗಿ ಅವನು/ಅವಳಿಗೆ ತಮ್ಮ ಪೋಷಕರು ಮಾಡಿಸಿದ 12 ಸಂಖ್ಯೆಯ ಆಧಾರ್ ರದ್ದುಪಡಿಸಿಕೊಳ್ಳುವ ಅವಕಾಶ ತಿದ್ದುಪಡಿ ವಿಧೇಯಕದಲ್ಲಿ ಕಲ್ಪಿಸಲಾಗಿದೆ. ಇದಲ್ಲದೇ ಆಧಾರ್ ಇಲ್ಲದಕ್ಕೆ ಯಾವುದೇ ಮಗುವಿಗೆ ಸಬ್ಸಿಡಿ ಮತ್ತು ಸರ್ಕಾರಿ ಯೋಜನೆಯ ಲಾಭಗಳನ್ನು ನಿರಾಕರಿಸುವಂತಿಲ್ಲ.

Read more about: ಆಧಾರ್ aadhar money
English summary

Rs. 1 Crore Fine For Failing To Comply With Aadhar Act Norms

The government has proposed a penalty of up to Rs. 1 crore on entities that violate the provisions of the Aadhaar Act.
Story first published: Wednesday, January 2, 2019, 12:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X