For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನ ಶೇಕಡಾ 75ಕ್ಕಿಂತ ಹೆಚ್ಚಿನ ಮನೆ ಮಾಲೀಕರು, ತಮ್ಮ ನಿವಾಸದ ಬೆಲೆ ಹೆಚ್ಚಿಸುವ ನಿರೀಕ್ಷೆ!

|

ಕೋವಿಡ್-19 ಸಾಂಕ್ರಾಮಿಕವು ಜನರ ದೈನಂದಿನ ಜೀವನ ಶೈಲಿಯನ್ನೇ ಬದಲಾಯಿಸಿಬಿಟ್ಟಿದೆ. ಐಟಿ ವಲಯದಲ್ಲಿ ಕೆಲಸ ಮಾಡುವ ಬಹುತೇಕ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ, ಇದರ ನಡುವೆ ಕೋವಿಡ್ ನಡುವೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಜನರು ಇದ್ದಾರೆ.

ಕೊರೊನಾದಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಹೊರ ಹೋದವರ ಸಂಖ್ಯೆ ಏನು ಕಡಿಮೆ ಏನಿಲ್ಲ. ಇಷ್ಟಾದರೂ ಬೆಂಗಳೂರಿನ ವ್ಯಾಪಾರ-ವಹಿವಾಟು ಏನು ತಗ್ಗಿಲ್ಲ. ನೈಟ್ ಫ್ರಾಂಕ್ ಇಂಡಿಯಾ, ಒಂದು ಪ್ರಮುಖ ಅಂತಾರಾಷ್ಟ್ರೀಯ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ, ನೈಟ್ ಫ್ರಾಂಕ್ ಇಂಡಿಯಾ ಪ್ರಕಾರ " ಬೆಂಗಳೂರಿನ 75% ರಷ್ಟು ಜನರು ತಮ್ಮ ಪ್ರಾಥಮಿಕ ನಿವಾಸದ ಮೌಲ್ಯವು ಮುಂದಿನ 12 ತಿಂಗಳಲ್ಲಿ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಿದ್ದಾರೆ . ಅದೇ ಅವಧಿಯಲ್ಲಿ, ಸುಮಾರು 47% ಜನರು ಎರಡನೇ ಮನೆಯನ್ನು ಖರೀದಿಸಲು ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.''

ಮನೆ ಬೆಲೆ ಹೆಚ್ಚಾಗುತ್ತದೆ ಎಂಬ ನಿರೀಕ್ಷೆ

ಮನೆ ಬೆಲೆ ಹೆಚ್ಚಾಗುತ್ತದೆ ಎಂಬ ನಿರೀಕ್ಷೆ

ಪ್ರಮುಖ ಅಂತಾರಾಷ್ಟ್ರೀಯ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ನೈಟ್ ಫ್ರಾಂಕ್ ಇಂಡಿಯಾ ಪ್ರಕಾರ, ಮನೆ ಮೌಲ್ಯಕ್ಕೆ ಸಂಬಂಧಿಸಿದಂತೆ ಮುಂದಿನ 12 ತಿಂಗಳಿನಲ್ಲಿ ನಗರದ 38% ಜನರು ತಮ್ಮ ಪ್ರಸ್ತುತ ನಿವಾಸದ ಬೆಲೆಯು 10% ರಿಂದ 19% ನಡುವೆ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಿದ್ದಾರೆ. ಸಾಂಕ್ರಾಮಿಕ ರೋಗದ ನಡುವೆಯು ಅವರ ಪ್ರಾಥಮಿಕ ನಿವಾಸದ ಮೌಲ್ಯದಲ್ಲಿನ ಹೆಚ್ಚಳವನ್ನು ಗಮಿನಿಸಿದ್ದು, ಖರೀದಿದಾರರ ಭಾವನೆಯಲ್ಲಿ ಆಶಾವಾದಿ ಬದಲಾವಣೆಯ ಸೂಚನೆಯಾಗಿದೆ.

ಶೇಕಡಾ 9ರಷ್ಟು ಬೆಲೆ ಇಳಿಕೆ ನಿರೀಕ್ಷೆ

ಶೇಕಡಾ 9ರಷ್ಟು ಬೆಲೆ ಇಳಿಕೆ ನಿರೀಕ್ಷೆ

ಹೌದು, ಸಮೀಕ್ಷೆಯ ಪ್ರಕಾರ ಶೇಕಡಾ 9ರಷ್ಟು ಜನರ ಮನೆಯ ಮೌಲ್ಯವು ಶೇಕಡಾ 10 ರಿಂದ 19ರಷ್ಟು ಇಳಿಕೆಯಾಗಬಹುದು ಎಂದು ನಿರೀಕ್ಷಿಸಿದ್ದಾರೆ. ಇನ್ನು ಶೇಕಡಾ 5ರಷ್ಟು ಜನರು 1 ರಿಂದ 9% ಆಸ್ತಿ ಮೌಲ್ಯ ಇಳಿಕೆಯಾಗಬಹುದೆಂದು ನಿರೀಕ್ಷಿಸಿದ್ದಾರೆ. ಇನ್ನು ಶೇಕಡಾ 11ರಷ್ಟು ಜನರು ಮುಂದಿನ 12 ತಿಂಗಳಿನಲ್ಲಿ ಯಾವುದೇ ಮೌಲ್ಯ ಬದಲಾವಣೆ ಆಗುವುದಿಲ್ಲ ಎಂದು ಭಾವಿಸಿದ್ದಾರೆ.

ಗೃಹ ಸಾಲ: ಮನೆ ಖರೀದಿಸಿದ ಬಳಿಕ, ಈ ರೀತಿ ಸಾಲದ ಬಡ್ಡಿಯನ್ನ ಮರಳಿ ಪಡೆಯಿರಿಗೃಹ ಸಾಲ: ಮನೆ ಖರೀದಿಸಿದ ಬಳಿಕ, ಈ ರೀತಿ ಸಾಲದ ಬಡ್ಡಿಯನ್ನ ಮರಳಿ ಪಡೆಯಿರಿ

ಶೇಕಡಾ 42ರಷ್ಟು ಜನರು ಮನೆ ಸ್ಥಳಾಂತರಿಸಿದ್ದಾರೆ..!

ಶೇಕಡಾ 42ರಷ್ಟು ಜನರು ಮನೆ ಸ್ಥಳಾಂತರಿಸಿದ್ದಾರೆ..!

ಇನ್ನು ಮನೆ ಸ್ಥಳಾಂತರದ ಕುರಿತಾದ ಸಮೀಕ್ಷೆಯಲ್ಲಿ ಬೆಂಗಳೂರಿನ ಶೇಕಡಾ 42ರಷ್ಟು ಜನರು ಸಾಂಕ್ರಾಮಿಕ ರೋಗದ ಆರಂಭದಿಂದಲೂ ತಮ್ಮ ಪ್ರಾಥಮಿಕ ನಿವಾಸವನ್ನು ಸ್ಥಳಾಂತರಿಸಲು ವರದಿ ಮಾಡಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಜನರಲ್ಲಿ ಹೆಚ್ಚಿನ ವಿಶ್ಲೇಷಣೆಯು 48% ರಷ್ಟು ಜನರು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಹತ್ತಿರವಾಗಬೇಕಾದ ಅಗತ್ಯವನ್ನು ಹಂಚಿಕೆಯ ಕಾರಣವನ್ನು ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಮುಂದಿನ 12 ತಿಂಗಳಿನಲ್ಲಿ 22% ಜನರು ಸಾಂಕ್ರಾಮಿಕದ ನಂತರ ಮನೆ ಸ್ಥಳಾಂತರಿಸಲು ಇಚ್ಛೆ ವ್ಯಕ್ತಪಡಿಸಿದರು.

ಎರಡನೇ ಮನೆ ಖರೀದಿಗೆ ಆಲೋಚನೆ

ಎರಡನೇ ಮನೆ ಖರೀದಿಗೆ ಆಲೋಚನೆ

ಸಾಂಕ್ರಾಮಿಕ ರೋಗದ ಪರಿಣಾಮವು ಎರಡನೇ ಮನೆಗಾಗಿ ಅವರ ನಿರ್ಧಾರದ ಮೇಲೆ ಪ್ರಭಾವ ಬೀರಿದೆಯೇ ಎಂದು ವಿಚಾರಿಸಿದಾಗ, 47% ನಷ್ಟು ಜನರು ಮುಂದಿನ ದಿನಗಳಲ್ಲಿ ಎರಡನೇ ಮನೆಯನ್ನು ಖರೀದಿಸುವ ಸಾಧ್ಯತೆಯನ್ನು ವ್ಯಕ್ತಪಡಿಸಿದರು. ಸಾಂಕ್ರಾಮಿಕ ರೋಗದಿಂದಾಗಿ ಮನೆಗಾಗಿ ಖರ್ಚು ಮಾಡುವ ಪ್ರವೃತ್ತಿಯಲ್ಲಿ ಬದಲಾವಣೆಯ ಅಂಶದಲ್ಲಿ, ಅವರಲ್ಲಿ 39% ಜನರು ಹೊಸ ಮನೆಗೆ ಖರ್ಚು ಮಾಡಲು ತಮ್ಮ ಬಜೆಟ್‌ನಲ್ಲಿ ಹೆಚ್ಚಳವನ್ನು ವ್ಯಕ್ತಪಡಿಸಿದ್ದಾರೆ, ಆದರೆ 36% ರಷ್ಟು ಕುಸಿತವನ್ನು ವ್ಯಕ್ತಪಡಿಸಿದ್ದಾರೆ.

ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ

ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ

ಕೊರೊನಾ ಬಂದ ಮೇಲೆ ಆರೋಗ್ಯದ ಮೇಲಿನ ಕಾಳಜಿ ಹೆಚ್ಚಾಗಿದೆ. ಇದರ ಜೊತೆಗೆ 78% ಜನರು ಹಸಿರು ಪ್ರದೇಶಗಳಲ್ಲಿ ಹೊಸ ಮನೆ ಇರಲೆಂದು ಬಯಸುವ ಸಾಧ್ಯತೆಯಿದೆ. 64% ಜನರು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮುಂದಿನ ಮನೆ ತೆಗೆದುಕೊಳ್ಳುವ ನಿರ್ಧಾರದ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಭವಿಷ್ಯದಲ್ಲಿ ವಾಸಿಸಲು ಮನೆಯ ಆಯ್ಕೆ ಕುರಿತಾಗಿ 53% ಜನರು ಅಪಾರ್ಟ್ಮೆಂಟ್‌ನಲ್ಲಿ ವಾಸಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು. ಸ್ವತಂತ್ರ ಮನೆ/ವಿಲ್ಲಾಗಳಲ್ಲಿ ವಾಸಿಸುವ ಕುರಿತಾಗಿ 31% ಜನರು ಪ್ರಮುಖ ಆಯ್ಕೆ ಹೊಂದಿದ್ದಾರೆ.

 

English summary

75 Percent Of Bengaluru Home Owners Expect Price Hike of Their Primary Residence: Survey

75% of Bengaluru home owners expect price of their primary residence to increase in next 12 months: Knight Frank India
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X