For Quick Alerts
ALLOW NOTIFICATIONS  
For Daily Alerts

ಅಮೆಜಾನ್ ನಿಂದ ಆನ್ ಲೈನ್ ಔಷಧ ಮಾರಾಟ; ಬೆಂಗಳೂರಿನಿಂದಲೇ ಶುರು

|

ಇ- ಕಾಮರ್ಸ್ ಕಂಪೆನಿ ಅಮೆಜಾನ್ ನಿಂದ ಆನ್ ಲೈನ್ ಔಷಧ ಮಾರಾಟ - ಅಮೆಜಾನ್ ಫಾರ್ಮಸಿ ಆರಂಭಿಸಲಾಗಿದೆ. ಇದನ್ನು ಬೆಂಗಳೂರಿನಲ್ಲಿ ಶುರು ಮಾಡಲಾಗಿದೆ. ಮುಂದಿನ ತಿಂಗಳುಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ ಇತರ ನಗರಗಳಲ್ಲೂ ಆರಂಬಿಸಬಹುದಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಿಸಿದ ಮೇಲೆ ಹೆಚ್ಚೆಚ್ಚು ಮಂದಿ ಆನ್ ಲೈನ್ ಕನ್ಸಲ್ಟೇಷನ್, ವೈದ್ಯಕೀಯ ಪರೀಕ್ಷೆ, ಚಿಕಿತ್ಸ್, ಔಷಧ ಡೆಲಿವರಿ ಮಾಡಿಸುತ್ತಿದ್ದಾರೆ.

ಹೆಲ್ತ್ ಕೇರ್ ಸ್ಟಾರ್ಟ್ ಅಪ್ ಗಳಾದ 1mg, ನೆಟ್ ಮೆಡ್ಸ್, ಫಾರ್ಮಾಈಸಿ, ಮೆಡ್ ಲೈಫ್ ಮತ್ತು ಪ್ರಾಕ್ಟೋ ಕಂಪೆನಿಗಳು ಬೇಡಿಕೆಯಲ್ಲಿ ಗಣನೀಯ ಹೆಚ್ಚಳ ಕಂಡಿವೆ.

ಜಿಯೋಮಾರ್ಟ್ ನಲ್ಲಿ 9.9% ಷೇರು ಖರೀದಿಸುವುದಕ್ಕೆ ಅಮೆಜಾನ್ ಮಾತುಕತೆ

 

ಗ್ರಾಹಕರ ಅಗತ್ಯಗಳನ್ನು ಪೂರೈಸುವ ಸಲುವಾಗಿ ಅಮೆಜಾನ್ ಫಾರ್ಮಸಿಯನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಗ್ರಾಹಕರು ಪ್ರೆಸ್ಕ್ರಿಪ್ಷನ್ ಆಧಾರಿತವಾಗಿ ಆರ್ಡರ್ ಮಾಡಬಹುದು. ಬೇಸಿಕ್ ಹೆಲ್ತ್ ಸಲಕರಣೆಗಳು, ಆಯುರ್ವೇದ ಔಷಧಗಳನ್ನು ಪ್ರಮಾಣೀಕೃತ ಮಾರಾಟಗಾರರ ಮೂಲಕವಾಗಿ ಪೂರೈಸಲಾಗುತ್ತದೆ. ಇದು ಈಗಿನ ಸನ್ನಿವೇಶಕ್ಕೆ ಪ್ರಸ್ತುತವಾಗಿದೆ. ಮನೆಯಲ್ಲಿ ಸುರಕ್ಷಿತವಾಗಿ ಇರುವುದಕ್ಕೆ ಗ್ರಾಹಕರಿಗೆ ನೆರವಾಗುತ್ತದೆ ಎಂದು ಅಮೆಜಾನ್ ವಕ್ತಾರರು ಹೇಳಿದ್ದಾರೆ.

ಅಮೆಜಾನ್ ನಿಂದ ಆನ್ ಲೈನ್ ಔಷಧ ಮಾರಾಟ; ಬೆಂಗಳೂರಿನಿಂದಲೇ ಶುರು

ಕಳೆದ ಆರ್ಥಿಕ ವರ್ಷದಲ್ಲಿ ಡಿಜಿಟಲ್ ಆರೋಗ್ಯ ಮಾರುಕಟ್ಟೆ 1.2 ಬಿಲಿಯನ್ ಅಮೆರಿಕನ್ ಡಾಲರ್ ಇತ್ತು. ಈ ವರ್ಷ ಅದು 4.5 ಬಿಲಿಯನ್ ಅಮೆರಿಕನ್ ಡಾಲರ್ ಗೆ ವಿಸ್ತರಣೆ ಆಗಿದೆ. ಕೊರೊನಾಗೆ ಮುಂಚೆ ಒಂದು ಅಂದಾಜು ಮಾಡಲಾಗಿತ್ತು. 2025ರ ಹೊತ್ತಿಗೆ ಕನ್ಸಲ್ಟೆನ್ಸಿ 19 ಬಿಲಿಯನ್ USD ಆಗಬಹುದು ಎಂದು ತಿಳಿಸಿತ್ತು. ಆದರೆ ಈಗ 25 ಬಿಲಿಯನ್ ಅಮೆರಿಕನ್ ಡಾಲರ್ ಆಗಬಹುದು ಎನ್ನಲಾಗುತ್ತಿದೆ.

English summary

Amazon India Start To Sell Medicines Online; First In Bengaluru

E-commerce firm Amazon India started online medicine space Amazon Pharmacy. To begin service in Bengaluru.
Company Search
COVID-19