For Quick Alerts
ALLOW NOTIFICATIONS  
For Daily Alerts

ಫೋನ್ ಸ್ಕ್ರೀನ್ ಮೇಲೆ ಕೆವೈಸಿ ದಾಖಲೆಯ ಪ್ರಕಾರ ಕರೆ ಮಾಡಿದವರ ಹೆಸರು!

|

ದೂರಸಂಪರ್ಕ ಇಲಾಖೆ ಶೀಘ್ರದಲ್ಲೇ ಹೊಸ ಯಾಂತ್ರಿಕ ವ್ಯವಸ್ಥೆಯನ್ನು ಹೊರತರಲಿದೆ. ಈ ಹೊಸ ವ್ಯವಸ್ಥೆಯಲ್ಲಿ ನಮಗೆ ಯಾರು ಕರೆ ಮಾಡುತ್ತಾರೋ ಅವರು ಕೆವೈಸಿ ವೇಳೆ ನೀಡಿದ ಹೆಸರೇ ಮೊಬೈಲ್ ಫೋನ್ ಪರದೆಯ ಮೇಲೆ ಕಾಣಲಿದೆ ಎಂದು ಮಾಹಿತಿ ಲಭ್ಯವಾಗಿದೆ.

 

ಟೆಲಿಕಾಂ ಆಪರೇಟರ್‌ಗಳಿಗೆ ಜನರು know-your-customer (KYC) ದಾಖಲೆಯನ್ನು ಸಲ್ಲಿಕೆ ಮಾಡಿದ ಪ್ರಕಾರ ಹೆಸರು ಇರಲಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅಧ್ಯಕ್ಷ ಪಿಡಿ ವಘೇಲಾ ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಈಗ ಆಧಾರ್‌ ಇ-ಕೆವೈಸಿ ಮೂಲಕ ಆನ್‌ಲೈನ್‌ನಲ್ಲಿ ತೆರೆಯಿರಿ ಅಟಲ್ ಪಿಂಚಣಿ ಯೋಜನೆ ಖಾತೆ

"ಈ ಕುರಿತು ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ಪಡೆಯಲು ಶೀಘ್ರದಲ್ಲೇ ಸಮಾಲೋಚನಾ ಪತ್ರವನ್ನು ಹೊರಡಿಸಲಾಗುವುದು. ಇದರ ಪರಿಣಾಮದ ಬಗ್ಗೆಯೂ ನಾವು ಚರ್ಚೆ ಮಾಡಬೇಕಾಗಿದೆ," ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅಧ್ಯಕ್ಷ ಪಿಡಿ ವಘೇಲಾ ತಿಳಿಸಿದ್ದಾರೆ.

ಫೋನ್ ಸ್ಕ್ರೀನ್ ಮೇಲೆ ಕೆವೈಸಿ ದಾಖಲೆಯ ಪ್ರಕಾರ ಕರೆ ಮಾಡಿದವರ ಹೆಸರು!

"ನಮಗೆ ಈಗ ಮಾಹಿತಿ ಲಭ್ಯವಾಗಿದೆ. ನಾವು ಈ ಕಾರ್ಯವನ್ನು ಶೀಘ್ರದಲ್ಲೇ ಆರಂಭ ಮಾಡಲಿದ್ದೇವೆ. ಯಾರಾದರೂ ಕರೆ ಮಾಡಿದಾಗ ಕರೆ ಸ್ವೀಕರಿಸುವವರ ಮೊಬೈಲ್ ಸ್ಕ್ರೀನ್ ಮೇಲೆ ಕೆವೈಸಿ ದಾಖಲೆ ಪ್ರಕಾರ ಹೆಸರು ಕಾಣಿಸಿಕೊಳ್ಳಲಿದೆ," ಎಂದು ವಘೇಲಾ ವಿವರಿಸಿದ್ದಾರೆ.

ನಂಬರ್ ಸೇವ್ ಇಲ್ಲದಿದ್ದರೂ ಕರೆ ಮಾಡಿದವರ ಹೆಸರು ಗೊತ್ತಾಗುತ್ತೆ!

ಮಾಹಿತಿ ಪ್ರಕಾರ ಟೆಲಿಕಾಂ ಕಂಪನಿಗಳು ಸಂಗ್ರಹಿಸಿದ ಕೆವೈಸಿ ಮಾಹಿತಿಗೆ ಅನುಗುಣವಾಗಿ ಕರೆ ಮಾಡುವವರ ಹೆಸರನ್ನು ಪರದೆಯ ಮೇಲೆ ಕಾಣಿಸಿಕೊಳ್ಳಲು ಕಾರ್ಯವಿಧಾನವನ್ನು ಸಕ್ರಿಯಗೊಳಿಸಲಿದೆ. ಮೊಬೈಲ್ ಹೊಂದಿರುವವರು ತಮ್ಮ ಕಾಂಟ್ಯಾಕ್ಟ್ ಲೀಸ್ಟ್‌ನಲ್ಲಿ ಯಾವುದೇ ಫೋನ್ ಸಂಖ್ಯೆಯನ್ನು ಸೇವ್ ಮಾಡಿಕೊಂಡಿಲ್ಲದಿದ್ದರೂ ಕೂಡಾ ಕರೆ ಮಾಡಿದವರ ಹೆಸರು ತಿಳಿದುಕೊಳ್ಳಲು ಸಾಧ್ಯವಾಗಲಿದೆ.

ಪ್ರಸ್ತುತ ಕೆಲವು ಬಳಕೆದಾರರು ಟ್ರೂಕಾಲರ್‌ನಂತಹ ಖಾಸಗಿ ಅಪ್ಲಿಕೇಶನ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಇದರಲ್ಲಿ ಕರೆ ಮಾಡಿದವರ ಹೆಸರು ತಿಳಿಯಬಹುದು. ಆದರೆ ಇದು ಶೇಕಡ ನೂರರಷ್ಟು ಅಧಿಕೃತವಾಗಿರಲಾರದು. ಆದರೆ ಈ ಹೊಸ ವ್ಯವಸ್ಥೆಯು ಕೆವೈಸಿ ಡೇಟಾದಿಂದ ಜನರ ಹೆಸರನ್ನು ಖಾತರಿಪಡಿಸುತ್ತದೆ.

 

ಇನ್ನು ಕರೆ ಸ್ವೀಕರಿಸುವವರು ಸ್ಕ್ಯಾಮ್ ಅಥವಾ ತಮಗೆ ಬೇಡದ ಕರೆಯನ್ನು ತಪ್ಪಿಸಲು, ಅಗತ್ಯ ಕ್ರಮಕ್ಕಾಗಿ ಪ್ರಾಧಿಕಾರಕ್ಕೆ ವರದಿ ಮಾಡಲು ಸಾಧ್ಯವಾಗುತ್ತದೆ. ಈವರೆಗೆ ಹಲವಾರು ಕ್ರಮಗಳನ್ನು ಕೈಗೊಂಡರು ಕೂಡಾ ಸ್ಕ್ಯಾಮ್ ಕರೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಇಲಾಖೆಗೆ ಸಾಧ್ಯವಾಗಿಲ್ಲ. ಆದರೆ ಈ ಹೊಸ ವಿಧಾನದ ಮೂಲಕ ಸ್ಪ್ಯಾಮ್ ಕರೆಯನ್ನು ಕರೆ ಸ್ವೀಕಾರ ಮಾಡುವವರೇ ತಪ್ಪಿಸಲು ಸಾಧ್ಯವಾಗುವಂತೆ ಮಾಡಲಾಗಿದೆ.

English summary

Caller's name as per KYC record to flash on phone screen, Details in Kannada

Telecom regulator TRAI to moot mechanism for KYC-based caller name display. Know more details in kannada.
Story first published: Saturday, May 21, 2022, 10:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X