For Quick Alerts
ALLOW NOTIFICATIONS  
For Daily Alerts

2020-21ನೇ ಹಣಕಾಸು ವರ್ಷದಲ್ಲಿ 2.74 ಲಕ್ಷ ಕೋಟಿ FPI ಒಳಹರಿವು

|

2020-21ನೇ ಹಣಕಾಸು ವರ್ಷದಲ್ಲಿ ವಿದೇಶಿ ಬಂಡವಾಳ ಹೂಡಿಕೆ(ಎಫ್ಪಿಐ) ಹರಿವಿನಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದ್ದು, ಭಾರತೀಯ ಷೇರು ಮಾರುಕಟ್ಟೆಗಳಿಗೆ 2,74,034 ಕೋಟಿ ರೂ. ಹರಿದು ಬಂದಿದೆ. ಆ ಮೂಲಕ ಭಾರತೀಯ ಆರ್ಥಿಕತೆಯ ಮೂಲಭೂತ ಅಂಶಗಳ ಮೇಲೆ ವಿದೇಶಿ ಹೂಡಿಕೆದಾರರು ಇಟ್ಟಿರುವ ವಿಶ್ವಾಸ ಸ್ಥಿರವಾಗಿದೆ ಎಂಬುದು ಪ್ರತಿಫಲನಗೊಂಡಿದೆ.

ವಿನೂತನ ರೀತಿಯಲ್ಲಿ ಹಲವು ಆರ್ಥಿಕ ಚೇತರಿಕೆ ಪ್ಯಾಕೇಜುಗಳನ್ನು ಘೋಷಿಸುವ ಮೂಲಕ ಆರ್ಥಿಕತೆಗೆ ಪುನಶ್ಚೇತನ ನೀಡಲಾಗಿದೆ. ಇದರಿಂದಾಗಿ ನಿರೀಕ್ಷೆಗೂ ಮೀರಿದಂತೆ ಉತ್ಕೃಷ್ಟ ರೀತಿಯಲ್ಲಿ ಎಫ್‌ಪಿಐ ಒಳಹರಿವು ಹೆಚ್ಚಾಗಲು ಕಾರಣವಾಗಿದೆ.

2020-21ನೇ ಹಣಕಾಸು ವರ್ಷದಲ್ಲಿ 2.74 ಲಕ್ಷ ಕೋಟಿ FPI ಒಳಹರಿವು

ಇತ್ತೀಚಿನ ದಿನಗಳಲ್ಲಿ ಎಫ್‌ಪಿಐ ಹರಿವು ಹೆಚ್ಚಳ ಮತ್ತು ಹೂಡಿಕೆಯ ವಾತಾವರಣ ಸುಧಾರಿಸುವ ಉದ್ದೇಶದಿಂದ ಸರ್ಕಾರವು ಹಲವು ನೀತಿ ಸುಧಾರಣಾ ಕ್ರಮಗಳನ್ನು ಕೈಗೊಂಡಿತು. ಅದರಲ್ಲಿ, ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮ ಸರಳೀಕರಣ ಮತ್ತು ಏಕರೂಪಗೊಳಿಸುವುದು, ಸೆಬಿಯಲ್ಲಿ ನೋಂದಣಿ ಮಾಡುವ ಉದ್ದೇಶಕ್ಕೆ ಆನ್ ಲೈನ್ ಒಂದೇ ಬಗೆಯ ಅರ್ಜಿ ನಮೂನೆ(ಸಿಎಎಫ್ ) ಕಾರ್ಯಾಚರಣೆ, ಪ್ಯಾನ್ ಹಂಚಿಕೆ ಮತ್ತು ಬ್ಯಾಂಕ್ ಮತ್ತು ಡಿಮ್ಯಾಟ್ ಖಾತೆ ತೆರೆಯುವುದು ಸೇರಿ ಹಲವು ಕ್ರಮಗಳು ಒಳಗೊಂಡಿವೆ.

ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು ಭಾರತೀಯ ಕಂಪನಿಗಳಲ್ಲಿ ಸರಾಸರಿ ಶೇ.24ರಿಂದ ವಲಯ ಮಿತಿಯನ್ನು ಹೆಚ್ಚಳ ಮಾಡುವುದು ಪ್ರಮುಖ ಷೇರುಗಳಲ್ಲಿ ಭಾರತೀಯ ಷೇರುಮಾರುಕಟ್ಟೆಯ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ವೇಗವರ್ಧಕವಾಗಿದೆ. ಆ ಮೂಲಕ ನಿಷ್ಕಿಯ ಮತ್ತು ಸಕ್ರಿಯ ಎರಡೂ ಭಾರತೀಯ ಷೇರು ಮಾರುಕಟ್ಟೆಗಳಿಗೆ ಭಾರಿ ಪ್ರಮಾಣದ ಬಂಡವಾಳ ಕ್ರೂಢೀಕರಿಸಲಿವೆ.

ವಿಶ್ವಬ್ಯಾಂಕ್, ಐಎಂಎಫ್ ಮತ್ತು ಇತರೆ ಜಾಗತಿಕ ಸಂಶೋಧನಾ ಸಂಸ್ಥೆಗಳು 2021-22ನೇ ಹಣಕಾಸು ವರ್ಷದಲ್ಲಿ ಭಾರತ ಶೇ.10ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಲಿದೆ ಎಂದು ಅಂದಾಜಿಸಿವೆ. ಹೀಗಾಗಿ ಭವಿಷ್ಯದಲ್ಲಿ ಭಾರತ ಆಕರ್ಷಕ ಹೂಡಿಕೆ ತಾಣವಾಗಿ ಮುಂದುವರಿಯಲಿದೆ ಎಂಬುದು ಬಲವಾಗಿ ಪ್ರತಿಪಾದನೆಗೊಂಡಿದೆ.

English summary

FPI Inflows Rs 2.74 Lakh Crore In Indian Equity Markets

The Finance Ministry on Tuesday said India witnessed strong Foreign Portfolio Investment (FPI) inflows into the equity markets to the tune of Rs 2,74,034 crore during 2020-21
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X