For Quick Alerts
ALLOW NOTIFICATIONS  
For Daily Alerts

ಎಲ್ ಐಸಿ ನೀಡಿದ ಸಾಲದಲ್ಲಿ ಅನುಮಾನದ ಆಸ್ತಿ ಪ್ರಮಾಣ 23,760 ಕೋಟಿ

|

ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮವು (ಎಲ್ ಐಸಿ) 2019ರ ಮಾರ್ಚ್ ಅಂತ್ಯಕ್ಕೆ ಡೌಟ್ ಫುಲ್ ಅಸೆಟ್ಸ್ (ಸಾಲ ನೀಡಿದ ಮೊತ್ತ ವಾಪಸ್ ಬರುವುದು ಅನುಮಾನ ಎಂದು ವರ್ಗೀಕರಿಸಲಾದ ಆಸ್ತಿ)ಗಾಗಿ 30 ಪರ್ಸೆಂಟ್ ಅಥವಾ 23,760 ಕೋಟಿ ರುಪಾಯಿಯನ್ನು ಹೆಚ್ಚುವರಿಯಾಗಿ ಮೀಸಲಿರಿಸಿದೆ. ಎಲ್ ಐಸಿಯ ವಾರ್ಷಿಕ ವರದಿಯಲ್ಲಿ ಈ ಅಂಶ ತಿಳಿದುಬಂದಿದೆ.

 

ರಿಯಲ್ ಎಸ್ಟೇಟ್, ಸಾಲ ಮತ್ತು ಇತರ ಆಸ್ತಿಗಳ ಗುಣಮಟ್ಟದ ಪರಿಶೀಲನೆ ಮಾಡಿದ ನಂತರ ಈ ವರದಿ ಬಂದಿದೆ. ಎಲ್ ಐಸಿಯು ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್, ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯಲ್ ಸರ್ವೀಸಸ್ ಮತ್ತು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ಮತ್ತಿತರ ಕಂಪೆನಿಗಳಿಗೆ ನೀಡಿದ ಸಾಲ ವಸೂಲಾತಿ ಒತ್ತಡ ಎದುರಿಸುತ್ತಿದೆ.

2019ರ ಆರ್ಥಿಕ ವರ್ಷದಲ್ಲಿ ಈ ಹಿಂದೆ 18,195 ಕೋಟಿ ರುಪಾಯಿ ಮೀಸಲಿರಿಸಿತ್ತು. ಎಲ್ ಐಸಿಯಿಂದ 4 ಲಕ್ಷ ಕೋಟಿ ರುಪಾಯಿ ಸಾಲ ನೀಡಲಾಗಿದೆ. 2019ರ ಮಾರ್ಚ್ 31ರ ಅಂತ್ಯಕ್ಕೆ 24,777 ಕೋಟಿ ರುಪಾಯಿ ಅನುತ್ಪಾದಕ ಆಸ್ತಿ (ಎನ್ ಪಿಎ) ಇತ್ತು. ಇದರಲ್ಲಿ 16,690 ಕೋಟಿ ರುಪಾಯಿ ಡೌಟ್ ಫುಲ್ ಅಸೆಟ್ಸ್, 6,772 ಕೋಟಿ ರುಪಾಯಿ ನಷ್ಟವಾದ ಆಸ್ತಿ ಮತ್ತು 1,312 ಕೋಟಿ ರುಪಾಯಿ ಕಳಪೆ ಗುಣಮಟ್ಟದ ಆಸ್ತಿ ಎಂದು ವರ್ಗೀಕರಿಸಲಾಗಿದೆ.

ಎಲ್ ಐಸಿ ನೀಡಿದ ಸಾಲದಲ್ಲಿ ಅನುಮಾನದ ಆಸ್ತಿ ಪ್ರಮಾಣ 23,760 ಕೋಟಿ

ಒಟ್ಟಾರೆ ಸಾಲದ ಆಸ್ತಿಯನ್ನು ಶೂನ್ಯದಿಂದ 401 ಕೋಟಿ ರುಪಾಯಿಗೆ ಹೆಚ್ಚಿಸಲಾಗಿದೆ. 2019ರ ಆರ್ಥಿಕ ವರ್ಷದಲ್ಲಿ ಎರಡು ಸಾವಿರದ ಆರುನೂರಾ ಹತ್ತು ಕೋಟಿ ರುಪಾಯಿ ಲಾಭಾಂಶವನ್ನು ಸರ್ಕಾರಕ್ಕೆ ನೀಡಲಾಗಿದೆ.

English summary

LIC Raises Provision For Doubtful Assets

State owned LIC raises provision for doubtful assets by 30 percent or 23,760 crore. Here is the complete details.
Story first published: Monday, December 30, 2019, 19:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X