For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ 13500ಕ್ಕೂ ಅಧಿಕ ನಿವೇಶನಗಳು ಮಾರಾಟಕ್ಕಿವೆ!

|

ಬೆಂಗಳೂರು, ಅಕ್ಟೋಬರ್ 29: ಭಾರತದ ನಂಬರ್ ವನ್ ಸ್ಥಿರಾಸ್ತಿ ವೆಬ್ ಸೈಟ್ ಆಗಿರುವ ಮ್ಯಾಜಿಕ್‍ಬ್ರಿಕ್ಸ್, ಬೆಂಗಳೂರಿನಲ್ಲಿ ನಿವೇಶನಗಳಿಗೆ ಬೇಡಿಕೆ ದೇಶದಲ್ಲೇ ಅತ್ಯಧಿಕ ಇದೆ ಎಂದು ಘೋಷಿಸಿದೆ. ಜೊತೆಗೆ ಹೊಸದಾಗಿ ಆರಂಭಿಸಿದ ಪ್ಲಾಟ್‍ಫಾರಂನಲ್ಲಿ ಸಂಭಾವ್ಯ ಗ್ರಾಹಕರಿಗೆ 13,500ಕ್ಕೂ ಅಧಿಕ ಪ್ರಾಧಿಕಾರ ಅನುಮೋದಿತ ಪ್ಲಾಟ್ಸ್ ಗಳ ವಿಶಾಲ ಶ್ರೇಣಿ ನಗರದಲ್ಲಿ ಇದೆ. ಈ ಪೈಕಿ ಶೇಕಡ 50ರಷ್ಟು ನಿವೇಶನಗಳು ಐಟಿ ಕೇಂದ್ರಗಳ ಏಳು ಪ್ರಮುಖ ಹೂಡಿಕೆ ಕಾರಿಡಾರ್ ಗಳಲ್ಲಿದ್ದು, ಇವು ಅತ್ಯಂತ ವಾಸಯೋಗ್ಯ ರಿಯಲ್ ಎಸ್ಟೇಟ್ ಗಮ್ಯತಾಣವಾಗಿ ಮಾರ್ಪಟ್ಟಿದೆ ಎಂದಿದೆ.

 

ಗ್ರಾಹಕರಿಗೆ ಸುಲಲಿತ ಖರೀದಿ ಅನುಭವವನ್ನು ಒದಗಿಸುವ ಆಶ್ವಾಸನೆಗೆ ಅನುಗುಣವಾಗಿ ಮ್ಯಾಜಿಕ್‍ಬ್ರಿಕ್ಸ್ ನ ಇತ್ತೀಚೆಗೆ ಆರಂಭವಾಗಿರುವ ಪ್ಲಾಟ್ಸ್ ಪ್ಲಾಟ್‍ಫಾರಂನಲ್ಲಿ ಸಂಭಾವ್ಯ ಗ್ರಾಹಕರಿಗೆ ಕನಿಷ್ಠ ಅಂದರೆ ಚದರ ಅಡಿಗೆ 194 ರೂಪಾಯಿನಿಂದ ಆರಂಭವಾಗುವ ನಿವೇಶನಗಳಿಂದ ಹಿಡಿದು ವಿಸ್ತೃತ ಶ್ರೇಣಿಯ ನಿವೇಶನಗಳು ಇವೆ.

ಎಲ್ಲ ನಿವೇಶನಗಳನ್ನು ಜಾಗರೂಕವಾಗಿ ಮ್ಯಾಜಿಕ್‍ಬ್ರಿಕ್ಸ್ ನ ತಳಹಂತದ ಸಂಶೋಧಕರು ಪ್ಲಾಟ್‍ಫಾರಂಗಾಗಿ ಸಜ್ಜುಗೊಳಿಸಿದ್ದು, ಸಂಭಾವ್ಯ ಖರೀದಿದಾರರಿಗೆ ವಿಶ್ವಾಸಾರ್ಹ ಮಾಹಿತಿಗಳನ್ನು ಹಾಗೂ ಇತ್ತೀಚಿನ ಅಪ್‍ಡೇಟ್‍ಗಳು ಲಭ್ಯವಾಗಲಿವೆ. ಇದು ಅವರಿಗೆ ಸ್ಮಾರ್ಟ್ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಆಳವಾದ ಸಂಶೋಧನೆಯನ್ನು ನಡೆಸಲು ನೆರವಾಗಲಿದೆ.

ಬಿಎಂಆರ್‍ಡಿಎ ಅನುಮೋದಿತ ನಿವೇಶನ

ಬಿಎಂಆರ್‍ಡಿಎ ಅನುಮೋದಿತ ನಿವೇಶನ

ಇವೆಲ್ಲವೂ ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‍ಡಿಎ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ (ಬಿಐಎಎಪಿಎ) ಅನುಮೋದಿತ ನಿವೇಶನಗಳಾಗಿವೆ. ಸುಮಾರು ಶೇಕಡ 50ರಷ್ಟು ನಿವೇಶನಗಳು ಅಂದರೆ 6600 ನಿವೇಶನಗಳು ಮಾಲೀಕರ ಲಿಸ್ಟಿಂಗ್ ನಿವೇಶನಗಳಾಗಿದ್ದು, ಇದು ಈ ಬ್ರಾಂಡ್ ಮಾರುಕಟ್ಟೆಯಲ್ಲಿ ಹೊಂದಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.

ಮ್ಯಾಜಿಕ್‍ಬ್ರಿಕ್ಸ್ ನ ಸಿಇಓ ಸುಧೀರ್ ಪೈ

ಮ್ಯಾಜಿಕ್‍ಬ್ರಿಕ್ಸ್ ನ ಸಿಇಓ ಸುಧೀರ್ ಪೈ

ಹೊಸದಾಗಿ ಆರಂಭಿಸಲಾದ ಪ್ಲಾಟ್ಸ್ ಪ್ಲಾಟ್‍ಫಾರಂನ ಪೂರೈಕೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಮ್ಯಾಜಿಕ್‍ಬ್ರಿಕ್ಸ್ ನ ಸಿಇಓ ಸುಧೀರ್ ಪೈ ಅವರು, "ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ವಿ- ಆಕೃತಿಯ ಬೇಡಿಕೆ ಪುನಶ್ಚೇತನವನ್ನು ನಾವು ಕಾಣುತ್ತಿದ್ದೇವೆ ಹಾಗೂ ಇದು ವಾಸ್ತವವಾಗಿ ರಾಷ್ಟ್ರೀಯ ಪುನಶ್ಚೇತನಕ್ಕಿಂತ ವೇಗವಾಗಿದೆ. ಕೋವಿಡ್-19 ಪೂರ್ವ ಮಟ್ಟಕ್ಕೆ ಹೋಲಿಸಿದರೆ ಇದೀಗ ಬೇಡಿಕೆ ಶೇಕಡ 30-40ರಷ್ಟು ಅಧಿಕವಾಗಿದೆ. ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಆಸ್ತಿಗಾಗಿ ಹುಡುಕಾಟವು ಬೆಂಗಳೂರಿನಲ್ಲಿ ಶೇಕಡ 47ರಷ್ಟು ಹೆಚ್ಚಿದೆ.

 ಬೇಡಿಕೆ ಶೇಕಡ 14ರಷ್ಟು ಕುಸಿದಿತ್ತು
 

ಬೇಡಿಕೆ ಶೇಕಡ 14ರಷ್ಟು ಕುಸಿದಿತ್ತು

''ಆದರೆ ಇದಕ್ಕೂ ಮುನನ್ನ ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್-ಜೂನ್ ಅವಧಿಯಲ್ಲಿ ಬೇಡಿಕೆ ಶೇಕಡ 14ರಷ್ಟು ಕುಸಿದಿತ್ತು. ಬೇಡಿಕೆಯು ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚುತ್ತಿದ್ದು, ನಗರದ ಪ್ರಮುಖ ಏಳು ಹೂಡಿಕೆ ಕಾರಿಡಾರ್‍ಗಳಲ್ಲಿ ಇದು ಹರಡಿದೆ. ಈ ಬೇಡಿಕೆಯನ್ನು ಈಡೇರಿಸಲು, ನಾವು ಜಾಗರೂಕವಾಗಿ ಪ್ರಾಧಿಕಾರಗಳಿಂದ ಅನುಮೋದನೆ ಪಡೆದ ಬೃಹತ್ ಪ್ರಮಾಣದ ನಿವೇಶನಗಳನ್ನು ಸಜ್ಜುಗೊಳಿಸಿದ್ದು, ನಾವು ಸೃಷ್ಟಿಸಿದ ಹಸ್ತಕ್ಷೇಪದೊಂದಿಗೆ ನಾವು ಆರಂಭಿಸಿದ ಪ್ಲಾಟ್‍ಫಾರಂ ಹೂಡಿಕೆದಾರರಿಗೆ ತಮ್ಮ ಮಾಹಿತಿಯುಕ್ತ ನಿರ್ಧಾರಗಳನ್ನು ಕೈಗೊಳ್ಳಲು ನೆರವಾಗಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಏಳು ಹೂಡಿಕೆ ಕಾರಿಡಾರ್ ಗಳಿವೆ

ಏಳು ಹೂಡಿಕೆ ಕಾರಿಡಾರ್ ಗಳಿವೆ

ಸುಮಾರು 7000ಕ್ಕೂ ಅಧಿಕ ನಿವೇಶನಗಳು ಏಳು ಹೂಡಿಕೆ ಕಾರಿಡಾರ್ ಗಳಲ್ಲಿದ್ದು, ಇವುಗಳೆಂದರೆ ಬೆಂಗಳೂರು- ಮಾಗಡಿ ರಸ್ತೆ ಕಾರಿಡಾರ್, ಬೆಂಗಳೂರು ಐಟಿ ಕಾರಿಡಾರ್, ಬೆಂಗಳೂರು ಅಟೊಮೋಟಿವ್ ಕಾರಿಡಾರ್, ಬೆಂಗಳೂರು- ಚೆನ್ನೈ ಕೈಗಾರಿಕಾ ಕಾರಿಡಾರ್, ಬೆಂಗಳೂರು- ಮೈಸೂರು ಕಾರಿಡಾರ್, ಬೆಂಗಳೂರು- ಮೈಸೂರು ಕೈಗಾರಿಕಾ ಕಾರಿಡಾರ್ ಮತ್ತು ಬೆಂಗಳೂರು ವಿಮಾನ ನಿಲ್ದಾಣ ಕಾರಿಡಾರ್. ಈ ಏಳು ಕಾರಿಡಾರ್‍ಗಳ ಪೈಕಿ, ಬೆಂಗಳೂರು ವಿಮಾನ ನಿಲ್ದಾಣ ಕಾರಿಡಾರ್ ಗರಿಷ್ಠ ನಿವೇಶನಗಳ ಪೂರೈಕೆಯನ್ನು ಹೊಂದಿದ್ದು, ಬೆಂಗಳೂರು ಐಟಿ ಕಾರಿಡಾರ್ ಮತ್ತು ಬೆಂಗಳೂರು- ಚಎನ್ನೈ ಕೈಗಾರಿಕಾ ಕಾರಿಡಾರ್‍ಗಳು ನಂತರದ ಸ್ಥಾನಗಳಲ್ಲಿವೆ. ಈ ಕಾರಿಡಾರ್‍ಗಳಲ್ಲಿ ನಿವೇಶನಗಳಿಗೆ ಬಂದಿರುವ ಬೇಡಿಕೆಗಳು ಆರ್ಥಿಕ, ಮೂಲಸೌಕರ್ಯದ ಮತ್ತು ಸಾಮಾಜಿಕ ಅಂಶಗಳಿಂದ ನಿರ್ಧರಿತವಾಗಿವೆ.

ಜನಪ್ರಿಯ ಹೂಡಿಕೆ ಗಮ್ಯತಾಣಗಳು

ಜನಪ್ರಿಯ ಹೂಡಿಕೆ ಗಮ್ಯತಾಣಗಳು

ಮ್ಯಾಜಿಕ್‍ಬ್ರಿಕ್ಸ್‍ನ ಪ್ಲಾಟ್ಸ್ ಪ್ಲಾಟ್‍ಫಾರಂ ಹಲವು ಒಳನೋಟಗಳ ವಿಭಾಗಗಳನ್ನು ಪ್ರಸ್ತುತಪಡಿಸಿದ್ದು, ಇವುಗಳಲ್ಲಿ ಜನಪ್ರಿಯ ಹೂಡಿಕೆ ಗಮ್ಯತಾಣಗಳು, ಫೀಚರ್ಡ್ ನಿವೇಶನಗಳು, ನಿವೇಶನ ಹೂಡಿಕೆ ಕಾರಿಡಾರ್ ಗಳ ಬಗ್ಗೆ ಪ್ರಮುಖ ಒಳನೋಟಗಳು, ಮಾಲೀಕರ ನಿವೇಶನಗಳು ಮತ್ತು ನಿವೇಶನ ಹೂಡಿಕೆ ಮಾರ್ಗದರ್ಶಿಗಳು ಸೇರಿವೆ. ಇವು ಗ್ರಾಹಕರಿಗೆ ಅವರು ನಿವೇಶನ ಖರೀದಿ ಮಾಡಲು ಬಯಸುವ ಸ್ಥಳದ ಬಗ್ಗೆ ಆಳವಾದ ಜ್ಞಾನವನ್ನು ಪಡೆಯಲು ನೆರವಾಗಲಿದೆ ಹಾಗೂ ಭವಿಷ್ಯದಲ್ಲಿ ಪ್ರಗತಿಯ ಸಾಧ್ಯತೆ ಇರುವ ನಿವೇಶನಗಳ ಬಗ್ಗೆ ಮಾಹಿತಿ ಪಡೆಯಲೂ ಸಹಕಾರಿಯಾಗಲಿದೆ.

English summary

Magicbricks Plots offer 13500-plus authority approved plots for sale across Bengaluru

Magicbricks announced its newly launched platform for Plots will offer prospective buyers a wide range of 13500-plus authority approved plots across the city.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X