For Quick Alerts
ALLOW NOTIFICATIONS  
For Daily Alerts

ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ನಿಮಗೆ ಗೊತ್ತಿರದ 5 ಸಂಗತಿ

ದೇಶದಲ್ಲಿ ಲಕ್ಷಾಂತರ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಸರಕಾರದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪಡೆದುಕೊಂಡಿವೆ. ಆದರೆ ಈ ಯೋಜನೆಗೆ ಸಂಬಂಧಿಸಿದಂತೆ ಕೆಲ ಪ್ರಮುಖ ನಿಯಮಗಳು ಈವರೆಗೂ ಬಹುತೇಕ ಜನರಿಗೆ ತಿಳಿದಿಲ್ಲ.

|

ದೇಶದಲ್ಲಿ ಲಕ್ಷಾಂತರ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಸರಕಾರದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪಡೆದುಕೊಂಡಿವೆ. ಆದರೆ ಈ ಯೋಜನೆಗೆ ಸಂಬಂಧಿಸಿದಂತೆ ಕೆಲ ಪ್ರಮುಖ ಅಂಶಗಳು, ನಿಯಮಗಳು ಈವರೆಗೂ ಬಹುತೇಕ ಜನರಿಗೆ ತಿಳಿದಿಲ್ಲ. ಇಲ್ಲಿನವರೆಗೂ ಬಹಳ ಚರ್ಚೆಯಾಗದ, ಬಹಳ ಜನರಿಗೆ ಮಾಹಿತಿ ಇರದ ಸುಕನ್ಯಾ ಸಮೃದ್ಧಿ ಯೋಜನೆಯ ಕೆಲ ಪ್ರಮುಖ ನಿಯಮಗಳನ್ನು ಈ ಅಂಕಣದಲ್ಲಿ ನಾವು ತಿಳಿಸುತ್ತಿದ್ದೇವೆ.

 

ಸುಕನ್ಯಾ ಸಮೃದ್ಧಿ ಯೋಜನೆ ಇದು ಹೆಣ್ಣು ಮಕ್ಕಳಿಗಾಗಿ ಇರುವ ಸಣ್ಣ ಉಳಿತಾಯದ ವಿಶೇಷ ಯೋಜನೆಯಾಗಿದೆ. ಹೆಣ್ಣು ಮಗುವಿನ ಉನ್ನತ ಶಿಕ್ಷಣ, ವಿವಾಹಗಳ ಖರ್ಚುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶೇಷವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಹೇಗೆ?

ಬಹುತೇಕರಿಗೆ ತಿಳಿಯದ ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಮುಖ ನಿಯಮಗಳು:

ಸುಕನ್ಯಾ ಸಮೃದ್ಧಿ ಖಾತೆಗೆ ರೂ. 1.5 ಲಕ್ಷಕ್ಕೂ ಹೆಚ್ಚು ಮೊತ್ತ ಹಾಕಿದರೆ ಏನಾಗುತ್ತದೆ?

ಸುಕನ್ಯಾ ಸಮೃದ್ಧಿ ಖಾತೆಗೆ ರೂ. 1.5 ಲಕ್ಷಕ್ಕೂ ಹೆಚ್ಚು ಮೊತ್ತ ಹಾಕಿದರೆ ಏನಾಗುತ್ತದೆ?

ಪ್ರತಿ ಆರ್ಥಿಕ ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗೆ ಗರಿಷ್ಠ ರೂ.1.5 ಲಕ್ಷ ಜಮೆ ಮಾಡಬಹುದು ಎಂಬುದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ನಿರ್ದಿಷ್ಟ ವರ್ಷದ ಏಪ್ರಿಲ್ 1 ರಿಂದ ಮುಂದಿನ ವರ್ಷದ ಮಾರ್ಚ 31 ರವರೆಗಿನ ಅವಧಿಯನ್ನು ಹಣಕಾಸು ವರ್ಷ ಎಂದು ಪರಿಗಣಿಸಲಾಗುತ್ತದೆ.

ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್‌ಗಳು ಸುಕನ್ಯಾ ಸಮೃದ್ಧಿ ಖಾತೆಗೆ ಪ್ರತಿ ಆರ್ಥಿಕ ವರ್ಷದಲ್ಲಿ ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ಜಮೆ ಮಾಡಿಕೊಳ್ಳುವುದಿಲ್ಲ. ಆದಾಗ್ಯೂ ಯಾವುದೋ ತಪ್ಪು ಲೆಕ್ಕಾಚಾರ ಅಥವಾ ಮತ್ತಾವುದೋ ತಪ್ಪಿನಿಂದ ಹೆಚ್ಚಿನ ಮೊತ್ತ ಖಾತೆಗೆ ಜಮೆಯಾದಲ್ಲಿ, ೧.೫ ಲಕ್ಷದ ಮೇಲಿನ ಹಣಕ್ಕೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ.
೧.೫ ಲಕ್ಷಕ್ಕೂ ಮೀರಿ ಜಮೆ ಮಾಡಲಾದ ಹಣ ಸರಕಾರದ ಬಳಿ ಸುರಕ್ಷಿತವಾಗಿ ಇರುತ್ತದೆ ಅಷ್ಟೆ. ಹೀಗೆ ಜಮೆ ಮಾಡಲಾದ ಹೆಚ್ಚುವರಿ ಮೊತ್ತವನ್ನು ಖಾತೆದಾರರು ಯಾವುದೇ ಸಮಯದಲ್ಲಿ ಮರಳಿ ಪಡೆಯಬಹುದಾಗಿದೆ.
ಹೀಗಾಗಿ ಅನವಶ್ಯಕವಾಗಿ ಸುಕನ್ಯಾ ಸಮೃದ್ಧಿ ಖಾತೆಗೆ ಹೆಚ್ಚುವರಿ ಮೊತ್ತ ಜಮೆ ಮಾಡಲು ಹೋಗಬೇಡಿ. ಒಂದೂವರೆ ಲಕ್ಷ ರೂಪಾಯಿ ಮೀರಿದ ಮೊತ್ತಕ್ಕೆ ನಿಮಗೆ ಒಂದು ರೂಪಾಯಿ ಸಹ ಬಡ್ಡಿ ಸಿಗಲಾರದು ಎಂಬುದು ಗೊತ್ತಿರಲಿ. 

ನಿಷ್ಕ್ರಿಯ ಖಾತೆಗೆ 15 ವರ್ಷಗಳ ನಂತರ ಉಳಿತಾಯ ಖಾತೆ ಬಡ್ಡಿದರ ಅನ್ವಯ
 

ನಿಷ್ಕ್ರಿಯ ಖಾತೆಗೆ 15 ವರ್ಷಗಳ ನಂತರ ಉಳಿತಾಯ ಖಾತೆ ಬಡ್ಡಿದರ ಅನ್ವಯ

ಸುಕನ್ಯಾ ಸಮೃದ್ಧಿ ಖಾತೆಗೆ ಪ್ರತಿವರ್ಷ ಕನಿಷ್ಠ 250 ರೂ. ವಂತಿಗೆಯನ್ನು ಸಲ್ಲಿಸಬೇಕು. ಯಾವುದೇ ವಂತಿಗೆ ಸಲ್ಲಿಕೆಯಾಗದ ಖಾತೆಗಳನ್ನು ನಿಷ್ಕ್ರಿಯ ಖಾತೆಗಳೆಂದು ಪರಿಗಣಿಸಲಾಗುತ್ತದೆ. ವರ್ಷಕ್ಕೆ 50 ರೂ. ದಂಡದ ಮೊತ್ತದೊಂದಿಗೆ ಬಾಕಿ ಕನಿಷ್ಠ ಮೊತ್ತವನ್ನು ಪಾವತಿಸಿ ಇಂಥ ನಿಷ್ಕ್ರಿಯ ಖಾತೆಗಳನ್ನು ಸಕ್ರಿಯಗೊಳಿಸಬಹುದಾಗಿದೆ.

ಆದರೆ ಒಂದೊಮ್ಮೆ ನಿಷ್ಕ್ರಿಯಗೊಂಡ ಖಾತೆಯನ್ನು ನಿಗದಿತ ೧೫ ವರ್ಷಗಳ ಅವಧಿಯೊಳಗೆ ಸಕ್ರಿಯಗೊಳಿಸದಿದ್ದಲ್ಲಿ, ಖಾತೆಯಲ್ಲಿ ಜಮೆಯಾದ ಮೊತ್ತಕ್ಕೆ ಮ್ಯಾಚುರಿಟಿ ಸಂದರ್ಭದಲ್ಲಿ ಜಾರಿಯಲ್ಲಿರುವ ಅಂಚೆ ಕಚೇರಿ ಉಳಿತಾಯ ಖಾತೆಯ ಬಡ್ಡಿ ದರದಂತೆ ಮಾತ್ರ ಬಡ್ಡಿಯನ್ನು ಪಾವತಿಸಲಾಗುವುದು.
ಅಕಸ್ಮಾತ್ ಏನಾದರೂ ಹೆಚ್ಚುವರಿ ಮೊತ್ತವು ಇಂಥ ನಿಷ್ಕ್ರಿಯ ಖಾತೆಗೆ ಜಮೆಯಾಗಿದ್ದರೆ, ಅದು ಬ್ಯಾಂಕ್ ಅಥವಾ ಅಂಚೆ ಕಚೇರಿಯ ಗಮನಕ್ಕೆ ಬರುತ್ತಲೇ ಆ ಮೊತ್ತವನ್ನು ತಕ್ಷಣ ಸರಕಾರದ ಖಾತೆಗೆ ಮರಳಿ ಪಡೆಯಲಾಗುತ್ತದೆ.
ಹಾಗಾಗಿ ಖಾತೆ ಆರಂಭಿಸಿದ ೧೫ ವರ್ಷಗಳನ್ನು ಮೀರಿ ಸುಕನ್ಯಾ ಸಮೃದ್ಧಿ ಖಾತೆ ನಿಷ್ಕ್ರಿಯವಾಗಿರದಂತೆ ಜಾಗೃತಿ ವಹಿಸಿ.
ಆದರೆ ಒಂದೊಮ್ಮೆ ಖಾತೆದಾರರ ಪೋಷಕರ ಮರಣದಿಂದ ಖಾತೆ ನಿಷ್ಕ್ರಿಯಗೊಂಡಿದ್ದಲ್ಲಿ ಈ ನಿಯಮ ಅನ್ವಯಿಸುವುದಿಲ್ಲ ಎಂಬುದು ಗೊತ್ತಿರಲಿ.

ಮೆಚುರಿಟಿ ನಂತರ ಬಡ್ಡಿ ಸಿಗಲಾರದು

ಮೆಚುರಿಟಿ ನಂತರ ಬಡ್ಡಿ ಸಿಗಲಾರದು

ಖಾತೆ ಆರಂಭಿಸಿದ 21 ವರ್ಷಗಳವರೆಗೆ ಅಥವಾ ಆ ಅವಧಿಯೊಳಗೆ ಖಾತೆ ಹೊಂದಿದ ಹೆಣ್ಣು ಮಗಳು ಮದುವೆ ಆಗುವವರೆಗೆ ಸುಕನ್ಯಾ ಸಮೃದ್ಧಿ ಯೋಜನೆ ಜಾರಿಯಲ್ಲಿರುತ್ತದೆ ಎಂಬುದು ಗೊತ್ತಿರುವ ಸಂಗತಿಯೇ ಆಗಿದೆ. 

ಈ ಯೋಜನೆಯಲ್ಲಿ ಸಿಗುವ ಪಕ್ವತಾ ಮೊತ್ತ ಸಂಪೂರ್ಣ ತೆರಿಗೆ ವಿನಾಯಿತಿಗೆ ಒಳಪಟ್ಟಿದ್ದು, ಒಳ್ಳೆಯ ಬಡ್ಡಿದರ ಸಹ ಈ ಯೋಜನೆಯ ಪ್ಲಸ್ ಪಾಯಿಂಟ್ ಆಗಿವೆ.
ಆದರೆ ಖಾತೆ ತೆರೆದ ೨೧ ವರ್ಷಗಳ ನಂತರ ಖಾತೆಯಲ್ಲಿರುವ ಮೊತ್ತಕ್ಕೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ ಎಂಬುದು ಸಹ ಗೊತ್ತಿರಬೇಕಾದ ಸಂಗತಿಯಾಗಿದೆ. ಹೀಗಾಗಿ ಖಾತೆಗೆ 21 ವರ್ಷ ಪೂರ್ಣಗೊಳ್ಳುತ್ತಲೇ ಖಾತೆಯನ್ನು ನಿಲ್ಲಿಸುವುದೇ ಸೂಕ್ತವಾಗಿದೆ.

 

ಅವಧಿ ಪೂರ್ವ ಹಣ ಹಿಂಪಡೆಯುವಿಕೆ

ಅವಧಿ ಪೂರ್ವ ಹಣ ಹಿಂಪಡೆಯುವಿಕೆ

ಖಾತೆಯಲ್ಲಿ ಜಮೆಯಾಗಿರುವ ಒಟ್ಟು ಮೊತ್ತದ ಶೇ.೫೦ ರಷ್ಟನ್ನು ಹೆಣ್ಣು ಮಗುವಿನ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಿಂಪಡೆಯಲು ಅವಕಾಶವಿದೆ. ಕಳೆದ ಆರ್ಥಿಕ ವರ್ಷದ ಕೊನೆಯಲ್ಲಿ ಖಾತೆಯಲ್ಲಿರುವ ಮೊತ್ತವನ್ನು ಈ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ.
ಅಂದರೆ ಕಳೆದ ಆರ್ಥಿಕ ವರ್ಷದ ಕೊನೆಯಲ್ಲಿ ಖಾತೆಯಲ್ಲಿ 10 ಲಕ್ಷ ರೂ. ಜಮೆ ಆಗಿದ್ದು, ಹೆಣ್ಣು ಮಗುವಿಗೆ 18 ವರ್ಷ ಪೂರ್ಣಗೊಂಡಿದ್ದರೆ ಉನ್ನತ ವಿದ್ಯಾಭ್ಯಾಸಕ್ಕಾಗಿ 5 ಲಕ್ಷ ರೂ.ಗಳನ್ನು ಮರಳಿ ಪಡೆಯಬಹುದಾಗಿದೆ.
ಹೀಗೆ ಹಣ ಹಿಂಪಡೆಯಬೇಕಾದರೆ ಹೆಣ್ಣು ಮಗುವಿಗೆ 18 ವರ್ಷ ಪೂರ್ಣಗೊಂಡಿರಬೇಕು ಅಥವಾ ಮಗು 10 ನೇ ತರಗತಿ ಪಾಸು ಮಾಡಿರುವುದು (ಯಾವುದು ಮೊದಲು ಬರುತ್ತೋ ಅದು) ಕಡ್ಡಾಯವಾಗಿದೆ.
ಆದರೆ ಉನ್ನತ ವಿದ್ಯಾಭ್ಯಾಸದ ವಾಸ್ತವ ಶುಲ್ಕದ ಆಧಾರದ ಮೇಲೆ ಮಾತ್ರ ಈ ರೀತಿ ಹಣ ಹಿಂಪಡೆಯುವುದು ಸಾಧ್ಯ. ಅಂದರೆ ಶುಲ್ಕ ಭರಿಸುವ ಕುರಿತು ದಾಖಲಾತಿ ನೀಡುವುದು ಕಡ್ಡಾಯವಾಗಿದೆ.

ಸುಕನ್ಯಾ ಸಮೃದ್ಧಿ ಖಾತೆ ವರ್ಗಾವಣೆ

ಸುಕನ್ಯಾ ಸಮೃದ್ಧಿ ಖಾತೆ ವರ್ಗಾವಣೆ

21 ವರ್ಷಗಳಾಗುವವರೆಗೆ ಒಂದೇ ಬ್ಯಾಂಕ್ ಅಥವಾ ಅಂಚೆ ಕಚೇರಿ ಶಾಖೆಯಲ್ಲಿ ಖಾತೆಯನ್ನು ಮುಂದುವರಿಸುವುದು ಕಡ್ಡಾಯವೇನಲ್ಲ. ಭಾರತದ ಯಾವುದೇ ಭಾಗಕ್ಕಾದರೂ ಖಾತೆಯನ್ನು ಸುಲಭವಾಗಿ ವರ್ಗಾಯಿಸಬಹುದಾಗಿದೆ. ಅಂಚೆ ಕಚೇರಿಯಿಂದ ಬ್ಯಾಂಕಿಗೆ ಅಥವಾ ಬ್ಯಾಂಕಿನಿಂದ ಅಂಚೆ ಕಚೇರಿಗೆ ಸಹ ಖಾತೆ ವರ್ಗಾವಣೆ ಸಾಧ್ಯ.
ಖಾತೆದಾರರು ಅಥವಾ ಅವರ ಪೋಷಕರ ವಿಳಾಸ ಬದಲಾವಣೆ ದಾಖಲೆ ನೀಡಿದಲ್ಲಿ ಶುಲ್ಕರಹಿತವಾಗಿ ಖಾತೆಯನ್ನು ವರ್ಗಾಯಿಸಬಹುದಾಗಿದೆ. ಇಲ್ಲದಿದ್ದಲ್ಲಿ 100 ರೂ. ಶುಲ್ಕ ಪಾವತಿಸಿ ಖಾತೆ ವರ್ಗಾವಣೆ ಮಾಡಿಕೊಳ್ಳಬಹುದು.

ಸರ್ಕಾರಿ ಯೋಜನೆ

ಸರ್ಕಾರಿ ಯೋಜನೆ

ಸರ್ಕಾರಿ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಸುಕನ್ಯಾ ಸಮೃದ್ಧಿ ಯೋಜನೆ: ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.. ಸುಕನ್ಯಾ ಸಮೃದ್ಧಿ ಯೋಜನೆ: ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ..

ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ ಸುಕನ್ಯಾ ಸಮೃದ್ಧಿ ಯೋಜನೆ: ಸರ್ಕಾರದ 8 ಹೊಸ ನಿಯಮಗಳು ಅನ್ವಯ

'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ

ಕೇವಲ 5 ನಿಮಿಷದಲ್ಲಿ ಮೊಬೈಲ್/ಆನ್ಲೈನ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ? ಕೇವಲ 5 ನಿಮಿಷದಲ್ಲಿ ಮೊಬೈಲ್/ಆನ್ಲೈನ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ?

ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಜನ್ ಔಷಧಿ ಮಳಿಗೆ ಪ್ರಾರಂಭಿಸಿ ಕೈತುಂಬಾ ಹಣ ಗಳಿಸಿ..ಜನ್ ಔಷಧಿ ಮಳಿಗೆ ಪ್ರಾರಂಭಿಸಿ ಕೈತುಂಬಾ ಹಣ ಗಳಿಸಿ..

English summary

5 unknown facts about Sukanya Samriddhi Yojana Rules

Sukanya Samridhi Scheme This is a small savings plan for girls.
Story first published: Thursday, September 20, 2018, 11:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X