For Quick Alerts
ALLOW NOTIFICATIONS  
For Daily Alerts

ಜನವರಿ 1ರಿಂದ ಚೆಕ್ ಗಳಿಗೆ ಪಾಸಿಟಿವ್ ಪೇ ಸಿಸ್ಟಮ್: ಏನಿದು ವ್ಯವಸ್ಥೆ?

By ಅನಿಲ್ ಆಚಾರ್
|

ಚೆಕ್ ಗಳಿಗೆ "ಪಾಸಿಟಿವ್ ಪೇ ಸಿಸ್ಟಮ್" ಪರಿಚಯಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಕೆಲ ತಿಂಗಳ ಹಿಂದೆಯೇ ನಿರ್ಧಾರ ಮಾಡಿದೆ. ಈ ಹೊಸ ನಿಯಮದ ಪ್ರಕಾರ, 50,000 ರುಪಾಯಿ ಮೇಲ್ಪಟ್ಟ ಪಾವತಿಗೆ ಪ್ರಮುಖ ಮಾಹಿತಿಗಳನ್ನು ಮತ್ತೊಮ್ಮೆ ದೃಢೀಕರಿಸಬೇಕಾಗುತ್ತದೆ. ಈ ಚೆಕ್ ಪಾವತಿಯ ಹೊಸ ನಿಯಮ ಜನವರಿ 1, 2021ರಿಂದ ಜಾರಿಗೆ ಬರಲಿದೆ.

ವಂಚನೆ ಹಾಗೂ ಚೆಕ್ ಪಾವತಿಯಲ್ಲಿನ ದುರುಪಯೋಗ ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಆಗಸ್ಟ್ ತಿಂಗಳಲ್ಲಿ ನಡೆದ ಹಣಕಾಸು ನೀತಿ ಸಭೆಯಲ್ಲಿ ಹೇಳಿದ್ದರು.

ಪಾಸಿಟಿವ್ ಪೇ ಸಿಸ್ಟಮ್ ಅಂದರೇನು?
ಪಾಸಿಟಿವ್ ಪೇ ಎಂಬುದು ಆಟೋಮೆಟೆಡ್ ವಂಚನೆ ಪತ್ತೆ ಹಂಚುವ ಮಾರ್ಗ. ಚೆಕ್ ನೀಡುವಾಗಲೇ ಆ ಖಾತೆದಾರರು ಬ್ಯಾಂಕ್ ಗೆ ಒದಗಿಸಿದ್ದ ಮಾಹಿತಿಯಾದ ಚೆಕ್ ಸಂಖ್ಯೆ, ದಿನಾಂಕ, ಯಾರ ಹೆಸರಿಗೆ ಚೆಕ್ ನೀಡಲಾಗಿದೆ, ಖಾತೆ ಸಂಖ್ಯೆ, ಮೊತ್ತ ಇತ್ಯಾದಿಯನ್ನು ನಗದು ಮಾಡಿಕೊಳ್ಳಲು ನೀಡುವ ಮುನ್ನ ಪುನರ್ ಪರಿಶೀಲಿಸಲಾಗುತ್ತದೆ.

ಜನವರಿ 1ರಿಂದ ಚೆಕ್ ಗಳಿಗೆ ಪಾಸಿಟಿವ್ ಪೇ ಸಿಸ್ಟಮ್: ಏನಿದು ವ್ಯವಸ್ಥೆ?

ಈ ಹೊಸ ನಿಯಮದ ಬಗ್ಗೆ ಗೊತ್ತಿರಬೇಕಾದ 5 ಸಂಗತಿಗಳು
* ದೊಡ್ಡ ಮೊತ್ತದ ಚೆಕ್ ಗಳ ಪ್ರಮುಖ ಮಾಹಿತಿಯನ್ನು ಮತ್ತೊಮ್ಮೆ ಖಾತ್ರಿ ಪಡಿಸುವ ಪ್ರಕ್ರಿಯೆಯೇ ಪಾಸಿಟಿವ್ ಪೇ.

* ಈ ಪ್ರಕ್ರಿಯೆಯಲ್ಲಿ ಚೆಕ್ ವಿತರಿಸುವವರು ಎಲೆಕ್ಟ್ರಾನಿಕ್ ರೂಪದಲ್ಲಿ ಸಲ್ಲಿಸುತ್ತಾರೆ. ಎಸ್ಸೆಮ್ಮೆಸ್, ಮೊಬೈಲ್ ಅಪ್, ಇಂಟರ್ ನೆಟ್ ಬ್ಯಾಂಕಿಂಗ್, ಎಟಿಎಂ ಮುಂತಾದವುಗಳ ಮೂಲಕ ನೀಡಲಾಗುತ್ತದೆ. ಚೆಕ್ ಗೆ ಸಂಬಂಧಿಸಿದ ಕೆಲವು ಕನಿಷ್ಠ ಮಾಹಿತಿಯಾದ ದಿನಾಂಕ, ಫಲಾನುಭವಿ ಹೆಸರು, ಮೊತ್ತ ಮುಂತಾದ ಮಾಹಿತಿಯನ್ನು ಡ್ರಾಯಿ ಬ್ಯಾಂಕ್ ಗೆ ನೀಡಲಾಗುತ್ತದೆ. ಸಿಟಿಎಸ್ ಮೂಲಕ ಸಲ್ಲಿಸಲಾದ ಚೆಕ್ ಅನ್ನು ಪರಿಶೀಲಿಸಲಾಗುತ್ತದೆ. ಚೆಕ್ ಸಲ್ಲಿಕೆ ಆಗುವ ಬ್ಯಾಂಕ್ ಅಥವಾ ಡ್ರಾಯಿ ಬ್ಯಾಂಕ್ ನಿಂದ ಯಾವುದಾದರೂ ವ್ಯತ್ಯಾಸ ಕಂಡುಬಂದಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ.

50,000 ರುಪಾಯಿ ಮೇಲ್ಪಟ್ಟ ಮೊತ್ತದ ಚೆಕ್ ಗೆ ಜನವರಿ 1ರಿಂದ ಹೊಸ ನಿಯಮ50,000 ರುಪಾಯಿ ಮೇಲ್ಪಟ್ಟ ಮೊತ್ತದ ಚೆಕ್ ಗೆ ಜನವರಿ 1ರಿಂದ ಹೊಸ ನಿಯಮ

* ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ಪಾಸಿಟಿವ್ ಪೇ ವ್ಯವಸ್ಥೆಯನ್ನು ಸಿಟಿಎಸ್ ನಲ್ಲಿ ಅಭಿವೃದ್ಧಿ ಪಡಿಸುತ್ತದೆ. ಅದರ ಬದಲಿಗೆ ಬ್ಯಾಂಕ್ ಗಳು ಎಲ್ಲ ಖಾತೆದಾರರಿಗೆ 5,00,000 ರುಪಾಯಿ ಮತ್ತು ಮೇಲ್ಪಟ್ಟ ಮೊತ್ತಕ್ಕೆ ಪಾಸಿಟಿವ್ ಪೇ ಸಾಧ್ಯ ಮಾಡುತ್ತವೆ.

* ಈ ಮೇಲ್ಕಂಡ ಎಲ್ಲ ಸೂಚನೆಗಳನ್ನು ಅನುಸರಿಸಿದ ಚೆಕ್ ಗಳನ್ನು ಮಾತ್ರ ಸಿಟಿಎಸ್ ಗ್ರಿಡ್ ನಲ್ಲಿ ವ್ಯಾಜ್ಯ ಪರಿಹಾರಕ್ಕೆ ಎಂದು ಪರಿಗಣಿಸಲಾಗುತ್ತದೆ. ಸದಸ್ಯ ಬ್ಯಾಂಕ್ ಗಳು ಇಂಥದ್ದೇ ವ್ಯವಸ್ಥೆಯನ್ನು ಸಿಟಿಎಸ್ ಆಚೆಗೂ ಸಂಗ್ರಹವಾದ ಹಾಗೂ ಕ್ಲಿಯರ್ ಆದ ಚೆಕ್ ಗಳಿಗೆ ಅನ್ವಯಿಸಬಹುದು.

ಈ ಪಾಸಿಟಿವ್ ಪೇ ಬಗ್ಗೆ ಗ್ರಾಹಕರಲ್ಲಿ ಎಸ್ಸೆಮ್ಮೆಸ್ ಅಲರ್ಟ್ಸ್, ಶಾಖೆಗಳಲ್ಲಿ ಡಿಸ್ ಪ್ಲೇ ಮಾಡುವ ಮೂಲಕ ಹಾಗೂ ಎಟಿಎಂಗಳಲ್ಲಿ, ಬ್ಯಾಂಕ್ ವೆಬ್ ಸೈಟ್ ಹಾಗೂ ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಜಾಗೃತಿ ಮೂಡಿಸುವಂತೆ ಸಲಹೆ ನೀಡಲಾಗಿದೆ.

English summary

Cheque Payments Rule Changing From January 1; Here’s All You Need To Know In Kannada

Here is the must know 5 facts about positive pay system for cheque, which will be introduced from January 1, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X