For Quick Alerts
ALLOW NOTIFICATIONS  
For Daily Alerts

ಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್‌ ಐಡಿಯಾಗಳು

|

ಚಿನ್ನ ಎಂದರೆ ಭಾರತೀಯರಿಗೆ ಎಲ್ಲಿಲ್ಲದ ಪ್ರೀತಿ. ನಾನಾ ಕಾರಣಗಳಿಂದ ಚಿನ್ನವನ್ನು ಖರೀದಿ ಮಾಡುತ್ತಾರೆ. ಚಿನ್ನದ ಮೇಲಿನ ಹೂಡಿಕೆಯು ಎಲ್ಲಾ ಕಾಲಕ್ಕೂ ಅನುಕೂಲಕರ. ಚಿನ್ನದ ಮೇಲೆ ಹೂಡಿಕೆ ಮಾಡಿದರೆ ನಷ್ಟವಂತೂ ಆಗುವುದಿಲ್ಲ ಎಂಬ ನಂಬಿಕೆ ಎಲ್ಲರಲ್ಲೂ ಸಹಜ.

ವಿಶ್ವದಲ್ಲಿ ಭಾರತೀಯರು ಹಳದಿ ಲೋಹದ 2ನೇ ಬಹುದೊಡ್ಡ ಗ್ರಾಹಕರಾಗಿದ್ದಾರೆ. ಖರೀದಿಸಿದ್ದ ಚಿನ್ನ ಕಷ್ಟಕಾಲದಲ್ಲಿ ನೆರವಾಗುತ್ತದೆ ಎನ್ನುವುದು ತಪ್ಪೇನಲ್ಲ. ಹಿಂದಿನಿಂದಲೂ ಬೆಳೆದುಕೊಂಡು ಬಂದಿರುವ ಸಾಂಪ್ರದಾಯಿಕ ನಡವಳಿಕೆಯಾಗಿದೆ. ಹಾಗಾಗಿಯೇ ಚಿನ್ನದ ಮೇಲಿನ ಹೂಡಿಕೆಯು ನಂಬಿಕೆಯನ್ನು ಉಳಿಸಿಕೊಂಡಿದೆ.

ಚಿನ್ನ-ಬೆಳ್ಳಿ ಮೇಲೆ ಹೂಡಿಕೆ ಮಾಡಲು ಬಯಸಿದವರು ಯಾವ ರೀತಿಯಲ್ಲಿ ಹಣ ಹೂಡಿಕೆ ಮಾಡಬಹುದು ಎಂದು ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯವಾಗಿದೆ. ಚಿನ್ನದ ಅಂಗಡಿಗೆ ತೆರಳಿ ಚಿನ್ನ ಖರೀದಿ ಮಾಡಿದರಷ್ಟೇ ಹೂಡಿಕೆ ಮಾಡಿದಂತೆ ಎನ್ನುವುದು ಕೇವಲ ಒಂದು ವಿಧಾನವಷ್ಟೇ ಆಗಿದೆ. ಚಿನ್ನದ ಮೇಲೆ ಹೇಗೆ ಹೂಡಿಕೆ ಮಾಡುವುದು ಎಂಬುದಕ್ಕೆ ಈ ಕೆಳಗಿನ ವಿವರಗಳಲ್ಲಿ ಸಲಹೆಗಳನ್ನು ನೀಡಲಾಗಿದೆ ಓದಿ.

ಚಿನ್ನದ ನಾಣ್ಯಗಳು, ಗಟ್ಟಿಗಳನ್ನು ಖರೀದಿಸುವುದು

ಚಿನ್ನದ ನಾಣ್ಯಗಳು, ಗಟ್ಟಿಗಳನ್ನು ಖರೀದಿಸುವುದು

ಚಿನ್ನವನ್ನು ಭೌತಿಕವಾಗಿ ಖರೀದಿ ಮಾಡಿ ಅವುಗಳ ಮೇಲೆ ಹೂಡಿಕೆ ಮಾಡಲು ಬಯಸುವವರಿಗೆ ಇದು ಉತ್ತಮ ಮಾರ್ಗವಾಗಿದೆ. ಚಿನ್ನದ ನಾಣ್ಯಗಳು ಇಲ್ಲವೇ ಗಟ್ಟಿಗಳು(ಬಾರ್) ಅತ್ಯಂತ ಹೆಚ್ಚು ಶುದ್ಧತೆಯಿಂದ ಕೂಡಿರುತ್ತದೆ. ಹೀಗಾಗಿ ಹೂಡಿಕೆದಾರರು ಚಿನ್ನದ ನಾಣ್ಯಗಳು ಇಲ್ಲವೇ ಗಟ್ಟಿಗಳನ್ನು ಖರೀದಿಸಲು ಆಸಕ್ತಿ ತೋರುತ್ತಾರೆ.

ಆಭರಣಗಳ ಮೇಲಿನ ಹೂಡಿಕೆಗಿಂತ ನಾಣ್ಯಗಳು ಹಾಗೂ ಚಿನ್ನದ ಗಟ್ಟಿ ಖರೀದಿಯು ಉತ್ತಮ ಹೂಡಿಕೆಯಾಗಿದೆ. ಏಕೆಂದರೆ ನೀವು ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ದರವನ್ನು ಕೊಟ್ಟು ನಾಣ್ಯಗಳು ಇಲ್ಲವೇ ಚಿನ್ನದ ಗಟ್ಟಿಯನ್ನು ಖರೀದಿಸುತ್ತೀರಿ. ಆದರೆ ಆಭರಣಗಳನ್ನು ನೀವು ಮಾರುಕಟ್ಟೆ ದರಗಳ ಜೊತೆಗೆ ಸುಮಾರು 15ಪರ್ಸೆಂಟ್ ವರೆಗೂ ತಯಾರಿಕಾ ವೆಚ್ಚವನ್ನು ಪಾವತಿಸಬೇಕಾಗುತ್ತದೆ.

 

ಇಟಿಎಫ್‌ಗಳ ಮೂಲಕ ಚಿನ್ನದ ಹೂಡಿಕೆ

ಇಟಿಎಫ್‌ಗಳ ಮೂಲಕ ಚಿನ್ನದ ಹೂಡಿಕೆ

ETF(ಎಕ್ಸೇಂಜ್ ಟ್ರೇಡ್ ಫಂಡ್‌ಗಳು) ಮೇಲಿನ ಚಿನ್ನದ ಹೂಡಿಕೆಯು ಭೌತಿಕ ಚಿನ್ನವನ್ನು ಪ್ರತಿನಿಧಿಸುವ ಘಟಕಗಳಾಗಿವೆ. ಅಂದರೆ ETF ಮ್ಯುಚುವಲ್ ಫಂಡ್ ಹೂಡಿಕೆ ವಿಧಾನವಾಗಿದೆ. ಷೇರುಪೇಟೆಯಲ್ಲಿ ಜಾಲಾಡುವವರಿಗೆ, ಅಲ್ಪಸ್ವಲ್ಪ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿ ಅನುಭವ ಉಳ್ಳವರಿಗೆ ಇದು ಸೂಕ್ತ ವಿಧಾನ. ಬಂಡವಾಳ ಹೂಡಿಕೆಯನ್ನು ಚಿನ್ನವಾಗಿ ಪರಿವರ್ತಿಸಿ ಶೇಖರಿಸಿಡುವುದು ಈ ವಿಧಾನದ ಮಾದರಿ.

ETF ಮೂಲಕ ಚಿನ್ನವನ್ನು ಖರೀದಿಯು ಎಲೆಕ್ಟ್ಟಾನಿಕ್ ಮಾದರಿಯಲ್ಲಿ ವ್ಯಾಪಾರ ಮಾಡಿದಂತಾಗುತ್ತದೆ. ಇದು ಡಿಜಿಟಲ್ ಅಥವಾ ಕಾಗದ ರೂಪದಲ್ಲಿರಬಹುದು. ಯೂನಿಟ್ ಲೆಕ್ಕದಲ್ಲಿ ಇಲ್ಲಿ ಚಿನ್ನವನ್ನು ಮಾರಾಟ ಮಾಡಲಾಗುತ್ತದೆ. ಪ್ರತಿ ಯೂನಿಟ್ ಒಂದು ಗ್ರಾಂ ಚಿನ್ನಕ್ಕೆ ಸಮನಾಗಿರುತ್ತದೆ. ಭದ್ರತೆಯ ಬಗ್ಗೆ ಇಲ್ಲಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ತಯಾರಿಕಾ ಶುಲ್ಕವೂ ಇರುವುದಿಲ್ಲ. ಸಣ್ಣ ಗಾತ್ರದಲ್ಲಿ ಸಹ ಇಲ್ಲಿ ಹೂಡಿಕೆ ಮಾಡಬಹುದು.

ಚಿನ್ನದ ಬಾಂಡ್ ಯೋಜನೆ

ಚಿನ್ನದ ಬಾಂಡ್ ಯೋಜನೆ

ಚಿನ್ನದ ಖರೀದಿಯನ್ನು ಹೂಡಿಕೆ ಎಂದು ಪರಿಗಣಿಸುವ ಜನರಿಗೆ ಈ ಯೋಜನೆ ಸೂಕ್ತ. ಆಭರಣ ಖರೀದಿಸುವುದಕ್ಕಿಂತಲೂ ಇದು ಸೂಕ್ತ. ನಿರ್ದಿಷ್ಟ ಅವಧಿಯಲ್ಲಿ ಬಾಂಡ್‌ಗಳನ್ನು ವಿತರಿಸಲಾಗುತ್ತದೆ. ಮಾರುಕಟ್ಟೆ ದರಕ್ಕೆ ಚಿನ್ನವನ್ನು ಬಾಂಡ್ ರೂಪದಲ್ಲಿ ಖರೀದಿಸಿ, ಯೋಜನೆ ಪೂರ್ಣವಾದಾಗ ಅಂದಿನ ಮಾರುಕಟ್ಟೆ ದರದಲ್ಲಿ ಹಣ ಪಡೆಯಬಹುದು. ಅಲ್ಲದೆ ಇದಕ್ಕೆ ವಾರ್ಷಿಕ 2.5 ಪರ್ಸೆಂಟ್ ಬಡ್ಡಿ ಲಭ್ಯವಿದ್ದು, ಬೇಕಾದರೆ ಬಾಂಡ್ ಅಡವಿಟ್ಟು ಸಾಲ ಬೇಕಾದರೂ ಪಡೆಯಬಹುದು.

ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?

ಚಿನ್ನ ಉಳಿತಾಯ ಯೋಜನೆಗಳು

ಚಿನ್ನ ಉಳಿತಾಯ ಯೋಜನೆಗಳು

ಚಿನ್ನ ಅಥವಾ ಆಭರಣ ಉಳಿತಾಯ ಯೋಜನೆಗಳು ಎರಡು ರೂಪದಲ್ಲಿರುತ್ತವೆ. ಒಂದು ನಿರ್ಧಿಷ್ಟ ಅವಧಿಯಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಇರಿಸುವುದಾಗಿದೆ. ಯೋಜನೆಯು ಪೂರ್ಣಗೊಂಡಾಗ ಬೋನಸ್ ಮೊತ್ತವನ್ನು ಒಳಗೊಂಡಂತೆ ಠೇವಣಿ ಮಾಡಿದ ಒಟ್ಟು ಹಣಕ್ಕೆ ಸಮನಾದ ಮೌಲ್ಯದಲ್ಲಿ ಚಿನ್ನವನ್ನು ಆಭರಣಕಾರರಿಂದ ಖರೀದಿಸಬಹುದು.

ಡಿಜಿಟಲ್ ಚಿನ್ನ ಖರೀದಿ

ಡಿಜಿಟಲ್ ಚಿನ್ನ ಖರೀದಿ

ಈಗ ಆನ್‌ಲೈನ್‌ ಬೇಕಾದರೂ ಚಿನ್ನದ ನಾಣ್ಯಗಳು, ಗಟ್ಟಿಗಳು ಮತ್ತು ಆಭರಣಗಳನ್ನು ಖರೀದಿಸಬಹುದು. ಡಿಜಿಟಲ್ ಗೋಲ್ಡ್ ಎಂಬ ಯೋಜನೆಯ ಮೂಲಕ ಪೇಟಿಎಂ ಮೊಬೈಲ್ ವ್ಯಾಲೆಟ್ ಮೂಲಕ, ಗೋಲ್ಡ್‌ರಷ್‌ ಎಂದು ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಕಾಣಬಹುದು. ಹಾಗೆಯೇ ಮೋತಿಲಾಲ್ ಓಸ್ವಾಲ್ ಮಿ-ಗೋಲ್ಡ್ ಎಂಬ ಡಿಜಿಟಲ್ ಚಿನ್ನದ ಖರೀದಿಯ ಯೋಜನೆಯನ್ನು ಪರಿಚಯಿಸಿದೆ. ಇವೆಲ್ಲವೂ ಸರ್ಕಾರಿ ಸ್ವಾಮ್ಯದ MMTC, ಹಾಗೂ ಸ್ವಿಟ್ಜರ್‌ಲೆಂಡ್ ಮೂಲದ PAMP ಸಹಯೋಗದಿಂದ ನೀಡಲಾಗುತ್ತದೆ.

ದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳುದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳು

English summary

Different Types of Gold Investment Plans

These are the gold investment plans for who are interested to invest money in gold
Story first published: Saturday, December 14, 2019, 14:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X