For Quick Alerts
ALLOW NOTIFICATIONS  
For Daily Alerts

RBI MPC Meet: ಬೆಲೆ ಏರಿಕೆ ನಿಯಂತ್ರಣಕ್ಕೆ ಆರ್‌ಬಿಐ ಹೆಚ್ಚಿನ ಒತ್ತು

|

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ನಿರ್ಧಾರವನ್ನು ಇಂದು ಪ್ರಕಟಿಸಲಿದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಶುಭ ಸುದ್ದಿ ಸಿಗುವುದೇ ಕಾದು ನೋಡಬೇಕಿದೆ. ಸದ್ಯಕ್ಕೆ ಜನವರಿ 2022ರಿಂದ ಇಲ್ಲಿ ತನಕ ಅಗತ್ಯ ವಸ್ತುಗಳು ಸೇರಿದಂತೆ ಪ್ರಮುಖ ಪದಾರ್ಥಗಳ ಬೆಲೆ ಏರಿಕೆ ಪ್ರಮಾಣದತ್ತ ಒಂದು ನೋಟ ಇಲ್ಲಿದೆ..

 

ಬೆಲೆ ಏರಿಕೆ ನಿಯಂತ್ರಣ, ಜಿಡಿಪಿ ಪ್ರಗತಿ, ವಿತ್ತೀಯ ಕೊರತೆ ಅಲ್ಲದೆ ರೆಪೋ ದರ ಬಗ್ಗೆ ಶಕ್ತಿಕಾಂತ್ ಅಂಡ್ ಟೀಂ ಏನು ಹೇಳಬಹುದು ಎಂಬುದರ ಬಗ್ಗೆ ಎಲ್ಲರ ಗಮನ ನೆಟ್ಟಿದೆ. ಈ ನಡುವೆ ಲಭ್ಯ ಮಾಹಿತಿಯಂತೆ ಮೇ ತಿಂಗಳಿನಿಂದ ರೆಪೊ ದರವನ್ನು 140 ಬೇಸಿಸ್ ಪಾಯಿಂಟ್‌ಗಳಿಂದ (ಬಿಪಿಎಸ್) ಹೆಚ್ಚಿಸಿರುವ ಆರ್‌ಬಿಐ ಮತ್ತೊಮ್ಮೆ 50-ಬಿಪಿಎಸ್ ಹೆಚ್ಚಳಕ್ಕೆ ಮುಂದಾಗಬಹುದು ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಗಿನ ದರ ಶೇ.5.4ರಷ್ಟಿದೆ.ಇದು ಮೂರು ವರ್ಷಗಳ ಗರಿಷ್ಠ ದರವನ್ನು ಶೇಕಡಾ 5.9 ಕ್ಕೆ ಕೊಂಡೊಯ್ಯುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಹಣದುಬ್ಬರದ ಚಿಂತೆ
ಗ್ರಾಹಕ ಬೆಲೆ ಸೂಚ್ಯಂಕವು (CPI) ಎರಡೂ ಕಡೆಗಳಲ್ಲಿ 2 ಶೇಕಡಾ ಮಾರ್ಜಿನ್‌ನೊಂದಿಗೆ ಶೇಕಡಾ 4 ರಷ್ಟಿದೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರವು ಕೇಂದ್ರ ಬ್ಯಾಂಕ್‌ಗೆ ವಹಿಸಿದೆ, ಆದರೆ ರೀಟೈಲ್ ಹಣದುಬ್ಬರವು ಜನವರಿಯಿಂದ ಆರ್‌ಬಿಐನ ಸೌಕರ್ಯ ವಲಯದಲ್ಲೇ ಉಳಿದಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಆಗಸ್ಟ್‌ನಲ್ಲಿ ಹಣದುಬ್ಬರವು ಶೇಕಡಾ 7 ರಷ್ಟಿತ್ತು.

RBI MPC Meet: ಬೆಲೆ ಏರಿಕೆ ನಿಯಂತ್ರಣಕ್ಕೆ ಆರ್‌ಬಿಐ ಹೆಚ್ಚಿನ ಒತ್ತು

ಜನವರಿ 2022ರಿಂದ ಬೆಲೆ ಏರಿಕೆ ಪ್ರಮಾಣ
ಖಾದ್ಯ ತೈಲ

 • ಕಡ್ಲೆಕಾಯಿ ಎಣ್ಣಿ ಶೇ 9.06
 • ಸೂರ್ಯಕಾಂತಿ ಎಣ್ಣೆ: ಶೇ 22.76
 • ಅಕ್ಕಿ ಬ್ರಾನ್ ಎಣ್ಣೆ: ಶೇ 8.00
 • ವನಸ್ಪತಿ: ಶೇ 18.26
 • ತೆಂಗಿನಕಾಯಿ ಎಣ್ಣೆ: ಶೇ 5.17

ಸಾಂಬಾರು ಪದಾರ್ಥ ಬೆಲೆ ಏರಿಕೆ ಪ್ರಮಾಣ

 • ಗರಂ ಮಸಾಲ: ಶೇ 2.50
 • ಮೆಣಸಿನ ಪುಡಿ: ಶೆ 14.30
 • ಧನಿಯ: ಶೇ 5.80
 • ಜೀರಿಗೆ: ಶೇ 17.30
 • ಅರಿಶಿನ ಪುಡಿ: ಶೇ 4.30

ಬ್ರ್ಯಾಂಡೆಡ್ ಅಗತ್ಯ ಆಹಾರ ಪದಾರ್ಥ

ಗೃಹಬಳಕೆ ಹಾಗೂ ಆರೋಗ್ಯ ಆರೈಕೆ ವಸ್ತು

 • ಸೋಪ್: ಶೇ 1
 • ಡಿಟರ್ಜೆಂಟ್: ಶೇ 3
 • ಕೂದಲಿಗೆ ಬಣ್ಣ: ಶೇ 5.30
 • ಹೇರ್ ಆಯಿಲ್: ಶೇ 11.20
 • ಡಿಯೋ, ಬಾಡಿ ಸ್ಪ್ರೇ: ಶೇ 6.10

ರೀಟೈಲ್ ಮಾರುಕಟ್ಟೆ ಪ್ಲಾಟ್‌ಫಾರ್ಮ್ ಬಿಝೋಮ್ ಪ್ರಕಾರ, ಈ ವರ್ಷದ ಜನವರಿಯಿಂದ ತೈಲ ಮತ್ತು ಮಸಾಲೆಗಳಿಂದ ಅಕ್ಕಿ ಮತ್ತು ಕೂದಲಿನ ಎಣ್ಣೆಗಳವರೆಗೆ ದೈನಂದಿನ ದಿನಸಿಗಳ ಬೆಲೆಗಳು 10% ಮತ್ತು 22% ರ ನಡುವೆ ಏರಿಕೆಯಾಗಿದೆ. ಆಹಾರೇತರ ವರ್ಗಗಳಲ್ಲಿ ಬೆಲೆ ಏರಿಕೆಗಳು ಅಷ್ಟಾಗಿ ಏರಿಕೆಯಾಗಿಲ್ಲದಿದ್ದರೂ, ಸೋಪ್‌ಗಳು ಮತ್ತು ಡಿಟರ್ಜೆಂಟ್‌ಗಳ ಬೆಲೆಗಳು 1-3% ರಷ್ಟು ಹೆಚ್ಚಾಗಿವೆ.

ರೆಪೋದರ ಏರಿಕೆ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಕಳೆದ ತಿಂಗಳು ಮತ್ತೆ ಏರಿಕೆ ಮಾಡಿದೆ. ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 5.4ಕ್ಕೆ ತಲುಪಿದೆ. ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು.

ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಆ ಬಳಿಕ ಆರ್‌ಬಿಐ ಜೂನ್‌ ತಿಂಗಳಿನಲ್ಲಿ ಮತ್ತೆ ರೆಪೋ ದರ ಹೆಚ್ಚಳ ಮಾಡಿತ್ತು. ಜೂನ್‌ನಲ್ಲಿ ರೆಪೋ ದರವನ್ನು ಆರ್‌ಬಿಐ 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಬಳಿಕ ಮತ್ತೆ 50 ಮೂಲಾಂಕ ಏರಿಕೆ ಮಾಡಿದೆ. ಸೆಪ್ಟೆಂಬರ್‌ನಲ್ಲಿಯೂ ಮತ್ತೆ ದರ ಹೆಚ್ಚಳ ನಿರೀಕ್ಷೆ ಇದೆ.

English summary

RBI MPC Meet Focus on Inflation: Prices of daily essentials rise

RBI MPC Meet Focus on Inflation: Prices of daily essentials rise. The decision of RBI Governor Shaktikanta Das headed six-member Monetary Policy Committee (MPC) will be announced today(Sept 30)
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X