For Quick Alerts
ALLOW NOTIFICATIONS  
For Daily Alerts

ಷೇರು ಖರೀದಿ ಮಾಡುವುದಕ್ಕೆ ಇಲ್ಲಿದೆ ಅದ್ಭುತ ಸೂತ್ರ

|

ಯಾವ ಕಂಪೆನಿ ಷೇರುಗಳನ್ನು ಖರೀದಿ ಮಾಡಬೇಕು? ಇದು ಸಾಮಾನ್ಯವಾದ ಪ್ರಶ್ನೆ. ಈ ಬಗ್ಗೆ ಹೂಡಿಕೆದಾರರೊಬ್ಬರು ಹೇಗೆ ಆಲೋಚನೆ ಮಾಡಬಹುದು ಎಂಬುದನ್ನು ನಿಮ್ಮೆದುರು ಇಡುವ ಉದ್ದೇಶ ಇರುವಂಥ ಲೇಖನ ಇದು. ಅಂದ ಹಾಗೆ ಇದು ಒಬ್ಬ ಹೂಡಿಕೆದಾರರ ಆಲೋಚನೆ. ವ್ಯಕ್ತಿಯಿಂದ ವ್ಯಕ್ತಿಗೆ ಇದು ಬದಲಾಗಬಹುದು.

ಆದರೆ, ಈ ಲೇಖನದಲ್ಲಿ ಒಬ್ಬ ವ್ಯಕ್ತಿ ಹೇಗೆ ತನ್ನ ಆಯ್ಕೆಯನ್ನು ನಿರ್ಧಾರ ಮಾಡಬಹುದು ಎಂಬುದಕ್ಕೆ ಉದಾಹರಣೆ ಕಣ್ಣೆದುರು ಇದೆ. ಒಂದು ಕಂಪೆನಿಯ ಲಾಭ- ನಷ್ಟ, ಭವಿಷ್ಯ, ಅವಕಾಶಗಳು ಇತ್ಯಾದಿಯನ್ನೆಲ್ಲ ನೋಡಬೇಕಾದದ್ದು ಹೌದು. ಆದರೆ ಅದಕ್ಕೂ ಮುನ್ನ ಕೆಲವು ಪ್ರಾಥಮಿಕ ಅಂಶಗಳನ್ನು ಮಾತ್ರ ಇಲ್ಲಿ ನೀಡಲಾಗುತ್ತಿದೆ.

ಎಫ್ ಎಂಸಿಜಿ, ಫಾರ್ಮಾಸ್ಯುಟಿಕಲ್ಸ್, ಹೆಲ್ತ್ ಕೇರ್

ಎಫ್ ಎಂಸಿಜಿ, ಫಾರ್ಮಾಸ್ಯುಟಿಕಲ್ಸ್, ಹೆಲ್ತ್ ಕೇರ್

ಎಫ್ ಎಂಸಿಜಿ, ಫಾರ್ಮಾಸ್ಯುಟಿಕಲ್ಸ್, ಹೆಲ್ತ್ ಕೇರ್ ಇವು ಮೂರೂ ಯಾವಾಗಲೂ ಮಿರಿ ಮಿರಿ ಮಿಂಚುವ ವಲಯಗಳು. ಎಫ್ ಎಂಸಿಜಿ ಅಂದರೆ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್. ಗ್ರಾಹಕರು ಇವುಗಳನ್ನು ಪದೇ ಪದೇ ಖರೀದಿಸುತ್ತಾರೆ. ಆಯ್ಕೆ ಮಾಡಿಕೊಳ್ಳುವುದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕಡಿಮೆ ಬೆಲೆಯದ್ದಾಗಿರುತ್ತದೆ. ಶೆಲ್ಫ್ ಗಳಲ್ಲೇ ಬಹಳ ಕಾಲ ಮಾರಾಟ ಆಗದೇ ಉಳಿಯಲ್ಲ. ಏಕೆಂದರೆ ಇವುಗಳನ್ನು ವೇಗವಾಗಿ ಬಳಸುತ್ತಾರೆ. ಆನ್ ಲೈನ್ ನಲ್ಲಿ ದರವನ್ನು ಹೋಲಿಕೆ ಮಾಡಿ, ಖರೀದಿ ಮಾಡುತ್ತಾರೆ. ವಿಪರೀತ ದೊಡ್ಡ ಪ್ರಮಾಣದಲ್ಲಿ ಮಾರಾಟ ಆಗುವಂಥ ಸರಕುಗಳು ಇವು. ಟೂಥ್ ಪೇಸ್ಟ್, ಬ್ರಷ್, ಸೋಪ್, ಪ್ಯಾಕೇಜ್ಡ್ ಫುಡ್ಸ್, ತಂಪು ಪಾನೀಯ, ತಂಬಾಕು ಪದಾರ್ಥ... ಇವುಗಳ ಜತೆ ಎಲೆಕ್ಟ್ರಾನಿಕ್ಸ್ ಕೂಡ ಒಳಗೊಳ್ಳುತ್ತದೆ. ಮೊಬೈಲ್ ಫೋನ್ಸ್, ಎಂಪಿತ್ರಿ ಪ್ಲೇಯರ್ಸ್, ಹೆಡ್ ಫೋನ್ ಇತ್ಯಾದಿ. ಇಂಥ ಎಫ್ ಎಂಸಿಜಿ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪೆನಿಯ ಷೇರುಗಳು ಎವರ್ ಗ್ರಿನ್ ಆಗಿರುತ್ತವೆ. ಉದಾಹರಣೆ: ಕೋಲ್ಗೇಟ್, ಎಚ್ ಯುಎಲ್, ನೆಸ್ಟ್ಲೆ, ಐಟಿಸಿ ಇತ್ಯಾದಿ ಸಿಗುತ್ತವೆ. ಆಯಾ ಸನ್ನಿವೇಶಕ್ಕೆ ಉತ್ತಮ ರಿಟರ್ನ್ಸ್ ಕೊಡಬಹುದಾದ ಷೇರು ಯಾವುದು ಅಂತ ನೋಡಿ ಹಣ ಹೂಡಿಕೆ ಮಾಡಬಹುದು.

ಯಾವ ಬೆಲೆಯಲ್ಲಿ ಖರೀದಿಸಬೇಕು ಎಂಬುದು ಮುಖ್ಯ

ಯಾವ ಬೆಲೆಯಲ್ಲಿ ಖರೀದಿಸಬೇಕು ಎಂಬುದು ಮುಖ್ಯ

ಫಾರ್ಮಾಸ್ಯುಟಿಕಲ್ಸ್ ಅಂದರೆ ಮಾತ್ರೆ, ಔಷಧ ಉತ್ಪಾದಿಸುವ ಕಂಪೆನಿಗಳು. ಇವುಗಳಲ್ಲಿ ವಿವಿಧ ದೇಶಗಳಿಗೆ ಕೂಡ ಮಾತ್ರೆ- ಔಷಧ ರಫ್ತು ಮಾಡಿ, ಆದಾಯ ಪಡೆಯುತ್ತವೆ. ಇನ್ನು ಹೆಲ್ತ್ ಕೇರ್ ವಿಷಯಕ್ಕೆ ಬಂದರೆ ಅಪೋಲೋ ಹಾಸ್ಪಿಟಲ್, ಫೋರ್ಟೀಸ್, ಫಾರ್ಮಾಸ್ಯುಟಿಕಲ್ ನಲ್ಲಿ ಸನ್ ಫಾರ್ಮಾ, ಡಾ. ರೆಡ್ಡೀಸ್ ಲ್ಯಾಬ್ಸ್, ಸಿಪ್ಲಾ, ಲುಪಿನ್ ಹೀಗೆ ನಾನಾ ಕಂಪೆನಿಯ ಷೇರುಗಳಿವೆ. ಎಲ್ಲಿಯವರೆಗೂ ಕಾಯಿಲೆಗಳು ಇರುತ್ತವೋ ಅಲ್ಲಿಯ ತನಕ ಇವುಗಳ ವ್ಯಾಪಾರ- ವ್ಯವಹಾರಕ್ಕೆ ದೊಡ್ಡ ಪೆಟ್ಟು ಬೀಳಲ್ಲ. ಆದ್ದರಿಂದ ಯಾವ ಮಟ್ಟದ ಬೆಲೆಯಲ್ಲಿ ಖರೀದಿ ಮಾಡಬೇಕು ಎಂಬ ಬಗ್ಗೆ ನಿರ್ಧಾರ ಸರಿ ಇರಬೇಕು ಅಷ್ಟೇ.

ಸಿಮೆಂಟ್, ಬ್ಯಾಂಕಿಂಗ್, ಐ.ಟಿ. ಇತ್ಯಾದಿ

ಸಿಮೆಂಟ್, ಬ್ಯಾಂಕಿಂಗ್, ಐ.ಟಿ. ಇತ್ಯಾದಿ

ಸಿಮೆಂಟ್, ಬ್ಯಾಂಕಿಂಗ್, ಐ.ಟಿ., ಕಾರು ತಯಾರಿಸುವ ಕಂಪೆನಿ, ರೈಲು ಕೋಚ್ ಗಳನ್ನು ಸಿದ್ಧಪಡಿಸುವ ಕಂಪೆನಿ, ಇಂಧನ- ಅನಿಲ ಉತ್ಪಾದನೆ, ವಿತರಣೆ, ಮಾರ್ಕೆಟಿಂಗ್ ಮಾಡುವ ಕಂಪೆನಿಗಳು, ಮೂಲ ಸೌಕರ್ಯ, ಟೆಲಿಕಾಂ... ಹೀಗೆ ಒಂದು ಪಟ್ಟಿ ಮಾಡಿಕೊಂಡು ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮವಾದ, ಅಂದರೆ ಕಂಪೆನಿಯ ಪ್ರವರ್ತಕರಿಂದ ಮೊದಲುಗೊಂಡು, ಆಡಳಿತ ಮಂಡಳಿ ತನಕ ಉತ್ತಮ ಹಿನ್ನೆಲೆಯಿದೆಯೇ ಎಂಬುದನ್ನು ಗಮನಿಸಬೇಕು. ಡಿವಿಡೆಂಡ್ ವಿತರಣೆ, ಬೋನಸ್ ಷೇರು ವಿತರಣೆ ಇತ್ಯಾದಿ ಅಂಶಗಳನ್ನು ಗಮನಿಸಿ. ಸ್ಥಿರತೆ ಕಾಪಾಡಿಕೊಂಡ ಅತ್ಯುತ್ತಮ ಕಂಪೆನಿಗಳನ್ನು ಆರಿಸಿಕೊಳ್ಳಬೇಕು. ಆ ನಂತರ ನಿಮ್ಮ ಬಳಿ ಒಂದು ಲಕ್ಷ ರುಪಾಯಿ ಇದೆ ಎಂದಾದಲ್ಲಿ ಐದರಿಂದ ಏಳು ವಲಯಗಳನ್ನು ಆಯ್ಕೆ ಮಾಡಿಕೊಂಡು, ಆ ವಲಯದ ಕಂಪೆನಿಗಳ ಷೇರುಗಳ ಮೇಲೆ ಹೂಡಿಕೆ ಮಾಡಬೇಕು.

ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬಾರದು

ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬಾರದು

ನೆನಪಿನಲ್ಲಿರಲಿ, ಹೂಡಿಕೆ ಬೇರೆ ಹಾಗೂ ಟ್ರೇಡಿಂಗ್ ಬೇರೆ. ಅಂದರೆ, ಕೆಲವರು ನಿತ್ಯವೂ ವ್ಯವಹಾರ ಮಾಡುತ್ತಾರೆ. ಖರೀದಿ- ಮಾರಾಟ ಮಾಡುತ್ತಲೇ ಇರುತ್ತಾರೆ. ಆದರೆ ಈ ಮೇಲ್ಕಂಡ ಸಲಹೆ ದೀರ್ಘಾವಧಿಗೆ ಹೂಡಿಕೆ ಮಾಡಬೇಕಾದಲ್ಲಿ ಪರಿಗಣಿಸಬೇಕಾದ ಅಂಶ. ಎ ಗ್ರೂಪ್ ನ ಷೇರುಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಬಹಳ ಉತ್ತಮ. ವಾರ್ಷಿಕ ಗರಿಷ್ಠ ಮಟ್ಟದಲ್ಲಿರುವ ಷೇರುಗಳನ್ನು ಖರೀದಿಸುವಾಗ ಷೇರು ದಲ್ಲಾಳಿಗಳ ಹಾಗೂ ಸಲಹೆಗಾರರ ಅಭಿಪ್ರಾಯ ಪಡೆದುಕೊಳ್ಳುವುದು ಉತ್ತಮ. ಇನ್ನು ವಿವಿಧ ವಲಯದ ಷೇರುಗಳ ಮೇಲೆ ಹಣ ಹೂಡಿಕೆ ಮಾಡುವುದು ಉತ್ತಮ ಏಕೆಂದರೆ, ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡುವುದು ಅಪಾಯಕಾರಿ ಎಂಬುದು ಸಾರ್ವಕಾಲಿಕ ಎಚ್ಚರಿಕೆ. ಒಂದು ವೇಳೆ ಬುಟ್ಟಿ ಕಳೆದುಹೋದರೆ, ಕಳುವಾದರೆ, ಬಿದ್ದು ಹೋದರೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಅದೇ ನಿಯಮ ಇಲ್ಲಿಗೂ ಅನ್ವಯವಾಗುತ್ತದೆ. ವಿವಿಧ ವಲಯದ ಷೇರುಗಳ ಪೈಕಿ ಯಾವುದಾದರೊಂದು ಲಾಭ ಮಾಡಿಕೊಡುತ್ತದೆ.

English summary

How To Choose Right Share To Invest For Long Term?

Share market investment is not an easy task. But here is the simple technique to choose right share for long term.
Story first published: Monday, February 3, 2020, 14:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X