ಚೆಕ್ ಅನ್ನು ಈ ರೀತಿ ಡೆಪಾಸಿಟ್, ನಗದು ಮಾಡಿ
ನಾವು ಚೆಕ್ ಅನ್ನು ಡೆಪಾಸಿಟ್ ಮಾಡುವ ಅಥವಾ ನಗದು ಮಾಡುವ ವಿಚಾರಕ್ಕೆ ಬಂದಾಗ ನಮ್ಮಲ್ಲಿ ಹಲವಾರು ವಿಧಾನಗಳು ಇದೆ. ನಿಮ್ಮಲ್ಲಿ ಉಳಿತಾಯ ಖಾತೆ ಇದ್ದರೆ, ನೀವು ಹಣವನ್ನು ಎಟಿಎಂ, ಬ್ಯಾಂಕ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ವಿತ್‌ಡ್ರಾ ಮಾಡಿಕೊಳ್ಳಬಹುದು.
ನೀವು ನಿಮ್ಮ ಖಾತೆಯನ್ನು ಹಲವಾರು ರೀತಿಯಲ್ಲಿ ಪರಿಶೀಲನೆ ಮಾಡಬಹುದು. ಸಾಮಾನ್ಯವಾಗಿ ನೀವು ಚೆಕ್ ಅನ್ನು ಬ್ಯಾಂಕ್‌ಗೆ ಡೆಪಾಸಿಟ್ ಮಾಡಬಹುದು. ಹಾಗೆಯೇ ಚೆಕ್ ಅನ್ನು ನೇರವಾಗಿ ನಗದು ಕೂಡಾ ಮಾಡಲು ಸಾಧ್ಯವಿದೆ.
ಮೊದಲ ಬಾರಿಗೆ 1844ರ ಪೀಲ್ಸ್ ಕಾಯ್ದೆಯ ಬಳಿಕ ಪ್ರಸಿದ್ಧಿಯಾದ ಚೆಕ್, ಪ್ರಸ್ತುತ ಜನರು ಹೆಚ್ಚಿನ ಮೊತ್ತವನ್ನು ಪಾವತಿ ಮಾಡಲು ಬಳಸುವ ವಿಧಾನವೆಂಬಂತೆ ಆಗಿದೆ. ಪ್ರಸ್ತುತ ಎಲ್ಲ ಆನ್‌ಲೈನ್ ಆಗಿರುವಾಗ ಚೆಕ್ ಅನ್ನು ಮಾತ್ರ ನೀವು ಬ್ಯಾಂಕ್ ಮೂಲಕವೇ ನಗದು, ಡೆಪಾಸಿಟ್ ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..
ಚೆಕ್ ಅನ್ನು ಡೆಪಾಸಿಟ್/ ನಗದು ಮಾಡುವುದು ಹೇಗೆ?
* ನಿಮ್ಮ ಕೈಯಲ್ಲಿ ನೀವು ಹೊಂದಿರುವ ಚೆಕ್ ಯಾವ ಬ್ಯಾಂಕ್‌ನದ್ದು ಆಗಿದೆಯೋ ಆ ಬ್ಯಾಂಕ್‌ನಲ್ಲಿ ನೀವು ಖಾತೆಯನ್ನು ಹೊಂದಿಲ್ಲದಿದ್ದರೆ, ಅದಕ್ಕಾಗಿ ಮೊದಲು ಬ್ಯಾಂಕ್‌ಗೆ ಭೇಟಿ ನೀಡಬೇಕಾಗುತ್ತದೆ. ನೀವು ಬ್ಯಾಂಕಿಂಗ್ ಗ್ರಾಹಕರಾಗಿದ್ದರೆ, ನಿಮ್ಮ ಬ್ಯಾಂಕ್ ಅಥವಾ ಎಟಿಎಂಗಳಿಗೆ ಭೇಟಿ ನೀಡಿ ಅಥವಾ ನೀವು ಮೊಬೈಲ್ ವರ್ಗಾವಣೆಯನ್ನು ಬಳಕೆ ಮಾಡಬಹುದು.
* ನೀವು ಚೆಕ್ ಅನ್ನು ಡೆಪಾಸಿಟ್ ಅನ್ನು ಡೆಪಾಸಿಟ್ ಅಥವಾ ನಗದು ಮಾಡುವ ಮುನ್ನ ಚೆಕ್‌ನ ಹಿಂಭಾಗದಲ್ಲಿ ನಿಮ್ಮ ಸಹಿಯನ್ನು ಮಾಡಬೇಕಾಗುತ್ತದೆ.
* ನೀವು ಆ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿಲ್ಲದಿದ್ದರೆ, ಬ್ಯಾಂಕ್ ಸಿಬ್ಬಂದಿಗಳಿಗೆ ನಿಮ್ಮ ಗುರುತು ಪುರಾವೆಯನ್ನು ತೋರಿಸಬೇಕಾಗುತ್ತದೆ. ಉದಾಹರಣೆಗೆ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿಯನ್ನು ತೋರಿಸಬೇಕಾಗುತ್ತದೆ. ಇದಾದ ಬಳಿಕವೇ ನೀವು ಹಣವನ್ನು ಪಡೆಯಲು ಸಾಧ್ಯವಾಗಲಿದೆ. ನಂತರ ನೀವು ಚೆಕ್ ಅನ್ನು ನೀಡಬೇಕಾಗುತ್ತದೆ.

* ನೀವು ಆ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೆ, ನೀವು ಎಟಿಎಂನಲ್ಲಿ ಚೆಕ್ ಅನ್ನು ಮಿಷನ್‌ಗೆ ಸ್ಕ್ಯಾನ್ ಮಾಡಿಸುವ ಮೂಲಕ ವಿತ್‌ಡ್ರಾ ಮಾಡಿಕೊಳ್ಳಬಹುದು. ಹಾಗೆಯೇ ಬ್ಯಾಂಕ್‌ನಲ್ಲಿಯೂ ಜಮೆ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿಯೂ ನಿಮ್ಮ ಬಳಿ ಗುರುತಿನ ಪುರಾವೆಯನ್ನು ಕೇಳಲಾಗುತ್ತದೆ. ಚೆಕ್ ಪ್ರೋಸೆಸ್ ಆಗುವಾಗ ನೀವು ನಗದನ್ನು ಪಡೆಯಲು ಸಾಧ್ಯವಿಲ್ಲ.
ಚೆಕ್ ಅನ್ನು ಹೇಗೆ ನಗದು ಮಾಡುವುದು?
ನೀವು ಒಬ್ಬ ವ್ಯಕ್ತಿಯಿಂದ ಅಥವಾ ಘಟಕದಿಂದ ನೀಡಲಾದ ಹಣವನ್ನು ಹಿಂಪಡೆಯಬೇಕಾದರೆ ಚೆಕ್ ಇರುವುದು ಅತೀ ಮುಖ್ಯವಾಗಿದೆ. ರಾಷ್ಟ್ರೀಯ ಬ್ಯಾಂಕುಗಳು ಮತ್ತು ಕ್ರೆಡಿಟ್ ಯೂನಿಯನ್‌ಗಳು ತನ್ನ ಗ್ರಾಹಕರಲ್ಲದ ಚೆಕ್ ಅನ್ನು ನಗದು ಮಾಡಲು ಅಧಿಕಾರವನ್ನು ಹೊಂದಿಲ್ಲ. ಹೆಚ್ಚುವರಿಯಾಗಿ, ಕೆಲವು ಬ್ಯಾಂಕ್‌ಗಳಿಗೆ ಎರಡು ವಿಭಿನ್ನ ರೀತಿಯ ಐಡಿಗಳು ಬೇಕಾಗಬಹುದು.
* ಹಲವಾರು ದೊಡ್ಡ ಮಳಿಗೆಗಳು ಚೆಕ್ ಕ್ಯಾಶಿಂಗ್ ಸೇವೆಗಳನ್ನು ಪ್ರತಿ ಚೆಕ್‌ಗೆ ಕಡಿಮೆ ಶುಲ್ಕಕ್ಕೆ ನೀಡುತ್ತವೆ.
* ಡೆಬಿಟ್ ಕಾರ್ಡ್‌ನೊಂದಿಗೆ ನೀವು ನಿಮ್ಮ ಕಾರ್ಡ್‌ನ ಖಾತೆಗೆ ಚೆಕ್ ಅನ್ನು ಠೇವಣಿ ಮಾಡಬಹುದು. ಅದಾದಾ ನಂತರ ಹಣವನ್ನು ಹಿಂಪಡೆಯಬಹುದು. ಕಾರ್ಡ್‌ನ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಠೇವಣಿ ಮಾಡಿದರೂ, ಚೆಕ್ಅನ್ನು ಸಲ್ಲಿಸಬೇಕಾಗುತ್ತದೆ. ಆ ಬಳಿಕ ಮಾತ್ರ ಎಟಿಎಂನಿಂದ ಹಣವನ್ನು ವಿತ್‌ಡ್ರಾ ಮಾಡಲು ಸಾಧ್ಯವಾಗುತ್ತದೆ.