For Quick Alerts
ALLOW NOTIFICATIONS  
For Daily Alerts

ಉಡುಪು, ಪಾದರಕ್ಷೆಗಳು ಇನ್ನು ದುಬಾರಿ: ಜಿಎಸ್‌ಟಿ ಶೇ.5 ರಿಂದ 12 ಕ್ಕೆ ಏರಿಕೆ!

|

ಸಿದ್ಧ ಉಡುಪುಗಳು, ಜವಳಿಗಳು ಹಾಗೂಪಾದರಕ್ಷೆಗಳ ಮೇಲಿನ ಸರಕು ಹಾಗೂ ಸೇವೆ ತೆರಿಗೆಯನ್ನು (ಜಿಎಸ್‌ಟಿ) ಕೇಂದ್ರ ಸರ್ಕಾರವು ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಮಾಡಿದೆ. 2022 ರ ಜನವರಿಯಿಂದ ಜಾರಿಗೆ ಬರುವಂತೆ ಸಿದ್ಧ ಉಡುಪುಗಳು, ಜವಳಿಗಳು ಹಾಗೂಪಾದರಕ್ಷೆಗಳ ಮೇಲಿನ ಜಿಎಸ್‌ಟಿ ಏರಿಕೆ ಆಗಲಿದೆ.

ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು (ಸಿಬಿಐಸಿ) ನವೆಂಬರ್‌ 18 ರಂದು ಈ ಸೂಚನೆಯನ್ನು ನೀಡಿದೆ. ಉಡುಪುಗಳ ಮೇಲಿನ ಸರಕು ಹಾಗೂ ಸೇವೆ ತೆರಿಗೆಯು 2022 ರ ಜನವರಿ ತಿಂಗಳಿನಿಂದ ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಆಗಲಿದೆ. ಯಾವುದೇ ಮೌಲ್ಯದ ಬಟ್ಟೆಗಳ ಮೇಲೆ ಇನ್ನು ಮುಂದೆ ಶೇಕಡ 5 ರ ಬದಲಾಗಿ ಶೇಕಡ 12 ಜಿಎಸ್‌ಟಿ ಇರಲಿದೆ. ಈ ಹಿಂದೆ 1,000 ರೂಪಾಯಿಗಿಂತ ಅಧಿಕ ಬೆಲೆಯ ಬಟ್ಟೆಯ ತುಂಡುಗಳಿಗೆ ಶೇಕಡ 5 ರಷ್ಟು ಜಿಎಸ್‌ಟಿ ಅನ್ನು ಹಾಕಲಾಗುತ್ತಿತ್ತು.

ಜಿಎಸ್‌ಟಿ ಸಚಿವರ ಸಮಿತಿಯ ನೇತೃತ್ವ ಸಿಎಂ ಬೊಮ್ಮಾಯಿ, ಅಜಿತ್‌ಗೆಜಿಎಸ್‌ಟಿ ಸಚಿವರ ಸಮಿತಿಯ ನೇತೃತ್ವ ಸಿಎಂ ಬೊಮ್ಮಾಯಿ, ಅಜಿತ್‌ಗೆ

ಇನ್ನು ನೇಯ್ದ ಬಟ್ಟೆಗಳು, ಸಿಂಥೆಟಿಕ್ ನೂಲು, ಪೈಲ್ ಬಟ್ಟೆಗಳು, ಹೊದಿಕೆಗಳು, ಡೇರೆಗಳು, ಮೇಜುಬಟ್ಟೆಗಳು ಅಥವಾ ಸರ್ವಿಯೆಟ್‌ಗಳು, ರಗ್ಗುಗಳು ಮತ್ತು ಟೇಪ್‌ಸ್ಟ್ರಿಗಳಂತಹ ಪರಿಕರಗಳು ಸೇರಿದಂತೆ ಎಲ್ಲಾ ಬಟ್ಟೆಗಳ ಮೇಲಿನ ಜಿಎಸ್‌ಟಿ ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಆಗಲಿದೆ. ಇನ್ನು ಯಾವುದೇ ಬೆಲೆಯ ಚಪ್ಪಲಿಗಳ ಮೇಲಿನ ಜಿಎಸ್‌ಟಿಯನ್ನು ಕೂಡಾ ಶೇಕಡ 5 ರಿಂದ ಶೇಕಡ 12 ಕ್ಕೆ ಏರಿಕೆ ಮಾಡಲಾಗಿದೆ.

 ಗಮನಿಸಿ: ಉಡುಪು, ಪಾದರಕ್ಷೆಗಳ ಜಿಎಸ್‌ಟಿ ಶೇ.5 ರಿಂದ 12 ಕ್ಕೆ ಏರಿಕೆ!

ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಬಟ್ಟೆ ತಯಾರಕರ ಸಂಘ (ಸಿಎಂಎಐ), "ಉಡುಪುಗಳ ಮೇಲಿನ ಜಿಎಸ್‌ಟಿ ದರಗಳನ್ನು ಹೆಚ್ಚಿಸುವ ಸರ್ಕಾರದ ನಿರ್ಧಾರದಿಂದಾಗಿ ನಮಗೆ ಬಹಳ ನಿರಾಶೆ ಉಂಟಾಗಿದೆ," ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಸಿಎಂಎಐನ ಅಧ್ಯಕ್ಷ ರಾಜೇಶ್‌ ಮಸಂದ್‌, "ಈ ರೀತಿಯಾಗಿ ಜಿಎಸ್‌ಟಿಯನ್ನು ಏರಿಕೆ ಮಾಡಬಾರದು ಎಂದು ಭಾರತದಾದ್ಯಂತ ಸಂಘಗಳು ಮತ್ತು ವ್ಯಾಪಾರ ಸಂಸ್ಥೆಗಳು ಸರ್ಕಾರ ಹಾಗೂ ಜಿಎಸ್‌ಟಿ ಕೌನ್ಸಿಲ್‌ಗೆ ಆಗ್ರಹ ಮಾಡುತ್ತದೆ. ಸರ್ಕಾರ ಹಾಗೂ ಕೌನ್ಸಿಲ್‌ ನಮ್ಮ ಸಂಘಗಳು ಮತ್ತು ವ್ಯಾಪಾರ ಸಂಸ್ಥೆಗಳ ಮನವಿಗೆ ಕಿವಿಗೊಡದೆ ಇರುವುದು ನಿಜಕ್ಕೂ ಅತ್ಯಂತ ನಿರಾಶಾದಾಯಕ ಆಗಿದೆ," ಎಂದು ತಿಳಿಸಿದರು.

ಅಕ್ಟೋಬರ್ ತಿಂಗಳಲ್ಲಿ ಒಟ್ಟು ಜಿಎಸ್ಟಿ ಆದಾಯ 1,30,127 ಕೋಟಿ ರೂ ಸಂಗ್ರಹಅಕ್ಟೋಬರ್ ತಿಂಗಳಲ್ಲಿ ಒಟ್ಟು ಜಿಎಸ್ಟಿ ಆದಾಯ 1,30,127 ಕೋಟಿ ರೂ ಸಂಗ್ರಹ

ಜಿಎಸ್‌ಟಿ ಏರಿಕೆಗೆ ಅಸಮಾಧಾನ ವ್ಯಕ್ತ

ಪ್ರಸ್ತುತ ಕಚ್ಚಾ ವಸ್ತುಗಳ ಬೆಲೆಗಳು, ವಿಶೇಷವಾಗಿ ನೂಲು, ಪ್ಯಾಕಿಂಗ್ ವಸ್ತುಗಳು ಮತ್ತು ಸರಕುಗಳ ಬೆಲೆಗಳು ಏರಿಳಿತ ಕಾಣುತ್ತಿದೆ. ಈ ನಿಟ್ಟಿನಲ್ಲಿ ಹಣದುಬ್ಬರವು ಉಂಟಾಗಿದೆ. ಈಗ ಮತ್ತೆ ಜಿಎಸ್‌ಟಿ ಅಧಿಕ ಮಾಡುವುದು ತೀವ್ರ ಪರಿಣಾಮ ಬೀರಲಿದೆ ಎಂದು ಕೂಡಾ ಭಾರತೀಯ ಬಟ್ಟೆ ತಯಾರಕರ ಸಂಘದ ಹೇಳಿಕೆಯಲ್ಲಿ ಸೇರ್ಪಡೆ ಮಾಡಲಾಗಿದೆ. "ಮುಂದಿನ ಋತುವಿನಲ್ಲಿ ಮಾರುಕಟ್ಟೆಯಲ್ಲಿ ಉಡುಪುಗಳ ಬೆಲೆಗಳು ಶೇಕಡ 15-20 ರಷ್ಟು ಏರಿಕೆ ಆಗುವ ನಿರೀಕ್ಷೆ ಇದೆ. ಈ ನಡುವೆ ಈಗ ಜಿಎಸ್‌ಟಿ ಏರಿಕೆಯು ಇನ್ನಷ್ಟು ಬಟ್ಟೆ ಬೆಲೆ ಅಧಿಕವಾಗಲು ಕಾರಣವಾಗಲಿದೆ. ಭಾರತದ ಉಡುಪುಗಳ ಮಾರುಕಟ್ಟೆಯಲ್ಲಿ ಶೇಕಡ 80 ರಷ್ಟು 1,000 ರೂ.ಗಿಂತ ಕಡಿಮೆ ಬೆಲೆಯ ಉಡುಪುಗಳನ್ನು ಒಳಗೊಂಡಿರುವ ಮಾರುಕಟ್ಟೆ ಆಗಿದೆ. ಈ ರೀತಿ ಜಿಎಸ್‌ಟಿ ಏರಿಕೆಯು ಸಂಪೂರ್ಣವಾಗಿ ತಪ್ಪು.," ಎಂದು ಕೂಡಾ ಉದ್ಯಮ ಸಂಸ್ಥೆ ಸೇರಿಸಿದೆ.

 ಗಮನಿಸಿ: ಉಡುಪು, ಪಾದರಕ್ಷೆಗಳ ಜಿಎಸ್‌ಟಿ ಶೇ.5 ರಿಂದ 12 ಕ್ಕೆ ಏರಿಕೆ!

ಶೇ. 5 ರ ತೆರಿಗೆ ಸ್ಲ್ಯಾಬ್ (GST Slab) ಅನ್ನು ಸರ್ಕಾರ ತೆಗೆದುಹಾಕಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಇನ್ಮುಂದೆ ಕೇವಲ ಶೇ. 12, ಶೇ. 18 ಮತ್ತು ಶೇ. 28 ರ ದರಗಳನ್ನು ಇರಿಸಿಕೊಳ್ಳಲು ಸರ್ಕಾರ ನಿರ್ಧರಿಸಬಹುದು. ಶೇ. 5 ಮತ್ತು ಶೇ.12 ರ ಸ್ಲ್ಯಾಬ್‌ಗಳನ್ನು ಒಟ್ಟುಗೂಡಿಸಿ, ಈಗ ಕೇವಲ 12 ಶೇಕಡಾ ಸ್ಲ್ಯಾಬ್ ಅನ್ನು ಉಳಿಸಿಕೊಳ್ಳಲಾಗುವುದು. ಕರ್ನಾಟಕದ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಚಿವರ ಗುಂಪು (GoM) ಶೀಘ್ರದಲ್ಲೇ ಸಭೆ ಸೇರುವ ಸಾಧ್ಯತೆಯಿದೆ, ಇದರಲ್ಲಿ GST ಕೌನ್ಸಿಲ್‌ನ (GST Council) ಶಿಫಾರಸುಗಳನ್ನು ಪರಿಗಣಿಸಿ ಅಂತಿಮಗೊಳಿಸವು ಸಾಧ್ಯತೆಗಳು ಇದೆ.

English summary

Clothes, footwear to get costlier from January 2022 as GST increases from 5% to 12%

Clothes, footwear to get costlier from January 2022 as GST increases from 5% to 12%.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X