For Quick Alerts
ALLOW NOTIFICATIONS  
For Daily Alerts

ದುಬಾರಿ ವಸತಿಗಳ ವಾರ್ಷಿಕ ಬೆಲೆ ಏರಿಕೆಯಲ್ಲಿ ಬೆಂಗಳೂರಿಗೆ ವಿಶ್ವದಲ್ಲೇ 26ನೇ ಸ್ಥಾನ

|

ವಿಲಾಸಿ ವಸತಿ ಆಸ್ತಿಗಳ ವಾರ್ಷಿಕ ಬೆಲೆ ಏರಿಕೆಯಲ್ಲಿ ಬೆಂಗಳೂರು 26ನೇ ಸ್ಥಾನದಲ್ಲಿ ಇದ್ದರೆ, ದೆಹಲಿ 27ನೇ ಸ್ಥಾನದಲ್ಲಿದೆ. ಇದು ಜಾಗತಿಕ ಮಟ್ಟದಲ್ಲಿ ನಡೆದಿರುವ ಮೌಲ್ಯಮಾಪನದ ಫಲಿತಾಂಶ. ನೈಟ್ ಫ್ರಾಂಕ್ ನೀಡಿರುವ ವರದಿ ಇದು. ಈ ಪಟ್ಟಿಯಲ್ಲಿ ಮುಂಬೈ 32ನೇ ಸ್ಥಾನದಲ್ಲಿದೆ ಎಂದು 'ಪ್ರೈಮ್ ಗ್ಲೋಬಲ್ ಸಿಟೀಸ್ ಸೂಚ್ಯಂಕ Q2 2020' ವರದಿಯಲ್ಲಿ ತಿಳಿಸಲಾಗಿದೆ.

2020ರಲ್ಲೇ ಮೊದಲ ಮೂರು ತಿಂಗಳ ವರದಿಗೆ ಹೋಲಿಸಿದಲ್ಲಿ ಬೆಂಗಳೂರು, ಮುಂಬೈ ತಲಾ ಒಂದು ಸ್ಥಾನ ಮೇಲಕ್ಕೆ ಏರಿವೆ. ಇನ್ನು ದೆಹಲಿ ಐದು ಸ್ಥಾನ ಮೇಲೇರಿದೆ. ಕಳೆದ ವರ್ಷದ ಏಪ್ರಿಲ್- ಜೂನ್ ಮಧ್ಯದ ಅವಧಿಗೆ ಹೋಲಿಸಿದಲ್ಲಿ ಬೆಂಗಳೂರಲ್ಲಿ ಬಂಡವಾಳ ಮೌಲ್ಯ 0.6% ಹೆಚ್ಚಳ ಆಗಿದ್ದರೆ, ದೆಹಲಿಯಲ್ಲಿ 0.3% ಏರಿಕೆಯಾಗಿದೆ. ಆದರೆ ಮುಂಬೈನಲ್ಲಿ 0.6% ಇಳಿಕೆ ಆಗಿದೆ.

ಬೆಂಗಳೂರು ವಿಮಾನ ನಿಲ್ದಾಣ ಸೆಂಟ್ರಲ್ ಏಷ್ಯಾದಲ್ಲೇ ಬೆಸ್ಟ್ಬೆಂಗಳೂರು ವಿಮಾನ ನಿಲ್ದಾಣ ಸೆಂಟ್ರಲ್ ಏಷ್ಯಾದಲ್ಲೇ ಬೆಸ್ಟ್

ನೈಟ್ ಪ್ರಕಾರ ಹೇಳಿರುವ ಪ್ರಕಾರ, ವಿಶ್ವದ ಪ್ರಮುಖ ವಸತಿ ಮಾರುಕಟ್ಟೆಯಲ್ಲಿ 26ನೇ ಅತ್ಯಂತ ವೇಗವಾಗಿ ಬೆಳೆಯುವ ನಗರ ಬೆಂಗಳೂರು ಎನಿಸಿದೆ. ವಾರ್ಷಿಕ ದರ ಹೆಚ್ಚಳದ ಲೆಕ್ಕಾಚಾರದಲ್ಲಿ Q2, 2020ರಲ್ಲಿ 0.60% ಹೆಚ್ಚಳವಾಗಿ, ಸರಾಸರಿ ರು. 19,727/ಚದರಡಿ ಇದೆ.

ದುಬಾರಿ ವಸತಿಗಳ ವಾರ್ಷಿಕ ಬೆಲೆ ಏರಿಕೆಯಲ್ಲಿ ಬೆಂಗಳೂರಿಗೆ 26ನೇ ಸ್ಥಾನ

ಇನ್ನು ದೆಹಲಿಯು ಜಾಗತಿಕ ಸೂಚ್ಯಂಕದಲ್ಲಿ ವಾರ್ಷಿಕ ಬಂಡವಾಳ 0.30% ಹೆಚ್ಚಳವಾಗಿ, 27ನೇ ಸ್ಥಾನ ತಲುಪಿದ್ದು, ಸರಾಸರಿ ರು. 33,625/ಚದರಡಿ ಇದೆ. ಮುಂಬೈ 32ನೇ ಸ್ಥಾನದಲ್ಲಿದ್ದು, 0.60 ಪರ್ಸೆಂಟ್ ಇಳಿಕೆಯಾಗಿದೆ. ಸರಾಸರಿ ಬೆಲೆ ರು. 64,388/ಚದರಡಿ ಇದೆ.

ಈ ಸೂಚ್ಯಂಕದಲ್ಲಿ ಫಿಲಿಪೈನ್ಸ್ ನ ಮನಿಲಾ ಮೊದಲ ಸ್ಥಾನದಲ್ಲಿದ್ದು, ಪ್ರಮುಖ ವಿಲಾಸಿ ವಸತಿ ಬೆಲೆಗಳು ಕಳೆದ ಒಂದು ವರ್ಷದಲ್ಲಿ 14.4 ಪರ್ಸೆಂಟ್ ಏರಿಕೆ ಆಗಿದೆ. ಆ ನಂತರದ ಸ್ಥಾನಗಳಲ್ಲಿ ಜಪಾನ್ ನ ಟೋಕಿಯೋ (8.60%), ಸ್ವೀಡನ್ ನ ಸ್ಟಾಕ್ ಹೋಮ್ (4.40%) ಇವೆ.

English summary

Global Annual Price Appreciation Luxury Homes Index: Bengaluru Ranks 26th

Bengaluru ranked 26th globally in the annual price appreciation of luxury residential properties, according to a Knight Frank report.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X