For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ನಿಂದ 4ರಿಂದ 10 ಸಾವಿರ ಸಿಬ್ಬಂದಿ ಉದ್ಯೋಗಕ್ಕೆ ಕತ್ತರಿ

|

ಬೆಂಗಳೂರು, ನವೆಂಬರ್ 5: ಐಟಿ ದಿಗ್ಗಜ ಇನ್ಫೋಸಿಸ್ ಕಂಪೆನಿ ಕೂಡ ಕಾಗ್ನಿಜಂಟ್ ಹಾದಿಯಲ್ಲಿ ಸಾಗಿದೆ. ಕಂಪೆನಿಯ ಮಧ್ಯಮ, ಉನ್ನತ ಮಟ್ಟದ ಉದ್ಯೋಗಿಗಳನ್ನು ತೆಗೆದು ಹಾಕುವ ನಿರ್ಧಾರ ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕಂಪೆನಿಯ 10% ಅಥವಾ 2200 ಸಿಬ್ಬಂದಿಯನ್ನು ತೆಗೆದುಹಾಕಲಿದ್ದು, JL 6 ಬ್ಯಾಂಡ್ (ಜಾಬ್ ಲೆವೆಲ್ 6) ಇರುವ ಹಿರಿಯ ಮ್ಯಾನೇಜರ್ ಮಟ್ಟದಲ್ಲಿ ಇರುವವರನ್ನು ಉದ್ಯೋಗದಿಂದ ತೆಗೆಯಲಿದೆ.

JL6, JL7 ಹಾಗೂ JL8 ಬ್ಯಾಂಡ್ ನ 30,092 ಸಿಬ್ಬಂದಿ ಇನ್ಫೋಸಿಸ್ ನಲ್ಲಿ ಇದ್ದಾರೆ. ಇನ್ನು 2ರಿಂದ 5 ಪರ್ಸೆಂಟ್ JL3 ಮತ್ತು ಅದಕ್ಕಿಂತ ಕಡಿಮೆ ಹಂತದವರು ಮತ್ತು ಮಧ್ಯಮ ಮಟ್ಟದ (JL4 ಮತ್ತು J5) ಉದ್ಯೋಗಿಗಳನ್ನು ತೆಗೆಯಲಿದೆ. ಅದನ್ನು ಸಂಖ್ಯೆಗಳಲ್ಲಿ ಹೇಳುವುದಾದರೆ 4,000ದಿಂದ 10,000 ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ಕಾಗ್ನಿಜೆಂಟ್ 12 ಸಾವಿರ ಉದ್ಯೋಗ ಕಡಿತ ಮಾಡಲಿದೆಕಾಗ್ನಿಜೆಂಟ್ 12 ಸಾವಿರ ಉದ್ಯೋಗ ಕಡಿತ ಮಾಡಲಿದೆ

ಇನ್ಫೋಸಿಸ್ ನಲ್ಲಿ 86,558 ಅಸೋಸಿಯೇಟ್ ಮಟ್ಟದವರು ಹಾಗೂ 1.1 ಲಕ್ಷ ಮಧ್ಯಮ ಬ್ಯಾಂಡ್ ನವರು ಕಾರ್ಯ ನಿರ್ವಹಿಸುತ್ತಿದ್ದಾರೆ. 971 ಮಂದಿ ಅಂದರೆ 2ರಿಂದ 5% ಪ್ರಮುಖ ಹುದ್ದೆಯಲ್ಲಿದ್ದಾರೆ. ಹಿರಿಯ ಅಧಿಕಾರಿಗಳು ಇದ್ದು, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, ವೈಸ್ ಪ್ರೆಸಿಡೆಂಟ್ಸ್, ಸೀನಿಯರ್ ವೈಸ್ ಪ್ರೆಸಿಡೆಂಟ್ಸ್ ಮತ್ತು ಎಕ್ಸ್ ಕ್ಯೂಟಿವ್ ವೈಸ್ ಪ್ರೆಸಿಡೆಂಟ್ಸ್ ಹುದ್ದೆಯಲ್ಲಿದ್ದಾರೆ. ಅದರರ್ಥ 50 ಮಂದಿ ತನಕ ಎಕ್ಸ್ ಕ್ಯೂಟಿವ್ಸ್ ಇದ್ದಾರೆ. ಅವರನ್ನು ಹುದ್ದೆಯಿಂದ ತೆಗೆಯಲಾಗುತ್ತದೆ.

ಇನ್ಫೋಸಿಸ್ ನಿಂದ 4ರಿಂದ 10 ಸಾವಿರ ಸಿಬ್ಬಂದಿ ಉದ್ಯೋಗಕ್ಕೆ ಕತ್ತರಿ

ಈ ಹಿಂದೆ ಇನ್ಫೋಸಿಸ್ ಕಂಪೆನಿಯಲ್ಲಿ ಆಯಾ ಸಿಬ್ಬಂದಿಯ ಪರ್ಫಾಮೆನ್ಸ್ ಆಧಾರದಲ್ಲಿ ಕೆಲಸದಿಂದ ತೆಗೆಯಲಾಗುತ್ತಿತ್ತು. ಆದರೆ ಈ ಬಾರಿ ಸಂಖ್ಯೆ ದೊಡ್ಡದಿರುತ್ತದೆ. ಮತ್ತು ಆ ಮಾನದಂಡ ಕೂಡ ಬೇರೆ ಇರುತ್ತದೆ ಎಂದು ಮೂಲಗಳು ಹೇಳಿವೆ.

ಇನ್ನು ಇತರ ಮೂಲಗಳ ಪ್ರಕಾರ, ಗ್ರಾಹಕರ ಅಗತ್ಯವೇ ಬೇರೆ ಆಗಿದೆ. ಅಗತ್ಯ ಕೌಶಲಗಳು ಬದಲಾಗಿವೆ. ಆಟೋಮೆಷನ್ ಆಗಿರುವುದರಿಂದ ಮುಂಚಿನ ರೀತಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಬೇಡ. ಆದ್ದರಿಂದ ಈ ಕ್ಷೇತ್ರದಲ್ಲಿನ ಎಲ್ಲ ಕಂಪೆನಿಗಳು ಹೀಗೆ ಮಾಡುತ್ತಿವೆ.

ಕಂಪೆನಿ ಮೇಲೆ ಬಂದ ಆರೋಪಕ್ಕೆ ಮೇಲ್ನೋಟಕ್ಕೆ ಸಾಕ್ಷ್ಯವಿಲ್ಲ: ಇನ್ಫೋಸಿಸ್ಕಂಪೆನಿ ಮೇಲೆ ಬಂದ ಆರೋಪಕ್ಕೆ ಮೇಲ್ನೋಟಕ್ಕೆ ಸಾಕ್ಷ್ಯವಿಲ್ಲ: ಇನ್ಫೋಸಿಸ್

ಹಾಗೆ ನೋಡಿದರೆ ಇನ್ಫೋಸಿಸ್ ನಲ್ಲಿ ಉದ್ಯೋಗ ಕಡಿತ ಎಂಬುದು ಅಷ್ಟೊಂದು ಕೇಳಿಬರುತ್ತಿರಲಿಲ್ಲ. ಆದರೆ ಕಳೆದ ಎರಡು ತ್ರೈಮಾಸಿಕದಿಂದ ಆ ಬಗ್ಗೆ ಮಾತು ಹೆಚ್ಚಾಗಿದೆ ಎನ್ನಲಾಗುತ್ತಿದೆ.

English summary

Infosys Lays Off Upto 10 Thousand Employees

Bengaluru based IT giant Infosys planning to reduce work force by 4 to 10,000. Here is the details of the story.
Story first published: Tuesday, November 5, 2019, 18:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X