For Quick Alerts
ALLOW NOTIFICATIONS  
For Daily Alerts

ಮೇ 23ರಂದು 14 ಗಂಟೆಗಳ ಕಾಲ NEFT ಲಭ್ಯವಿಲ್ಲ: ಆರ್‌ಬಿಐ

|

ಆನ್‌ಲೈನ್‌ನಲ್ಲಿ ಜನಪ್ರಿಯ ಹಣ ವರ್ಗಾವಣೆಗಾಗಿ ಮಾರ್ಗವಾದ ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ (ಎನ್‌ಇಎಫ್‌ಟಿ) ತಾಂತ್ರಿಕ ಅಪ್‌ಡೇಟ್‌ ಹಿನ್ನೆಲೆಯಲ್ಲಿ 14 ಗಂಟೆಗಳ ಕಾಲ ಲಭ್ಯವಿರುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೋಮವಾರ ತಿಳಿಸಿದೆ.

 

ಇಂದಿನಿಂದ ಸವರನ್ ಗೋಲ್ಡ್‌ ಬಾಂಡ್‌ ಚಂದಾದಾರಿಕೆ ಶುರು: ಪ್ರತಿ ಗ್ರಾಂಗೆ 4,777 ರೂಪಾಯಿ

ಶನಿವಾರ (ಮೇ 23) ಮಧ್ಯರಾತ್ರಿಯಿಂದ ಭಾನುವಾರ (ಮೇ 24) ಮಧ್ಯಾಹ್ನದವರೆಗೆ 14 ಗಂಟೆಗಳ ಕಾಲ NEFT ಲಭ್ಯವಿಲ್ಲ ಎಂದು ಆರ್‌ಬಿಐ ತಿಳಿಸಿದೆ. ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್ (ಎನ್‌ಇಎಫ್‌ಟಿ) ರಾಷ್ಟ್ರವ್ಯಾಪಿ ಕೇಂದ್ರೀಕೃತ ಪಾವತಿ ವ್ಯವಸ್ಥೆಯಾಗಿದ್ದು, ಇದು ಆರ್‌ಬಿಐ ನಿಯಂತ್ರಣದಲ್ಲಿದೆ. ಜೊತೆಗೆ ವರ್ಷದ ಎಲ್ಲಾ ದಿನಗಳಲ್ಲಿ ಸೇವೆ ಲಭ್ಯವಿದೆ.

ಮೇ 23ರಂದು 14 ಗಂಟೆಗಳ ಕಾಲ NEFT ಲಭ್ಯವಿಲ್ಲ: ಆರ್‌ಬಿಐ

" ಮೇ 23, 2021 ರ ಭಾನುವಾರದಂದು 00:01 ಗಂಟೆಯಿಂದ 14:00 ಗಂಟೆಯವರೆಗೆ ನೆಫ್ಟ್ ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಆರ್‌ಟಿಜಿಎಸ್ ವ್ಯವಸ್ಥೆಯು ಎಂದಿನಂತೆ ಕಾರ್ಯನಿರ್ವಹಿಸುತ್ತಲೇ ಇರುತ್ತದೆ" ಎಂದು ಆರ್‌ಬಿಐ ತಿಳಿಸಿದೆ.

ಇದೇ ರೀತಿಯಲ್ಲಿ ತಾಂತ್ರಿಕ ಅಪ್‌ಡೇಟ್‌ಗಾಗಿ ಏಪ್ರಿಲ್ 18, 2021 ರಂದು ಆರ್‌ಟಿಜಿಎಸ್ ವ್ಯವಸ್ಥೆಯು ಅಪ್‌ಡೇಟ್‌ ಆಗಿದೆ. ಇನ್ನು ನೆಫ್ಟ್‌ ಹಣ ವರ್ಗಾವಣೆಯಲ್ಲದೆ, ಕ್ರೆಡಿಟ್ ಕಾರ್ಡ್ ಬಾಕಿ ಪಾವತಿ, ಸಾಲ ಇಎಂಐ ಪಾವತಿ, ಮತ್ತು ವಿದೇಶಿ ವಿನಿಮಯ ರವಾನೆ ಸೇರಿದಂತೆ ವಿವಿಧ ವ್ಯವಹಾರಗಳಿಗೆ ಇದೇ ವ್ಯವಸ್ಥೆಯನ್ನು ಬಳಸಲಾಗುತ್ತದೆ.

English summary

NEFT Service Wont Be Available For 14 Hours On May 23: RBI

The National electronic funds transfer (NEFT) service for fund transfers will not be available for 14 hours on May 23 RBI has said.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X