For Quick Alerts
ALLOW NOTIFICATIONS  
For Daily Alerts

PM Kisan rules : ಪಿಎಂ ಕಿಸಾನ್ ಯೋಜನೆ ನಿಯಮ ಬದಲಾವಣೆ, ಹೊಸದೇನಿದೆ?

|

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ (ಪಿಎಂ ಕಿಸಾನ್ ಯೋಜನೆ) 12ನೇ ಕಂತಿನ ಹಣವನ್ನು ಇತ್ತೀಚೆಗೆ ಸರ್ಕಾರ ಬಿಡುಗಡೆ ಮಾಡಿದೆ. 12ನೇ ಕಂತಿನ 2000 ರೂಪಾಯಿಯಂತೆ ಒಟ್ಟು 16,000 ಕೋಟಿ ರೂಪಾಯಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಆದರೆ ಈಗ ಪಿಎಂ ಕಿಸಾನ್ ಯೋಜನೆ ನಿಯಮದಲ್ಲಿ ಕೆಲವು ಬದಲಾವಣೆಯಾಗಿದೆ.

ಈಗಾಗಲೇ ಕೆಲವು ರೈತರಿಗೆ 2 ಸಾವಿರ ರೂಪಾಯಿ ಜಮೆಯಾಗಿದೆ. ಇನ್ನು ಕೆಲವು ರೈತರಿಗೆ ಹಣ ಜಮೆ ಆಗುತ್ತಿದೆ. ಆದರೆ ಈ ನಡುವೆಯೇ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2022ರ ನಿಯಮದಲ್ಲಿ ಕೆಲವು ಬದಲಾವಣೆಯನ್ನು ತಂದಿದೆ. ಈ ಹೊಸ ನಿಯಮವು ನೇರವಾಗಿ 12 ಕೋಟಿ ರಿಜಿಸ್ಟಾರ್ ರೈತರ ಮೇಲೆ ಪರಿಣಾಮ ಉಂಟು ಮಾಡುತ್ತದೆ.

ಪಿಎಂ ಕಿಸಾನ್‌: 12ನೇ ಕಂತಿನಲ್ಲಿ 16,000 ಕೋಟಿ ರೂಪಾಯಿ ಜಮೆಪಿಎಂ ಕಿಸಾನ್‌: 12ನೇ ಕಂತಿನಲ್ಲಿ 16,000 ಕೋಟಿ ರೂಪಾಯಿ ಜಮೆ

ಅಷ್ಟಕ್ಕೂ ಈ ಬದಲಾವಣೆಯೇನು, ಈ ಯೋಜನೆ ಏನು, ಹೊಸ ಪ್ರಕ್ರಿಯೆ ಏನು,ಇನ್ನು ಕೂಡಾ ಹಣ ಜಮೆ ಆಗದಿದ್ದರೆ ನೀವು ಏನು ಮಾಡಬೇಕು, ಅದಕ್ಕೆ ಕಾರಣವೇನಾಗಿರಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..

ಪಿಎಂ ಕಿಸಾನ್ ಯೋಜನೆ ನಿಯಮ ಬದಲಾವಣೆ, ಹೊಸದೇನಿದೆ?

ಪಿಎಂ ಕಿಸಾನ್‌ನಲ್ಲಿ ಏನು ಬದಲಾವಣೆ?

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಪ್ರಮುಖ ಬದಲಾವಣೆಯನ್ನು ಮಾಡಿದೆ. ಈಗ ನೀವು ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ವೆಬ್‌ಸೈಟ್ ಮೂಲಕ ಹಣ ಜಮೆ ಆಗಿರುವ ಸ್ಟೇಟಸ್ ಚೆಕ್ ಮಾಡಲು ಸಾಧ್ಯವಾಗುವುದಿಲ್ಲ. ನಿಮಗೆ ಪಿಎಂ ಕಿಸಾನ್ ಯೋಜನೆಯ ಹಣ ಬಂದಿದೆಯೇ ಎಂದು ತಿಳಿಯಬೇಕಾದರೆ ನೀವು ನಿಮ್ಮ ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಯನ್ನು ಕೂಡಾ ನಮೂದಿಸುವುದು ಮುಖ್ಯವಾಗಿದೆ. ಈ ಹಿಂದೆ ಆಧಾರ್ ಅಥವಾ ಮೊಬೈಲ್ ಸಂಖ್ಯೆಯನ್ನು ಹಾಕಿ ಸ್ಟೇಟಸ್ ಪರಿಶೀಲನೆ ಮಾಡಬಹುದಾಗಿತ್ತು. ಆದರೆ ಬಳಿಕ ಮೊಬೈಲ್ ಸಂಖ್ಯೆಯಿಂದ ಅಲ್ಲ ಆಧಾರ್ ಸಂಖ್ಯೆಯಿಂದಲೇ ಸ್ಟೇಟಸ್ ಪರಿಶೀಲನೆ ಮಾಡಬೇಕು ಎಂದು ನಿಯಮ ಜಾರಿ ಮಾಡಲಾಯಿತು. ಅದಾದ ಬಳಿಕ ಪ್ರಸ್ತುತ ಆಧಾರ್ ಸಂಖ್ಯೆಯಿಂದಲ್ಲ ಮೊಬೈಲ್ ಸಂಖ್ಯೆಯಿಂದಲೇ ಸ್ಟೇಟಸ್ ಪರಿಶೀಲನೆ ಮಾಡಬೇಕು ಎಂಬ ನಿಯಮ ಬಂದಿದೆ.

ಸ್ಟೇಟಸ್ ಪರಿಶೀಲನೆ ಮಾಡುವ ಪ್ರಕ್ರಿಯೆ ಹೇಗಿದೆ ನೋಡಿ

ಹಂತ 1: pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ಎಡಭಾಗದಲ್ಲಿರುವ Beneficiary Status ಮೇಲೆ ಕ್ಲಿಕ್ ಮಾಡಿ
ಹಂತ 3: ಹೊಸ ಪುಟವು ಸ್ಕ್ರೀನ್‌ನಲ್ಲಿ ಕಾಣಿಸಲಿದೆ
ಹಂತ 4: ರಿಜಿಸ್ಟರ್ ಆದ ನಂಬರ್ ಅನ್ನು ಹಾಕುವ ಮೂಲಕ ನಿಮ್ಮ ಸ್ಟೇಟಸ್ ಅನ್ನು ಪರಿಶೀಲನೆ ಮಾಡಿ
ಹಂತ 5: ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆ ಇಲ್ಲವಾದರೆ, link to know your registration number ಮೇಲೆ ಕ್ಲಿಕ್ ಮಾಡಿ
ಹಂತ 6: ಈಗ ಪಿಎಂ ಕಿಸಾನ್ ಯೋಜನೆಗೆ ನೀವು ನೀಡಿದ ಮೊಬೈಲ್ ಸಂಖ್ಯೆಯನ್ನು ಹಾಕಿ
ಹಂತ 7: ಕ್ಯಾಪ್ಚಾ ಕೋಡ್ ಹಾಕಿ, ಮೊಬೈಲ್‌ಗೆ ಬಂದ ಒಟಿಪಿಯನ್ನು ನಮೂದಿಸಿ
ಹಂತ 8: Get Details ಮೇಲೆ ಕ್ಲಿಕ್ ಮಾಡಿ, ಈಗ ನಿಮ್ಮ ರಿಜಿಸ್ಟರ್ ಆದ ನಂಬರ್ ನಿಮಗೆ ಲಭ್ಯವಾಗಲಿದೆ.

English summary

PM Kisan: Rules of PM KISAN Changed, Here's Details

Under the Pradhan Mantri Kisan Yojana, government has transferred Rs 2000 of the 12th instalment to the account of farmers. but Rules of PM KISAN Changed, Here's Details...
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X