For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಸೂಚ್ಯಂಕ 1,000 ಪಾಯಿಂಟ್ ಕುಸಿತ; 3.6 ಲಕ್ಷ ಕೋಟಿ ನಷ್ಟ

|

ಭಾರತೀಯ ಷೇರು ಮಾರುಕಟ್ಟೆ ಬಜೆಟ್ ಮಂಡನೆಯಾದ ಶನಿವಾರ ಅಲ್ಲೋಲ ಕಲ್ಲೋಲ ಆಗಿದೆ. ಸೆನ್ಸೆಕ್ಸ್ ಸೂಚ್ಯಂಕ 1,000 ಪಾಯಿಂಟ್ ಗಳು ಕುಸಿದಿದೆ. 2016ರ ನವೆಂಬರ್ ನಿಂದ ಈಚೆಗೆ ಒಂದು ದಿನದಲ್ಲಿ ಕಂಡ ಅತಿ ದೊಡ್ಡ ಕುಸಿತ ಇದು. ಹೂಡಿಕೆದಾರರು 3.6 ಲಕ್ಷ ಕೋಟಿ ರುಪಾಯಿ ಕಳೆದುಕೊಂಡಿದ್ದಾರೆ.

 

ಎಚ್ ಡಿಎಫ್ ಸಿ, ಎಚ್ ಡಿಎಫ್ ಸಿ ಬ್ಯಾಂಕ್ ನಂಥ ಗಟ್ಟಿ ಕಂಪೆನಿಗಳಿಗೆ ಕೂಡ ಈ ದಿನ ಸ್ಥಿರವಾಗಿ ನಿಲ್ಲಲು ಆಗಿಲ್ಲ. ಇವು 2 ಪರ್ಸೆಂಟ್ ಗೂ ಹೆಚ್ಚು ಕುಸಿದಿವೆ. ಐಟಿಸಿ ಷೇರುಗಳು ಅತಿ ಹೆಚ್ಚು, ಅಂದರೆ 7 ಪರ್ಸೆಂಟ್ ಕುಸಿತ ಕಂಡಿದೆ. ಸಿಗರೇಟ್ ಮೇಲೆ ಅಬಕಾರಿ ಸುಂಕ ವಿಧಿಸಿದ ಮೇಲೆ ಇಂಥ ಪರಿಣಾಮ ಬೀರಿದೆ. ಕಳೆದ ಕೆಲವು ವರ್ಷಗಳಿಂದಲೇ ಷೇರು ಮಾರುಕಟ್ಟೆ ಇಂಥ ಕುಸಿತ ಕಂಡಿರಲಿಲ್ಲ.

ಕೇಂದ್ರ ಬಜೆಟ್ 2020ರ ಕಂಪ್ಲೀಟ್ ಹೈಲೈಟ್ಸ್ಕೇಂದ್ರ ಬಜೆಟ್ 2020ರ ಕಂಪ್ಲೀಟ್ ಹೈಲೈಟ್ಸ್

ಷೇರು ಮಾರುಕಟ್ಟೆ ಭಾರೀ ಕುಸಿತಕ್ಕೆ ಕೇಂದ್ರ ಬಜೆಟ್ ನೆಡೆಗೆ ಬೊಟ್ಟು ಮಾಡಲಾಗುತ್ತಿದೆ. ಈ ಪರಿಯಲ್ಲಿ ಮಾರುಕಟ್ಟೆ ಕುಸಿಯಲು ಕಾರಣವಾದ 5 ಅಂಶಗಳನ್ನು ಇಲ್ಲಿ ನೀಡಲಾಗುತ್ತಿದೆ.

ಎಲ್ ಟಿಸಿಜಿ

ಎಲ್ ಟಿಸಿಜಿ

ಷೇರುಗಳ ದೀರ್ಘಾವಧಿ ಬಂಡವಾಳದ ಮೇಲಿನ ಗಳಿಕೆಗೆ (ಎಲ್ ಟಿಸಿಜಿ) ತೆರಿಗೆ ತೆಗೆಯಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಬಜೆಟ್ ನಲ್ಲಿ ಅದು ಆಗಲಿಲ್ಲ. ಇದರಿಂದ ಮ್ಯೂಚುವಲ್ ಫಂಡ್ ವಲಯ ಹಾಗೂ ಹೂಡಿಕೆದಾರರಿಗೆ ನಿರಾಶೆಯಾಯಿತು. ಒಂದು ವೇಳೆ ಎಲ್ ಟಿಸಿಜಿ ಮೇಲೆ ತೆರಿಗೆ ತೆಗೆದಿದ್ದರೆ ಹೂಡಿಕೆದಾರರಿಗೆ ಅನುಕೂಲ ಆಗುತ್ತಿತ್ತು.

ಮೂಲಸೌಕರ್ಯಕ್ಕೆ ಪ್ರಮುಖವಾಗಿ ಏನೂ ಸಿಕ್ಕಿಲ್ಲ

ಮೂಲಸೌಕರ್ಯಕ್ಕೆ ಪ್ರಮುಖವಾಗಿ ಏನೂ ಸಿಕ್ಕಿಲ್ಲ

vಈ ಬಾರಿಯ ಕೇಂದ್ರ ಬಜೆಟ್ ಅನ್ನು ಪ್ರಗತಿಪರ ಬಜೆಟ್ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ರಿಯಲ್ ಎಸ್ಟೇಟ್, ನಿರ್ಮಾಣ ಮತ್ತು ವಾಹನ ವಲಯಕ್ಕೆ ಇನ್ನೂ ಸಾಕಷ್ಟು ಮಾಡಬಹುದಿತ್ತು. ಇದರಿಂದ ಹೂಡಿಕೆದಾರರು ಭಾರೀ ನಿರಾಶರಾಗಿದ್ದಾರೆ. ಏಕೆಂದರೆ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಆಗುತ್ತಿದ್ದುದೇ ಈ ವಲಯದಲ್ಲಿ.

ಷೇರುಗಳ ಮೇಲಿನ ಲಾಭಾಂಶಕ್ಕೆ ತಾವೇ ತೆರಿಗೆ ಪಾವತಿಸಬೇಕು
 

ಷೇರುಗಳ ಮೇಲಿನ ಲಾಭಾಂಶಕ್ಕೆ ತಾವೇ ತೆರಿಗೆ ಪಾವತಿಸಬೇಕು

ಶ್ರೀಮಂತ ಹೂಡಿಕೆದಾರರು ಈಗ ಷೇರುಗಳ ಮೇಲಿನ ಲಾಭಾಂಶಕ್ಕೆ ತಾವೇ ತೆರಿಗೆ ಪಾವತಿಸಬೇಕು. ಉದಾಹರಣೆಗೆ ಈಗಾಗಲೇ ಹದಿನೈದು ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸುತ್ತಿದ್ದಲ್ಲಿ ಡಿವಿಡೆಂಡ್ ರೂಪದಲ್ಲಿ ಪಡೆದಿದ್ದನ್ನು ಆದಾಯಕ್ಕೆ ಸೇರಿಸಿಕೊಂಡು, ತೆರಿಗೆ ಪಾವತಿಸಬೇಕು. ಹೆಚ್ಚಿನ ತೆರಿಗೆ ವ್ಯಾಪ್ತಿಗೆ ಬರುವವರಿಗೆ ಡಿವಿಡೆಂಡ್ ಮೇಲೆ ಮೂವತ್ತು ಪರ್ಸೆಂಟ್ ತೆರಿಗೆ ಬೀಳುತ್ತದೆ. ಈ ಹಿಂದೆ ಹತ್ತು ಲಕ್ಷ ರುಪಾಯಿ ತನಕ ಡಿವಿಡೆಂಡ್ ಗೆ ತೆರಿಗೆ ಇರಲಿಲ್ಲ.

ಜಾಗತಿಕ ಅಂಶಗಳು

ಜಾಗತಿಕ ಅಂಶಗಳು

ಡೌ ಜೋನ್ಸ್ ಸೂಚ್ಯಂಕವು ಶುಕ್ರವಾರ ಎರಡು ಪರ್ಸೆಂಟ್ ಕುಸಿತ ಕಂಡಿತ್ತು. ಆಗಸ್ಟ್ ನಂತರದಲ್ಲಿ ಕಂಡುಬಂದ ಭಾರೀ ಮಾರಾಟ ಒತ್ತಡ ಇದಾಗಿತ್ತು. ವರದಿಗಳ ಪ್ರಕಾರ, ಚೀನಾದಲ್ಲಿನ ತನ್ನ ಎಲ್ಲ ಮಳಿಗೆಗಳನ್ನು ಆಪಲ್ ಮುಚ್ಚಿದೆ.

ಭಾರೀ ಪ್ರಮಾಣದಲ್ಲಿ ಮಾರಾಟ

ಭಾರೀ ಪ್ರಮಾಣದಲ್ಲಿ ಮಾರಾಟ

ಕೆಲವು ಬ್ಲ್ಯೂಚಿಪ್ ಷೇರುಗಳು ಕಳೆದ ಕೆಲವು ತಿಂಗಳಿಂದ ನಿರಂತರವಾಗಿ ಏರಿಕೆ ಕಂಡಿದ್ದವು. ಅವುಗಳು ಶನಿವಾರ ಭಾರೀ ಪ್ರಮಾಣದಲ್ಲಿ ಮಾರಾಟವಾದವು. ಮುಖ್ಯವಾಗಿ ಎಚ್ ಡಿಎಫ್ ಸಿ ಬ್ಯಾಂಕ್, ಲಾರ್ಸನ್ ಅಂಡ್ ಟೂಬ್ರೋ ಮತ್ತು ಎಚ್ ಡಿಎಫ್ ಸಿ ಷೇರುಗಳು ಕುಸಿದವು.

English summary

Sensex Fall 1000 Points: Investors Lost 3.6 Lakh Crore

After union budget Sensex fall 1000 points. Investors lost 3.6 lakh crores. Here is the complete details.
Story first published: Saturday, February 1, 2020, 19:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X