Englishहिन्दी മലയാളം தமிழ் తెలుగు

ಎಸ್ಬಿಐ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ

Written By: Siddu
Subscribe to GoodReturns Kannada

ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚು ಬಾರಿ ನಗದು ವ್ಯವಹಾರ ಕೈಗೊಳ್ಳುವ ಗ್ರಾಹಕರಿಗೆ ಶುಲ್ಕ ವಿಧಿಸುವ ನಿರ್ಧಾರದ ಬೆನ್ನಲ್ಲೇ, ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದೆ.

ತಮ್ಮ ಬ್ಯಾಂಕ್ ಖಾತೆಯಲ್ಲಿ ನಿಗದಿತ ಕನಿಷ್ಠ ಬಾಕಿ(ಮಿನಿಮಮ್ ಬ್ಯಾಲೆನ್ಸ್) ಉಳಿಸಿಕೊಳ್ಳದ ಗ್ರಾಹಕರಿಗೆ ದಂಡ ವಿಧಿಸುವುದಾಗಿ ಪ್ರಕಟಿಸಿದ್ದು, ಏಪ್ರಿಲ್ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಎಸ್ಬಿಐ ಹೇಳಿದೆ. ಎಸ್‌ಬಿಐ ವಿಲೀನಕ್ಕೆ ಸಂಪುಟ ಒಪ್ಪಿಗೆ: ವಿಲೀನದ ಅನುಕೂಲ/ಅನಾನುಕೂಗಳೇನು?

ಬ್ಯಾಂಕು ಶುಲ್ಕ

ದೇಶದ ಅತಿದೊಡ್ಡ ಬ್ಯಾಂಕು ಎನಿಸಿರುವ ಎಸ್ಬಿಐ ನ ಗ್ರಾಹಕರು ಒಂದು ತಿಂಗಳಿನಲ್ಲಿ 3 ಬಾರಿ ಉಚಿತವಾಗಿ ಉಳಿತಾಯ ಖಾತೆಯಿಂದ ನಗದು ವಹಿವಾಟು ನಡೆಸಬಹುದು. ನಂತರದ ಪ್ರತಿ ವಹಿವಾಟಿನ ಮೇಲೆ ರೂ. 50 ಶುಲ್ಕ ಭರಿಸಬೇಕಾಗುತ್ತದೆ.

ಮೆಟ್ರೊಪಾಲಿಟನ್ ಖಾತೆದಾರರು

ಏಪ್ರಿಲ್ 1ರಿಂದ ಮಹಾನಗರ(ಮೆಟ್ರೊಪಾಲಿಟನ್) ಪ್ರದೇಶಗಳಲ್ಲಿನ ಎಸ್ಬಿಐ ಖಾತೆದಾರರು ತಮ್ಮ ಖಾತೆಗಳಲ್ಲಿ 5 ಸಾವಿರ ರೂ. ಕನಿಷ್ಠ ಬಾಕಿ ಹೊಂದಿರಬೇಕು.

ನಗರ, ಅರೆ ನಗರ ಖಾತೆದಾರರು

ನಗರ ಪ್ರದೇಶಗಳಲ್ಲಿ ಖಾತೆದಾರರು ರೂ. 3 ಸಾವಿರ, ಅರೆ ನಗರ ಪ್ರದೇಶಗಳಲ್ಲಿ ರೂ. 2 ಸಾವಿರ, ಗ್ರಾಮೀಣ ಪ್ರದೇಶಗಳಲ್ಲಿನ ಖಾತೆದಾರರು ರೂ. 1 ಸಾವಿರ ನಿಗದಿತ ಕನಿಷ್ಟ ಬಾಕಿ ಹೊಂದಿರುವುದು ಕಡ್ಡಾಯವಾಗಿದೆ ಎಂದು ಎಸ್ಬಿಐ ತಿಳಿಸಿದೆ.

ಎಟಿಎಂ ವಿತ್ ಡ್ರಾ

ಎಸ್ಬಿಐ ಎಟಿಎಂಗಳಲ್ಲಿ ಪ್ರತಿ ತಿಂಗಳಿಗೆ 5 ಬಾರಿ ಹಣ ತೆಗೆಯುವುದು ಉಚಿತವಾಗಿದ್ದು, 6ನೇ ಬಾರಿ ಹಣ ವಿತ್ ಡ್ರಾ ಮಾಡುವಾಗ ಒಂದು ವ್ಯವಹಾರಕ್ಕೆ 10 ರೂ. ಶುಲ್ಕ ವಿಧಿಸಲಾಗುತ್ತದೆ. ಜತೆಗೆ ಬೇರೆ ಬ್ಯಾಂಕುಗಳ ಎಟಿಎಂಗಳನ್ನು ತಿಂಗಳಿಗೆ ಮೂರು ಬಾರಿ ಮಾತ್ರ ಉಚಿತ ಬಳಕೆ ಮಾಡಲು ಅವಕಾಶವಿದ್ದು, ಅದಕ್ಕಿಂತ ಹೆಚ್ಚಿನ ವ್ಯವಹಾರಗಳ ಮೇಲೆ 20 ಶುಲ್ಕ ವಿಧಿಸಲಾಗುತ್ತದೆ. ಹೊಸ ನಿಯಮ: ಬ್ಯಾಂಕು ಮತ್ತು ಎಟಿಎಂ ವ್ಯವಹಾರಗಳ ಮೇಲೆ ಶುಲ್ಕ ಎಷ್ಟು?

Read more about: sbi, atm, money, banking, ಎಸ್‌ಬಿಐ
English summary

SBI Revises ATM Charges, To Levy Cash Transaction Fee

After a gap of five years, State Bank of India has decided to reintroduce penalty on non-maintenance of minimum balance in accounts from April 1, and revised charges on other services, including ATMs.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC