For Quick Alerts
ALLOW NOTIFICATIONS  
For Daily Alerts

ದೊಡ್ಡ ಪ್ರಮಾಣದ ಉಳಿತಾಯಕ್ಕಾಗಿ 5 ಬದಲಾವಣೆ ನಿಮ್ಮದಾಗಿರಲಿ..

ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಹಲವಾರು ಬಾರಿ ಅನವಶ್ಯಕವಾಗಿ ದುಡ್ಡು ಖರ್ಚು ಮಾಡುತ್ತಲೇ ಇರುತ್ತೇವೆ. ಒಂದು ವೇಳೆ ಅದೇ ದುಡ್ಡನ್ನು ಉಳಿಸಿದ್ದೇ ಆದಲ್ಲಿ ಎಷ್ಟೋ ಹಣ ಉಳಿತಾಯ ಮಾಡಬಹುದಾಗಿರುತ್ತದೆ.

|

ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಹಲವಾರು ಬಾರಿ ಅನವಶ್ಯಕವಾಗಿ ದುಡ್ಡು ಖರ್ಚು ಮಾಡುತ್ತಲೇ ಇರುತ್ತೇವೆ. ಒಂದು ವೇಳೆ ಅದೇ ದುಡ್ಡನ್ನು ಉಳಿಸಿದ್ದೇ ಆದಲ್ಲಿ ಎಷ್ಟೋ ಹಣ ಉಳಿತಾಯ ಮಾಡಬಹುದಾಗಿರುತ್ತದೆ. ಒಂದು ಕಡೆ ಖರ್ಚು ಮಾಡುತ್ತಲೇ ಇರುವುದು ಹಾಗೂ ಆ ಖರ್ಚುಗಳನ್ನು ನಿಭಾಯಿಸಲು ಹೆಚ್ಚೆಚ್ಚು ದುಡಿಯುತ್ತಲೇ ಹೋಗುವುದು ಸಮಸ್ಯೆಗೆ ಪರಿಹಾರವಾಗಲು ಸಾಧ್ಯವೇ ಇಲ್ಲ.
ನಿವೃತ್ತಿ ನಂತರ ಜೀವನದ ಭದ್ರತೆ, ಯಾವುದೋ ದೊಡ್ಡ ವಸ್ತು ಕೊಳ್ಳುವುದು, ಆಪತ್ ನಿಧಿ ಇಟ್ಟುಕೊಳ್ಳುವುದು ಮುಂತಾದುವುಗಳ ಸಲುವಾಗಿಯಾದರೂ ಉಳಿತಾಯ ಮಾಡಲೇಬೇಕು. ಆದರೆ ನಿಮ್ಮ ಜೀವನದಲ್ಲಿ ಕೆಲವು ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಇದನ್ನು ಸಾಧಿಸಬಹುದು. ನಿಮ್ಮ ಯಾವುದೇ ಖುಷಿಯನ್ನು ಬಿಟ್ಟು ಕೊಡದೆ ನೆಮ್ಮದಿಯುತವಾಗಿ ಜೀವನ ನಡೆಸಲು ಈ ಟ್ರಿಕ್ಸ್ ನಿಮಗೆ ಸಹಾಯ ಮಾಡಬಲ್ಲವು. ಆ ಟ್ರಿಕ್ಸ್ ಯಾವುವು ಎಂಬುದನ್ನು ನೋಡೋಣ.

ಯಾರನ್ನೋ ಮೆಚ್ಚಿಸಲು ಖರೀದಿ ಮಾಡಬೇಕಿಲ್ಲ!

ಯಾರನ್ನೋ ಮೆಚ್ಚಿಸಲು ಖರೀದಿ ಮಾಡಬೇಕಿಲ್ಲ!

ನಮ್ಮಲ್ಲಿ ಹೆಚ್ಚಿನವರು ಯಾರನ್ನೋ ಮೆಚ್ಚಿಸಲು ಅಥವಾ ಎದುರಿನವರ ಮುಂದೆ ದೊಡ್ಡಸ್ತಿಕೆ ತೋರಿಸಲು ಖರ್ಚು ಮಾಡುತ್ತಾರೆ. ಆದರೆ ಇದು ಜಾಣತನವಲ್ಲ. ಇಂಥದೊಂದು ಮನಸ್ಥಿತಿಯಿಂದ ಖರ್ಚುಗಳು ಹೆಚ್ಚಾಗುತ್ತ ದುಡಿದ ಹಣ ಸಾಲದಾಗುತ್ತದೆ. ಹೀಗಾಗಿ ಜೀವನದಲ್ಲಿ ಯಾವುದೇ ಹಣಕಾಸು ಗುರಿ ಸಾಧಿಸಲು ಆಗುವುದಿಲ್ಲ. ಉದಾಹರಣೆಗೆ ನೋಡುವುದಾದರೆ, ಸಮಯ ತಿಳಿಯಲು ಗಡಿಯಾರ ಕಟ್ಟಿಕೊಳ್ಳುವುದು ಸರಿಯಷ್ಟೆ. ಸಮಯ ತಿಳಿಯಲು ದುಬಾರಿ ವಾಚ್ ಬೇಕೆಂದೇನೂ ಇಲ್ಲ. ಹೀಗಾಗಿ ಅವಶ್ಯಕತೆ ಇರುವಷ್ಟನ್ನೇ ಕೊಳ್ಳಬೇಕು. ಜನರಿಗೆ ದೊಡ್ಡಸ್ತಿಕೆ ತೋರಿಸಲು ಯಾವುದೋ ದುಬಾರಿ ಬ್ರ್ಯಾಂಡಿನ ವಾಚ್ ಕಟ್ಟಿಕೊಳ್ಳುವುದು ಸಮರ್ಥನೀಯವಲ್ಲ. ಇಂಥ ಸಣ್ಣ ಬದಲಾವಣೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅದರಿಂದಾಗುವ ಉಳಿತಾಯಗಳು ಅದೆಷ್ಟೋ ದೊಡ್ಡದಾಗಿರುತ್ತವೆ.

ಆದಷ್ಟೂ ಸಾರ್ವಜನಿಕ ಸಾರಿಗೆ ಬಳಸಿ

ಆದಷ್ಟೂ ಸಾರ್ವಜನಿಕ ಸಾರಿಗೆ ಬಳಸಿ

ಸುಲಭ ಲಭ್ಯತೆಯ ಕಾರಣದಿಂದ ಪ್ರತಿದಿನ ಸಂಚರಿಸಲು ಕ್ಯಾಬ್ ಅಥವಾ ಆಟೊರಿಕ್ಷಾ ಬಳಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವುದಕ್ಕೂ ಈ ಕ್ಯಾಬ್‌ಗಳಲ್ಲಿ ಪ್ರಯಾಣಿಸುವುದಕ್ಕೂ ಖರ್ಚಿನ ವಿಷಯದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಮನೆಯಿಂದ ಸ್ವಲ್ಪ ಬೇಗನೆ ಹೊರಟು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಿದಲ್ಲಿ ತಿಂಗಳಾಂತ್ಯಕ್ಕೆ ಎಷ್ಟೋ ಉಳಿತಾಯ ಮಾಡಬಹುದು. ಇನ್ನು ಈ ವಿಷಯ ಸ್ವಂತ ಕಾರಿಗೂ ಅನ್ವಯಿಸುತ್ತದೆ. ಕಾರಿಗಾಗಿ ಬಳಸುವ ಇಂಧನ, ಪ್ರತಿ ತಿಂಗಳು ಅದರ ನಿರ್ವಹಣೆ ಹೀಗೆ ಎಷ್ಟೋ ಖರ್ಚುಗಳಿರುತ್ತವೆ. ಸಾರ್ವಜನಿಕ ಸಾರಿಗೆಯಲ್ಲಿ ಪಯಣಿಸುವ ಮೂಲಕ ಇಂಥ ಖರ್ಚುಗಳನ್ನು ಆದಷ್ಟೂ ಕಡಿಮೆ ಮಾಡಬಹುದು. ತೀರಾ ಅಗತ್ಯವಾದಾಗ ಮಾತ್ರ ಸ್ವಂತ ವಾಹನದಲ್ಲಿ ಅಥವಾ ಕ್ಯಾಬ್‌ಗಳಲ್ಲಿ ಪ್ರಯಾಣಿಸುವುದು ಸೂಕ್ತ.

ಹೊರಗೆ ತಿನ್ನುವುದನ್ನು ಕಡಿಮೆ ಮಾಡಿ

ಹೊರಗೆ ತಿನ್ನುವುದನ್ನು ಕಡಿಮೆ ಮಾಡಿ

ಮನೆ ಊಟ ಮಾಡುವುದು ಆರೋಗ್ಯಕ್ಕೂ ಒಳ್ಳೆಯದು ಹಾಗೂ ಇದು ನಿಮ್ಮ ಜೇಬಿಗೂ ಒಳ್ಳೆಯದು. ಆಗಾಗ ಹೊರಗೆ ತಿನ್ನುವುದನ್ನು ಕಡಿಮೆ ಮಾಡಿದಲ್ಲಿ ಪ್ರತಿದಿನ ದುಡ್ಡು ಉಳಿತಾಯ ಮಾಡಬಹುದು. ಸ್ವಲ್ಪ ಬೇಗ ಎದ್ದು ಮನೆಯಲ್ಲಿಯೇ ಟಿಫಿನ್ ತಯಾರಿಸಿ ಸೇವಿಸುವುದರಿಂದ ದುಡ್ಡು ಉಳಿಯುತ್ತದೆ. ಈಗಂತೂ ಯಾವುದೇ ಹೊಟೇಲಿಗೆ ಹೋದರೂ ಎಲ್ಲವೂ ದುಬಾರಿ. ಅಷ್ಟು ದುಡ್ಡು ತೆತ್ತರೂ ಊಟದ ಗುಣಮಟ್ಟವೂ ಖಾತರಿ ಇರುವುದಿಲ್ಲ. ಹೀಗಿರುವಾಗ ಜೀವನದಲ್ಲಿ ಒಂಚೂರು ಬದಲಾವಣೆ ತಂದುಕೊಂಡು ಮನೆ ಊಟಕ್ಕೆ ಒಗ್ಗಿಕೊಂಡಲ್ಲಿ ಹಣದ ಉಳಿತಾಯ ಮಾಡಬಹುದು.

ಸುಮ್ಮನೇ ಶಾಪಿಂಗ್ ಮಾಡುವುದು ಬೇಡ

ಸುಮ್ಮನೇ ಶಾಪಿಂಗ್ ಮಾಡುವುದು ಬೇಡ

ಶಾಪಿಂಗ್ ಮಾಡುವುದು ಕೆಲವರಿಗೆ ಒಂದು ಚಟವಾಗಿ ಬಿಟ್ಟಿರುತ್ತದೆ. ಶಾಪಿಂಗ್ ಮಾಡುವುದರಲ್ಲಿ ಇಂಥವರು ಅದೇನೋ ಆನಂದ ಅನುಭವಿಸುತ್ತಾರೆ. ಆದರೆ ಹೀಗೆ ಶಾಪಿಂಗ್ ಮಾಡುತ್ತ ಹೋದಲ್ಲಿ ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗಿ ಪರದಾಡಬೇಕಾಗುತ್ತದೆ. ನಮಗೆ ಏನು ಅವಶ್ಯಕತೆ ಇದೆ ಎಂಬುದರ ಪಟ್ಟಿ ತಯಾರಿಸಿಕೊಂಡು ಅಷ್ಟನ್ನೇ ಖರೀದಿಸಿ ತರಬೇಕು. ಸುಪರ್ ಮಾರ್ಕೆಟ್‌ನಲ್ಲಿ ಕಂಡದ್ದನ್ನೆಲ್ಲ ಕೊಂಡು ಖರ್ಚು ಮಾಡಲೇಕೂಡದು.

ಕಾರ್ಡ್ ಬಳಸುವಾಗ ಎಚ್ಚರ

ಕಾರ್ಡ್ ಬಳಸುವಾಗ ಎಚ್ಚರ

ಕ್ಯಾಶ್ ಮೂಲಕ ಖರೀದಿ ಮಾಡುವಾಗ ಜನ ತಮ್ಮ ಖರೀದಿಯ ಬಗ್ಗೆ ಹೆಚ್ಚು ಜಾಗೃತರಾಗಿರುತ್ತಾರೆ. ಪರ್ಸ್‌ನಲ್ಲಿರುವ ಹಣ ಕರಗುತ್ತಿದ್ದರೆ ಎಂಥವರಾದರೂ ಒಂದು ಕ್ಷಣ ಯೋಚಿಸುತ್ತಾರೆ. ಆದರೆ ಅದೇ ಕ್ರೆಡಿಟ್ ಕಾರ್ಡ್ ಮೂಲಕ ಖರ್ಚು ಮಾಡಿದಾಗ ಇಂಥ ಜಾಗರೂಕತೆ ಇರುವುದಿಲ್ಲ. ಅದು ಎಷ್ಟಾದರೂ ಒಂದು ಪ್ಲಾಸ್ಟಿಕ್ ಚೂರು. ಅದರಲ್ಲಿನ ಖರ್ಚುಗಳು ಕಾಣಿಸಲು ಕನಿಷ್ಠ ತಿಂಗಳಾದರೂ ಬೇಕು. ಹೀಗಾಗಿ ಆ ಕ್ಷಣಕ್ಕೆ ಏನೂ ಆಗಿಲ್ಲವೆಂಬಂತೆ ಜನ ಕಾರ್ಡ್ ಮೂಲಕ ಖರೀದಿ ಮಾಡುತ್ತಲೇ ಇರುತ್ತಾರೆ. ಈ ರೀತಿ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವುದನ್ನು ಆದಷ್ಟೂ ಕಡಿಮೆ ಮಾಡಬೇಕು. ನಮ್ಮ ಜೇಬಿನಲ್ಲಿ ಇರುವ ಹಣವನ್ನು ನೋಡಿಕೊಂಡು ಜಾಣತನದಿಂದ ವಸ್ತುಗಳನ್ನು ಖರೀದಿಸಬೇಕು.

ಉಳಿತಾಯ ಮಾಡುವುದು ಕಷ್ಟವೇನಲ್ಲ

ಉಳಿತಾಯ ಮಾಡುವುದು ಕಷ್ಟವೇನಲ್ಲ

ಮೇಲೆ ತಿಳಿಸಲಾದ ಉಳಿತಾಯದ ಎಲ್ಲ ವಿಧಾನಗಳು ಅತಿ ಸರಳ ಹಾಗೂ ಸುಲಭವಾಗಿವೆ. ಜೀವನದಲ್ಲಿ ಒಂದಿಷ್ಟು ಶಿಸ್ತು ಅಳವಡಿಸಿಕೊಂಡಲ್ಲಿ ಈ ಉಳಿತಾಯ ವಿಧಾನಗಳನ್ನು ಅನುಸರಿಸಬಹುದು. ಅತಿ ಚಿಕ್ಕದಾದ ಕೆಲವು ಸೂತ್ರಗಳೇ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತವೆ. ಹಾಗೆಯೇ ಖರ್ಚಿನ ವಿಷಯದಲ್ಲಿಯೂ ಕೂಡ ಚಿಕ್ಕ ಪುಟ್ಟ ಶಿಸ್ತಿನ ಕ್ರಮಗಳಿಂದ ದೊಡ್ಡ ಉಳಿತಾಯವನ್ನೇ ಮಾಡಬಹುದು. ಈ ವಿಧಾನಗಳನ್ನು ನಿಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಒತ್ತಡ ಕಡಿಮೆ ಮಾಡಿ ನೆಮ್ಮದಿಯಾಗಿ ಜೀವಿಸಿ. ಬಂಡವಾಳವಿಲ್ಲದೇ ಈ ಬಿಸಿನೆಸ್ ಆರಂಭಿಸಿ ಕೈತುಂಬಾ ಸಂಪಾದಿಸಿ..

English summary

5 small changes for big savings

Knowingly or unknowingly, we often indulge in frivolous expenses, which when avoided can boost our savings substantially.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X