For Quick Alerts
ALLOW NOTIFICATIONS  
For Daily Alerts

ನೀವು ತಪ್ಪಾಗಿ ಹಣ ವರ್ಗಾವಣೆ ಮಾಡಿದ್ದೀರಾ? ಮಾರ್ಗೋಪಾಯಗಳಿವೆ

|

ಈಗಂತೂ ಹಣ ವರ್ಗಾವಣೆ ಮಾಡುವುದು ಬಹಳ ಸುಲಭ. ಉದ್ದುದ್ದದ ಅಕೌಂಟ್ ನಂಬರ್, ಐಎಫ್‌ಎಸ್‌ಸಿ ಕೋಡ್ ಹಾಕಿ ಹಣ ವರ್ಗಾವಣೆ ಮಾಡಿದರೆ ಅದು ಸರಿಯಾದ ಅಕೌಂಟ್ ನಂಬರ್‌ಗೆ ಹೋಗಿದೆಯಾ ಎಂಬ ಅನುಮಾನ ಇದ್ದೇ ಇರುತ್ತಿತ್ತು. ಹಣ ಕಳುಹಿಸಿದ ಅಕೌಂಟ್ ನಂಬರ್‌ನವರಿಗೆ ಕರೆ ಮಾಡಿ ಹಣ ಬಂದಿದೆಯಾ ಎಂದು ಕೇಳಿ ಖಾತ್ರಿ ಪಡಿಸಿಕೊಳ್ಳಬೇಕಿತ್ತು. ಈಗ ಯುಪಿಐ ತಂತ್ರಜ್ಞಾನ ಬಂದ ಮೇಲೆ ಹಣ ವರ್ಗಾವಣೆ ಸರಾಗವಾಗಿದೆ. ಮೊಬೈಲ್ ನಂಬರ್ ಹಾಕಿ ಹಣ ಕಳುಹಿಸಿದರೆ ಸಾಕು. ಮೊಬೈಲ್ ನಂಬರ್ ಹಾಕಿದಾಗ ಹೆಸರೂ ಪ್ರತ್ಯಕ್ಷವಾಗುವುದರಿಂದ ಬೇರೆಯವರ ಖಾತೆಗೆ ಹಣ ಹೋಗುವ ಸಂಭವ ಕಡಿಮೆಯೂ ಇರುತ್ತದೆ. ಅಷ್ಟು ಅಚ್ಚುಕಟ್ಟಾಗಿದೆ ಇಂದಿನ ಮನಿ ಟ್ರಾನ್ಸ್‌ಫರ್ ತಂತ್ರಜ್ಞಾನ.

ಭೀಮ್ ಆ್ಯಪ್ ಜೊತೆಗೆ ಈಗ ಪೇಟಿಎಂ, ಫೋನ್ ಪೇ, ಪೇಟಿಎಂ, ಅಮೇಜಾನ್ ಪೇ ಇತ್ಯಾದಿ ಅನೇಕ ಪೇಮೆಂಟ್ ಆ್ಯಪ್‌ಗಳ ಆಯ್ಕೆ ಇದೆ. ಇಷ್ಟಾಗಿಯೂ ಕೆಲವೊಮ್ಮೆ ನಾವು ತಪ್ಪಾಗಿ ಬೇರೆ ಖಾತೆಗೆ ಹಣ ಕಳುಹಿಸುವುದಿದೆ. ಹಣ ಕಳುಹಿಸಲಾಗುವ ಖಾತೆಯವರ ಹೆಸರು ಸರಿಯಾಗಿ ಗೊತ್ತಿಲ್ಲದಿದ್ದಾಗ ಹೀಗಾಗಬಹುದು. ಇಂಥ ಸಂದರ್ಭದಲ್ಲಿ ನಿಮ್ಮ ಹಣವನ್ನು ವಾಪಸ್ ಪಡೆಯಬಹುದಾ?

ಆನ್‌ಲೈನ್‌ನಲ್ಲಿ ಪೇಟಿಎಂ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ?ಆನ್‌ಲೈನ್‌ನಲ್ಲಿ ಪೇಟಿಎಂ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ?

ಕಾನೂನು ಏನು ಹೇಳುತ್ತದೆ?

ಕಾನೂನು ಏನು ಹೇಳುತ್ತದೆ?

ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸರ್ಕಾರವೇ ಭಾರತ್ ಇಂಟರ್ಫೇಸ್ ಫಾರ್ ಮನಿ (BHIM) ರೂಪಿಸಿದೆ. ಇದರ ನಿಯಮದ ಪ್ರಕಾರ ಒಂದು ವೇಳೆ ನೀವು ತಪ್ಪಾಗಿ ಬೇರೆ ಅಕೌಂಟ್‌ಗೆ ಹಣ ಕಳುಹಿಸಿದರೆ ವಾಪಸ್ ಪಡೆದುಕೊಳ್ಳಬಹುದೆಂಬ ಖಾತ್ರಿ ಇಲ್ಲ. ನೀವು ಹಣ ಕಳುಹಿಸಲಾಗುವ ಖಾತೆಯ ಮಾಲೀಕರನ್ನು ಸಂಪರ್ಕಿಸಿ ಮನವಿ ಮಾಡಿಕೊಂಡು ಹಣ ವಾಪಸ್ ಪಡೆದುಕೊಳ್ಳಬೇಕು ಅಷ್ಟೇ.

ಆದ್ದರಿಂದ ಹಣ ಕಳುಹಿಸುವ ಮುನ್ನ ಮೊಬೈಲ್ ನಂಬರ್ ಮತ್ತು ಆನಂತರ ಕಾಣುವ ಖಾತೆದಾರರ ಹೆಸರನ್ನು ಪರಿಶೀಲಿಸಿ ಹಣ ಕಳುಹಿಸುವುದು ಉತ್ತಮ. ಕೆಲವೊಮ್ಮೆ ಹೆಸರು ಒಂದೇ ತೆರನಾಗಿರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ನೀವು ಮೊದಲ ಬಾರಿಗೆ ಒಬ್ಬರಿಗೆ ಹಣ ಕಳುಹಿಸುವುದಿದ್ದರೆ ಸಣ್ಣ ಮೊತ್ತವನ್ನು ಮೊದಲು ಕಳುಹಿಸಿ. ಅದು ತಲುಪಿದೆ ಎಂದು ಖಾತ್ರಿಯಾದ ಬಳಿಕ ಎಲ್ಲಾ ಹಣವನ್ನು ವರ್ಗಾವಣೆ ಮಾಡಬಹುದು.

ದೂರು ಕೊಡುವ ಅವಕಾಶ ಇದೆ

ದೂರು ಕೊಡುವ ಅವಕಾಶ ಇದೆ

ನಿಯಮಗಳ ಪ್ರಕಾರ ನೀವು ಯುಪಿಐ ಐಡಿ ಮೂಲಕ ಕಳುಹಿಸಲಾಗುವ ಹಣವನ್ನು ಮರಳಿ ಪಡೆಯುವ ಖಾತ್ರಿ ಇಲ್ಲವಾದರೂ ದೂರು ಕೊಡುವ ಅವಕಾಶವಂತೂ ಇದೆ. ಭೀಮ್, ಪೇಟಿಎಂ, ಫೋನ್ ಪೇ ಇತ್ಯಾದಿ ಆ್ಯಪ್‌ಗಳಲ್ಲಿ ದೂರಿನ ಅವಕಾಶ ಇದೆ. ಈ ಆ್ಯಪ್‌ಗಳಲ್ಲಿರುವ ಕಸ್ಟಮರ್ ಸಪೋರ್ಟ್ ಅನ್ನು ಸಂಪರ್ಕಿಸಿ ದೂರು ಕೊಡಬಹುದು. ಭೀಮ್ ಆ್ಯಪ್‌ನಲ್ಲಿ ಹೆಲ್ಪ್‌ಲೈನ್ ನಂಬರ್ ೧೮೦೦೧೨೦೧೭೪೦ ಅನ್ನು ಸಂಪರ್ಕಿಸಬಹುದು.

ಬ್ಯಾಂಕ್ ಸಂಪರ್ಕಿಸಿ

ಬ್ಯಾಂಕ್ ಸಂಪರ್ಕಿಸಿ

ನೀವು ತಪ್ಪಾಗಿ ಹಣ ಕಳುಹಿಸಿದ್ದು ಗಮನಕ್ಕೆ ಬಂದ ಕೂಡಲೇ ಟ್ರಾನ್ಸಾಕ್ಷನ್‌ನ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ. ನೀವು ಹಣ ಕಳುಹಿಸಿದ ಖಾತೆ ನಂಬರ್‌ನ ಬ್ಯಾಂಕ್ ಅನ್ನು ಸಂಪರ್ಕಿಸಬೇಕು. ಬ್ಯಾಂಕ್‌ನ ಆ ಶಾಖೆಯ ಮ್ಯಾನೇಜರ್ ಅವರನ್ನೇ ಖುದ್ದಾಗಿ ಭೇಟಿ ಮಾಡುವುದಿದ್ದರೆ ಆಗಬಹುದು. ನೀವು ಶೀಘ್ರವಾಗಿ ಬ್ಯಾಂಕ್ ಸಂಪರ್ಕಿಸಿದಷ್ಟೂ ನಿಮ್ಮ ಹಣ ಮರಳಿಪಡೆಯುವ ಪ್ರಯತ್ನ ಸಫಲವಾಗುವ ಅವಕಾಶ ಇರುತ್ತದೆ.

English summary

Know How To Recover Your Money Transferred By Mistake

As we do money transfer many times through UPI transactions, there may be occasion when we mistakenly send the money to wrong person. But have method to recover the money.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X