For Quick Alerts
ALLOW NOTIFICATIONS  
For Daily Alerts

ಅಂಚೆ ಕಚೇರಿ ಎಫ್‌ಡಿ, ಆರ್‌ಡಿ ಆನ್‌ಲೈನ್‌ನಲ್ಲಿ ಡೆಪಾಸಿಟ್, ಬ್ಯಾಲೆನ್ಸ್ ಚೆಕ್ ಹೇಗೆ?

|

ಈ ಡಿಜಿಟಲ್ ಯುಗದಲ್ಲಿ ಎಲ್ಲ ಕಾರ್ಯವನ್ನು ಆನ್‌ಲೈನ್ ಮೂಲಕವೇ, ಸರಳ ಹಾಗೂ ಸುಲಭವಾಗಿ ಮಾಡಬಹುದು. ಈಗಾಗಲೇ ಹಲವಾರು ಬ್ಯಾಂಕುಗಳು ತಮ್ಮ ಎಲ್ಲ ಬ್ಯಾಂಕಿಂಗ್ ವಹಿವಾಟುಗಳನ್ನು ಗ್ರಾಹಕರು ಆನ್‌ಲೈನ್ ಮೂಲಕವೇ ನಡೆಸಲು ಅನುವು ಮಾಡಿಕೊಟ್ಟಿದೆ. ಈ ನಡುವೆ ನಾವು ಅಂಚೆ ಕಚೇರಿಯ ಎಫ್‌ಡಿ ಹಾಗೂ ಆರ್‌ಡಿಗೆ ಆನ್‌ಲೈನ್‌ನಲ್ಲಿ ಹೂಡಿಕೆ ಹಾಗೂ ಆನ್‌ಲೈನ್‌ನಲ್ಲಿ ಅದರ ಬ್ಯಾಲೆನ್ಸ್ ಚೆಕ್ ಮಾಡಲು ಸಾಧ್ಯವಾಗಲಿದೆ.

 

ಈ ಹಿಂದೆ ಅಂಚೆ ಕಚೇರಿಯ ಯಾವುದೇ ವಹಿವಾಟು ನಡೆಸಲು ನಾವು ಅಂಚೆ ಕಚೇರಿಗೆ ಭೇಟಿ ನೀಡಬೇಕಾಗಿತ್ತು. ಇಲ್ಲವಾದರೆ ಅಂಚೆ ಕಚೇರಿ ಸಿಬ್ಬಂದಿ ಮೂಲಕ ವಹಿವಾಟು ನಡೆಸಬೇಕಾಗಿತ್ತು. ಆದರೆ ನೀವು ಪ್ರಸ್ತುತ ಅಂಚೆ ಕಚೇರಿಗೆ ಭೇಟಿ ನೀಡದೆಯೇ ನಿಮ್ಮ ಮೊಬೈಲ್, ಕಂಪ್ಯೂಟರ್‌ನಲ್ಲಿ ನಿಮ್ಮ ಅಂಚೆ ಕಚೇರಿ ಯೋಜನೆಗಳ ಬ್ಯಾಲೆನ್ಸ್ ಪರಿಶೀಲನೆ ಮಾಡಬಹುದು.

ನೀವು ಅಂಚೆ ಕಚೇರಿಯಲ್ಲಿ ಫಿಕ್ಸಿಡ್ ಡೆಪಾಸಿಟ್ ಖಾತೆ ಹಾಗೂ ಆರ್‌ಡಿ ಖಾತೆಯನ್ನು ತೆರೆದಿದ್ದೀರಾ, ಆದರೆ ಅದಕ್ಕೆ ಡೆಪಾಸಿಟ್ ಮಾಡುವುದು ಹೇಗೆ, ಅದರ ಬ್ಯಾಲೆನ್ಸ್ ಪರಿಶೀಲನೆ ಮಾಡುವುದು ಹೇಗೆ ಎಂದು ನಿಮಗೆ ತಿಳಿದಿಲ್ಲವೇ? ನಾವಿಲ್ಲಿ ಈ ಬಗ್ಗೆ ವಿವರಣೆಯನ್ನು ನೀಡಿದ್ದೇವೆ. ಮುಂದೆ ಓದಿ...

 ಅಂಚೆ ಕಚೇರಿ ಎಫ್‌ಡಿ ಎಂದರೇನು?

ಅಂಚೆ ಕಚೇರಿ ಎಫ್‌ಡಿ ಎಂದರೇನು?

ಅಂಚೆ ಕಚೇರಿಯ ಫಿಕ್ಸಿಡ್ ಡೆಪಾಸಿಟ್‌ ಅನ್ನು ಅಂಚೆ ಕಚೇರಿಯ ಟೈಮ್ ಡೆಪಾಸಿಟ್ ಎಂದು ಕೂಡಾ ಕರೆಯಲಾಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರು ನಿಗದಿತ ಅವಧಿಯಲ್ಲಿ ನಿರ್ದಿಷ್ಟ ಮೊತ್ತವನ್ನು ರಿಟರ್ನ್ ಆಗಿ ಪಡೆಯಲು ಸಾಧ್ಯವಾಗುತ್ತದೆ. ಇದು ಉತ್ತಮ ಉಳಿತಾಯ ಯೋಜನೆಯಾಗಿದೆ. ನಮ್ಮ ಹಣವನ್ನು ಉಳಿತಾಯ ಮಾಡುವುದರ ಜೊತೆಗೆ ಬಡ್ಡಿಯನ್ನು ಪಡೆಯುವ ಯೋಜನೆ ಇದಾಗಿದೆ. ಅಂಚೆ ಕಚೇರಿ ಯೋಜನೆಗಳು ಸರ್ಕಾರದಿಂದ ಗ್ಯಾರಂಟಿ ನೀಡಬಲ್ಲ ಸುರಕ್ಷಿತ ಯೋಜನೆಯಾದ ಕಾರಣ ಹಲವಾರು ಮಂದಿ ಇಲ್ಲಿ ಹೂಡಿಕೆ ಮಾಡುತ್ತಾರೆ. ಇದರಲ್ಲಿ ಹೂಡಿಕೆದಾರರು ಅಂಚೆ ಕಚೇರಿಗೆ ಭೇಟಿ ನೀಡದೆಯೇ ಹೂಡಿಕೆ ಮಾಡಬಹುದು.

 ಅಂಚೆ ಕಚೇರಿ ಎಫ್‌ಡಿಗೆ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ?

ಅಂಚೆ ಕಚೇರಿ ಎಫ್‌ಡಿಗೆ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ?

ಹಂತ 1: India Post Mobile Banking app ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ
ಹಂತ 2: ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಲಾಗಿನ್ ಆಗಿ
ಹಂತ 3: ಎಫ್‌ಡಿ ಹೂಡಿಕೆ ಮಾಡಬೇಕಾದರೆ Requests ಮೇಲೆ ಟ್ಯಾಪ್ ಮಾಡಿ
ಹಂತ 4: ಮೊತ್ತವೆಷ್ಟು, ಅವಧಿ ಎಷ್ಟು ಎಂಬುವುದನ್ನು ಮೊದಲೇ ಯೋಚನೆ ಮಾಡಿಟ್ಟುಕೊಳ್ಳಿ
ಹಂತ 5: ಡೆಪಾಸಿಟ್ ಸಂಬಂಧಿತ ಎಲ್ಲ ಅಗತ್ಯ ಮಾಹಿತಿಯನ್ನು ನಮೂದಿಸಿ
ಹಂತ 6: Transfers ಮೇಲೆ ಕ್ಲಿಕ್ ಮಾಡಿ, ಆನ್‌ಲೈನ್‌ ಮೂಲಕ ಖಾತೆಗೆ ಹಣ ಜಮೆ ಮಾಡಿ

 

 

 ಅಂಚೆ ಕಚೇರಿ ಆರ್‌ಡಿ ಖಾತೆ ಎಂದರೇನು?
 

ಅಂಚೆ ಕಚೇರಿ ಆರ್‌ಡಿ ಖಾತೆ ಎಂದರೇನು?

ನೀವು ನಿರಂತರವಾಗಿ ಮಾಸಿಕ ಲೆಕ್ಕಾಚಾರದಲ್ಲಿ ನಿಮ್ಮ ಹಣವನ್ನು ಉಳಿತಾಯ ಮಾಡಬೇಕಾದರೆ ಅದಕ್ಕೆ ಉತ್ತಮ ಆಯ್ಕೆ ಅಂಚೆ ಕಚೇರಿ ಆರ್‌ಡಿ ಅಥವಾ ರಿಕ್ಯೂರಿಂಗ್ ಡೆಪಾಸಿಟ್ ಆಗಿದೆ. ಯಾರಿಗೆ ದೊಡ್ಡ ಮೊತ್ತವನ್ನು ಒಂದೇ ಸಮಯದಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲವೋ ಅವರಿಗೆ ಈ ಆರ್‌ಡಿ ಉತ್ತಮ ಉಳಿತಾಯ ಅವಕಾಶವಾಗಿದೆ. ನಿಮ್ಮ ಮಾಸಿಕ ವೇತನದಲ್ಲಿ ಕೊಂಚ ಮೊತ್ತವನ್ನು ನೀವು ಆರ್‌ಡಿಗೆ ಹೂಡಿಕೆ ಮಾಡಬಹುದು. ನಿಮ್ಮ ಅಂಚೆ ಕಚೇರಿ ಉಳಿತಾಯ ಖಾತೆಯಿದ್ದರೆ, ನೀವು ಆನ್‌ಲೈನ್ ಮೂಲಕವೇ ಈ ಯೋಜನೆಯಲ್ಲಿ ಹೂಡಿಕೆ ಆರಂಭ ಮಾಡಬಹುದು. ನೆಟ್ ಬ್ಯಾಕಿಂಗ್ ಇಲ್ಲವಾದರೆ ನೀವು ಸಮೀಪದ ಅಂಚೆ ಕಚೇರಿಗೆ ಹೋಗಿ ಈ ಖಾತೆಯನ್ನು ತೆರೆಯಬಹುದು.

 ಆರ್‌ಡಿಗೆ ಆನ್‌ಲೈನ್ ಹೂಡಿಕೆ ಮಾಡುವುದು ಹೇಗೆ?

ಆರ್‌ಡಿಗೆ ಆನ್‌ಲೈನ್ ಹೂಡಿಕೆ ಮಾಡುವುದು ಹೇಗೆ?

ನೀವು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಯೋಜನೆ ಅಡಿಯಲ್ಲಿ ಅಂಚೆ ಕಚೇರಿ ಆರ್‌ಡಿ ಮೇಲೆ ಆನ್‌ಲೈನ್‌ನಲ್ಲೇ ಹೂಡಿಕೆ ಮಾಡಲು ಸಾಧ್ಯವಾಗಲಿದೆ. ಪ್ಲೇಸ್ಟೋರ್‌ನಿಂದ ಆಪ್‌ ಅನ್ನು ಮೊದಲು ಡೌನ್‌ಲೋಡ್ ಮಾಡಿಕೊಂಡು ಬಳಿಕ ಡಿಜಿಟಲ್ ಸೇವಿಂಗ್ಸ್ ಅಕೌಂಟ್‌ಗೆ ಲಾಗಿನ್ ಆಗಿ. ಎಲ್ಲ ಮಾಹಿತಿಯನ್ನು ಭರ್ತಿಮಾಡಿಕೊಳ್ಳಿ.

ಹಂತ 1: IPPB ಆಪ್‌ ಅನ್ನು ಮೊದಲು ಡೌನ್‌ಲೋಡ್ ಮಾಡಿಕೊಳ್ಳಿ
ಹಂತ 2: ಮುಖ್ಯ ಮಾಹಿತಿಯನ್ನು ಭರ್ತಿ ಮಾಡಿ ಲಾಗಿನ್ ಆಗಿ
ಹಂತ 3: Department of Posts (DoP) Products ಮೆನು ನಿಮಗೆ ಕಾಣಬಹುದು
ಹಂತ 4: ಅಲ್ಲಿ Recurring Deposit ಅನ್ನು ಆಯ್ಕೆ ಮಾಡಿಕೊಳ್ಳಿ
ಹಂತ 5: ಡಿಒಪಿ ಕಸ್ಟಮರ್ ಐಡಿ ಬಳಿಕ ಆರ್‌ಡಿ ಖಾತೆ ಸಂಖ್ಯೆಯನ್ನು ಹಾಕಿ
ಹಂತ 6: ಎಷ್ಟು ಅವಧಿ, ಎಷ್ಟು ಮೊತ್ತ ಎಂಬುವುದನ್ನು ಆಯ್ಕೆ ಮಾಡಿಕೊಳ್ಳಿ
ಹಂತ 7: ಪೇಮೆಂಟ್ ಯಶಸ್ವಿಯಾದರೆ ನಿಮಗೆ ಸಂದೇಶದ ಮೂಲಕ ಮಾಹಿತಿ ನೀಡಲಾಗುತ್ತದೆ.

 

 ಆರ್‌ಡಿ, ಎಫ್‌ಡಿ ಬ್ಯಾಲೆನ್ಸ್ ಚೆಕ್ ಹೇಗೆ ಮಾಡುವುದು?

ಆರ್‌ಡಿ, ಎಫ್‌ಡಿ ಬ್ಯಾಲೆನ್ಸ್ ಚೆಕ್ ಹೇಗೆ ಮಾಡುವುದು?

ಹಂತ 1: ಭಾರತದ ಪೋಸ್ಟ್ ಆಫೀಸ್ ಇ ಬ್ಯಾಕಿಂಗ್‌ ಮಾಡಬೇಕಾಗುತ್ತದೆ.
ಹಂತ 2: ಅಂಚೆ ಕಚೇರಿ ಖಾತೆಯಿದ್ದರೆ ಮಾತ್ರ ನೀವು ಆರ್‌ಡಿ, ಎಫ್‌ಡಿ ಬ್ಯಾಲೆನ್ಸ್ ಪರಿಶೀಲಿಸಬಹುದು
ಹಂತ 3: Indiapost ಸೈಟ್‌ಗೆ ಮೊದಲು ಭೇಟಿ ನೀಡಿ
ಹಂತ 4: ಯೂಸರ್ ಐಡಿ ಬಳಸಿಕೊಂಡು ಸೈನ್‌ಇನ್ ಆಗಿ
ಹಂತ 5: ನೀವು ಹೊಸ ಯೂಸರ್ ಅನ್ನು ಆಕ್ಟಿವೇಟ್ ಮಾಡಬಹುದು
ಹಂತ 6: ನಿಮ್ಮ ಆರ್‌ಡಿ, ಎಫ್‌ಡಿ ಖಾತೆಯ ಮಾಹಿತಿಯನ್ನು ಆಪ್‌ನಲ್ಲಿಯೇ ಪಡೆಯಬಹುದು.

English summary

Post Office FD and RD: How to Make Deposit, Check Balance Account Online, Here's details

What is a post office fixed deposit account, and RD, How to Make Deposit, Check Balance Account Online, Here's details, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X