For Quick Alerts
ALLOW NOTIFICATIONS  
For Daily Alerts

2017ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಜಮೆಯಾದ ಭಾರತೀಯರ ಒಟ್ಟು ಹಣ ರೂ. 7000 ಕೋಟಿ

ಸ್ವಿಸ್ ಬ್ಯಾಂಕ್ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದು, ಸ್ವಿಸ್ ಬ್ಯಾಂಕುಗಳಲ್ಲಿ ಬಾರತೀಯರು ಜಮೆ ಮಾಡಿರುವ ಹಣದ ಪ್ರಮಾಣದಲ್ಲಿ ಶೆ. 50ರಷ್ಟು ಏರಿಕೆಯಾಗಿದೆ. 2017ರಲ್ಲಿ ಭಾರತೀಯರ ರೂ. 7000 ಕೋಟಿ ಹಣ ಸ್ವೀಸ್ ಬ್ಯಾಂಕಿನಲ್ಲಿ ಜಮಾವಣೆಯಾಗಿದೆ.

By Siddu
|

ಸ್ವಿಸ್ ಬ್ಯಾಂಕ್ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದು, ಸ್ವಿಸ್ ಬ್ಯಾಂಕುಗಳಲ್ಲಿ ಬಾರತೀಯರು ಜಮೆ ಮಾಡಿರುವ ಹಣದ ಪ್ರಮಾಣದಲ್ಲಿ ಶೆ. 50ರಷ್ಟು ಏರಿಕೆಯಾಗಿದೆ. ಅಂದರೆ 2017ರಲ್ಲಿ ಭಾರತೀಯರ ರೂ. 7000 ಕೋಟಿ ಹಣ ಸ್ವೀಸ್ ಬ್ಯಾಂಕಿನಲ್ಲಿ ಜಮಾವಣೆಯಾಗಿದೆ.

ಸ್ವಿಸ್ ನ್ಯಾಷನಲ್ ಬ್ಯಾಂಕ್ ಮಾಹಿತಿ ಅನ್ವಯ, 2017ರಲ್ಲಿ ವಿದೇಶಗಳಿಂದ ಸ್ವಿಸ್ ಬ್ಯಾಂಕ್ ಗೆ ಜಮಾ ಆದ ಹಣದ ಪ್ರಮಾಣ ಶೇ. 3ರಷ್ಟು ಏರಿಕೆಯಾಗಿದೆ. ಅಂದರೆ ಒಟ್ಟು ರೂ. 100 ಲಕ್ಷ ಕೋಟಿ ಹಣ ಜಮಾ ಆಗಿದೆ. ರೂಪಾಯಿ ಮೌಲ್ಯ ಭಾರೀ ಕುಸಿತ! 5 ಕಾರಣಗಳೇನು ಗೊತ್ತೆ?

ಕೇಂದ್ರ ಮಾಡಿದ್ದೇನು?

ಕೇಂದ್ರ ಮಾಡಿದ್ದೇನು?

ಕೇಂದ್ರ ಸರ್ಕಾರ ವಿದೇಶಗಳಲ್ಲಿರುವ ಭಾರತೀಯರ ಕಪ್ಪು ಹಣ ಪತ್ತೆಗೆ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ ಬಳಿಕ ಸತತ ಮೂರು ವರ್ಷ ಸ್ವಿಸ್ ಬ್ಯಾಂಕ್ ಗಳಲ್ಲಿ ಠೇವಣಿಯಾದ ಹಣದ ಪ್ರಮಾಣ ಕಡಿಮೆಯಾಗಿತ್ತು. ಆದರೆ ಆಶ್ಚರ್ಯಕರ ರೀತಿಯಲ್ಲಿ ಕಳೆದ ಸಾಲಿನಲ್ಲಿ ರೂ. 7000 ಕೋಟಿ ಹಣ ಸ್ವೀಸ್ ಬ್ಯಾಂಕಿನಲ್ಲಿ ಜಮಾವಣೆಯಾಗಿತ್ತು.

ಇಲ್ಲಿಯವರೆಗಿನ ದಾಖಲೆ!

ಇಲ್ಲಿಯವರೆಗಿನ ದಾಖಲೆ!

2016ರಲ್ಲಿ ಭಾರತೀಯರು ಕೇವಲ ರೂ. 4500 ಕೋಟಿ ಹಣ ಜಮೆ ಮಾಡುವ ಮೂಲಕ ಶೇ. 45ರಷ್ಟು ಈ ಪ್ರಮಾಣ ಕಡಿಮೆಯಾಗಿತ್ತು. ಆದರೆ ಭಾರತೀಯರು 2006ರಲ್ಲಿ ರೂ. 23 ಸಾವಿರ ಕೋಟಿ ಹಣ ಜಮೆ ಮಾಡಿರುವುದು ಇಲ್ಲಿಯವರೆಗೆ ದಾಖಲೆಯಾಗಿ ಉಳಿದಿದೆ.

ಇತರೆ ರೂಪದ ಹಣ

ಇತರೆ ರೂಪದ ಹಣ

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯ ಹಣ ಗ್ರಾಹಕ ಠೇವಣಿಗಳ ರೂಪದಲ್ಲಿ ರೂ. 3,200 ಕೋಟಿ (CHF 464 ಮಿಲಿಯನ್), ಇತರ ಬ್ಯಾಂಕ್ ಗಳ ಮೂಲಕ ರೂ. 1,050 ಕೋಟಿ ಮತ್ತು ಭದ್ರತಾ ಠೇವಣಿಗಳ ಮೂಲಕ ರೂ. 2,640 ಕೋಟಿ ಜಮೆ ಮಾಡಲಾಗಿದೆ.

English summary

Indians' stash in Swiss banks jumps 50% to Rs 7,000 crore in 2017

Money parked by Indians in Swiss banks rose over 50 per cent to CHF 1.01 billion (Rs 7,000 crore) in 2017, reversing a three-year downward trend amid India's clampdown on suspected black money stashed there.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X