For Quick Alerts
ALLOW NOTIFICATIONS  
For Daily Alerts

21 ದಿನಗಳ ಲಾಕ್‌ಡೌನ್‌ನಲ್ಲಿ ಏನಿರುತ್ತೆ? ಏನಿರಲ್ಲ?

|

ಕೊರೊನಾವೈರಸ್ ಹರಡುವಿಕೆ ತಡೆಯಲು ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ಅಂದರೆ ಏಪ್ರಿಲ್ 15ರವರೆಗೆ ಲಾಕ್‌ಡೌನ್ ಘೋಷಣೆ ಮಾಡಿದ್ದಾಗಿದೆ. ಈ ಲಾಕ್‌ಡೌನ್ ಕರ್ಫ್ಯೂ ಮಾದರಿಯಲ್ಲಿ ಇರಲಿದೆ.

21 ದಿನಗಳ ಲಾಕ್‌ಡೌನ್ ವೇಳೆ ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರ ಕೂಡ ಮೂಲಭೂತ ಅವಶ್ಯಕತೆಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ. ಹಾಗಿದ್ದರೆ ಈ 21 ದಿನಗಳ ಲಾಕ್‌ಡೌನ್‌ನಲ್ಲಿ ಏನಿರುತ್ತೆ? ಏನಿರಲ್ಲ? ಎಂಬುದನ್ನು ಈ ಕೆಳಗೆ ನೀಡಲಾಗಿದೆ ಓದಿ.

ಈ ಸೇವೆಗಳು ಲಭ್ಯ :
 

ಈ ಸೇವೆಗಳು ಲಭ್ಯ :

- ಬ್ಯಾಂಕ್, ಎಟಿಎಂ, ಇನ್ಷೂರೆನ್ಸ್ ಕಚೇರಿ

- ನೀರು ಮತ್ತು ವಿದ್ಯುತ್

- ವೈದ್ಯಕೀಯ ಸೇವೆ ( ಆಸ್ಪತ್ರೆ, ಮೆಡಿಕಲ್, ಲ್ಯಾಬ್, ಕ್ಲಿನಿಕ್, ನರ್ಸಿಂಗ್ ಹೋಮ್, ಆ್ಯಂಬುಲೆನ್ಸ್)

- ರೇಷನ್ ಅಂಗಡಿ, ದಿನಬಳಕೆಯ ವಸ್ತುಗಳು, ಹಣ್ಣು ಮತ್ತು ತರಕಾರಿ, ಹಾಲು, ಮಾಂಸ ಮತ್ತು ಮೀನು

-ಆಹಾರ ಮನೆಗೆ ತಲುಪಿಸುವ ಸೇವೆ, ಔಷಧಿ ಮತ್ತು ವೈದ್ಯಕೀಯ ಸಲಕರಣೆಗಳನ್ನು ಮನೆಗೆ ತಲುಪಿಸುವ ಸೇವೆ

-ಮುದ್ರಣ, ಎಲೆಕ್ಟ್ರಾನಿಕ್ ಮೀಡಿಯಾ, ಟೆಲಿಕಮ್ಯುನಿಕೇಷನ್, ಅಂತರ್ಜಾಲ ಸೇವೆ, ಬ್ರಾಡ್‌ಕಾಸ್ಟಿಂಗ್ ಮತ್ತು ಕೇಬಲ್ ಸರ್ವಿಸ್

-ಪೆಟ್ರೋಲ್ ಪಂಪ್, ಎಲ್‌ಪಿಜಿ, ಗ್ಯಾಸ್, ಸ್ಟೋರೇಟ್ ಔಟ್‌ಲೇಟ್

-ಷೇರುಪೇಟೆ, ಸಾಲ ಮಾರುಕಟ್ಟೆ ವ್ಯವಸ್ಥೆ

-ಖಾಸಗಿ ಸೆಕ್ಯುರಿಟಿ ಸೇವೆ

-ಅಗತ್ಯ ವಸ್ತುಗಳ ತಯಾರಿಕಾ ಘಟಕ

-ಸರಕು ಸಂಚಾರ, ಅಗ್ನಿಶಾಮಕ ದಳ, ಕಾನೂನು ವ್ಯವಸ್ಥೆ ಮತ್ತು ಸೇವೆಗಳು

-ವಿಪತ್ತು ನಿರ್ವಹಣೆ, ಅಂಚೆ ಕಚೇರಿ, ಪೊಲೀಸ್, ಹೋಮ್‌ಗಾರ್ಡ್, ಕಾರಾಗೃಹ

ಈ ಸೇವೆಗಳು ಇರಲ್ಲ :

ಈ ಸೇವೆಗಳು ಇರಲ್ಲ :

ಯಾವುದೇ ಸಂಚಾರ ವ್ಯವಸ್ಥೆ (ಬಸ್, ರೈಲು ವಿಮಾನ)

ಕೆಲವೊಂದು ಸರ್ಕಾರಿ ಕಚೇರಿಗಳು ಹೊರತುಪಡಿಸಿ ಎಲ್ಲಾ ಕಚೇರಿಗಳು ಬಂದ್

ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು

ಕೈಗಾರಿಕಾ ಸಂಸ್ಥೆಗಳು

ಶಿಕ್ಷಣ ಸಂಸ್ಥೆಗಳು

ಧಾರ್ಮಿಕ ಕ್ಷೇತ್ರಗಳು

ಎಲ್ಲಾ ರೀತಿಯ ಸಮಾರಂಭಗಳು

ಉಲ್ಲಂಘಿಸಿದರೆ ಇರುವ ಶಿಕ್ಷೆ

ಉಲ್ಲಂಘಿಸಿದರೆ ಇರುವ ಶಿಕ್ಷೆ

-ಫೆಬ್ರವರಿ 15ರ ನಂತರ ವಿದೇಶದಿಂದ ಭಾರತಕ್ಕೆ ಬಂದವರು ಮನೆಯಿಂದ ಹೊರಗೆ ಬರಲೇ ಬಾರದು. ಕ್ವಾರಂಟೈನ್ ಸಮಯದಲ್ಲಿ ಅವರು ಮನೆಯಿಂದ ಹೊರಗೆ ಬಂದರೆ 6 ತಿಂಗಳು ಜೈಲು ಶಿಕ್ಷೆ

-ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ 1 ಅಥವಾ 2 ವರ್ಷ ಜೈಲು, ದಂಡ

-ಸುಳ್ಳು ಆರೋಪ: 2 ವರ್ಷ ಜೈಲು ಮತ್ತು ದಂಡ

-ಸುಳ್ಳು ಎಚ್ಚರಿಕೆ: 1 ವರ್ಷ ಜೈಲು ಮತ್ತು ದಂಡ

ಜಿಎಸ್‌ಟಿ, ಐಟಿ ರಿಟರ್ನ್ಸ್ ಗಡುವು ವಿಸ್ತರಣೆ
 

ಜಿಎಸ್‌ಟಿ, ಐಟಿ ರಿಟರ್ನ್ಸ್ ಗಡುವು ವಿಸ್ತರಣೆ

2018-19ನೇ ಸಾಲಿನ ಐಟಿ ರಿಟರ್ನ್ಸ್ ಸಲ್ಲಿಕೆಗೆ ಮಾರ್ಚ್‌ 31 ಅಂತಿಮ ಡೆಡ್‌ಲೈನ್ ಆಗಿತ್ತು. ಆದರೆ ಈ ದಿನಾಂಕವನ್ನು ವಿಸ್ತರಿಸಲಾಗಿದ್ದು ಜೂನ್ 30 ರ ತನಕ ವಿಸ್ತರಣೆ ಮಾಡಲಾಗಿದೆ. ಐಟಿ ರಿಟರ್ನ್ಸ್ ವಿಳಂಬದ ಮೇಲೆ ಪಾವತಿಸಬೇಕಿರುವ ಬಡ್ಡಿ ದರವನ್ನೂ ಕೂಡ ಇಳಿಕೆ ಮಾಡಲಾಗಿದೆ. ಬಡ್ಡಿ ದರವನ್ನು ಈಗಿನ 12 ರಿಂದ 8 ಪರ್ಸೆಂಟ್‌ ತಗ್ಗಿಸಲಾಗಿದೆ.

ಮಾರ್ಚ್‌ ಏಪ್ರಿಲ್ ಹಾಗೂ ಮೇ ತಿಂಗಳ ಜಿಎಸ್‌ಟಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆಯ ಅವಧಿಯನ್ನು ಕೂಡ ಜೂನ್ 30ಕ್ಕೆ ವಿಸ್ತರಣೆ ಮಾಡಲಾಗಿದೆ. ಹಾಗೂ ಮಾರ್ಚ್, ಏಪ್ರಿಲ್, ಮೇ GST ಪಾವತಿ ಅವಧಿ ಜಿಎಸ್​ಟಿ ಪಾವತಿ ವಿಳಂಬಕ್ಕೆ ಯಾವುದೇ ದಂಡ ಪಾವತಿ ಮಾಡಬೇಕಿಲ್ಲ.

English summary

21 Days India Lockdown This Service Only Available

To stop coronavirus Indian Government Announced Nation wide lockdown for 21 days. So These Service only available for next 21 days
Story first published: Wednesday, March 25, 2020, 9:12 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more