For Quick Alerts
ALLOW NOTIFICATIONS  
For Daily Alerts

ಜೊಮ್ಯಾಟೊ ಗೋಲ್ಡ್ ಮೆಂಬರ್‌ಶಿಪ್ ಶೀಘ್ರ ಆರಂಭ, ಏನಿದೆ ಲಾಭ?

|

ಜೊಮ್ಯಾಟೊ ಗೋಲ್ಡ್ ಸಬ್‌ಸ್ಕ್ರೀಪ್‌ಷನ್ 2023ರಲ್ಲಿ ಮತ್ತೆ ಆರಂಭವಾಗಲಿದೆ. ಶೀಘ್ರವೇ ಗೋಲ್ಡ್ ಸಬ್‌ಸ್ಕ್ರೀಪ್‌ಷನ್ ಪ್ರಾರಂಭಿಸಲಾಗುತ್ತದೆ ಎಂದು ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ತನ್ನ ಟ್ವಿಟ್ಟರ್ ಪೋಸ್ಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಗೋಯಲ್ ಚಿನ್ನದ Gif ಹಂಚಿಕೊಂಡು ಮತ್ತೆ ಆರಂಭ (Back Soon) ಎಂದು ಬರೆದಿದ್ದಾರೆ.

ಆಹಾರ ಡೆಲಿವರಿ ಮಾಡುವ ಸಂಸ್ಥೆಯಾದ ಜೊಮ್ಯಾಟೊವು ತನ್ನ ಸದಸ್ಯತ್ವ ಯೋಜನೆಯನ್ನು ಪರಿಷ್ಕರಣೆ ಮಾಡಲು ಹಲವಾರು ಮಂದಿ ಬಳಕೆದಾರರು ಕಾಯುತ್ತಿದ್ದರು. ಆದರೆ ಈಗ ಗೋಲ್ಡ್ ಮೆಂಬರ್‌ಶಿಪ್ ಆರಂಭದ ಬಗ್ಗೆ ಸಂಸ್ಥೆಯ ಸಿಇಒ ಘೋಷಣೆ ಮಾಡಿದ್ದಾರೆ.

ಟ್ವಿಟ್ಟರ್ ಹಾದಿಹಿಡಿದ ಜೊಮ್ಯಾಟೊ, ಶೇ.3ರಷ್ಟು ಉದ್ಯೋಗಿಗಳ ವಜಾ ನಿರ್ಧಾರಟ್ವಿಟ್ಟರ್ ಹಾದಿಹಿಡಿದ ಜೊಮ್ಯಾಟೊ, ಶೇ.3ರಷ್ಟು ಉದ್ಯೋಗಿಗಳ ವಜಾ ನಿರ್ಧಾರ

ದೇಶದಲ್ಲಿ ಆಹಾರ ಡೆಲಿವರಿ ಮಾಡುವ ಸಂಸ್ಥೆಗಳಲ್ಲಿ ಪ್ರಮುಖವಾದ ಜೊಮ್ಯಾಟೊ ಸಂಸ್ಥೆಯು 2017ರಲ್ಲಿ ಜೊಮ್ಯಾಟೊ ಗೋಲ್ಡ್ ಮೆಂಬರ್‌ಶಿಪ್ ಅನ್ನು ಆರಂಭ ಮಾಡಿದೆ. 2020ರಲ್ಲಿ ಈ ಯೋಜನೆಯನ್ನು ಜೊಮ್ಯಾಟೋ ಪ್ರೋ ಆಗಿ ಅಪ್‌ಗ್ರೇಡ್ ಮಾಡಲಾಯಿತು. ಹಾಗಾದರೆ ಈ ಮೆಂಬರ್‌ಶಿಪ್‌ನಿಂದ ಏನೆಲ್ಲ ಲಾಭವಿದೆ, ಏನಿದು ಎಂಬ ಬಗ್ಗೆ ಅಧಿಕ ಮಾಹಿತಿಯನ್ನು ನಾವು ತಿಳಿಯೋಣ ಮುಂದೆ ಒದಿ....

 ಗೋಲ್ಡ್ ಮೆಂಬರ್‌ಶಿಪ್‌ನಿಂದ ಏನು ಪ್ರಯೋಜನ?

ಗೋಲ್ಡ್ ಮೆಂಬರ್‌ಶಿಪ್‌ನಿಂದ ಏನು ಪ್ರಯೋಜನ?

ಈ ಗೋಲ್ಡ್ ಮೆಂಬರ್‌ಶಿಪ್ ಹೊಂದಿದ್ದರೆ ಜೊಮ್ಯಾಟೊ ಬಳಕೆದಾರರು ಅಧಿಕ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಲಿದೆ. ಹಾಗೆಯೇ ಉಚಿತ ಡೆಲಿವರಿ, ಅಧಿಕ ರಿಯಾಯಿತಿ, ಉಚಿತ ಆಹಾರ ಹಾಗೂ ಪಾನೀಯ, ಮೊದಲಾದ ಲಾಭವನ್ನು ಪಡೆಯಲು ಸಾಧ್ಯವಾಗಲಿದೆ. ಇನ್ನು ಈ ಹಿಂದೆ ಸಂಸ್ಥೆಯು ಜೊಮ್ಯಾಟೊ ಪ್ರೋ ಪ್ಲಸ್ ಮೆಂಬರ್‌ಶಿಪ್ ಕಾರ್ಯಕ್ರಮವನ್ನು ಕೂಡಾ ಆರಂಭ ಮಾಡಿದೆ. ಇದರಿಂದಾಗಿ ಅಧಿಕ ಲಾಭವನ್ನು ಪಡೆಯಲು ಸಾಧ್ಯವಾಗಿದೆ. ಆದರೆ ಸಂಸ್ಥೆಯು ಕಳೆದ ಆಗಸ್ಟ್‌ನಿಂದ ಪ್ರೋ ಹಾಗೂ ಪ್ರೋ ಪ್ಲಸ್‌ ಕಾರ್ಯಕ್ರಮಕ್ಕೆ ಹೊಸ ಮೆಂಬರ್‌ಶಿಪ್ ಅನ್ನು ನೀಡುವುದನ್ನು ಸ್ಥಗಿತ ಮಾಡಿತು.

 ಮೆಂಬರ್‌ಶಿಪ್ ರಿನಿವಲ್ ಬಗ್ಗೆ ಸಂಸ್ಥೆ ಹೇಳುವುದೇನು?

ಮೆಂಬರ್‌ಶಿಪ್ ರಿನಿವಲ್ ಬಗ್ಗೆ ಸಂಸ್ಥೆ ಹೇಳುವುದೇನು?

ತಮ್ಮ ಅವಧಿ ಮುಗಿದ ಮೆಂಬರ್‌ಶಿಪ್ ಅನ್ನು ಮತ್ತೆ ರಿನಿವಲ್ ಮಾಡುವ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡಿರುವ ಜೊಮ್ಯಾಟೊ, "ಜೊಮ್ಯಾಟೊ ಪ್ರೋ ಯೋಜನೆಯ ಭಾಗವಾಗಿರುವುದಕ್ಕೆ ನಿಮಗೆ ಧನ್ಯವಾದಗಳು. ನಾವು ನಿಮಗೆ ಉತ್ತಮ ಹಾಗೂ ಅಪ್‌ಡೇಟೆಡ್ ವ್ಯವಸ್ಥೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರಸ್ತುತ ಮೆಂಬರ್‌ಶಿಪ್ ಅನ್ನು ರಿನಿವಲ್ ಮಾಡಲು ಸಾಧ್ಯವಾಗುವುದಿಲ್ಲ. ಲೇಟೆಸ್ಟ್ ಆಫರ್ ಬಗ್ಗೆ ತಿಳಿಯಲು ನಮ್ಮ ಆಪ್‌ ಅನ್ನು ಚೆಕ್ ಮಾಡಿ," ಎಂದು ತಿಳಿಸಿದೆ.

 ಮೆಂಬರ್‌ಶಿಪ್ ಬೆಲೆ ಎಷ್ಟಿತ್ತು, ಎಷ್ಟಾಗಲಿದೆ?

ಮೆಂಬರ್‌ಶಿಪ್ ಬೆಲೆ ಎಷ್ಟಿತ್ತು, ಎಷ್ಟಾಗಲಿದೆ?

ಇನ್ನು ಮುಂದಿನ ತಿಂಗಳಿನಲ್ಲಿಯೇ ಗೋಲ್ಡ್ ಮೆಂಬರ್‌ಶಿಪ್ ಆರಂಭವಾಗುವ ಸಾಧ್ಯತೆಯಿದೆ. 2017ರಲ್ಲಿ ಗೋಲ್ಡ್ ಮೆಂಬರ್‌ಶಿಪ್ ಮೂರು ತಿಂಗಳ ಅವಧಿಗೆ 299 ರೂಪಾಯಿಗೆ ಲಭ್ಯವಿತ್ತು. ಹಾಗೆಯೇ ವಾರ್ಷಿಕವಾಗಿ 999 ರೂಪಾಯಿ ಪಾವತಿ ಮಾಡಿದರೆ ವಾರ್ಷಿಕ ಗೋಲ್ಡ್ ಮೆಂಬರ್‌ಶಿಪ್ ಲಭ್ಯವಾಗುತ್ತಿತ್ತು. ಮತ್ತೆ ಗೋಲ್ಡ್ ಮೆಂಬರ್‌ಶಿಪ್ ಅನ್ನು ಆರಂಭ ಮಾಡಿದಾಗ ಈ ಮೆಂಬರ್‌ಶಿಪ್ ದರವು ಹೆಚ್ಚಾಗುವ ಸಾಧ್ಯತೆಯಿದೆ.

English summary

Zomato Gold subscription to be Back Soon Says CEO Deepinder Goyal confirms on Twitter

Zomato Gold will make a comeback in 2023 Says CEO Deepinder Goyal confirms on Twitter. In a post, Goyal shared a Zomato Gold Gif with the caption ‘Back Soon’
Story first published: Friday, December 30, 2022, 12:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X