For Quick Alerts
ALLOW NOTIFICATIONS  
For Daily Alerts

ಅಂಗೈಯಲ್ಲೇ ಹಣ ರವಾನೆಗೆ ಎಚ್ ಡಿಎಫ್ ಸಿ ಸೂತ್ರ

|

ಎಲ್ಲ ಬ್ಯಾಂಕ್ ಗಳು ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಗುರಿಯನ್ನೇ ಇಟ್ಟುಕೊಂಡಿವೆ. ಅದರಂತೆ ಎಚ್ ಡಿಎಫ್ ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಮೊಬೈಲ್ ಅಪ್ಲಿಕೇಶನ್ ವೊಂದನ್ನು ಬಿಡುಗಡೆಮಾಡಿದ್ದು ಒನ್ ಕ್ಲಿಕ್ ನಲ್ಲಿ ಎಲ್ಲ ಹಣಕಾಸು ವ್ಯವಹಾರಗಳನ್ನು ನಿಭಾಯಿಸುವ ಅವಕಾಶ ಮಾಡಿಕೊಟ್ಟಿದೆ.

ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನ್ನು ಈ ಅಪ್ಲಿಕೇಶನ್ ನೊಂದಿಗೆ ಲಿಂಕ್ ಮಾಡಿಕೊಂಡರೆ ಸುಲಭವಾಗಿ ಹಣದ ರವಾನೆ ಮಾಡಬಹುದು. ಬಿಲ್ ಪೆಮೆಂಟ್ , ಹಣ ರವಾನೆ ಎಲ್ಲವೂ ಸುಲಭ ಸಾಧ್ಯವಾಗುತ್ತದೆ.[ಏನಿದು ಕಾಂಟ್ಯಾಕ್ಟ್ ಲೆಸ್ ಡೆಬಿಟ್ ಕಾರ್ಡ್? ಬಳಕೆ ಹೇಗೆ?]

ಅಂಗೈಯಲ್ಲೇ ಹಣ ರವಾನೆಗೆ ಎಚ್ ಡಿಎಫ್ ಸಿ ಸೂತ್ರ

ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಸ್ಯಾಲರಿ ಖಾತೆ ಹೊಂದಿದ್ದವರೆಂತೂ ಈ ಅಪ್ಲಿಕೇಶನ್ ಹಾಕಿಕೊಳ್ಳಲೇಬೇಕು. ನಿಮ್ಮ ಮೊಬೈಲ್ ನಲ್ಲಿ ಅಪ್ಲಿಕೇಶನ್ ಇದ್ದರೆ ಬ್ಯಾಂಕ್ ಕೈಯಲ್ಲಿ ಇದ್ದಂತೆ. ಡಿಜಿಟಲ್ ಯುಗದಲ್ಲಿ ಈ ಬಗೆಯ ಹೊಸ ಸಂಗತಿಗಳನ್ನು ನಾವು ಅರಗಿಸಿಕೊಂಡಿರಬೇಕಾಗುತ್ತದೆ.[ಒಟಿಪಿ ಎಂದರೇನು? ಪಡೆದುಕೊಳ್ಳುವುದು ಹೇಗೆ?]

ಎಚ್ ಡಿಎಫ್ ಸಿ Payzapp ಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ?
1. ನಿಮ್ಮ ಮೊಬೈಲ್ ನಿಂದ ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ ಎಚ್ ಡಿಎಫ್ ಸಿ Payzapp ಡೌನ್ ಲೋಡ್ ಮಾಡಿಕೊಳ್ಳಿ
2. ಬ್ಯಾಂಕ್ ಖಾತೆಯೊಂದಿಗೆ ಸಂಬಂಧ ಹೊಂದಿರುವ ನಿಮ್ಮ ಮೊಬೈಲ್ ನಂಬರ್ ನಮೂದಿಸಿ.
3. Continue ಮೇಲೆ ಕ್ಲಿಕ್ ಮಾಡಿ ಮುಂದುರಿಯರಿ
4. ನಿಮ್ಮ ಜನ್ಮ ದಿನಾಂಕ, ಇ ಮೇಲ್ ಐಡಿ ಸೇರಿದಂತೆ ಮಾಹಿತಿಗಳನ್ನು ನೀಡಿ
5. Payzapp ಪಿನ್ ಸೆಟ್ ಮಾಡಿಕೊಳ್ಳಿ
6. ನೋಂದಣಿಗೆ ನೀಡಿದ್ದ ನಿಮ್ಮ ಮೊಬೈಲ್ ಸಂಖ್ಯೆಗೆ ಬ್ಯಾಂಕ್ ಕೋಡ್ ವೊಂದನ್ನು ಕಳುಹಿಸಿಕೊಡುತ್ತದೆ. ಅದನ್ನು ನಮೂದು ಮಾಡಿ
7. ಕನ್ ಫರ್ಮ್ ಬಟನ್ ಕ್ಲಿಕ್ ಮಾಡಿ

ನೋಂದಣಿ ಕೆಲಸ ಮುಗಿದ ಮೇಲೆ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನ್ನು ಸ್ಕ್ಯಾನ್ ಮಾಡಿ ನೀಡಬೇಕಾಗುತ್ತದೆ. ಬ್ಯಾಂಕ್ ಹೇಳುವಂತೆ ಇದು ಸುರಕ್ಷಿತ ಹಣ ರವಾನೆ ವಿಧಾನ. ಒಟ್ಟು ಮೂರು ಸಾರಿ ಪರಿಶೀಲನೆಗೆ ಒಳಪಡಿಸಿ ಹಣ ರವಾನೆ ಮಾಡಲಾಗುವುದು.

ಒಮ್ಮೆ ನಿಮ್ಮ ಕಾರ್ಡ್ ನೋಂದಾವಣಿಯಾದರೆ ಸಾಕು. ಹಣ ರವಾನೆ ಮಾಡಬೇಕಿದ್ದರೆ ಮತ್ತೆ ಮತ್ತೆ ಹೊಸದಾಗಿ ಹಣ ಹಾಕುವಂತೆ ಇಲ್ಲ. ಒಮ್ಮೆ ಸೌಲಭ್ಯ ಬಳಕೆ ಆರಂಭ ಮಾಡಿದರೆ ನಿಶ್ಚಿಂತೆಯಿಂದ ಇರಬಹುದು.

ಕೊನೆ ಮಾತು
ಆನ್ ಲೈನ್ ಹಣ ರವಾನೆ ಕಾಲ ಮುಗಿದು ಈಗ ಅಪ್ಲಿಕೇಶನ್ ಗಳ ಮೂಲಕ ಎಲ್ಲವನ್ನು ಒಂದೇ ಕ್ಲಿಕ್ ನಲ್ಲಿ ಸಾಧ್ಯ ಮಾಡಲಾಗುತ್ತಿದೆ. ಬೇರೆ ಕಡೆ ಹಣವನ್ನು ಡಿಪಾಸಿಟ್ ಮಾಡಿ ಹಾಕುವ ವ್ಯವಸ್ಥೆ ಇದ್ದರೆ ಇಲ್ಲಿ ನೇರವಾಗಿ ಹಣ ರವಾನೆ ಮಾಡಲು ಸಾಧ್ಯ.(ಗುಡ್ ರಿಟರ್ನ್ಸ್.ಇನ್)

English summary

How to use HDFC Payzapp to Make Payments Instantly?

HDFC Bank has come up with the latest app for all payments in one app and one-click. Currently, this app is available for only HDFC customers. One can link their debit cards and credit cards and make payments easily. Having registered with this app, one can send money, pay all bills and shop online and many more at your finger tips.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X