For Quick Alerts
ALLOW NOTIFICATIONS  
For Daily Alerts

ರಾಜ್ಯ ಸರ್ಕಾರದ ಈ ಯೋಜನೆಗಳ ಪ್ರಯೋಜನ ನಿಮ್ಮದಾಗಿಸಲು ಮರೆಯಬೇಡಿ

ಕೇಂದ್ರ ಸರ್ಕಾರ ಬಡವರಿಗೆ, ನಿರ್ಗತಿಕರಿಗೆ, ದೀನರಿಗೆ, ಮಧ್ಯಮವರ್ಗದವರಿಗೆ, ಅತಿ ಹಿಂದುಳಿದವರಿಗೆ ಹಲವು ಜನಕಲ್ಯಾಣ ಯೋಜನೆಗಳನ್ನು ಘೋಷಿಸಿರುವಂತೆ ಕರ್ನಾಟಕ ಸರ್ಕಾರ ಕೂಡ ಹಲವು ಜನಕಲ್ಯಾಣ ಯೋಜನೆಗಳನ್ನು ಘೋಷಿಸಿದೆ.

By Siddu
|

ಕೇಂದ್ರ ಸರ್ಕಾರ ಬಡವರಿಗೆ, ನಿರ್ಗತಿಕರಿಗೆ, ದೀನರಿಗೆ, ಮಧ್ಯಮವರ್ಗದವರಿಗೆ, ಅತಿ ಹಿಂದುಳಿದವರಿಗೆ ಹಲವು ಜನಕಲ್ಯಾಣ ಯೋಜನೆಗಳನ್ನು ಘೋಷಿಸಿರುವಂತೆ ಕರ್ನಾಟಕ ಸರ್ಕಾರ ಕೂಡ ಹಲವು ಜನಕಲ್ಯಾಣ ಯೋಜನೆಗಳನ್ನು ಘೋಷಿಸಿದೆ.

ರಾಜ್ಯ ಸರ್ಕಾರ 2017-18ನೇ ಸಾಲಿನಲ್ಲಿ ಅನುಷ್ಠನಗೊಳಿಸುತ್ತಿರುವ ಹಲವು ಜನಕಲ್ಯಾಣ ಯೋಜನೆಗಳಲ್ಲಿ ಇವು ತುಂಬಾ ಪ್ರಮುಖವಾಗಿದೆ. ಹಾಗಿದ್ದರೆ ಈ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ, ಸಾಮಾನ್ಯ ಅರ್ಹತೆಗಳೇನು, ಯಾರು ಅರ್ಹರು, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ, ನಿಗಮದ ಯೋಜನೆಗಳಾವುವು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ನೋಡಿ... 'ಅನಿಲಭಾಗ್ಯ ಯೋಜನೆ' ಅಡಿಯಲ್ಲಿ ಉಚಿತ ಗ್ಯಾಸ್ ಪಡೆಯಲು ಮರೆಯದಿರಿ

ಅರ್ಜಿ ಎಲ್ಲಿ ಸಲ್ಲಿಸಬೇಕು?

ಅರ್ಜಿ ಎಲ್ಲಿ ಸಲ್ಲಿಸಬೇಕು?

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ 2017-18ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯ ಬಯಸುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಅರ್ಜಿ ಪಡೆಯಬಹುದಾಗಿದೆ. ಇಲ್ಲವೇ ಆನ್ಲೈನ್ ಮೂಲಕ ಡೌನ್ಲೋಡ್ ಮಾಡಬಹುದಾಗಿದೆ.

ಯಾರು ಅರ್ಹರಲ್ಲ

ಯಾರು ಅರ್ಹರಲ್ಲ

ಒಂದು ಬಾರಿ ನಿಗಮದ ಯಾವುದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. (Read more: ಸರ್ಕಾರದ ಯೋಜನೆಗಳು)

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ

ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗದ ಫಲಾಪೇಕ್ಷಿಗಳು, ಅವರು ವಾಸಿಸುತ್ತಿರುವ ಆಯಾ ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ನಿಗದಿಪಡಿಸಿದ ಉಚಿತ ಅರ್ಜಿಗಳನ್ನು ದಿನಾಂಕ: 31/5/2017ರೊಳಗೆ ಪಡೆಯುವುದು. ಹಾಗೂ ನಿಗಮದ ವೆಬ್ ಸೈಟ್ www.karnataka.gov.in/dbcdc​ ಇಲ್ಲಿ ಪಡೆಯಬಹುದಾಗಿರುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ /ದಾಖಲಾತಿಗಳೊಂದಿಗೆ ದಿನಾಂಕ: 09/06/2017 ರೊಳಗೆ ಸಲ್ಲಿಸುವುದು. ತದ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ಸೈಟ್: www.karnataka.gov.in/dbcdc​​ ಸಂಪರ್ಕಿಸಬಹುವುದು.

ನಿಗಮದ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಹೊಂದಿರಬೇಕಾದ ಸಾಮಾನ್ಯ ಆರ್ಹತೆಗಳು

ನಿಗಮದ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಹೊಂದಿರಬೇಕಾದ ಸಾಮಾನ್ಯ ಆರ್ಹತೆಗಳು

(1) ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು.(ವಿಶ್ವಕರ್ಮ ಅದರ ಉಪ ಸಮುದಾಯಗಳನ್ನು ಮತ್ತು ಮತಿಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ)
(2) ರಾಜ್ಯ ಸರ್ಕಾರದ ಯೋಜನೆಗಳಿಗೆ ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು,
(3) ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿದಾರರ ಮತ್ತು ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳು.
(4) ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.
(5) ಅರ್ಜಿದಾರರು ಆಧಾರ್ ಸಂಖ್ಯೆ ಹೊಂದಿರಬೇಕು. (6)ಅರ್ಜಿದಾರರ ಐ.ಎಫ್.ಸಿ. ಕೋಡ್ ಹೊಂದಿರುವ ರಾಷ್ಟ್ರೀಕೃತ/ಗ್ರಾಮೀಣ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು.

ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆ

ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆ

1. ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿರಬೇಕು ಹಾಗೂ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ. 55,000 ಗಳ ಒಳಗಿರಬೇಕು.
2. ಬ್ಯಾಂಕುಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ.
3. ಸರ್ಕಾರದ ಆದೇಶ ಸಂಖ್ಯೆ: ಸಕಇ/165/ಬಿಎಂಎಸ್/2011 ದಿ: 28/07/2011ರನ್ವಯ ಯೋಜನೆಯಲ್ಲಿ ಹಿಂದುಳಿದ ವರ್ಗಗಳ ಜನರಿಗೆ ಗರಿಷ್ಠ ರೂ. 5.00ಲಕ್ಷಗಳವರೆಗೆ ಸಾಲ ಒದಗಿಸಲಾಗುವುದು.
4. ಸಹಾಯಧನ ಶೇ.30ರಷ್ಟು ಅಥವ ಗರಿಷ್ಠ ರೂ.10,000/-ಗಳು. ರೂ.1.00ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಸಹಾಯಧನ ಲಭ್ಯವಿಲ್ಲ.
5. ರೂ. 25000/-ಗಳ ವರೆಗಿನ ಸಾಲಕ್ಕೆ ನಿಗಮದಿಂದ ಶೇ.30ರಷ್ಟು ಸಹಾಯಧನ ಮಾತ್ರ ಹಾಗೂ ರೂ.25001/-ಗಳಿಂದ ರೂ. 1.00ಲಕ್ಷಗಳ ವರೆಗಿನ ಸಾಲಕ್ಕೆ ಶೇ.30ರಷ್ಟು ಗರಿಷ್ಠ ರೂ.10000/-ಗಳ ಸಹಾಯಧನ ಹಾಗೂ ಶೇ.20ರಷ್ಟು ಮಾರ್ಜಿನ್ ಹಣ. ರೂ.1,00,001/- ರಿಂದ ರೂ.5.00ಲಕ್ಷಗಳ ವರೆಗೆ ಶೇ.20ರಷ್ಟು ಗರಿಷ್ಠ ರೂ.1.00ಲಕ್ಷಗಳ ಮಾರ್ಜಿನ್ ಹಣ ಸಾಲ ಒದಗಿಸಲಾಗುವುದು.
6. ಮಾರ್ಜಿನ್ ಹಣಕ್ಕೆ ವಾರ್ಷಿಕ ಶೇ.4ರ ಬಡ್ಡಿದರ.
7. ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲ ಹಾಗೂ ಬ್ಯಾಂಕ್‍ಗಳಲ್ಲಿ ವಿಧಿಸುವ ಚಾಲ್ತಿಯಲ್ಲಿರುವ ಬಡ್ಡಿದರ.
8. ಸಾಲದ ಉದ್ದೇಶ: ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ, ಸೇವಾವಲಯ ಮತ್ತು ಸಾರಿಗೆ ವಲಯದ ಉದ್ದೇಶಗಳು.
9. ಮಾರ್ಜಿನ್ ಹಣ ಸಾಲದ ಮರುಪಾವತಿ ಬ್ಯಾಂಕ್ ನಿಗದಿಪಡಿಸಿದ ಕಂತುಗಳು/ನಿಗಮದ ಮಾರ್ಜಿನ್ ಹಣ ಸಾಲ ಮಂಜೂರಾತಿ ಆದೇಶದಲ್ಲಿ ನಿಗದಿಪಡಿಸಿದ ಕಂತುಗಳನ್ವಯ.
10. ಆಯಾ ಬ್ಯಾಂಕ್ ಶಾಖೆಗೆ ನಿಗಧಿಪಡಿಸಿದ ಗುರಿಗೆ 1:1.1/4 ಅನುಪಾತದಲ್ಲಿ ಅರ್ಜಿ ಶಿಫಾರಸ್ಸು ಮಾಡುವುದು.
11. ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆಯಲ್ಲಿ ಘಟಕ ವೆಚ್ಚ ರೂ.1.00ಲಕ್ಷಗಳ ಮಿತಿಯಲ್ಲಿ ಬ್ಯಾಂಕ್‍ಗಳು ಸಾಲ ಮಂಜೂರು ಮಾಡಿದಲ್ಲಿ ಶೇ.30ರಷ್ಟು ಗರಿಷ್ಠ ರೂ.10000/-ಗಳ ಸಹಾಯಧನ ಮಂಜೂರು ಮಾಡಬೇಕು. ಘಟಕ ವೆಚ್ಚ ರೂ.1.00ಲಕ್ಷಗಳಿಗೆ ಮೇಲ್ಪಟ್ಟಲ್ಲಿ ಶೇ.20ರಷ್ಟು ಮಾರ್ಜಿನ್ ಹಣ ಮಂಜೂರು ಮಾಡುವುದು. ಯಾವುದೇ ಕಾರಣಕ್ಕೂ ಬ್ಯಾಂಕ್ ಮಂಜೂರು ಮಾಡಿದ ಘಟಕ ವೆಚ್ಚವನ್ನು ಕಡಿಮೆ ಮಾಡಿ ಸಹಾಯಧನ ಲಭ್ಯವಾಗುವಂತೆ ಪ್ರಸ್ತಾವನೆ ಸಲ್ಲಿಸಬಾರದು. ಪ್ರಸ್ತಾವನೆಯೊಂದಿಗೆ ಬ್ಯಾಂಕ್ ಮಂಜೂರಾತಿ ಪತ್ರ/ಮಾರ್ಜಿನ್ ಹಣ ಕ್ಲೈಂ ಪತ್ರದ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಪ್ರಸ್ತಾವನೆಯೊಂದಿಗೆ ಸಲ್ಲಿಸುವುದು.
12. ಸರ್ಕಾರದ ಆದೇಶ ಸಂಖ್ಯೆ: ಹಿಂವಕ 31 ಸಮನ್ವಯ 2013, ಬೆಂಗಳೂರು ದಿನಾಂಕ: 25/02/2013ರನ್ವಯ ಈ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು.

ಅರಿವು ಶೆಕ್ಷಣಿಕ ಸಾಲ ಯೋಜನೆ ​​

ಅರಿವು ಶೆಕ್ಷಣಿಕ ಸಾಲ ಯೋಜನೆ ​​

1. ಸಾಲದ ಉದ್ದೇಶ:
ಹಿಂದುಳಿದ ವರ್ಗಗಳ ಸೇರಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕಾಭಿವೃದ್ಧಿಗಾಗಿ ಆರ್ಥಿಕ ನೆರವು.
2. ಸಾಲದ ಮೊತ್ತ:
ವಾರ್ಷಿಕ ರೂ.1.00ಲಕ್ಷಗಳಂತೆ ಕೋರ್ಸ್ ಅವಧಿಗೆ ಗರಿಷ್ಠ ರೂ.4.00 ರಿಂದ ರೂ.5.00ಲಕ್ಷಗಳ ವರೆಗೆ ಸಾಲ.
3. ಬಡ್ಡಿದರ: ವಾರ್ಷಿಕ ಶೇ.2ರಷ್ಟು.
4. ಅರ್ಹತೆ:
ಅ) ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿರಬೇಕು. (ವಿಶ್ವಕರ್ಮ ಸಮುದಾಯ ಹಾಗೂ ಮತಿಯ ಅಲ್ಪಸಂಖ್ಯಾತರ ಸಮುದಾಯಗಳನ್ನು ಹೊರತುಪಡಿಸಿ)
ಆ) ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.3.50ಲಕ್ಷಗಳ ಮಿತಿಯಲ್ಲಿರಬೇಕು.
ಇ) ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ(ಸಿ.ಇ.ಟಿ.) ಪ್ರವೇಶ ಪಡೆದಿರಬೇಕು.
5. ವ್ಯಾಸಂಗದ ಕೋರ್ಸ್‍ಗಳು: (1) ಬಿ.ಇ.(ಸಿ.ಇ.ಟಿ), (2) ಎಂ.ಬಿ.ಬಿ.ಎಸ್., (3) ಬಿ.ಯೂ.ಎಂ.ಎಸ್., (4) ಬಿ.ಡಿ.ಎಸ್. (5) ಬಿ.ಎ.ಎಂ.ಎಸ್. (6) ಬಿ.ಎಚ್.ಎಂ.ಎಸ್. (7) ಎಂ.ಬಿ.ಎ. (8) ಎಂ.ಟೆಕ್. (9) ಎಂ.ಇ., (10) ಎಂ.ಡಿ., (11) ಪಿಹೆಚ್.ಡಿ. (12) ಬಿ.ಸಿ.ಎ./ಎಂ.ಸಿ.ಎ (13) ಎಂ.ಎಸ್.ಆಗ್ರ್ರಿಕಲ್ಚರ್ (14)ಬಿ.ಎಸ್‍ಸಿ. ನರ್ಸಿಂಗ್, (15)ಬಿ.ಫಾರಂ/ಎಂ.ಫಾರಂ (16) ಬಿ.ಎಸ್‍ಸಿ. ಪ್ಯಾರಾ ಮೆಡಿಕಲ್ (17) ಬಿ.ಎಸ್‍ಸಿ. ಬಯೋ ಟೆಕ್ನಾಲಜಿ (18) ಬಿ.ಟೆಕ್ (19) ಬಿ.ಪಿ.ಟಿ. (20) ಬಿ.ವಿ.ಎಸ್.ಸಿ/ಎಂ.ವಿ.ಎಸ್.ಸಿ. (21)ಬಿ.ಎನ್.ಎಂ. (22)ಬಿ.ಹೆಚ್.ಎಮ್. (23)ಎಂ.ಡಿ.ಎಸ್. (24) ಎಂ.ಎಸ್.ಡಬ್ಲ್ಯೂ (25) ಎಲ್.ಎಲ್.ಎಂ. (26)ಎಂ.ಎಫ್.ಎ. (27) ಎಂ.ಎಸ್‍ಸಿ. ಬಯೋ ಟೆಕ್ನಾಲಜಿ ಮತ್ತು (28) ಎಂ.ಎಸ್‍ಸಿ. ಎಜಿ
6. ಮರುಪಾವತಿ: ಕೋರ್ಸ್ ಪೂರ್ಣಗೊಂಡ 6 ತಿಂಗಳ ನಂತರ 4 ವರ್ಷಗಳಲ್ಲಿ ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡುವುದು.
7. ಆಭ್ಯರ್ಥಿಗಳ ಆಯ್ಕೆ:
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರವೇಶ ಪಡೆದು ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಹೊರತು ಪಡಿಸಿ, ಇತರೆ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಆಯಾ ಜಿಲ್ಲೆಯ ಜಿಲ್ಲಾ ಪಂಚಾಯತ್‍ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಆಯ್ಕೆ ಸಮಿತಿ ಮೂಲಕ ಜಿಲ್ಲೆಗೆ ನಿಗದಿಪಡಿಸಿದ ಆರ್ಥಿಕ ಮತ್ತು ಭೌತಿಕ ಗುರಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದು.

ಗಂಗಾಕಲ್ಯಾಣ ನೀರಾವರಿ ಯೋಜನೆ​​​​

ಗಂಗಾಕಲ್ಯಾಣ ನೀರಾವರಿ ಯೋಜನೆ​​​​

1. ಉದ್ದೇಶ:
ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು.
2. ಅರ್ಹತೆ:
ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿರಬೇಕು. ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ಹಾಗೂ ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40000/-ಗಳ ಒಳಗಿರಬೇಕು.
3. ಸೌಲಭ್ಯ:
1. ವೈಯುಕ್ತಿಕ ನೀರಾವರಿ ಕೊಳವೆಬಾವಿ ಯೋಜನೆ: ಈ ಯೋಜನೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಇರಬೇಕು.

ಘಟಕ ವೆಚ್ಚ:
ರೂ. 2.00 ಲಕ್ಷಗಳು. ರೂ. 1.50ಲಕ್ಷಗಳ ಸಹಾಯಧನ(ಸಬ್ಸಿಡಿ) ಹಾಗೂ ರೂ. 50,000ಗಳು ವಾರ್ಷಿಕ ಶೇ. 4ರ ಬಡ್ಡಿದರದಲ್ಲಿ ಸಾಲ.
ಮರುಪಾವತಿ ಅವಧಿ:
ಸಾಲದ ಮರುಪಾವತಿ ಅವಧಿ 3 ವರ್ಷಗಳು. ಕೊರೆದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಆರ್.ಆರ್. ಸಂಖ್ಯೆ ನೀಡಿದ ನಂತರ ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುದ್ಧೀಕರಣ ವೆಚ್ಚವಾಗಿ. ಪ್ರತಿ ಕೊಳವೆ ಬಾವಿಗಳಿಗೆ ರೂ. 50000ಗಳಂತೆ ಪಾವತಿಸಲಾಗುವುದು.

2. ಸಾಮೂಹಿಕ ನೀರಾವರಿ ಕೊಳವೆಬಾವಿ ಯೋಜನೆ: ಪ್ರವರ್ಗ-1, 2ಎ, 3ಎ & 3ಬಿಗೆ ಸೇರಿದ ಕನಿಷ್ಠ 3 ಜನ ಸಣ್ಣ ಮತ್ತು ಅತಿಸಣ್ಣ ರೈತರು ಹೊಂದಿರುವ 8 ಎಕರೆ ಮತ್ತು ಅದಕ್ಕಿಂತ ಹೆಚ್ಚಿನ ಜಮೀನಿಗೆ ಸಾಮೂಹಿಕವಾಗಿ ನೀರಾವರಿ ಸೌಲಭ್ಯ.
ಘಟಕ ವೆಚ್ಚ:
8-15 ಎಕರೆ ಜಮೀನಿಗೆ ರೂ.4.00ಲಕ್ಷಗಳ ವೆಚ್ಚದಲ್ಲಿ 2 ಕೊಳವೆಬಾವಿ ಹಾಗೂ 15 ಎಕರೆಗಿಂತ ಹೆಚ್ಚು ಜಮೀನು ಒಳಪಡುವ ಘಟಕಗಳಿಗೆ ನಿಗದಿತ ಘಟಕವೆಚ್ಚ ರೂ. 6 ಲಕ್ಷಗಳ ವೆಚ್ಚದಲ್ಲಿ 3 ಕೊಳವೆ ಬಾವಿಗಳನ್ನು ಕೊರೆಯಿಸಿ ಪಂಪ್‍ಸೆಟ್ ಮತ್ತು ಉಪಕರಣಗಳನ್ನು ಸರಬರಾಜು ಮಾಡುವುದು ಹಾಗೂ ವಿದ್ಯುದ್ದೀಕರಣಕ್ಕೆ ಠೇವಣಿ ಪಾವತಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸುವುದು. ಇದು ಪೂರ್ಣ ಅನುದಾನವಾಗಿರುತ್ತದೆ.
3. ತೆರೆದಬಾವಿ:
ವೈಯುಕ್ತಿಕ ನೀರಾವರಿ ಕೊಳವೆಬಾವಿ ಯೋಜನೆಗೆ ನಿಗದಿಪಡಿಸಿದಂತೆ ರೂ. 1.50 ಲಕ್ಷಗಳ ಅನುದಾನ ಹಾಗೂ ರೂ. 50,000 ಗಳ ಸಾಲ ಹೀಗೆ ಒಟ್ಟು ರೂ. 2 ಲಕ್ಷಗಳ ವೆಚ್ಚದಲ್ಲಿ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ತೆರೆದಬಾವಿ ನೀರಾವರಿ ಸೌಲಭ್ಯ ಒದಗಿಸಲು ಅವಕಾಶವಿರುತ್ತದೆ.
4. ಸಾಮೂಹಿಕ ಏತ ನೀರಾವರಿ ಯೋಜನೆ:
ಭೂಮಟ್ಟದಲ್ಲಿ ಶಾಶ್ವತವಾಗಿ ದೊರೆಯುವ ಜಲಸಂಪನ್ಮೂಲಗಳಾದ ನದಿ, ಕೆರೆ, ಹಳ್ಳ ಇವುಗಳಿಗೆ ಮೋಟಾರ್ ಅಳವಡಿಸಿ ಪೈಪ್‍ಲೈನ್ ಮೂಲಕ ಖುಷ್ಕಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು.
ಘಟಕವೆಚ್ಚ:
ಸಾಮೂಹಿಕ ನೀರಾವರಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಸೌಲಭ್ಯ ಒದಗಿಸುವುದು. ಈ ಕಾರ್ಯಕ್ರಮಕ್ಕೆ ಆಯಾ ವಿಧಾನಸಭಾ ಕ್ಷೇತ್ರಕ್ಕೆ ನಿಗದಿಪಡಿಸಿದ ಆರ್ಥಿಕ ಗುರಿಯನ್ವಯ ಮೀಸಲಾತಿ ಅನುಪಾತ ಪ್ರವರ್ಗ-1 ಮತ್ತು 2ಎಗೆ 70% ಪ್ರವರ್ಗ-3ಎ ಮತ್ತು 3ಬಿಗೆ 30%ರಂತೆ ವೈಯಕ್ತಿಕ/ಸಾಮೂಹಿಕ ನೀರಾವರಿ ಘಟಕಗಳನ್ನು ಆಯ್ಕೆ ಮಾಡಿ ಸೌಲಭ್ಯ ಒದಗಿಸಬೇಕು.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ ಯೋಜನೆ

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ ಯೋಜನೆ

• ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಗಳಾದ ಪೋಸ್ಟ್‍ಡಾಕ್ರ್ಟಲ್, ಪಿಹೆಚ್.ಡಿ., ಮಾಸ್ಟರ್ ಡಿಗ್ರಿ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ವಾರ್ಷಿಕ ರೂ.3.50ಲಕ್ಷಗಳಂತೆ, 03 ವರ್ಷಗಳ ಕೋರ್ಸ್‍ನ ಅವಧಿಗೆ, ಗರಿಷ್ಠ ರೂ.10.00ಲಕ್ಷಗಳ ಬಡ್ಡಿರಹಿತ ಸಾಲ ಮಂಜೂರು.
• ಅರ್ಜಿದಾರರು ಗರಿಷ್ಠ 35 ವರ್ಷಗಳ ವಯೋಮಿತಿಯಲ್ಲಿರಬೇಕು. ವಾರ್ಷಿಕ ವರಮಾನ ರೂ. 3.50 ಲಕ್ಷಗಳನ್ನು ಮೀರಿರಬಾರದು ಹಾಗೂ ಅರ್ಹತ ಪರೀಕ್ಷೆಗಳಲ್ಲಿ ಶೇ. 60ಕಿಂತ ಹೆಚ್ಚಿನ ಅಂಕಗಳಿಸಿರಬೇಕು.

ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ:​

ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ:​


1. ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗಳಿಗನುಸಾರ ಈ ಕೆಳಕಂಡಂತೆ ಸಾಲ ಮತ್ತು ಸಹಾಯಧನ ಸೌಲಭ್ಯವನ್ನು ಒದಗಿಸಲಾಗುವುದು.
1. ಘಟಕ ವೆಚ್ಚ ರೂ.50,000 ಗಳಿಗೆ ಶೇ. 30 ರಷ್ಟು ಗರಿಷ್ಟ ರೂ.10,000 ಗಳ ಸಹಾಯಧನ ಉಳಿಕೆ ಶೇ. 70 ರಷ್ಟು ರೂ.40,000 ಗಳನ್ನು ಶೇ. 4ರ ಬಡ್ಡಿ ದರದಲ್ಲಿ ಸಾಲ.
ಘಟಕ ವೆಚ್ಚ: ರೂ. 50,000 ರಿಂದ ರೂ. 1,00,000/-ಗಳವರೆಗೆ ಶೇ. 20 ರಷ್ಟು ಗರಿಷ್ಟ ರೂ.20,000/-ಗಳ ಸಹಾಯಧನ ಉಳಿಕೆ ಶೇ. 80 ರಷ್ಟು ರೂ. 80,000/-ಗಳನ್ನು ಶೇ. 4ರ ಬಡ್ಡಿ ದರದಲ್ಲಿ ಸಾಲ.
ಘಟಕ ವೆಚ್ಚ: ರೂ. 1,00,001 ರಿಂದ ರೂ. 2,00,000/-ಗಳವರೆಗೆ ಶೇ. 15 ರಷ್ಟು ಕನಿಷ್ಟ ರೂ.20,000/-ಗಳ ಗರಿಷ್ಟ ರೂ.30,000/-ಗಳ ಸಹಾಯಧನ ಉಳಿಕೆ ಶೇ.85 ರಷ್ಟು ರೂ.1,70,000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ.
ಅರ್ಹತೆ:
ಅ) ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿರಬೇಕು. (ವಿಶ್ವಕರ್ಮ ಸಮುದಾಯ ಹಾಗೂ ಮತಿಯ ಅಲ್ಪಸಂಖ್ಯಾತರ ಸಮುದಾಯಗಳನ್ನು ಹೊರತುಪಡಿಸಿ)
ಆ) ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು.
ಇ) ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದೊಳಗಿರಬೇಕು.
ಈ) ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ಉ) ಈ ಹಿಂದೆ ಈಗಾಗಲೇ ನಿಗಮದ ಯೋಜನೆಗಳಲ್ಲಿ ಸೌಲಭ್ಯ ಪಡೆದಿರಬಾರದು.
3.ಸಾಲದ ಮರುಪಾವತಿ ಅವಧಿ: 3 ವರ್ಷಗಳು(ಮಾಸಿಕ ಕಂತುಗಳಲ್ಲಿ)
4. ಸಾಲದ ಉದ್ದೇಶಗಳು: ಈ ಯೋಜನೆಯಲ್ಲಿ ಕೃಷಿ ಅವಲಂಭಿತ ಚಟುವಟಿಕೆಗಳು, ವ್ಯಾಪಾರ ಚಟುವಟಿಕೆಗಳು ಹಾಗೂ ಸೇವಾ ವಲಯ ಚಟುವಟಿಕೆಗಳಿಗೆ ಸಾಲ ಸೌಲಭ್ಯ ಒದಗಿಸುವುದು. ​

ಕಿರುಸಾಲ ಯೋಜನೆ

ಕಿರುಸಾಲ ಯೋಜನೆ

ಈ ಯೋಜನೆಯಲ್ಲಿ ಕುಶಲಿ ಅಥವಾ ಕುಶಲಿಯಲ್ಲದ ವ್ಯಕ್ತಿಗಳು ನಗರ, ಪಟ್ಟಣ ಮತ್ತು ಹೋಬಳಿ ಹಂತಗಳಲ್ಲಿ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವ ಸಹಾಯ ಗುಂಪುಗಳ ಮೂಲಕ ಸಾಲ ಸೌಲಭ್ಯ ನೀಡುವುದು.
* ಸಾಲದ ಉದ್ದೇಶ:
ಸಣ್ಣ ವ್ಯಾಪಾರ ಚುಟುವಟಿಕೆಗಳಾದ ಹಣ್ಣು, ತರಕಾರಿ ವ್ಯಾಪಾರ, ಹಾಲು ವ್ಯಾಪಾರ, ಹೂ ವ್ಯಾಪಾರ, ಮೀನುವ್ಯಾಪಾರ, ಟೀ/ಕಾಪಿ ಸ್ಟಾಲ್, ಸಣ್ಣ ವ್ಯಾಪಾರ ಇತ್ಯಾದಿ ವ್ಯಾಪಾರದ ಚಟುವಟಿಕೆಗಳಿಗೆ ಗರಿಷ್ಠ ರೂ.15,000/-ಗಳ ಆರ್ಥಿಕ ನೆರವು.
* ಅರ್ಹತೆ:
ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿರಬೇಕು (ವಿಶ್ವಕರ್ಮ ಸಮುದಾಯ ಹಾಗೂ ಮತಿಯ ಅಲ್ಪಸಂಖ್ಯಾತರ ಸಮುದಾಯಗಳನ್ನು ಹೊರತುಪಡಿಸಿ)
ಸಹಾಯಧನ: ಗರಿಷ್ಠ ರೂ.5,000/-ಗಳು.
ಸಾಲದ ಮೊತ್ತ: ರೂ.10,000/-ಗಳು.
* ಬಡ್ಡಿದರ:
ಸ್ವ ಸಹಾಯ ಸಂಘಗಳು ಸಾಲದ ಮೊತ್ತವನ್ನು ವಾರ್ಷಿಕ ಶೇಕಡ 4ರ ಬಡ್ಡಿಯೊಂದಿಗೆ ನಿಗಮಕ್ಕೆ ಹಿಂದಿರುಗಿಸಬೇಕಾಗಿರುತ್ತದೆ. ಶೇಕಡ 1ರ ಭಾಗ ಬಡ್ಡಿಯನ್ನು ಹೆಚ್ಚುವರಿಯಾಗಿ ಪಡೆದು ಸ್ವ-ಸಹಾಯ ಗುಂಪುಗಳು ಸೇವಾ ಶುಲ್ಕವಾಗಿ ಇಟ್ಟುಕೊಳ್ಳಬಹುದು.
* ಫಲಾನುಭವಿಗಳು ಸ್ವಸಹಾಯ ಗುಂಪುಗಳ ಸದಸ್ಯರಾಗಿರಬೇಕು. ಫಲಾನುಭವಿಗಳು ಬಿ.ಪಿ.ಎಲ್. ಕುಟುಂಬಕ್ಕೆ ಸೇರಿದವರಾಗಿರಬೇಕು, ಸರ್ಕಾರಿ/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರಬಾರದು.
* ಮರುಪಾವತಿ: ಸ್ವಸಹಾಯ ಗುಂಪುಗಳು ಸಾಲದ ಮೊತ್ತವನ್ನು 36 ತಿಂಗಳಲ್ಲಿ, 12 ತ್ರೈಮಾಸಿಕ ಕಂತುಗಳಲ್ಲಿ ಸಾಲ ಮರುಪಾವತಿ ಮಾಡಬೇಕು.

ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕುಸುಬುದಾರರಿಗೆ ಸಾಲ ಮತ್ತು ಸಹಾಯಧನ

ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕುಸುಬುದಾರರಿಗೆ ಸಾಲ ಮತ್ತು ಸಹಾಯಧನ

ಸಾಂಪ್ರದಾಯಿಕ ವೃತ್ತಿ ಮತ್ತು ಕುಶಲಕರ್ಮಿಗಳಿಗೆ ಅವರ ವೃತ್ತಿ ಕೌಶಲ್ಯತೆಯನ್ನು ಅಭಿವೃದ್ದಿ ಪಡಿಸಿಕೊಳ್ಳಲು ವೃತ್ತಿಯನುಸಾರ ಈ ಕೆಳಕಂಡಂತೆ ಸಾಲ ಸೌಲಭ್ಯ ಒದಗಿಸಲಾಗುವುದು. 

1. ಘಟಕ ವೆಚ್ಚ ರೂ. 50,000 ಗಳಿಗೆ ಶೇ. 30 ರಷ್ಟು ಗರಿಷ್ಟ ರೂ. 10,000 ಸಹಾಯಧನ ಉಳಿಕೆ ಶೇ. 70 ರಷ್ಟು ರೂ.40,000/-ಗಳನ್ನು ಶೇ.4ರ ಬಡ್ಡಿ ದರದಲ್ಲಿ ಸಾಲ.
2. ಘಟಕ ವೆಚ್ಚ ರೂ. 50,001 ರಿಂದ ರೂ.1 ,00,000 ಗಳವರೆಗೆ ಶೇ. 20 ರಷ್ಟು ಗರಿಷ್ಟ ರೂ. 20,000ಗಳ ಸಹಾಯಧನ ಉಳಿಕೆ ಶೇ. 80 ರಷ್ಟು ರೂ. 80,000ಗಳನ್ನು ಶೇ. 4ರ ಬಡ್ಡಿ ದರದಲ್ಲಿ ಸಾಲ.
3. ಘಟಕ ವೆಚ್ಚ ರೂ. 1,00,001 ರಿಂದ ರೂ. 2,00,000/-ಗಳವರೆಗೆ ಶೇ. 15 ರಷ್ಟು ಕನಿಷ್ಟ ರೂ. 20,000 ಗಳ ಗರಿಷ್ಟ ರೂ. 30,000 ಗಳ ಸಹಾಯಧನ ಉಳಿಕೆ ಶೇ. 85 ರಷ್ಟು ರೂ. 1,70,000ಗಳನ್ನು ಶೇ. 4ರ ಬಡ್ಡಿ ದರದಲ್ಲಿ ಸಾಲ.

ಅರ್ಹತೆ:
1. ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿರಬೇಕು (ವಿಶ್ವಕರ್ಮ ಸಮುದಾಯಗಳ ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) ಹಾಗೂ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 40000 ಗಳು ಪಟ್ಟಣ ಪ್ರದೇಶದವರಿಗೆ ರೂ. 55,000 ಗಳ ಒಳಗಿರಬೇಕು.

ಯುವಜನರ ಆರ್ಥಿಕ ಸಶಕ್ತಿಕರಣಕ್ಕಾಗಿ ಆರ್ಥಿಕ ನೆರವು ಯೋಜನೆ

ಯುವಜನರ ಆರ್ಥಿಕ ಸಶಕ್ತಿಕರಣಕ್ಕಾಗಿ ಆರ್ಥಿಕ ನೆರವು ಯೋಜನೆ

 ​2016-17ನೇ ಸಾಲಿನ ಆಯವ್ಯಯ ಭಾಷಣದಲ್ಲಿ "ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಯುವಜನರ ಆರ್ಥಿಕ ಸಶಕ್ತೀಕರಣಕ್ಕಾಗಿ ರೂ. 10 ಕೋಟಿಗಳನ್ನು ಒದಗಿಸಲಾಗುವುದು" ಎಂದು ಘೋಷಿಸಲಾಗಿರುತ್ತದೆ. ಆದ್ದರಿಂದ, ಡಾ|| ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಗುರುತಿಸಿರುವ ಅತ್ಯಂತ ಹಿಂದುಳಿದ 39 ತಾಲ್ಲೂಕುಗಳು ಹಾಗೂ ಅತಿ ಹಿಂದುಳಿದ 40 ತಾಲ್ಲೂಕುಗಳು ಹೀಗೆ ಒಟ್ಟು 79 ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ 10 ಸದಸ್ಯರನ್ನು ಒಳಗೊಂಡ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ ನೆರವನ್ನು ಒದಗಿಸುವುದು.

ಈ ಸ್ವ ಸಹಾಯ ಗುಂಪುಗಳ ಮೂಲಕ ಗ್ರಾಮ ಮಟ್ಟದಲ್ಲಿ ಜನರಿಗೆ ಅವಶ್ಯವಿರುವ ಸೇವೆಗಳನ್ನು/ಕಾಮಗಾರಿಗಳನ್ನು ನಿರ್ವಹಿಸಲು ಚಟುವಟಿಕೆ ಅನುಸಾರ ಪ್ರತಿ ಸದಸ್ಯರಿಗೆ ಗರಿಷ್ಠ ರೂ. 35000 ಗಳಂತೆ ಆರ್ಥಿಕ ನೆರವು. ಇದರಲ್ಲಿ ಶೇ. 30ರಷ್ಟು ಗರಿಷ್ಠ ರೂ. 10000ಗಳ ಸಹಾಯಧನ, ಉಳಿಕೆ ಮೊತ್ತ ಶೇ. 70ರಷ್ಟು ಗರಿಷ್ಠ ರೂ. 25000ಗಳು ವಾರ್ಷಿಕ ಶೇ. 4ರ ಬಡ್ಡಿದರದಲ್ಲಿ ಒದಗಿಸಲಾಗುವುದು. ಹೀಗೆ ಪ್ರತಿ ಗುಂಪಿಗೆ ಗರಿಷ್ಠ ರೂ. 3.50 ಲಕ್ಷಗಳ ಆರ್ಥಿಕ ನೆರವನ್ನು ಒದಗಿಸುವುದು. ​

​​​​​ಕರ್ನಾಟಕ ಅಲೆಮಾರಿ ಅರೆಅಲೆಮಾರಿ ಅಭಿವೃದ್ಧಿ ಮಂಡಳಿ ಒದಗಿಸುವ ಮೊತ್ತದಿಂದ ಅನುಷ್ಟಾನ ಗೊಳಿಸುವ ಕಾರ್ಯಕ್ರಮಗಳು ​

​​​​​ಕರ್ನಾಟಕ ಅಲೆಮಾರಿ ಅರೆಅಲೆಮಾರಿ ಅಭಿವೃದ್ಧಿ ಮಂಡಳಿ ಒದಗಿಸುವ ಮೊತ್ತದಿಂದ ಅನುಷ್ಟಾನ ಗೊಳಿಸುವ ಕಾರ್ಯಕ್ರಮಗಳು ​

1. ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಸ್ವಯಂ ಉದ್ಯೋಗ ಸಾಲ ಯೋಜನೆ:
ಸರ್ಕಾರದ ಆದೇಶ ಸಂಖ್ಯೆ: ಪಿ.ಹೆಚ್.ಎಸ್ 262 ಎಸ್.ಇ.ಡಬ್ಲ್ಯೂ 65, ದಿನಾಂಕ: 01/02/1966ರನ್ವಯ ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ 1) ಬೈರಾಗಿ (ಬಾವ), 2) ಬಾಲ ಸಂತೋಷಿ-ಜೋಷಿ, 3) ಬಾಜಿಗರ್, 4)ಭರಡಿ, 5)ಬುಡಬುಡಕಿ-ಜೋಶಿ-ಗೋಂಧಳಿ, 6)ಚಾರ, 7)ಚಿತ್ರಕಥಿ-ಜೋಷಿ, 8)ಧೋಲಿ, 9)ಢವೇರಿ, 10)ದೊಂಬರಿ, 11)ಘಿಸಾಡಿ, 12)ಗರುಡಿ, 13)ಗೋಪಾಲ್, 14)ಗೊಂದಳಿ, 15)ಹೆಳವ, 16)ಜೋಗಿ, 17)ಕೇಲ್ಕರಿ, 18)ಕೋಲ್ಹಟಿ, 19)ನಂದಿವಾಲ-ಜೋಷಿ-ಗೊಂದಳಿ, ಪುಲ್‍ಮಾಲ್ಲಿ, 20)ನಾಥಪಂಥಿ-ಡೌರಿ-ಗೋಸಾವಿ 21)ನಿರ್ಶಿಕಾರಿ, 22)ಪಾಂಗ್ಯುಯಲ್, 23)ಜೋಷಿ (ಸಾದ ಜೋಷಿ), 24)ಸಾನ್ಸಿಯ, 25)ಸರಾನಿಯ, 26)ತಿರುಮಲಿ, 27)ವಾಯ್ಡು 28)ವಾಸುದೇವ್, 29)ವಾಡಿ, 30)ವಾಗ್ರಿ, 31)ವಿರ್, 32)ಬಜನಿಯ, 33)ಶಿಕ್ಕಲಿಗರ್, 34)ಗೊಲ್ಲ, 35)ಕಿಲ್ಲಿಕ್ಯಾತ, 36)ಸರೋಡಿ, 37)ದುರ್ಗ-ಮುರ್ಗ (ಬುರ್‍ಬುರ್‍ಚ), 38)ಹಾವಗಾರ್ (ಹಾವಾಡಿಗಾರ್), 39)ಪಿಚಗುಂಟಲ, 40)ಮಸಣಿಯ ಯೋಗಿ, 40)(ಬೆಸ್ತರ್)ಬುಂಡಬೆಸ್ತ, 42)ಕಟಬು, 43)ದರ್ವೆಶ್, 44)ಕಾಶಿ ಕಪಾಡಿ, 45)ದೊಂಬಿದಾಸ ಮತ್ತು 46)ಬೈಲ್‍ಪತರ್ ಜನಾಂಗಕ್ಕೆ ಸೇರಿದವರಿಗೆ ಸ್ವಯಂ ಉದ್ಯೋಗಕ್ಕೆ ಅವರು ಕೈಗೊಳ್ಳುವ ಆರ್ಥಿಕ ಚಟುವಟಿಕೆ ಅನುಸಾರ ರೂ. 20,00,00ವರೆಗೆ ಸೌಲಭ್ಯ ಒದಗಿಸಲಾಗುವುದು.

2. ಅಲೆಮಾರಿ/ಅರೆ ಅಲೆಮಾರಿ ಅರಿವು/ಶೈಕ್ಷಣಿಕ ಸಾಲ ಯೋಜನೆ ಸಾಲ ಯೋಜನೆ:
ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ವಾರ್ಷಿಕ ಶೇ. 2ರ ಬಡ್ಡಿದರದಲ್ಲಿ ವಾರ್ಷಿಕ ಗರಿಷ್ಠ ರೂ. 1 ಲಕ್ಷಗಳ ವರೆಗೆ ಪದವಿ, ಉನ್ನತ ವ್ಯಾಸಂಗಗಳಿಗಾಗಿ ಆರ್ಥಿಕ ನೆರವು ಒದಗಿಸಲಾಗುವುದು.

3. ಅಲೆಮಾರಿ/ಅರೆ ಅಲೆಮಾರಿ ಗಂಗಾ ಕಲ್ಯಾಣ ನೀರಾವರಿ ಸೌಲಭ್ಯ:
ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳಿಗೆ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ವೈಯಕ್ತಿಕ/ಸಾಮೂಹಿಕ ನೀರಾವರಿ ಯೋಜನೆಯ ಘಟಕ ವೆಚ್ಚಗಳಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು.

4. ಅಲೆಮಾರಿ/ಅರೆ ಅಲೆಮಾರಿ ಭೂ ಖರೀದಿ ಯೋಜನೆ: ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಕನಿಷ್ಠ 1 ಎಕರೆ ತರಿ ಭೂಮಿ ಅಥವಾ 2 ಎಕರೆ ಖುಷ್ಕಿ ಜಮೀನನ್ನು ಕೊಂಡುಕೊಳ್ಳಲು ಸಾಲ ಮತ್ತು ಸಹಾಯಧನ ಒದಗಿಸಲಾಗುವುದು. ಘಟಕ ವೆಚ್ಚ ರೂ. 10 ಲಕ್ಷಗಳನ್ನು ನಿಗದಿಪಡಿಸಿದೆ. ಈ ಮೊತ್ತದಲ್ಲಿ ಶೇ. 50ರಷ್ಟು ಸಹಾಯಧನ ಹಾಗೂ ಉಳಿಕೆ ಶೇ. 50ರಷ್ಟು ವಾರ್ಷಿಕ ಶೇ. 4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.

7. ಅಲೆಮಾರಿ/ಅರೆ ಅಲೆಮಾರಿ ಜನಾಂಗದ ವೃತ್ತಿಪರ/ಉದ್ಯಮ ಶೀಲತಾ ತರಬೇತಿ ಕಾರ್ಯಕ್ರಮ: ನಿಗಮದ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಕಾರ್ಯಕ್ರಮಗಳಲ್ಲಿ ಸಾಲ ಸೌಲಭ್ಯ ಪಡೆಯುವ ಫಲಾನುಭವಿಗೆ ಕನಿಷ್ಟ 3 ದಿನದ ಉದ್ಯಮಶೀಲತಾ ತರಬೇತಿಯನ್ನು ಕೊಡಿಸಲಾಗುವುದು.
ನಿರುದ್ಯೋಗಿ ಯುವಕ ಯುವತಿಯರಿಗೆ ವೃತ್ತಿಪರ ಕೋರ್ಸ್ ಗಳಲ್ಲಿ ರೆಡಿಮೇಡ್ ಗಾರ್ಮೆಟ್ಸ್, ಕಂಪ್ಯೂಟರ್ ತರಬೇತಿ, ಪ್ಲಂಬಿಂಗ್ ತರಬೇತಿ ಇತ್ಯಾದಿ ಅಲ್ಪಾವದಿ 3 ರಿಂದ 4 ತಿಂಗಳುಗಳ ಅವಧಿಯ ತರಬೇತಿಯನ್ನು ಕೊಡಿಸಲಾಗುವುದು.

English summary

Karnataka government undertaking dbcdc welfare schemes

Devraj urs backward Classes Development Corporation is a Govt. of karnataka Undertaking under the aegis of Ministry of Social Justice and Empowerment.The Corporation can assist a wide range of income generating activities to assist the poorer sections.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X